ಬೆಂಗಳೂರು ವಿಮಾನ ನಿಲ್ದಾಣ: 55 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಕೊಡಗಿನ ಯುವಕ ಅರೆಸ್ಟ್​​

|

Updated on: Dec 13, 2023 | 7:56 AM

ಜೀನ್ಸ್ ಮತ್ತು ಒಳಉಡುಪುಗಳಲ್ಲಿ ಬಚ್ಚಿಟ್ಟು 55 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೇಸ್ಟ್ ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಕೊಡಗಿನ 24 ವರ್ಷದ ಯುವಕನನ್ನು ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ಯುವಕನನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಪತ್ತೆಯಾಗಿದೆ.

ಬೆಂಗಳೂರು ವಿಮಾನ ನಿಲ್ದಾಣ: 55 ಲಕ್ಷ ರೂ. ಮೌಲ್ಯದ ಚಿನ್ನ ಅಕ್ರಮವಾಗಿ ಸಾಗಿಸುತ್ತಿದ್ದ ಕೊಡಗಿನ ಯುವಕ ಅರೆಸ್ಟ್​​
ಬೆಂಗಳೂರು ವಿಮಾನ ನಿಲ್ದಾಣ
Follow us on

ಬೆಂಗಳೂರು, ಡಿಸೆಂಬರ್​​ 13: ಜೀನ್ಸ್ ಮತ್ತು ಒಳಉಡುಪುಗಳಲ್ಲಿ ಬಚ್ಚಿಟ್ಟು 55 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಪೇಸ್ಟ್ (Gold Paste) ಅನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಕೊಡಗಿನ (Kodagu) 24 ವರ್ಷದ ಯುವಕನನ್ನು ಬಂಧಿಸಲಾಗಿದೆ. ಕೊಡಗು ಮೂಲದವನಾದ ಯುವಕ ದುಬೈನಿಂದ (UAE) ಇಂಡಿಗೋ ಏರ್‌ಲೈನ್ಸ್ ಫ್ಲೈಟ್ 6E 1486 ಮೂಲಕ ಭಾನುವಾರ (ಡಿ.10) ರಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda International Airport) ಬಂದಿಳಿದನು. ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ಯುವಕನನ್ನು ತಪಾಸಣೆಗೆ ಒಳಪಡಿಸಿದಾಗ ಚಿನ್ನ ಪತ್ತೆಯಾಗಿದೆ.

ಪ್ರಯಾಣಿಕರನ್ನು ತಪಾಸಣೆ ನಡೆಸುತ್ತಿರುವಾಗ, ಈ ಯುವಕನು ಅಸಹಜರೀತಿಯಾಗಿ ವರ್ತಿಸಲು ಆರಂಭಿಸಿದನು. ಇದರಿಂದ ಅನುಮಾನಗೊಂಡ ಕಸ್ಟಮ್ಸ್​ ಅಧಿಕಾರಿಗಳು ಯುವಕನ ಲಗೇಜ್​​ ಅನ್ನು ತಾಪಾಸಣೆ ನಡೆಸಿದರು. ನಂತರ ಯುವಕ ಧರಿಸಿದ್ದ ಕಪ್ಪು ಜೀನ್ಸ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಸೊಂಟ ಭಾಗದಲ್ಲಿ ಬಳಿ ಹೊಲಿಯಲಾದ ಚಿನ್ನದ ಪೇಸ್ಟ್​​​ ಇರುವ ಚೀಲಗಳು ಪತ್ತೆಯಾದವು.

ಇದನ್ನೂ ಓದಿ: ಕೆಂಪೇಗೌಡ ಏರ್​​ಪೋರ್ಟ್​ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ: 2 ಸೇರಿದಂತೆ 298ಗ್ರಾಂ ಚಿನ್ನ ವಶಕ್ಕೆ

ಕಸ್ಟಮ್ಸ್​​ ಅಧಿಕಾರಿಗಳು ಯುವಕನಿಂದ 907 ಗ್ರಾಂ ಚಿನ್ನದ ಪೇಸ್ಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಳ್ಳಸಾಗಣೆ ಮತ್ತು ಕಸ್ಟಮ್ಸ್ ಸುಂಕ ವಂಚನೆಗಾಗಿ ಆತನನ್ನು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:53 am, Wed, 13 December 23