Ivana Perkovic: ಊರು-ಕೇರಿ ಸುತ್ತಾಡಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ವಿದೇಶಿ ಪ್ರವಾಸಿ, ಇಲ್ಲಿ ಅವರಿಗೆ ಇಷ್ಟ ಆಗಿದ್ದೇನು?

ಬೆಂಗಳೂರು ಮೂಲದ ಡಚ್ ಟ್ರಾವೆಲ್ ಇನ್ಫ್ಲುಎನ್ಸರ್ ಇವಾನಾ ಪರ್ಕೋವಿಕ್ ಅವರು ಭಾರತದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಹಾಗೂ ಭಾರತಕ್ಕೆ ಪ್ರವಾಸ ಬರುವ ವಿದೇಶಿಯರಿಗೆ ಕೆಲವು ಮಾರ್ಗದರ್ಶನ ನೀಡಿದ್ದಾರೆ.

Ivana Perkovic: ಊರು-ಕೇರಿ ಸುತ್ತಾಡಿ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ವಿದೇಶಿ ಪ್ರವಾಸಿ, ಇಲ್ಲಿ ಅವರಿಗೆ ಇಷ್ಟ ಆಗಿದ್ದೇನು?
ಇವಾನಾ ಪರ್ಕೋವಿಕ್
Follow us
| Updated By: ಆಯೇಷಾ ಬಾನು

Updated on: Jul 23, 2023 | 12:53 PM

ಭಾರತದ ಸಾಹಿತ್ಯ-ಸಂಸ್ಕೃತಿಗೆ ಮಾರು ಹೋಗದ ಜನರಿಲ್ಲ. ಅದರಲ್ಲೂ ಅದೆಷ್ಟೋ ವಿದೇಶಿಗರು ಭಾರತದ ಸಂಸ್ಕೃತಿಗೆ ಮನ ಸೋತು ಭಾರತದ ಆಚಾರ-ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಇದೇ ರೀತಿ ಬೆಂಗಳೂರು ಮೂಲದ ಡಚ್ ಟ್ರಾವೆಲ್ ಇನ್ಫ್ಲುಎನ್ಸರ್ ಇವಾನಾ ಪರ್ಕೋವಿಕ್(Ivana Perkovic) ಅವರು ಭಾರತದಲ್ಲಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಭಾರತಕ್ಕೆ ಕಾಲಿಟ್ಟ ಕ್ಷಣದಿಂದಲೇ ಭಾರತವು ನನಗೆ ನನ್ನ ಮನೆಯಂತೆ ಭಾಸವಾಯಿತು. ಪ್ರವಾಸಿಯಾಗಿ 2015 ಮತ್ತು 2016 ರಲ್ಲಿ ಎರಡು ಬಾರಿ ಭಾರತಕ್ಕೆ ಭೇಟಿ ನೀಡಿದ ನಂತರ, ಇಲ್ಲೇ ನೆಲೆಸಬೇಕೆಂದೆನಿಸಿತು. ಅದರಂತೆಯೇ 2018 ರಲ್ಲಿ ಇಲ್ಲಿಗೆ ಶಿಫ್ಟ್ ಆದೆ. ನಾನು ಈ ದೇಶಕ್ಕೆ ಸೇರಿದವಳು ಎಂದು ನಾನು ಯಾವಾಗಲೂ ಭಾವಿಸುತ್ತೇನೆ ಎಂದು ಇವಾನಾ ಪರ್ಕೋವಿಕ್ ಅವರು ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಭಾರತದ ಮೇಲಿನ ತಮ್ಮ ನಂಟಿನ ಬಗ್ಗೆ ಭಾವುಕ ಮಾತುಗಳನ್ನಾಡಿದ್ದಾರೆ.

ಕಾರ್ಪೊರೇಟ್ ಕೆಲಸದಲ್ಲಿದ್ದ ಇವಾನಾ ಪರ್ಕೋವಿಕ್ ಅವರು 2013 ರಲ್ಲಿ ನೆದರ್ಲ್ಯಾಂಡ್​ನಲ್ಲಿ ಬ್ಲಾಗಿಂಗ್ ಪ್ರಾರಂಭಿಸಿದರು. ಆದರೆ, ಆರು ವರ್ಷಗಳ ನಂತರ, ಬ್ಲಾಗಿಂಗ್ ನಿಲ್ಲಿಸಿ ಚಲನಚಿತ್ರದ ವಿಷಯಕ್ಕಾಗಿ ಜಗತ್ತನ್ನು ಸುತ್ತಲು ನಿರ್ಧರಿಸಿದಳು. ಸದ್ಯ ಈಗ ಇವರು ತಮ್ಮ ಯೂಟ್ಯೂಬ್‌ನಲ್ಲಿ 300K ಸಬ್ಸ್ಕ್ರೈಬರ್ಸ್ ಹೊಂದಿದ್ದಾರೆ. ಇವರ ರೀಲ್‌ಗಳು ಮಿಲಿಯನ್‌ ವೀಕ್ಷಣೆಗಳನ್ನು ಪಡೆದಿದೆ.

ಇದನ್ನೂ ಓದಿ: ಟ್ರಾವೆಲ್ ಕಾನ್ಫಿಡೆನ್ಸ್ ಇಂಡೆಕ್ಸ್​ನಲ್ಲಿ ಭಾರತ ನಂ.1

ಬೆಂಗಳೂರನ್ನು ತಮ್ಮ ಮನೆಯಾಗಿ ಆಯ್ಕೆ ಮಾಡಲು ಕಾರಣವೇನು? ಎಂಬ ಪ್ರಶ್ನೆಗೆ ಇವಾನಾ ಪರ್ಕೋವಿಕ್ ಅವರು ನೀಡಿದ ಉತ್ತರ, ನನಗೆ ಎಲ್ಲಾ ರೀತಿಯಿಂದಲೂ ಬೆಂಗಳೂರು ಅನುಕೂಲಕರವಾಗಿದೆ. ಒಬ್ಬ ಬಿಸಿನೆಸ್ ಕನ್ಸಲ್ಟೆಂಟ್ಸ್ ಆಗಿ, ಇಲ್ಲಿ ನನ್ನ ಸ್ಟಾರ್ಟ್ ಅಪ್​ಗೆ ಅತ್ಯಂತ ಸ್ವಾಗತಾರ್ಹ ಸಂಸ್ಕೃತಿಯನ್ನು ನಾನು ಕಂಡುಕೊಂಡಿದ್ದೇನೆ. ಅಲ್ಲದೆ, ಈ ನಗರವು ಸಂಸ್ಕೃತಿಗಳ ಸಮ್ಮಿಳನವಾಗಿದೆ ಎಂದರು.

ಇನ್ನು ಭಾರತದಲ್ಲಿ ಇವಾನಾ ಪರ್ಕೋವಿಕ್ ಅವರ ಲೈಫ್ ಜರ್ನಿ ಸವಾಲುಗಳಿಂದ ಮುಕ್ತವಾಗಿರಲಿಲ್ಲ. ಆದರೆ ಈಗ, ಇವಾನಾ ಪರ್ಕೋವಿಕ್ ಹೆಚ್ಚು ಆತ್ಮವಿಶ್ವಾಸದಿಂದ ಇಲ್ಲಿ ನೆಲೆಕಂಡುಕೊಂಡಿದ್ದಾರೆ. ಭಾರತದಲ್ಲಿರುವುದಕ್ಕೆ ನಾನು ತುಂಬಾ ಕೃತಜ್ಞಳಾಗಿದ್ದೇನೆ ಎಂದು ಪರ್ಕೊವಿಕ್ ಸಂತಸ ವ್ಯಕ್ತಪಡಿಸಿದ್ದಾರೆ. ಇವಾನಾ ಪರ್ಕೋವಿಕ್ ಅವರು ಆನ್​ಲೈನ್​ನಲ್ಲಿ ಬೆಂಗಳೂರು ಮತ್ತು ದೇಶದ ವಾಸ್ತವತೆಯನ್ನು ಪ್ರದರ್ಶಿಸುತ್ತಿದ್ದಾರೆ.

ಬೆಂಗಳೂರಿಗೆ ನೀವು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದರೆ, ಇವಾನಾ ಶಿಫಾರಸು ಮಾಡುವ ಕೆಲವು ಸ್ಥಳಗಳು ಇಲ್ಲಿವೆ: ಪಾರಂಪರಿಕ ಮೌಲ್ಯಕ್ಕಾಗಿ ಬೆಂಗಳೂರು ಅರಮನೆ, ವಿಶಿಷ್ಟ ಪರಿಕಲ್ಪನೆ ಮತ್ತು ಹಚ್ಚ ಹಸಿರಿಗಾಗಿ ಲಾಲ್‌ಬಾಗ್, ಸೌಂದರ್ಯಕ್ಕಾಗಿ ಹಲಸೂರು ಕೆರೆ, MTR, ಏರ್‌ಲೈನ್ಸ್ ಹೋಟೆಲ್‌, ವಿದ್ಯಾರ್ಥಿ ಭವನ ಅಥವಾ ರಾಮೇಶ್ವರಂ ಕೆಫೆಯಲ್ಲಿ ತುಪ್ಪದ ಪೋಡಿ ಇಡ್ಲಿ, ಮಸಾಲೆ ದೋಸೆ, ಕಾಫಿ ಇತ್ಯಾದಿ ಟ್ರೈ ಮಾಡಿ ಎಂದು ಇವಾನಾ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಪ್ರವಾಸಿಗರ ಗಮನಕ್ಕೆ: ರಾಜ್ಯದ ಕರಾವಳಿ, ಮಲೆನಾಡಿನಲ್ಲಿ ಭಾರಿ ಮಳೆ; ಅಲರ್ಟ್​ ಘೋಷಣೆ, ಹಲವಡೆ ರಸ್ತೆ ಬಂದ್, ಮುಳುಗಿದ ದೇವಸ್ಥಾನದ ಆವರಣ

ಇದರ ಜೊತೆಗೆ ಇವಾನಾ ಪರ್ಕೋವಿಕ್ ಆಸಕ್ತಿಯುಳ್ಳ ಅನೇಕ ವಿಷಯಗಳಲ್ಲಿ ಭಾರತೀಯ ಸಿನಿಮಾ ಕೂಡ ಒಂದು. ನಿಮ್ಮ ನೆಚ್ಚಿನ ಚಿತ್ರ ಯಾವುದು? ಎಂಬ ಪ್ರಶ್ನೆಗೆ ಇವಾನಾ ಉತ್ತರ, ಚಕ್ ದೇ ಇಂಡಿಯಾ (2007), ರಾಮ್-ಲೀಲಾ (2013), RRR (2022). ಕಾಂತಾರ (2022) ನನ್ನ ನೆಚ್ಚಿನ ಕನ್ನಡ ಚಿತ್ರ. ಮತ್ತು ಮಲಯಾಳಂನಲ್ಲಿ ಬೆಂಗಳೂರು ಡೇಸ್ (2014) ಮತ್ತು ಪ್ರೇಮಂ (2015) ಇಷ್ಟ ಎಂದರು.

ನಿಮ್ಮ ನೆಚ್ಚಿನ ನಟ ಯಾರು? ಅಮೀರ್ ಖಾನ್, ಐಶ್ವರ್ಯ ರೈ ಬಚ್ಚನ್, ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಚೋಪ್ರಾ ಜೋನಾಸ್.

ನೀವು ಇಷ್ಟಪಡುವ ನಿರ್ದೇಶಕ? ಸಂಜಯ್ ಲೀಲಾ ಬನ್ಸಾಲಿ.

ಹೊಸ ಪ್ರವಾಸಿಗರಿಗೆ ಭಾರತ ಪ್ರವಾಸದ ಮಾರ್ಗದರ್ಶಿ ಇವಾನಾ

ಮುಂಬೈ ಅಥವಾ ದೆಹಲಿಯೊಂದಿಗೆ ಪ್ರವಾಸವನ್ನು ಪ್ರಾರಂಭಿಸುವುದು ವಿದೇಶಿ ಪ್ರವಾಸಿಗರಿಗೆ ಸಾಮಾನ್ಯ ಸಂಗತಿ. ಕೊಚ್ಚಿಯು ಪ್ರವಾಸ ಪ್ರಾರಂಭಿಸಲು ಉತ್ತಮ ಸ್ಥಳವಾಗಿದೆ. ಇದು ಪ್ರವಾಸವನ್ನು ನಿಧಾನಗತಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುತ್ತದೆ. ಪ್ರವಾಸದ ವೇಳೆ ಕುತೂಹಲದ ಮನೋಭಾವವನ್ನು ಇಟ್ಟುಕೊಳ್ಳಿ. ನೀವು ವಿಮಾನ ನಿಲ್ದಾಣದಿಂದಲೇ ಚಿಕ್ಕ ವಿಷಯಗಳನ್ನು ಜಡ್ಜ್ ಮಾಡಲು ಪ್ರಾರಂಭಿಸಿದರೆ, ನಿಮಗೆ ಒಳ್ಳೆಯ ಅನುಭವ ಸಿಗುವುದಿಲ್ಲ. ಜಡ್ಜ್ ಮಾಡುವ ಬದಲಿಗೆ ಪ್ರಶ್ನೆಗಳನ್ನು ಕೇಳಿ. ಭಾರತೀಯರಿಗೆ ಹಣಕ್ಕಿಂತ ಘನತೆ ಮುಖ್ಯ. ನೀವು ಜನರೊಂದಿಗೆ ಅಸಭ್ಯವಾಗಿ ಮತ್ತು ಅಗೌರವದಿಂದ ವರ್ತಿಸಲು ಸಾಧ್ಯವಿಲ್ಲ. ಮರೆಯಬೇಡಿ, ನೀವು ಅತಿಥಿ.

ಭಾರತದ ಜನರಿಗೆ ನೀವು ಕೊಡುವುದನ್ನು ನಿಖರವಾಗಿ ಹಿಂದಿರುಗಿಸಲು ಬರುತ್ತದೆ. ನೀವು ಭಯದಿಂದ ಬಂದರೆ, ನಿಮಗೆ ಈ ದೇಶದ ಬಗ್ಗೆ ಭಯವೇ ಉಳಿದುಕೊಳ್ಳುತ್ತದೆ. ನೀವು ಮುಕ್ತ ಮನಸ್ಸಿನಿಂದ ಬಂದರೆ, ನೀವು ಬಹಳಷ್ಟು ಪ್ರೀತಿಯನ್ನು ಇಲ್ಲಿ ಪಡೆಯುತ್ತೀರಿ ಎಂದು ಫಾರಿನ್ ಟ್ರಾವೆಲ್ಲರ್​ಗಳಿಗೆ ಇವಾನಾ ಸಲಹೆ ನೀಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
‘ಉಪೇಂದ್ರ’ ಸಿನಿಮಾ ನೋಡಿ ಉಪ್ಪಿ ಭಾವುಕ; ಏನು ಹೇಳಿದ್ರು?
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ