
ಬೆಂಗಳೂರು, ಡಿ.17: ಬೆಂಗಳೂರಿನಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಟರ್ಮಿನಲ್ 2ರಲ್ಲಿ ಹೊಸ ಸಾರ್ವಜನಿಕ ಗ್ಯಾಲರಿ ಮತ್ತು ಉದ್ಯಾನ ಮಾಡಲಾಗಿದೆ. ಇನ್ನು ಈ ಗ್ಯಾಲರಿಯಿಂದಲ್ಲೇ ವಿಮಾನ ನಿಲ್ದಾಣದ ಒಳಗೆ ಹೋಗಬಹುದು. ಇದು ಜನರಿಗೆ ಹೆಚ್ಚಿನ ಕಾಲ ವಿಶ್ರಾಂತಿ ಪಡೆಯಲು ಅವಕಾಶ ನೀಡುತ್ತದೆ. ಈ ಗ್ಯಾಲರಿಯನ್ನು ತುಂಬಾ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. ಸಂಪೂರ್ಣ ಹಸಿರಿನಿಂದ ಇದು ಕಂಗೊಳಿಸುತ್ತದೆ. ಇದು ಭಾರತದ “ಉದ್ಯಾನ ನಗರ” ಎಂಬ ಖ್ಯಾತಿಯನ್ನು ಕೂಡ ಪಡೆದುಕೊಂಡಿದೆ. ಈಗಾಗಲೇ ಬೆಂಗಳೂರಿನ ವಿಮಾನ ನಿಲ್ದಾಣದ ಎರಡು ಟರ್ಮಿನಲ್ ಅದ್ಭುತ ವಿನ್ಯಾಸಗಳನ್ನು ಹೊಂದಿದೆ.
ಸಸ್ಯಗಳು, ನೈಸರ್ಗಿಕ ವಿನ್ಯಾಸಗಳು ಮತ್ತು ಹಿತವಾದ ದೃಶ್ಯಗಳು ಪ್ರಯಾಣಿಕರನ್ನು ಸೆಳೆಯುತ್ತದೆ. ಪ್ರಯಾಣಿಕರಿಗೆ ವಿಶ್ರಾಂತಿ ಪಡೆಯಲು ಅಥವಾ ಒಂದು ವೇಳೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರು ಬೇಗ ಬಂದರೆ, ಇಲ್ಲಿ ಕಾಲ ಕಳೆಯಬಹುದು. ಜತೆಗೆ ಬೆಳಕಿನ ವಿನ್ಯಾಸವನ್ನು ಕೂಡ ಅದ್ಭುತವಾಗಿ ಮಾಡಲಾಗಿದೆ. ಜತೆಗೆ ವಿಮಾನ ನಿಲ್ದಾಣಗಳಾಗುವ ಗದ್ದಲಗಳನ್ನು ತಪ್ಪಿಸಲು ಕೂಡ ಇದು ಸಹಾಯಕವಾಗಿದೆ. ಗಾರ್ಡನ್ ಟ್ರಯಲ್ನ್ನು ಕೂಡ ವಿನ್ಯಾಸ ಮಾಡಲಾಗಿದೆ. ಪ್ರಕೃತಿ ಆಧಾರಿತ ವಿನ್ಯಾಸ, ಮೃದುವಾದ ಬೆಳಕು ಮತ್ತು ವಿಶಾಲ ಕಾರಿಡಾರ್ಗಳನ್ನು ಕೂಡ ಮಾಡಲಾಗಿದೆ.
ಇದನ್ನೂ ಓದಿ: ಅತಿ ಹೆಚ್ಚು ಪ್ರವಾಸಿ ತಾಣಗಳನ್ನು ಹೊಂದಿರುವ ಈ ಮೂರು ಜಿಲ್ಲೆಗಳ ಗಾಳಿ ಗುಣಮಟ್ಟ ಭಾರೀ ಕುಸಿತ: ಪ್ರವಾಸಿಗರೇ ಎಚ್ಚರ
A beautiful Garden trail is now open at @BLRAirport T2 international ✨✈️@AeroUpdatesBLR pic.twitter.com/1oL9G7xgj3
— Eshwar Vemala (@eshwarvs) December 14, 2025
ಇದರ ವಿನ್ಯಾಸ ಹಾಗೂ ಈ ಗ್ಯಾಲರಿ ಹೇಗಿದೆ ಎಂಬುದನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ವಿಮಾನ ನಿಲ್ದಾಣದಲ್ಲಿರುವ ಈ ವ್ಯವಸ್ಥೆಯ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟರ್ಮಿನಲ್ 2 ಈಗಾಗಲೇ ತನ್ನ ಪರಿಸರ ಸ್ನೇಹಿ ಕಲಾಕೃತಿ ಹಾಗೂ ಬಿದಿರಿನಿಂದ ಮಾಡಿದ ವಿನ್ಯಾಸವನ್ನು ಹೊಂದಿದೆ. ಇದೀಗ ಹೊರಾಂಗಣ ಕೂಡ ಅದ್ಭುತವಾಗಿ ಕಾಣುತ್ತಿದೆ. ಇದು ಪ್ರಯಾಣಿಕರಿಗೆ ಮತ್ತಷ್ಟು ಅನುಭವವನ್ನು ನೀಡುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ