ಟ್ಯಾಕ್ಸ್​ ಕಟ್ಟಲ್ಲಾ ಏನೂ ಇಲ್ಲ- ಪ್ರವಾಸಿ ವೀಸಾದಲ್ಲಿ ಬಂದು ಮೈಸೂರಿನಲ್ಲಿ ಅಕ್ರಮವಾಗಿ ದುಡ್ಡು ಮಾಡುವುದೇ ಈ ವಿದೇಶಿ ಯುವಕರ ‘ಯೋಗ’

ವಿದ್ಯಾರ್ಥಿ ಅಥವಾ ಪ್ರವಾಸಿ ವೀಸಾ ಹೊಂದಿರುವ ಯಾವುದೆ ವಿದೇಶಿ ಪ್ರಜೆ ಭಾರತದ ನಿಯಮಾನುದಾರ ಇಲ್ಲಿ ಯಾವುದೇ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವಂತಿಲ್ಲ. ಆದರೆ ಮೈಸೂರಿನಲ್ಲಿ ಫೋಟೋ ಶೂಟ್‌ ಕಾಯಕದಲ್ಲಿ ತೊಡಗಿ, ತೆರಿಗೆ ಬಲೆಗೂ ಸಿಲುಕದೆ ಅಕ್ರಮವಾಗಿ ದುಡ್ಡು ಮಾಡುವುದೇ ಈ ವಿದೇಶಿ ಯುವಕರ ’ಯೋಗ’ವಾಗಿದೆ.

ಟ್ಯಾಕ್ಸ್​ ಕಟ್ಟಲ್ಲಾ ಏನೂ ಇಲ್ಲ- ಪ್ರವಾಸಿ ವೀಸಾದಲ್ಲಿ ಬಂದು ಮೈಸೂರಿನಲ್ಲಿ ಅಕ್ರಮವಾಗಿ ದುಡ್ಡು ಮಾಡುವುದೇ ಈ ವಿದೇಶಿ ಯುವಕರ ‘ಯೋಗ’
ಪ್ರವಾಸಿ ವೀಸಾದಲ್ಲಿ ಬಂದು ಮೈಸೂರಿನಲ್ಲಿ ದುಡ್ಡು ಮಾಡುವುದೇ ಇವರ ಕಾಯಕ
Follow us
|

Updated on: Dec 07, 2023 | 10:43 AM

ಮೈಸೂರು: ಸ್ಟೂಡೆಂಟ್ ವೀಸಾ ಅಥವಾ ಪ್ರವಾಸಿ ವೀಸಾದಲ್ಲಿ (student visa or tourist visa) ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರಜೆಗಳು ಇಲ್ಲಿ ಉದ್ಯೋಗ, ಅಥವಾ ಯಾವುದೇ ಆದಾಯ ತರುವ ಕೆಲಸ (profession) ಮಾಡದಂತೆ ಅಥವಾ ಹಣ ಸಂಪಾದಿಸದಂತೆ (money) ಕಠಿಣ ಕಾನೂನುಗಳು ಇವೆ. ಆದರೂ, ಮೈಸೂರಿನಲ್ಲಿ ದೊಡ್ಡ ‘ಅಕ್ರಮ’ ಮಾರುಕಟ್ಟೆ ಕಾರ್ಯನಿರ್ವಹಿಸುತ್ತಿದೆ. ಸಾಂಸ್ಕೃತಿಕ ನಗರವನ್ನು ‘ಅಷ್ಟಾಂಗ ಯೋಗ’ ರಾಜಧಾನಿ (Ashtanga yoga) ಎಂದು ಕರೆಯಲಾಗುತ್ತದೆ. ಸಾವಿರಾರು ವಿದೇಶಿಗರು ವಿಶೇಷವಾಗಿ ಮುಂದುವರಿದ ಜಗತ್ತಿನ ದೇಶಗಳು ಮತ್ತು ಯುರೋಪಿಯನ್ ದೇಶಗಳಿಂದ ಯೋಗವನ್ನು (yoga) ಮುಂದುವರಿಸಲು ಮತ್ತು ಪ್ರಮಾಣೀಕರಣವನ್ನು ಪಡೆಯಲು ಪ್ರತಿ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಅರಮನೆಗಳ ಈ ನಗರಕ್ಕೆ (Mysuru) ಭೇಟಿ ನೀಡುತ್ತಾರೆ. ಇದು ಯೋಗ ಕ್ಷೇತ್ರದಲ್ಲಿ ನಗರವನ್ನು ಜಾಗತಿಕ ನಕ್ಷೆಗೆ ಕೊಂಡೊಯ್ಯುತ್ತಿದೆ. ಕೆಲವು ವಿದೇಶಿ ಪ್ರಜೆಗಳು, ಯೋಗವನ್ನು ಕಲಿಯುವ ಅಥವಾ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವ ನೆಪದಲ್ಲಿ, ದೇಶದ ಕಾನೂನನ್ನು ಉಲ್ಲಂಘಿಸುವ ಮೂಲಕ ತ್ವರಿತ ಆದಾಯವನ್ನು ಗಳಿಸುವ ಅವಕಾಶವನ್ನು ಮಾಡಿಕೊಳ್ಳುತ್ತಿದ್ದಾರೆ.

ಮೈಸೂರಿನಲ್ಲಿ ಯೋಗ ತರಗತಿಗಳಿಗೆ ನೋಂದಾವಣೆ ಮಾಡಿಕೊಂಡು ದಾಖಲಾದ ಅಥವಾ ಪ್ರವಾಸಿ ವೀಸಾದಲ್ಲಿ ನಗರಕ್ಕೆ ಭೇಟಿ ನೀಡುವ ಅನೇಕ ವಿದೇಶಿ ಪ್ರಜೆಗಳು, ಈ ವರ್ಷವೊಂದರಲ್ಲೇ ಸುಮಾರು 10 ಜನರ ಫೋಟೋ ಶೂಟ್ ಯೋಜನೆಗಳನ್ನು ನಡೆಸಿದ್ದಾರೆ. ಇದಕ್ಕೆಲ್ಲ ಉತ್ತಮ ಹಣವನ್ನೂ ಗಳಿಸಿದ್ದಾರೆ. ಮತ್ತು ಇದನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದಾರೆ.

ಆದರೆ ಇದು ಸ್ಥಳೀಯ ಛಾಯಾಗ್ರಾಹಕರು ಮತ್ತು ಫಿಲ್ಮ್​​ ನಿರ್ಮಾಣಕಾರರ ವ್ಯವಹಾರಗಳಿಗೆ ಹಾನಿ ಮಾಡುತ್ತಿದೆ. ಕಳೆದ ಆರೇಳು ವರ್ಷಗಳಿಂದ ಇದು ಟ್ರೆಂಡ್ ಆಗಿದೆ ಎಂದು ಗೋಕುಲಂ ನಿವಾಸಿ ವಿನಯ್ ತಿಳಿಸಿರುವುದಾಗಿ newindianexpress.com ವರದಿ ಮಾಡಿದೆ.

Also Read: ಊರು-ಕೇರಿ ಸುತ್ತಾಡಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ವಿದೇಶಿ ಪ್ರವಾಸಿ, ಇಲ್ಲಿ ಅವರಿಗೆ ಇಷ್ಟ ಆಗಿದ್ದೇನು?

ಯೋಗಕ್ಕಾಗಿ ನಗರಕ್ಕೆ ಭೇಟಿ ನೀಡುವ ಇಂತಹ ವಿದೇಶಿಗರು ತಮ್ಮ ಕ್ಯಾಮೆರಾ, ಲೆನ್ಸ್ ಮತ್ತು ಇತರ ಸಾಧನಗಳನ್ನು ಸಹ ತಮ್ಮೊಂದಿಗೆ ಹೊತ್ತುತಂದಿರುತ್ತಾರೆ. ಮೊದಲು, ಅವರು ಕ್ಷಿಪ್ರವಾಗಿ ಹಣ ಗಳಿಸುವ ಅವಕಾಶಗಳಿಗಾಗಿ ತಡಕಾಡುತ್ತಿದ್ದರು. ಈಗ ಅದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಅದನ್ನು ಸಂಘಟಿತ ರೀತಿಯಲ್ಲಿ ನಡೆಸಲಾಗುತ್ತಿದೆ. ಮುಂಗಡ ಬುಕಿಂಗ್‌ಗಾಗಿ ಅವರು ಸ್ಲಾಟ್‌ಗಳನ್ನು ತೆರೆದಿಡುತ್ತಾರೆ. ಈ ಕಾರ್ಯಯೋಜನೆಗಳಿಗಾಗಿ ಅವರು ದುಬಾರಿ ಬೆಲೆಗಳನ್ನು ವಿಧಿಸುತ್ತಾರೆ. ಹೀಗೆ ಯೋಜನೆಗಳನ್ನು ತಂದುಕೊಡುವ ಸ್ಥಳೀಯರಿಗೆ ರೆಫರಲ್‌ಗಳಿಗಾಗಿ ಅವರು ಕಮಿಷನ್‌ಗಳನ್ನು ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ ಎಂದು ಅವರು ಹೇಳಿದರು.

ಮತ್ತೊಬ್ಬ ಸ್ವತಂತ್ರ ಛಾಯಾಗ್ರಾಹಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಾ, ಮಾರುಕಟ್ಟೆ ಎಷ್ಟು ದೊಡ್ಡದಾಗಿದೆ ಎಂದರೆ ಜನವರಿಯಲ್ಲಿ ಮೈಸೂರಿಗೆ ಭೇಟಿ ನೀಡುವ ವಿದೇಶಿ ಪ್ರಜೆಯೊಬ್ಬರು ತಮ್ಮ ಸ್ಲಾಟ್‌ಗಳನ್ನು ತೆರೆದು, ಪ್ರತಿ ಚಿತ್ರೀಕರಣಕ್ಕೆ 200 ಯುರೋಗಳಷ್ಟು ( 18 ಸಾವಿರ ರೂಪಾಯಿ) ಹಣ ಗಳಿಸುತ್ತಿದ್ದಾರೆ.

ಇಂತಹ ವಿದೇಶಿಗರು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ವಿವರಗಳ ಪ್ರಕಾರ 23 ದಿನಗಳ ಸ್ಲಾಟ್‌ಗಳನ್ನು ಈಗಾಗಲೇ ಕಾಯ್ದಿರಿಸಲಾಗಿದೆ ಎಂದು ಆ ಸ್ಥಳೀಯ ಸ್ವತಂತ್ರ ಛಾಯಾಗ್ರಾಹಕ ಗಮನಸೆಳೆದಿದ್ದಾರೆ. ಅದೂ ಇನ್ನೂ ವಿಸೇಷ ಏನೆಂದರೆ ಸರ್ಕಾರಕ್ಕೆ ತೆರಿಗೆ (tax) ಪಾವತಿಸದೆಯೇ ಅವರು ಅಂದಾಜು 5 ಲಕ್ಷ ರೂಪಾಯಿ ಗಂಟು ಮಾಡಿಕೊಳ್ಳುತ್ತಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ