ಮಂಡ್ಯ: ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳಿಂದ ಸೆಕ್ಯೂರಿಟಿಗಾರ್ಡ್ಗೆ ಚಾಕು ಇರಿತ
ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು, ಸೆಕ್ಯೂರಿಟಿಗಾರ್ಡ್ಗೆ ಚಾಕು ಇರಿದ ಘಟನೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ. ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಸೆಕ್ಯೂರಿಟಿಗಾರ್ಡ್ (Security Gaurd)ಆಗಿರುವ ಮೋಹನ್ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ.
ಮಂಡ್ಯ, ಅ.17: ಕಳ್ಳತನಕ್ಕೆ ಬಂದಿದ್ದ ದುಷ್ಕರ್ಮಿಗಳು, ಸೆಕ್ಯೂರಿಟಿಗಾರ್ಡ್ಗೆ ಚಾಕು ಇರಿದ ಘಟನೆ ಮಂಡ್ಯ(Mandya) ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಹರಿಹರಪುರದಲ್ಲಿ ನಡೆದಿದೆ. ಮಂಡ್ಯ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ಸೆಕ್ಯೂರಿಟಿಗಾರ್ಡ್ (Security Gaurd)ಆಗಿರುವ ಮೋಹನ್ಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಮಧ್ಯರಾತ್ರಿ ಬೈಕ್ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇನ್ನು ಹಲ್ಲೆಗೊಳಗಾದ ಮೋಹನ್ ಕುಮಾರ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಆರೋಪಿಗಳು ಮುಖಕ್ಕೆ ಮಾಸ್ಕ್ ಧರಿಸಿ ಕಳ್ಳತನಕ್ಕೆ ಬಂದಿದ್ದು, ಬ್ಯಾಂಕ್ ಬಳಿ ನಿಂತಿದ್ದನ್ನು ಪ್ರಶ್ನಿಸಿದ್ದಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ. ಈ ಕುರಿತು ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಪ್ರತಿಭಟನೆಗೆ ಸಿಗದ ಸ್ಪಂದನೆ; ವಿಷ ಕುಡಿದ ರೈತ
ರಾಯಚೂರು: ಜಿಲ್ಲೆಯಲ್ಲಿ ವಿದ್ಯುತ್ಗಾಗಿ ರೈತರ ಪ್ರತಿಭಟನೆ ವಿಚಾರಕ್ಕೆ ಸಂಬಂಧಪಟ್ಟಂತೆ ಬೆಳಿಗ್ಗೆಯಿಂದ ಹೋರಾಟ ನಡೆಸಿದರೂ ಜೆಸ್ಕಾಂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ಸಿಗದ ಹಿನ್ನೆಲೆ ಜೆಸ್ಕಾಂ ಕಚೇರಿ ಎದುರುಗಡೆಯೇ ರೈತ ನರಸಿಂಹಲು ಎಂಬಾತ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಇನ್ನು ವಿಷ ಕುಡಿದು ಹೊರಟಿದ್ದ ರೈತನನ್ನು ಕೂಡಲೇ ಪೊಲೀಸರು ಹಿಡಿದು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಬೆಳಿಗ್ಗೆ ಜೆಸ್ಕಾಂ ಅಧಿಕಾರಿ ಎದುರೇ ವಿಷ ಕುಡಿತಯಲು ಯತ್ನಿಸಿದ್ದ ಮತ್ತೊಬ್ಬ ರೈತ ಹುಲಿಗೆಪ್ಪ ಎಂಬಾತ ಯತ್ನಿಸಿದ್ದ.
ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದ ಕೊಲೆ ಪ್ರಕರಣ; ಇಬ್ಬರು ಅರೋಪಿಗಳು ಅರೆಸ್ಟ್
ಬೆಂಗಳೂರು: ನಗರದ ಮಹಾಲಕ್ಷ್ಮಿ ಲೇಔಟ್ನಲ್ಲಿ ನಡೆದ ಕೊಲೆ ಕೇಸ್ಗೆ ಸಂಬಂಧಪಟ್ಟಂತೆ ಇಬ್ಬರು ಅರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ರಾಜೇಶ್ ಕುಮಾರ್ ಮತ್ತು ನೇಹ ಕುಮಾರಿ ಬಂಧಿತ ಅರೋಪಿಗಳು. ಇನ್ನು ಮೃತ ಸುಜ್ಜನ್ ಸಿಂಗ್ ಸೇರಿ ಎಲ್ಲರೂ ಬಿಹಾರ ಮೂಲದವರಾಗಿದ್ದು, ನೇಹ ಕುಮಾರಿ ಎಂಬುವವರ ಜೊತೆಗೆ ಸುಜ್ಜನ್ ಸಿಂಗ್ ಅಕ್ರಮ ಸಂಬಂಧ ಹೊಂದಿದ್ದ ಹಿನ್ನಲೆ ಮೂವರ ನಡುವೆ ಈ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಕೊಲೆ ಮಾಡಲಾಗಿದೆ ಎಂದು ತನಿಖೆ ವೇಳೆ ಬಯಲಿಗೆ ಬಂದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ