AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಖ್ಯಾತ ಸರಗಳ್ಳರ ಬಂಧನ, ಬೆಂಗಳೂರು ಪೊಲೀಸರ ಗುಂಡೇಟಿಗೆ ಹೆದರಿ ಪಕ್ಕದ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ್ದ ದುಷ್ಕರ್ಮಿಗಳು!!

Chain snatching: ಚೈನ್ ಸ್ನ್ಯಾಚಿಂಗ್ ಸೇರಿದಂತೆ ಗ್ಯಾಂಗ್ ರೇಪ್ ನಲ್ಲಿ ಭಾಗಿಯಾಗಿದ್ದ ಆ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಟಿ ಪೊಲೀಸರು ಫೈರಿಂಗ್ ಮಾಡಿ ಜೈಲಿಗೆ ತಳ್ಳಿದ್ದರು. ಆದ್ರೆ ಇತ್ತೀಚೆಗೆ ಜಾಮೀನು ಮೇಲೆ ಆಚೆ ಬಂದ ಅವರು, ಏರಿಯಾ ಬದಲಾಯಿಸಿ ಚೈನ್ ಸ್ನ್ಯಾಚಿಂಗ್ ಮಾಡಿ ಪರಾರಿಯಾಗಿದ್ದರು.

ಕುಖ್ಯಾತ ಸರಗಳ್ಳರ ಬಂಧನ, ಬೆಂಗಳೂರು ಪೊಲೀಸರ ಗುಂಡೇಟಿಗೆ ಹೆದರಿ ಪಕ್ಕದ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ್ದ ದುಷ್ಕರ್ಮಿಗಳು!!
ಕುಖ್ಯಾತ ಸರಗಳ್ಳರ ಬಂಧನ, ಬೆಂಗಳೂರು ಪೊಲೀಸರ ಗುಂಡೇಟಿಗೆ ಹೆದರಿ ಪಕ್ಕದ ಚಿಕ್ಕಬಳ್ಳಾಪುರದತ್ತ ಮುಖ ಮಾಡಿದ್ದ ದುಷ್ಕರ್ಮಿಗಳು!!
TV9 Web
| Edited By: |

Updated on: Jul 27, 2022 | 7:11 PM

Share

ಚೈನ್ ಸ್ನ್ಯಾಚಿಂಗ್ (Chain snatching) ಸೇರಿದಂತೆ ಗ್ಯಾಂಗ್ ರೇಪ್ ನಲ್ಲಿ ಭಾಗಿಯಾಗಿದ್ದ ಆ ಇಬ್ಬರು ಆರೋಪಿಗಳನ್ನು ಬೆಂಗಳೂರು ಸಿಟಿ ಪೊಲೀಸರು ಫೈರಿಂಗ್ ಮಾಡಿ ಜೈಲಿಗೆ ತಳ್ಳಿದ್ದರು. ಆದ್ರೆ ಇತ್ತೀಚೆಗೆ ಜಾಮೀನು ಮೇಲೆ ಆಚೆ ಬಂದ ಅವರು, ಏರಿಯಾ ಬದಲಾಯಿಸಿ ಚೈನ್ ಸ್ನ್ಯಾಚಿಂಗ್ ಮಾಡಿ ಪರಾರಿಯಾಗಿದ್ದರು. ಖತರ್ನಾಕ್ ಗ್ಯಾಂಗ್ ಹಿಂದೆ ಬಿದ್ದ ಪೊಲೀಸರು, ನಟೋರಿಯಸ್ ಚೈನ್ ಕಳ್ಳರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ಓದಿ!!

ಇವರ ಮುಖವನ್ನೊಮ್ಮೆ ನೋಡಿ, ಮುಂದೆ ನಿಮ್ಮ ಮನೆಯ ಮುಂದೆಯೂ ಬರಬಹುದು. ಇವರುಗಳ ಹೆಸರು ಇಮ್ರಾನ್ ಅಲಿಯಾಸ್ ಬೋಡ್ಕಿ, ಸಿಕಂದರ್ ಹಾಗೂ ಶಬರೀಶ. ಬೆಂಗಳೂರಿನ ನೆಲಮಂಗಲ ಮೂಲದ ಇಮ್ರಾನ್ ಅಲಿಯಾಸ್ ಬೋಡ್ಕಿ, ಸಿಕಂದರ್ ಹಾಗೂ ಜೆ.ಜೆ. ನಗರದ ಶಬರೀಶ ತಂಡೋಪಾದಿಯಾಗಿ ಒಂಟಿ ಮಹಿಳೆಯರು ಹಾಗೂ ಮಹಿಳೆಯ ಆಭರಣಗಳ ಮೇಲೆ ಕಣ್ಣು ಹಾಕುವ ಜಾಯಮಾನದವರು.

ಕ್ಷಣಾರ್ಧದಲ್ಲಿ ಮಹಿಳೆಯ ಮೈಮೇಲೆ ಇದ್ದ ಚಿನ್ನಾಭರಣಗಳನ್ನು ಎಗರಿಸಿ ಸಿನಿಮೀಯ ರೀತಿಯಲ್ಲಿ ಎಸ್ಕೇಪ್ ಆಗ್ತಿದ್ರು. ಇದೆ ಜುಲೈ ತಿಂಗಳ 15 ರಂದು ಚಿಕ್ಕಬಳ್ಳಾಪುರ ನಗರದ ಕಂದವಾರ ಬಾಗಿಲಿನ ಕಿರಾಣಿ ಅಂಗಡಿ ಮುಂದೆ ಇದ್ದ ವೃದ್ದೆ ವೆಂಕಟಲಕ್ಷ್ಮಮ್ಮ ಅವರ 37 ಗ್ರಾಂ ಮಾಂಗಲ್ಯ ಸರ ಕಸಿದು ಪರಾರಿಯಾಗಿದ್ದರು. ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು, ಕೊನೆಗೂ ಬೆಂಗಳೂರಿನ ನೆಲಮಂಗಲ ಮೂಲದ ಇಮ್ರಾನ್ ಅಲಿಯಾಸ್ ಬೋಡ್ಕಿ, ಸಿಕಂದರ್ ಹಾಗೂ ಜೆ.ಜೆ. ನಗರದ ಶಬರೀಶರನ್ನ ಬಂಧಿಸಿ ತನಿಖೆ ನಡೆಸಿದ್ದಾರೆ.

ಇನ್ನು ಬಂಧಿತ ಆರೋಪಿಗಳ ಜನ್ಮ ಜಾಲಾಡುತ್ತಿರುವ ಪೊಲೀಸರಿಗೆ, ಬಗೆದಷ್ಟು ನಟೋರಿಯಸ್ ಚೈನ್ ಕಳ್ಳರ ಕೃತ್ಯಗಳು ಬಯಲಾಗ್ತಿವೆ. ಆರೋಪಿಗಳು ಮೊದಲು ಬೆಂಗಳೂರಿನ ಹಲವು ಕಡೆ ಚೈನ್ ಕಳ್ಳತನ ಮಾಡಿಕೊಂಡಿದ್ರು. ಆಗ ಅಪ್ರಾಪ್ತೆಯ ಮೇಲೆ ಗ್ಯಾಂಗ್ ರೇಪ್ ಮಾಡಿ ಪೊಲೀಸರಿಗೆ ಚೆಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು. ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಕಾರಣ, ಇಮ್ರಾನ್ ಹಾಗೂ ಸಿಕಂದರ್ ಮೇಲೆ ಫೈರಿಂಗ್ ಮಾಡಿ ಪೊಲೀಸರು ಪಾತಕಿಗಳನ್ನು ಬಂಧಿಸಿದ್ದರು. ಎರಡು ಮೂರು ವರ್ಷಗಳ ಕಾಲ ಜೈಲಿನಲ್ಲಿದ್ದ ಆರೋಪಿಗಳಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು. ಬುದ್ದಿ ಕಲಿಯದ ಇವರು ಮತ್ತೆ ಏರಿಯಾ ಬದಲಾಯಿಸಿ ಹಳೆ ಕೃತ್ಯ ನಡೆಸತೊಡಗಿದ್ದರು.

ನಟೋರಿಯಸ್ ಚೈನ್ ಕಳ್ಳರನ್ನ ಬಂಧಿಸಿ ತನಿಖೆ ನಡೆಸಿರುವ ಪೊಲೀಸರಿಗೆ ಒಂದೊಂದೆ ಪ್ರಕರಣಗಳು ಬಯಲಾಗ್ತಿವೆ. ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ಚಿಂತಾಮಣಿ, ದೇವನಹಳ್ಳಿ ಸೇರಿದಂತೆ ಹಲವು ಕಡೆ ಚೈನ್ ಕಳ್ಳತನ ಮಾಡಿರುವ ಪ್ರಕರಣಗಳು ಬಯಲಾಗಿವೆ. ಇನ್ನು ಆರೋಪಿಗಳು ಮೋಜು ಮಸ್ತಿ ಐಷಾರಾಮಿ ಜೀವನಕ್ಕೆ ಚೈನ್ ಕಳ್ಳತನಗಳ ಮಾಡುತ್ತಿರುವುದು ತನಿಖೆ ವೇಳೆ ಬಯಲಾಗಿದೆ.

– ಭೀಮಪ್ಪ ಪಾಟೀಲ್, ಟಿವಿ9 ಚಿಕ್ಕಬಳ್ಳಾಪುರ.