ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆ ಸಂಪೂರ್ಣ ಜಾತಕ ಬಿಚ್ಚಿಟ್ಟ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್

ಚಿತ್ರದುರ್ಗ ಕ್ಷೇತ್ರದಲ್ಲಿ 700 ಕೋಟಿ ಕಾಮಗಾರಿ ಆಗಿದೆ. ಬಿಲ್ಡಿಂಗ್ ಗೆ 15 % ಪಡೆಯುತ್ತಾರೆ. ರಸ್ತೆಗೆ10% ಕಮಿಷನ್ ಬಗ್ಗೆ ಕೈ ನಲ್ಲೇ ಸೊನ್ನೆ ಮಾಡ್ತಾರೆ. 2019 ರಿಂದ ಇತ್ತೀಚೆಗೆ ನಾನೇ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ.

ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್ ದಂಧೆ ಸಂಪೂರ್ಣ ಜಾತಕ ಬಿಚ್ಚಿಟ್ಟ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್  ಅಸೋಸಿಯೇಷನ್
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Jan 16, 2023 | 1:44 PM

ಬೆಂಗಳೂರು: ಚಾಮರಾಜಪೇಟೆಯ ಗುತ್ತಿಗೆದಾರರ ಸಂಘದ ಕಚೇರಿಯಲ್ಲಿ ಕರ್ನಾಟಕ ಸ್ಟೇಟ್ ಕಂಟ್ರಾಕ್ಟರ್ಸ್ ಅಸೋಸಿಯೇಷನ್ ಸುದ್ದಿಗೋಷ್ಠಿ ನಡೆಸಿದೆ. 25 ಸಾವಿರ ಕೋಟಿ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು. ಲೋಕೋಪಯೋಗಿ ಇಲಾಖೆಯಿಂದ 4 ಸಾವಿರ ಕೋಟಿ ಬಿಲ್ ಬಾಕಿ ಇದೆ. ಜ.18ರ ನಂತರ ರಾಜ್ಯಾದ್ಯಂತ ಕಾಮಗಾರಿ ಸ್ಥಗಿತಗೊಳಿಸಲು ತೀರ್ಮಾನ ಮಾಡಿದ್ದೇವೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾವು ಮಾಡಿರುವ ಆರೋಪಗಳು ಸತ್ಯ, ಅದನ್ನ ಪ್ರ್ಯೂ ಮಾಡ್ತೇವೆ. 25 ಸಾವಿರ ಕೋಟಿ ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಬೇಕು. KIRDL ನಲ್ಲಿ ಕೆಲ್ಸ ಕೊಡಬೇಡಿ ಅಂದ್ರು ಕೂಡಾ ಕೊಡ್ತಿದ್ದಾರೆ. ಜನವರಿ 18 ರ ನಂತರ ಕಾಮಗಾರಿ ಸ್ಥಗಿತಗೊಳಿಸಲು ತೀರ್ಮಾನ ಮಾಡಿದ್ದೇವೆ. ಲಂಚ ಕೊಟ್ಟಿರೋದಕ್ಕೆ ದಾಖಲೆಗಳು ಇರಲ್ಲ, ಆದರೂ ಕೆಲ ದಾಖಲೆ ಇದೆ. 30 ದಿನ ಆದಮೇಲೆ ಮಾತಾಡ್ತೇವೆ. 19 ರಂದು ಕೋರ್ಟ್ ನಲ್ಲಿ ದಾಖಲೆಗಳನ್ನ ಸಲ್ಲಿಕೆ ಮಾಡ್ತಾಯಿದ್ದೇವೆ. ಇವತ್ತಿನಿಂದ 30 ದಿನಕ್ಕೆ ದಾಖಲೆಗಳನ್ನ ಬಿಡುಗಡೆ ಮಾಡ್ತೇವೆ ಎಂದು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಕೆಂಪಣ್ಣ ತಿಳಿಸಿದ್ದಾರೆ.

ಲಂಚ ಶುರುಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ

ಇದೇ ವೇಳೆ ಚಿತ್ರದುರ್ಗ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ವಿರುದ್ಧ ಲಂಚ ಪಡೆದ ಆರೋಪ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಮಂಜುನಾಥ್ ಮಾತನಾಡಿದ್ದು, ಸೂರ್ಯ ಚಂದ್ರ ಇರೋದು ಎಷ್ಟು ಸತ್ಯನೋ ಭ್ರಷ್ಟಾಚಾರ ಇರೋದು ಸತ್ಯ. 14 ಜನ ಶಾಸಕರ ಲಂಚ ದಾಖಲೆಗಳು ಇದೆ. ಸಂತೋಷ್ ಕೇಸ್ ನಲ್ಲಿ ಬಿ ರಿಪೋರ್ಟ್ ಹಾಕಿದ್ದಾರೆ. ನಮ್ಮ ಅಧ್ಯಕ್ಷರನ್ನ ಅರೆಸ್ಟ್ ಮಾಡಿದ್ದಾರೆ. ಸಂತೋಷ ಪಾಟೀಲ್‌ದು ಏನ್ ಆಗಿತ್ತು? ನಾವು ಒಂದು ದಾಖಲೆ ಬಿಡುಗಡೆ ಮಾಡ್ತೇನೆ. ನಮ್ಮ ಜಿಲ್ಲೆಯಲ್ಲಿ ಭ್ರಷ್ಟಾಚಾರ ಇರಲಿಲ್ಲ. ಚಿತ್ರದುರ್ಗ ಜಿಲ್ಲೆಯ ಶಾಸಕರು ತಿಪ್ಪಾರೆಡ್ಡಿ ಅವರು ಶುರುಮಾಡಿದ್ದಾರೆ. ಲಂಚ ಶುರುಮಾಡಿದ್ದೇ ಶಾಸಕ ತಿಪ್ಪಾರೆಡ್ಡಿ. ಲೋಕಾಯುಕ್ತಕ್ಕೆ ಅಫಿಡೇವಿಟ್ ಮಾಡಿದ್ದೇವೆ. ಒಟ್ಟು 13 ಜನ ಶಾಸಕರು 4-5 ಜನ ಸಚಿವರ ದಾಖಲೆಗಳು ಇದೆ. ತಿಪ್ಪಾರೆಡ್ಡಿ ಅವರು ಲಂಚ ಪಡೆದಿರುವ ಬಗ್ಗೆ ಆಡಿಯೋ ಇದೆ, ವಾಟ್ಸ್ ಆ್ಯಪ್ ರೆಕಾರ್ಡ್ ಕೂಡಾ ಇದೆ. ಶೇ. 25% ಕಮಿಷನ್ ಪಡೆಯುತ್ತಿದ್ದಾರೆ ಎಂದು ಮಂಜುನಾಥ್ ಆರೋಪಿಸಿದ್ದಾರೆ.

ಚಿತ್ರದುರ್ಗ ಕ್ಷೇತ್ರದಲ್ಲಿ 700 ಕೋಟಿ ಕಾಮಗಾರಿ ಆಗಿದೆ. ಬಿಲ್ಡಿಂಗ್ ಗೆ 15 % ಪಡೆಯುತ್ತಾರೆ. ರಸ್ತೆಗೆ10% ಕಮಿಷನ್ ಬಗ್ಗೆ ಕೈ ನಲ್ಲೇ ಸೊನ್ನೆ ಮಾಡ್ತಾರೆ. 2019 ರಿಂದ ಇತ್ತೀಚೆಗೆ ನಾನೇ 90 ಲಕ್ಷ ಕಮಿಷನ್ ಕೊಟ್ಟಿದ್ದೇನೆ. ತಿಪ್ಪಾರೆಡ್ಡಿ ಅವರ ಆಡಿಯೋ ರಿಲೀಸ್ ಮಾಡಲಾಗ್ತಿದೆ. ಬಿಡಬ್ಲ್ಯೂಡಿ ಕೇಸ್ ನಲ್ಲಿ ಶಾಸಕ ತಿಪ್ಪಾರೆಡ್ಡಿ ಕಮಿಷನ್ ಕೇಳಿರುವ ಆಡಿಯೋ ರಿಲೀಸ್ ಆಗಿದೆ ಎಂದರು.

ನಾವು ಕಮಿಷನ್ ಕೊಡಲಿಲ್ಲ ಅಂದ್ರೆ ಇಂಜಿನಿಯರ್ ಗಳಿಗೆ ಒತ್ತಡ ಹಾಕ್ತಾರೆ. ಪಿಡಬ್ಲ್ಯೂಡಿ ಬಿಲ್ಡಿಂಗ್ ಕಟ್ಟಿ ಮೂರು ವರ್ಷ ಆಯಿತು. ಬಿಲ್ ಕೊಡಿ ಅಂದ್ರೆ ಕಮಿಷನ್ ಕೇಳಿದ್ರು. 2.5 ಕೋಟಿ ಕಾಮಗಾರಿಗೆ ಲಕ್ಷಾಂತರ ರೂಪಾಯಿ ಕಮಿಷನ್ ನೀಡಿದ್ದೇನೆ ಎಂದರು.’

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 12:50 pm, Mon, 16 January 23

ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ