
ಕರ್ನಾಟಕ ಮೊದಲಿನಿಂದಲೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಹೆಸರುವಾಸಿಯಾಗಿದೆ. ಅರಮನೆಯ ನಗರಿ ಮೈಸೂರು, ಇತಿಹಾಸ ಸಾರುವ ಹಂಪಿ, ಪ್ರಶಾಂತತೆಯಿಂದ ಕೂಡಿದ ಕಡಲತೀರದ ನಗರ ಗೋಕರ್ಣ ಇವೆಲ್ಲವೂ ಪ್ರವಾಸಿಗರ ಮನದಲ್ಲಿ ಮನೆಮಾಡಿವೆ. ಕೇವಲ ಇವಷ್ಟೇ ಅಲ್ಲದೇ ಕರ್ನಾಟಕ ಸುಮಾರು 1275 ಪ್ರವಾಸಿ ತಾಣಗಳನ್ನು (Tourism Destination) ಹೊಂದಿದೆ ಎಂದು ಪ್ರವಾಸೋದ್ಯಮ ಇಲಾಖೆ ತಿಳಿಸಿದೆ.
ರಾಜ್ಯ ಪ್ರವಾಸೋದ್ಯಮ ಇಲಾಖೆ ಗುರುತಿಸಿರುವ ಒಟ್ಟೂ 1275 ಪ್ರವಾಸಿ ತಾಣಗಳಲ್ಲಿ ಬೆಂಗಳೂರು ನಗರದಲ್ಲಿ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್, ISKON ದೇವಸ್ಥಾನ , ಬೆಂಗಳೂರು ಅರಮನೆ, ವಿಧಾನ ಸೌಧ ಸೇರಿದಂತೆ ಒಟ್ಟೂ 27 ಪ್ರವಾಸಿ ತಾಣಗಳು, ಬೆಂಗಳೂರು ಗ್ರಾಮಾಂತರದಲ್ಲಿ ದೇವನ ಹಳ್ಳಿ ಕೋಟೆ, ಬನ್ನೇರಘಟ್ಟ ರಾಷ್ಟ್ರೀಯ ಉದ್ಯಾನ ಸೇರಿದಂತೆ 25 ತಾಣಗಳು, ಗೋಕರ್ಣ ಬೀಚ್, ಉಂಚಳ್ಳಿ ಜಲಪಾತ, ಜೋಗ ಜಲಪಾತ ಸೇರಿದಂತೆ ಉತ್ತರ ಕನ್ನಡದಲ್ಲಿ 85, ಯಾದಗಿರಿಯ ಕೋಟೆ, ಶಾಹಾಪುರ ಕೋಟೆ ಹೀಗೆ 5 ತಾಣಗಳು, ಬೆಳಗಾವಿಯಲ್ಲಿ ಗೋಕಾಕ್ ಜಲಪಾತ, ಬೆಳಗಾವಿ ಕೋಟೆ, ಮಿಲಿಟರಿ ಮಹಾದೇವ ದೇವಸ್ಥಾನ ಸೇರಿದಂತೆ 100 ತಾಣಗಳು, ಚಿಕ್ಕಬಳ್ಳಾಪುರದಲ್ಲಿ ನಂದಿ ಬೆಟ್ಟ, ಸ್ಕಂದಗಿರಿ ಬೆಟ್ಟ, ಭೋಗ ನಮದೀಶ್ವರ ದೇವಸ್ಥಾನ, ಆದಿಯೋಗಿ ಶಿವನ ಮೂರ್ತಿ ಸೇರಿ 95 ಪ್ರವಾಸಿ ತಾಣಗಳಿವೆ. ಕೃಷ್ಣ ರಾಜ ಸಾಗರ ಅಣೆಕಟ್ಟು , ರಂಗನತಿಟ್ಟು ಪಕ್ಷಿ ಧಾಮ, ಬಲಮುರಿ ಮತ್ತು ಎಡಮುರಿ ಜಲಪಾತಗಳು, ಮೇಲುಕೋಟೆ, ಶ್ರೀರಂಗಪಟ್ಟಣ ಸೇರಿ ಒಟ್ಟೂ 106 ಪ್ರವಾಸಿ ತಾಣಗಳನ್ನೊಳಗೊಂಡ ಮಂಡ್ಯ ಜಿಲ್ಲೆ ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಕೀರ್ತಿ ಪಡೆದಿದೆ.
ಬೆಂಗಳೂರಿನ ಪ್ರವಾಸಿ ತಾಣಗಳಲ್ಲಿ ವಿಧಾನ ಸೌಧ, ಬೆಂಗಳೂರು ಅರಮನೆ, ಲಾಲ್ ಭಾಗ್ ಮತ್ತು ಕಬ್ಬನ್ ಪಾರ್ಕ್ ಸುಂದರ ಉದ್ಯಾನಗಳು ಹಾಗೂ ಹಲವಾರು ಐತಿಹಾಸಿಕ ದೇವಸ್ಥಾನಗಳು ಸೇರಿವೆ. ಇವುಗಳಿಗೆ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡುತ್ತಾರೆ.
ಇದನ್ನೂ ಓದಿ ಕಾಫಿನಾಡು ಚಿಕ್ಕಮಗಳೂರಿಗೆ ಪ್ರವಾಸಿಗರ ದಂಡು: ಡಿಸೆಂಬರ್ ಒಂದೇ ತಿಂಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಭೇಟಿ
ರಾಜ್ಯ ಪ್ರವಾಸೋದ್ಯಮ ಇಲಾಖೆಯಿಂದ ಗುರುತಿಸಲ್ಪಟ್ಟಿರುವ ಈ ಎಲ್ಲಾ ಪ್ರವಾಸಿ ತಾಣಗಳಿಗೆ ಹೊಸ ರೂಪ ನೀಡುವುದಕ್ಕಾಗಿ ಅವನ್ನು ಅಭಿವೃದ್ಧಿ ಪಡಿಸುವುದಾಗಿ ಕರ್ನಾಟಕ ಪ್ರವಾಸೊದ್ಯಮ ಸಚಿವ ಎಚ್ಕೆ ಪಾಟಿಲ್ ಹೇಳಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:59 pm, Wed, 17 September 25