Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾವಣಗೆರೆಯಲ್ಲಿ ಘೋರ ದುರಂತ: ಗರಡಿ ಮನೆಯಲ್ಲೇ ಬಾಲಕಿ ಆತ್ಮಹತ್ಯೆ, ಕುಸ್ತಿಪಟು ಆಸೆ ನುಚ್ಚುನೂರು

ಎರಡು ದಿನಗಳ ಹಿಂದೆ ಹರಿಹರ ಪಟ್ಟಣಕ್ಕೆ ಬಂದಿದ್ದ ಕಾವ್ಯಾ ಬೆಳಗ್ಗೆ ಗರಡಿ ಮನೆಯಲ್ಲಿ ತರಬೇತಿಗೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಯ ನಂತರವೇ ಕಾರಣ ತಿಳಿಯಬೇಕಿದೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾವಣಗೆರೆಯಲ್ಲಿ ಘೋರ ದುರಂತ: ಗರಡಿ ಮನೆಯಲ್ಲೇ ಬಾಲಕಿ ಆತ್ಮಹತ್ಯೆ, ಕುಸ್ತಿಪಟು ಆಸೆ ನುಚ್ಚುನೂರು
ಕುಸ್ತಿಪಟು ಕಾವ್ಯಾ ಪೂಜಾರ್
Follow us
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Updated By: ಆಯೇಷಾ ಬಾನು

Updated on:Oct 17, 2023 | 11:07 AM

ದಾವಣಗೆರೆ, ಅ.17: ಗರಡಿ ಮನೆಯಲ್ಲಿ ನೇಣು ಬಿಗಿದುಕೊಂಡು ಕುಸ್ತಿಪಟು (Wrestler) ಆಗಿದ್ದ ಬಾಲಕಿ ಆತ್ಮಹತ್ಯೆ (Hangging) ಮಾಡಿಕೊಂಡ ಘಟನೆ ನಡೆದಿದೆ. ದಾವಣಗೆರೆ (Davanagere) ಜಿಲ್ಲೆಯ ಹರಿಹರ ಪಟ್ಟಣದ ಶಿಬಾರ ಸರ್ಕಲ್ ಬಳಿ ಇರುವ ಗರಡಿ ಮನೆಯಲ್ಲಿ 13 ವರ್ಷದ ಬಾಲಕಿ ಕಾವ್ಯಾ ಪೂಜಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತ ಕಾವ್ಯಾ ಧಾರವಾಡ ಕುಸ್ತಿ ಹಾಸ್ಟೆಲ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.

ಎರಡು ದಿನಗಳ ಹಿಂದೆ ಹರಿಹರ ಪಟ್ಟಣಕ್ಕೆ ಬಂದಿದ್ದ ಕಾವ್ಯಾ ಬೆಳಗ್ಗೆ ಗರಡಿ ಮನೆಯಲ್ಲಿ ತರಬೇತಿಗೆ ಹೋಗಿದ್ದಾಗ ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಯ ನಂತರವೇ ಕಾರಣ ತಿಳಿಯಬೇಕಿದೆ. ಹರಿಹರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆ

ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಚಿಕ್ಕಲಕಿ ಕ್ರಾಸ್ ಬಳಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ಹನುಮಂತ ಘಾಟನಿ(22) ಎಂದು ಗುರುತಿಸಿದ್ದು ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಸಾವಳಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ: ಚಿನ್ನದಂಗಡಿಗೆ ಬಂದ ಬಾಲಕಿ ಜೊತೆ ಮಾಲೀಕ ಅಸಭ್ಯ ವರ್ತನೆ, ಸ್ಥಳೀಯರಿಂದ ಧರ್ಮದೇಟು

ಹಾವು ಕಚ್ಚಿ ರೈತ ಮಹಿಳೆ ಸಾವು

ಮೈಸೂರು ಜಿಲ್ಲೆಯಲ್ಲಿ ಹಾವು ಕಚ್ಚಿ ರೈತ ಮಹಿಳೆ ಮೃತಪಟ್ಟಿದ್ದಾರೆ. ನಂಜನಗೂಡು ತಾಲೂಕಿನ ಗೊದ್ದನಪುರ ಗ್ರಾಮದಲ್ಲಿ ವಾಸವಿದ್ದ 42 ವರ್ಷದ ಜಯಲಕ್ಷ್ಮಿ ಎಂಬ ರೈತ ಮಹಿಳೆಯೊಬ್ಬರು ತಮ್ಮ ಜಮೀನಿನಲ್ಲಿ ಅವರೆಕಾಯಿ ಕುಯ್ಯಲು ಹೋಗಿದ್ದರು. ಜಮೀನಿನಲ್ಲಿ ಕೆಲಸ ಮಾಡುವಾಗ ವಿಷದ ಹಾವು ಕಚ್ಚಿದೆ. ಈ ವೇಳೆ ಜಯಲಕ್ಷ್ಮಿಯವರು, ನನಗೆ ಹಾವು ಕಚ್ಚಿದೆ ಎಂದು ಜೋರಾಗಿ‌ ಕೂಗಿ ಕೊಂಡಿದ್ದು ಸ್ಥಳಕ್ಕೆ ಧಾವಿಸಿದ ಜನ ಜಯಲಕ್ಷ್ಮಿ ಅವರನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜಯಲಕ್ಷ್ಮಿ ಮೃತಪಟ್ಟಿದ್ದಾರೆ. ಈ ಸಂಬಂಧ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಸಿಕ‌ ಅಸ್ವಸ್ಥನಿಂದ ಹಲ್ಲೆ, ಕೂಲಿ ಕಾರ್ಮಿಕ ಸಾವು

ತುಮಕೂರು ಜಿಲ್ಲೆ ಪಾವಗಡ ಪಟ್ಟಣದಲ್ಲಿ ಅನಿಲ್ ಎಂಬ ಮಾನಸಿಕ ಅಸ್ವಸ್ಥ ವ್ಯಕ್ತಿ ಶಂಕರಪ್ಪ ಎಂಬುವವರಿಗೆ ದೊಣ್ಣೆಯಿಂದ ಥಳಿಸಿದ್ದಾನೆ. ತೀವ್ರ ರಕ್ತ ಶ್ರಾವದಿಂದ ಕೂಲಿ ಕಾರ್ಮಿಕ ಶಂಕರಪ್ಪ ಮೃತಪಟ್ಟಿದ್ದಾರೆ. ಮಾನಸಿಕ ಅಸ್ವಸ್ಥ ಅನಿಲ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಾನಸಿಕ ಅಸ್ವಸ್ಥನಾಗಿ ಅನಿಲ್ ಪಾವಗಡದಲ್ಲಿ ಅಲೆದಾಡುತ್ತಿದ್ದ.

ನಿನ್ನೆ ರಾತ್ರಿ ಶನಿಮಹಾತ್ಮ ದೇವಸ್ಥಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಶಂಕರಪ್ಪನ ಮೇಲೆ ಅನಿಲ್ ಹಲ್ಲೆ ನಡೆಸಿದ್ದಾನೆ. ಹಿಂದಿನಿಂದ ಬಂದು ದೊಣ್ಣೆಯಿಂದ ತಲೆಗೆ ಬಲವಾಗಿ ಹೊಡೆದಿರುವ ಕಾರಣ ರಕ್ತ ಶ್ರಾವವಾಗಿ ಸಾವು ಸಂಭವಿಸಿದೆ.

ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 11:01 am, Tue, 17 October 23