ಪೊಲೀಸ್ ಇಲಾಖೆ ಹೆಸರು ಬಳಸಿಕೊಂಡು ಕಿಡ್ನಾಪ್​; ಐವರು ಆರೋಪಿಗಳು ಅಂದರ್​

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 22, 2023 | 8:13 AM

ನಗರದ ಎಸ್ಪಿ ರೋಡ್​ನಲ್ಲಿ ಮೊಬೈಲ್ ಶಾಪ್ ಮಾಲೀಕನಾಗಿದ್ದ ಕಾಲು ಸಿಂಗ್​ನನ್ನು ಗಾಂಜಾ ಮಾರಾಟ ಮಾಡ್ತೀಯಾ ಎಂದು ಬೆದರಿಸಿ ‘ನಾವು ಪೊಲೀಸ್​ನವರು ಅಂತೇಳಿ ಎರಡು ದಿನದ ಹಿಂದೆ  ಆತನನ್ನು ಕಿಡ್ನಾಪ್ ಮಾಡಿದ್ದ ಮಹಮ್ಮದ್ ಖಾಸಿಂ ಅಲಿಯಾಸ್​ ಸೇಟ್ ಟೀಂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು.

ಪೊಲೀಸ್ ಇಲಾಖೆ ಹೆಸರು ಬಳಸಿಕೊಂಡು ಕಿಡ್ನಾಪ್​; ಐವರು ಆರೋಪಿಗಳು ಅಂದರ್​
ಬಂಧಿತ ಆರೋಪಿಗಳು
Follow us on

ಬೆಂಗಳೂರು, ಅ.22: ಮಹಾನಗರದಲ್ಲಿ ಕಳ್ಳರಿಗೆ ನಿಜಕ್ಕೂ ಪೊಲೀಸರೆಂದರೆ ಭಯವೇ ಇಲ್ಲವಾ ಎಂಬ ಪ್ರಶ್ನೆ ಮೂಡಿದೆ. ಹೆಚ್ಚುತ್ತಿರುವ ಅಪರಾಧ ಪ್ರಕರಣಗಳನ್ನು ತಡೆಯಲು ಎಷ್ಟೇ ಕಟ್ಟುನಿಟ್ಟಿನ ಕ್ರಮ ಕೈಗೊಂಡರು ತಡೆಯಲಾಗುತ್ತಿಲ್ಲ. ಅದರಂತೆ ಇದೀಗ ಹಣಕ್ಕಾಗಿ ವ್ಯಕ್ತಿಯೋರ್ವನನ್ನು ಕಿಡ್ನಾಪ್(Kidnap) ಮಾಡಲು ಪೊಲೀಸ್ ಇಲಾಖೆಯ ಹೆಸರನ್ನೇ ಬಳಸಿಕೊಂಡ ಅಪಹರಣ ಮಾಡಿ 5 ಲಕ್ಷಕ್ಕೆ ಬೇಡಿಕೆಯಿಟ್ಟ ಘಟನೆ ನಡೆದಿದೆ. ಹೌದು, ಪೊಲೀಸ್ ಡಿಪಾರ್ಟ್ಮೆಂಟ್ ಎಂದು ಹೇಳಿ ಮೊಬೈಲ್ ಶಾಪ್(Mobile Shop) ಮಾಲೀಕನನ್ನು ಹೆದರಿಸಿ ಕಿಡ್ನಾಪ್ ಮಾಡಿ, ಹಣಕ್ಕೆ ಬೇಡಿಕೆ ಇಟ್ಟು, ಇದೀಗ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ

ನಗರದ ಎಸ್ಪಿ ರೋಡ್​ನಲ್ಲಿ ಮೊಬೈಲ್ ಶಾಪ್ ಮಾಲೀಕನಾಗಿದ್ದ ಕಾಲು ಸಿಂಗ್​ನನ್ನು ಗಾಂಜಾ ಮಾರಾಟ ಮಾಡ್ತೀಯಾ ಎಂದು ಬೆದರಿಸಿ ‘ನಾವು ಪೊಲೀಸ್​ನವರು ಅಂತೇಳಿ ಎರಡು ದಿನದ ಹಿಂದೆ  ಆತನನ್ನು ಕಿಡ್ನಾಪ್ ಮಾಡಿದ್ದ ಮಹಮ್ಮದ್ ಖಾಸಿಂ ಅಲಿಯಾಸ್​ ಸೇಟ್ ಟೀಂ, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದರು. ನಗರದಲ್ಲಿ ಗಾಂಜಾ ಮಾರಾಟ ಮಾಡುತ್ತಿಯಾ, ಪೊಲೀಸರಿಗೆ ಹೇಳುತ್ತೇನೆ ಎಂದು ಮನಸೋ ಇಚ್ಚೆ ಹಲ್ಲೆ ನಡೆಸಿ 5 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟಿದ್ದರು.

ಇದನ್ನೂ ಓದಿ:ಮೈಸೂರು: ಜಮೀನಿನಲ್ಲಿದ್ದ ಕೇರಳ ಮೂಲದ ರೈತನ ಕೈಕಾಲು ಕಟ್ಟಿ ಹಣ ಕಳ್ಳತನಕ್ಕೆ ಯತ್ನ

ಸದ್ಯ ಐವರು ಆರೋಪಿಗಳನ್ನ ಬಂಧಿಸಿದ ಸಿಸಿಬಿ ಪೊಲೀಸರು

ಇನ್ನು ಕಾಲು ಸಿಂಗ್, ಹಣ ಕೊಡಲು ಒಪ್ಪದೇ ಇದ್ದಾಗ ವಾಸಿಂ, ಇನ್ಫಾರ್ಮೇಶನ್ ಇದೆ ಎಂದು ಪೊಲೀಸರಿಗೆ ಫೇಕ್ ಕಾಲ್ ಮಾಡಿದ್ದ. ಪೊಲೀಸರು ಬೈದು ಕಳುಹಿಸಿದಾಗ ಕಾಲುಸಿಂಗ್​ನನ್ನು ಬಿಟ್ಟು ಕಳುಹಿಸಿದ ತರ ಡ್ರಾಮಾ ಮಾಡಿದ್ದರು. ನಂತರ ಈ ಕುರಿತು ಕಾಲು ಸಿಂಗ್​​ನಿಂದ ವಿವಿ ಪುರಂ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಎನ್​ಸಿಆರ್ ದಾಖಲಿಸಿಕೊಂಡ ವಿವಿಪುರಂ ಪೊಲೀಸರು, ಸಿಸಿಬಿಗೆ ಮಾಹಿತಿ ನೀಡಿದ್ದರು. ಬಳಿಕ ಎಫ್ಐಆರ್ ದಾಖಲಿಸಿದ ಠಾಣಾಧಿಕಾರಿ, ಸದ್ಯ ವಾಸೀಂ, ಶಬ್ಬೀರ್, ಶೋಹಿಬ್, ಮುಜಾಫರ್ ಸೇರಿದಂತೆ ಐವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:10 am, Sun, 22 October 23