ಮುರಿದ ಗುಡಿಸಿಲಿನಲ್ಲಿದೆ ಆ ಅಂಗನವಾಡಿ, ಹೆಗ್ಗಣಗಳು ಅಲ್ಲಲ್ಲಿ ಕೊರೆದು ಹಾಕಿವೆ, ಆದರೂ ಮೈಸೂರು ಜಿಲ್ಲಾಡಳಿತ ಕಣ್ಮುಚ್ಚಿ ಕುಳಿತಿದೆ!

ಮೈಸೂರು ತಾಲೂಕಿನ ಬನ್ನಿಮಂಟಪದ ಎಲ್ಲಮ್ಮ ಬಡಾವಣೆಯ ಕೊಳೆಗೇರಿಯಲ್ಲಿರುವ ಅಂಗನವಾಡಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಸ್ಥಳಕ್ಕಾಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ಇಂದು ಗುರುವಾರ ನಡೆಯಿತು.

Follow us
ದಿಲೀಪ್​, ಚೌಡಹಳ್ಳಿ
| Updated By: ಸಾಧು ಶ್ರೀನಾಥ್​

Updated on:Dec 07, 2023 | 1:06 PM

ಮೈಸೂರು, ಡಿಸೆಂಬರ್ 7: ಮೈಸೂರು (Mysore) ತಾಲೂಕಿನ ಬನ್ನಿಮಂಟಪದ (Bannimantap) ಎಲ್ಲಮ್ಮ ಬಡಾವಣೆಯ ಕೊಳೆಗೇರಿಯಲ್ಲಿರುವ (slum) ಅಂಗನವಾಡಿ ಕೇಂದ್ರ ಅವ್ಯವಸ್ಥೆಯ ಆಗರವಾಗಿದೆ. ಹಲವಾರು ವರ್ಷಗಳಿಂದ ಜೋಪಡಿಯಲ್ಲಿ (hut) ಇಲಿ, ಹೆಗ್ಗಣ, ಜಿರಳೆ ಮಧ್ಯೆ ಸುಮಾರು 25 ಪುಟ್ಟ ಪುಟ್ಟ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಪ್ರತಿನಿಧಿಸುವ ಕ್ಷೇತ್ರದಲ್ಲಿ ಇರುವ (Mysore district administration) ಈ ಅಂಗನವಾಡಿ ಶಾಲೆಯ ಮಕ್ಕಳಿಗೆ ಆಸರೆ ಇಲ್ಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

ಮೈಸೂರಿನ ಬನ್ನಿಮಂಟಪದ ಎಲ್ಲಮ್ಮ ಬಡಾವಣೆಯ ಅಂಗನವಾಡಿಯ ಶೋಚನೀಯ ಸ್ಥಿತಿಗತಿ ಹೀಗಿದೆ: ಮುರಿದ ಗುಡಿಸಿಲಿನಲ್ಲಿದೆ ಆ ಅಂಗನವಾಡಿ. ಹಲವಾರು ವರ್ಷಗಳಿಂದ ಇದೇ ಸ್ಥಿತಿಯಾಗಿದೆ. ಅಂಗನವಾಡಿ ಮಕ್ಕಳು ಮಣ್ಣಿನ ನೆಲದಲ್ಲಿಯೇ ಕುಳಿತು ಊಟ ಮಾಡುವ ದುಃಸ್ಥಿತಿಯಲ್ಲಿ​ದಾರೆ. ಜೋಪಡಿಯಂತಿರುವ ಈ ಗುಡಿಸಲಿನ ನೆಲವನ್ನು ಇಲಿ, ಹೆಗ್ಗಣಗಳು ಅಲ್ಲಲ್ಲಿ ಕೊರೆದು ಹಾಕಿವೆ.

ಕಾಂಗ್ರೆಸ್ ಶಾಸಕ ತನ್ವಿರ್ ಸೇಠ್ ಪ್ರತಿನಿಧಿಸುವ ಕ್ಷೇತ್ರದಲ್ಲಿರುವ ಅಂಗನವಾಡಿ ಕೇಂದ್ರ ಇನ್ನಾದರೂ ಸ್ಥಳಾಂತರವಾಗಬೇಕಿದೆ. ಪ್ರತಿ ನಿತ್ಯವೂ ಸುಮಾರು 25 ಮಕ್ಕಳು ಅಂಗನವಾಡಿಗೆ ಬರುತ್ತಾರೆ. ಮಣ್ಣಿನಲ್ಲೇ ಕುಳಿತು ಆಟವಾಡಿ, ಮಧ್ಯಾಹ್ನದ ಊಟ ಸೇವಿಸಿ ಹೋಗುತ್ತಾರೆ. ಎಲ್ಲಮ್ಮ ಬಡಾವಣೆಯ ಸ್ಲಮ್ ನಲ್ಲಿರುವ ಗುಡಿಸಿಲಿನಲ್ಲಿ ಈ ಅಂಗನವಾಡಿಯಿದ್ದು, ಸ್ವಚ್ಛ ನಗರಿ ಎಂದು ಬೊಬ್ಬಿಡುವ ಸರ್ಕಾರಿ ಅಧಿಕಾರಿಗಳು ಇನ್ನಾದರೂ ಒಮ್ಮೆ ಇತ್ತ ಗಮನಹರಿಸಬೇಕಿದೆ ಎನ್ನುತ್ತಾರೆ ನಿರ್ಲಕ್ಷ್ಯಕ್ಕೊಳಗಾದ ಸ್ಲಮ್ ನಿವಾಸಿಗಳು.

ಇದನ್ನೂ ಓದಿ: ಮಳೆ ಮಧ್ಯೆ ಪ್ಲಾಸ್ಟಿಕ್ ಗುಡಿಸಲಿನಲ್ಲಿ ತಾಯಿ-ಮಕ್ಕಳ ಪರದಾಟ: ಟಿವಿ9 ವರದಿ ನೋಡಿ ಸಹಾಯಕ್ಕೆ ಮುಂದಾದ ರಾಣಾ ಜಾರ್ಜ್

ಸ್ಥಳಕ್ಕಾಗಮಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ಇಂದು ಗುರುವಾರ ನಡೆಯಿತು. ಇದೆ ಅಂಗನವಾಡಿಗೆ ಅಂತಾ ಜಾಗ ಮೀಸಲಿದೆ. ಆದರೂ ಅದನ್ನು ಮಾಡುತ್ತಿಲ್ಲ ಎಂದು ಸ್ಥಳೀಯರು ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್ ಗೆ ತರಾಟೆಗೆ ತೆಗೆದುಕೊಂಡರು.

ಬೆಳಗಾವಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದೇನು?

ಇನ್ನು ಮೈಸೂರಿನ ಬನ್ನಿಮಂಟಪದ ಸ್ಲಮ್​​ನಲ್ಲಿರುವ ಅಂಗನವಾಡಿ ಅವ್ಯವಸ್ಥೆ ವಿಚಾರದ ಬಗ್ಗೆ ಬೆಳಗಾವಿಯಲ್ಲಿ ಮಾತನಾಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಧ್ಯಮಗಳ ವರದಿ ನೋಡಿದಾಗ ಈ ವಿಚಾರ ನನ್ನ ಗಮನಕ್ಕೆ ಬಂದಿದೆ. ಈಗಿರುವ ಅಂಗನವಾಡಿ ಸ್ಥಳವನ್ನು ಸ್ಥಳಾಂತರ ಮಾಡಲು ಸೂಚನೆ ನಿಡುವೆ. 15 ದಿನದಲ್ಲಿ ಅಂಗನವಾಡಿಗೆ ಸೂಕ್ತ ಕಟ್ಟಡ ಕಲ್ಪಿಸಲು ಕ್ರಮಕೈಗೊಳ್ಳುತ್ತೇವೆ. ತಾತ್ಕಾಲಿಕವಾಗಿ ಪರಿಹಾರ ಕಲ್ಪಿಸಲು ಸಹ ಕ್ರಮಕ್ಕೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ರಾಜ್ಯದಲ್ಲಿ ಸುಮಾರು ಅಂಗನವಾಡಿಗಳು ಬಾಡಿಗೆಯಲ್ಲಿವೆ. ನಾನು ಈ ಖಾತೆ ತೆಗೆದುಕೊಂಡ ಮೇಲೆ ಸರ್ಕಾರಿ ಸ್ವಂತ ಜಾಗಗಳನ್ನ ಹುಡುಕುತ್ತಿದ್ದೇವೆ. ಈಗಾಗಲೇ 12 ಸಾವಿರ ಅಂಗನವಾಡಿ ಕಟ್ಟಡಗಳಿಗಾಗಿ ಸರ್ಕಾರಿ ಜಮೀನು ಅಲೋಕೆಷನ್ ಆಗಿದೆ. ಇನ್ನೂ 4 ಸಾವಿರ ಜಮೀನು ಅಂಗನವಾಡಿ ಕಟ್ಟಡಕ್ಕೆ ಅಲಾಟ್ ಆಗುತ್ತೆ. ನನ್ನ ಗಮನಕ್ಕೆ ತಂದಿರುವ ಅಂಗನವಾಡಿಯ ಸುತ್ತಮುತ್ತ ಇರುವ ಸರ್ಕಾರಿ ಜಮೀನನನ್ನೇ ಹುಡುಕಿಸಿ, ಅಲ್ಲಿ ವ್ಯವಸ್ಥೆ ಕಲ್ಪಿಸಲಾಗುವುದು. ದುಡ್ಡನ್ನ ಬಿಡುಗಡೆ ಮಾಡಿಸಿ ಕಟ್ಟಡ ಕಟ್ಟಿಸ್ತೆವೆ. ತಾತ್ಕಾಲಿಕ ಅಂತೇನೂ ಇಲ್ಲಾ. 15 ದಿನದಲ್ಲಿ ಸರ್ಕಾರಿ ಕಟ್ಟಡವನ್ನ ಕಟ್ಟಿಸ್ತಿವಿ ನೋಡಿ. ಸರ್ಕಾರಿ ಜಮೀನು ಸಿಗಲಿಲ್ಲ ಅಂದ್ರೆ ಒಳ್ಳೆಯ ಕಟ್ಟಡ ನೋಡಿ, ಸೂಕ್ತ ಸ್ಥಳಾವಕಾಶ ಕಲ್ಪಸುತ್ತೇವೆ. ಗುಡಿಸಿಲಿನಿಂದ ಅಲ್ಲಿಗೆ ಶಿಫ್ಟ್ ಮಾಡಿಸ್ತಿವಿ ಎಂದು ಸಚಿವೆ ತಿಳಿಸಿದ್ದಾರೆ.

ಟಿವಿ9 ವರದಿಯ ಬಿಗ್ ಇಂಪ್ಯಾಕ್ಟ್‌: ಎಲ್ಲಮ್ಮ ಬಡಾವಣೆಯಲ್ಲಿ ದು:ಸ್ಥಿತಿಯಲ್ಲಿದ್ದ ಅಂಗನವಾಡಿ ಸ್ಥಳಾಂತರಕ್ಕೆ ಸಜ್ಜು

ಎಲ್ಲಮ್ಮ ಬಡಾವಣೆಯಲ್ಲಿ ದುಃಸ್ಥಿತಿಯಲ್ಲಿದ್ದ ಅಂಗನವಾಡಿ ಬಗ್ಗೆ ಟಿವಿ 9 ವರದಿ ಬೆನ್ನಲ್ಲೆ‌ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ. ಜಿಲ್ಲಾ ಮಹಿಳಾ ಮತ್ತ ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಬಸವರಾಜ್ ನೇತೃತ್ವದಲ್ಲಿ ಶಿಫ್ಟ್ ಮಾಡುವ ಕೆಲಸ‌ ಆರಂಭವಾಗಿದೆ. ಅಂಗನವಾಡಿಯನ್ನ ಎಲ್ಲಮ್ಮ ಬಡಾವಣೆಯ ಮತ್ತೊಂದು ಕಟ್ಟಡಕ್ಕೆ ಶಿಫ್ಟ್ ಮಾಡುವ ಕೆಲಸವನ್ನು ಅಧಿಕಾರಿಗಳು ಮಾಡುತ್ತಿದ್ದಾರೆ. ಸದ್ಯ ಅಂಗನವಾಡಿಯಲ್ಲಿದ್ದ ಸಾಮಗ್ರಿಗಳನ್ನ ಸಾಗಿಸಲು ಸಿಬ್ಬಂದಿ ಹೊರಗೆ ತಂದಿಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:02 pm, Thu, 7 December 23

Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
Results: ಹಣ ಹಂಚಿ ಕಾಂಗ್ರೆಸ್ ಅಭ್ಯರ್ಥಿ ಗೆದ್ದಿದ್ದಾರೆ: ಬಂಗಾರು ಹನುಮಂತು
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ