ಕೇರಳ ಮೂಲದ ಸ್ವಾಮೀಜಿಗೆ ಮೂಲಭೂತವಾದಿಗಳಿಂದ ಬೆದರಿಕೆ: ಗನ್ ಮ್ಯಾನ್ ಒದಗಿಸಲು ಕರ್ನಾಟಕ ಹೈಕೋರ್ಟ್‌ ಸೂಚನೆ, ಏನಿದು ಪ್ರಕರಣ?

| Updated By: ಆಯೇಷಾ ಬಾನು

Updated on: Jul 27, 2022 | 8:42 PM

ಬೆಂಗಳೂರಿನಲ್ಲಿ ಅಡಗಿದರೂ ಹತ್ಯೆ ಮಾಡುತ್ತೇವೆ. ನಿನ್ನ ಕೊನೆ ಆಸೆಯನ್ನು ಬೇಗ ಈಡೇರಿಸಿಕೋ ಎಂದು ಸಂದೇಶ ಕಳಿಸಿದ್ದಾರೆ ಎಂದು ಸ್ವಾಮಿ ಭದ್ರಾನಂದಜಿ ಹಾಗೂ ಅವರ ತಾಯಿ ರಿಟ್ ಅರ್ಜಿ ಸಲ್ಲಿಸಿದ್ದರು.

ಕೇರಳ ಮೂಲದ ಸ್ವಾಮೀಜಿಗೆ ಮೂಲಭೂತವಾದಿಗಳಿಂದ ಬೆದರಿಕೆ: ಗನ್ ಮ್ಯಾನ್ ಒದಗಿಸಲು ಕರ್ನಾಟಕ ಹೈಕೋರ್ಟ್‌ ಸೂಚನೆ, ಏನಿದು ಪ್ರಕರಣ?
ಕರ್ನಾಟಕ್​ ಹೈಕೋರ್ಟ್​
Follow us on

ಬೆಂಗಳೂರು: ಕೇರಳ ಮೂಲದ ಸ್ವಾಮೀಜಿಗೆ ಮೂಲಭೂತವಾದಿಗಳಿಂದ ಬೆದರಿಕೆ ಬಂದಿದ್ದು ಈ ಬಗ್ಗೆ ತನಿಖೆ ನಡೆಸುವಂತೆ ಹಾಗೂ ಭದ್ರತೆ ಕೋರಿ ಸ್ವಾಮಿ ಭದ್ರಾನಂದಜಿ ಅರ್ಜಿ ಸಲ್ಲಿಸಿದ್ದರು. ಕೇರಳ ಮೂಲದ ಸ್ವಾಮಿ ಭದ್ರಾನಂದಜಿ ಅವರಿಗೆ ಮೂಲಭೂತವಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೀವ ಬೆದರಿಕೆ ಹಾಕಿದ್ದಾರಂತೆ. ಹೀಗಾಗಿ ಅವರು ಅರ್ಜಿ ಸಲ್ಲಿಸಿದ್ದು ಗನ್ ಮ್ಯಾನ್ ಭದ್ರತೆ ಒದಗಿಸಲು ನ್ಯಾ.ಎಸ್.ಕೃಷ್ಣ ದೀಕ್ಷಿತ್‌ರವರಿದ್ದ ಪೀಠ ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಅಡಗಿದರೂ ಹತ್ಯೆ ಮಾಡುತ್ತೇವೆ. ನಿನ್ನ ಕೊನೆ ಆಸೆಯನ್ನು ಬೇಗ ಈಡೇರಿಸಿಕೋ ಎಂದು ಸಂದೇಶ ಕಳಿಸಿದ್ದಾರೆ ಎಂದು ಸ್ವಾಮಿ ಭದ್ರಾನಂದಜಿ ಹಾಗೂ ಅವರ ತಾಯಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಹೈಕೋರ್ಟ್, ಅರ್ಜಿದಾರರಿಗೆ ಪಿಸ್ತೂಲ್ ಲೈಸೆನ್ಸ್ ಕೊಡಲಾಗಿದೆ. ಬೀಟ್ ವ್ಯವಸ್ಥೆ ಮಾಡಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರಿ ವಕೀಲ ವಿನೋದ್ ಕುಮಾರ್ ಮಾಹಿತಿ ನೀಡಿದ್ದಾರೆ. ಇದಕ್ಕೆ ತೀರ್ಪು ನೀಡಿದ ಕೋರ್ಟ್ ಇಂತಹ ಬೆದರಿಕೆಗಳ ಕುರಿತು ಕ್ರಮ ಕೈಗೊಳ್ಳಬೇಕು. 2 ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ. ಹಾಗೂ ಅಲ್ಲಿಯವರೆಗೆ ಗನ್ ಮ್ಯಾನ್ ಭದ್ರತೆ ಒದಗಿಸಲು ನ್ಯಾ.ಎಸ್.ಕೃಷ್ಣ ದೀಕ್ಷಿತ್‌ರವರಿದ್ದ ಪೀಠ ಸೂಚನೆ ನೀಡಿದೆ.

ಸಾಹಿತಿ, ಕಾದಂಬರಿಕಾರ ಬಿಎಲ್ ವೇಣುಗೆ ಮತ್ತೆ ಜೀವ ಬೆದರಿಕೆ

ಸಾಹಿತಿ ಹಾಗೂ ಕಾದಂಬರಿಕಾರ ಬಿಎಲ್ ವೇಣು ಅವರಿಗೆ ಜೀವ ಬೆದರಿಕೆ ಪತ್ರ ಬಂದಿದ್ದು, ಆತಂಕಕ್ಕೊಳಗಾಗುವಂತೆ ಮಾಡಿದೆ. ಸಹಿಷ್ಣು ಹಿಂದೂ ಹೆಸರಿನಲ್ಲಿ ವಿಳಾಸವಿಲ್ಲದ ಬೆದರಿಕೆ ಪತ್ರವು ಚಿತ್ರದುರ್ಗದ ಕೆಳಗೋಟೆ ಬಡಾವಣೆಗೆ ಪತ್ರ ಬಂದಿದೆ. ಎರಡು ಪುಟಗಳ ಕೈಬರಹದ ಪತ್ರ ಬರೆದು ಜೀವ ಬೆದರಿಕೆ ಹಾಕಲಾಗಿದ್ದು, 61 ಸಾಹಿತಿಗಳಿಗೆ ತಿಳಿ ಹೇಳಿ ಎಂದು ಸಲಹೆ ನೀಡಲಾಗಿದೆ. ಅಷ್ಟೇ ಅಲ್ಲದೆ ಸಾವರ್ಕರ್ ಬಗ್ಗೆ ಟೀಕಿಸಿದ್ದಕ್ಕೆ ಕ್ಷಮೆ ಕೇಳಬೇಕೆಂದು ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ಬರಗೂರು ರಾಮಚಂದ್ರಪ್ಪ ಸಮಿತಿಯಿಂದ ಪಠ್ಯ ಪರಿಷ್ಕರಣೆಯಲ್ಲಿ ನಾಡದ್ರೋಹವಾಗಿದೆ. ಬರಗೂರು ರಾಮಚಂದ್ರಪ್ಪ ಸಮಿತಿಗೆ 61 ಸಾಹಿತಿಗಳ ಬೆಂಬಲ ನೀಡಿದ್ದಾರೆ, ಆ ಎಲ್ಲಾ 61 ಜನರನ್ನೂ ಗಲ್ಲಿಗೇರಿಸಬೇಕು, ಗುಂಡಿಕ್ಕಬೇಕೆಂದು ಬೆದರಿಕೆ ಪತ್ರದಲ್ಲಿ ಹೇಳಲಾಗಿದೆ.

Published On - 8:38 pm, Wed, 27 July 22