ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ; ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಬಿನ್ನಮಂಗಲದಲ್ಲಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಬೈಕ್ ಸವಾರ ಸುಭಾಷ್ ನಗರದ ಮಧು(32) ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕಿಲ್ಲರ್ ಬಿಎಂಟಿಸಿಗೆ ಮತ್ತೊಂದು ಬಲಿ; ಬಸ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು
ಮಧು
Follow us
ಬಿ ಮೂರ್ತಿ, ನೆಲಮಂಗಲ
| Updated By: ಆಯೇಷಾ ಬಾನು

Updated on: Oct 22, 2023 | 7:58 AM

ಬೆಂಗಳೂರು, ಅ.22: ಬಿಎಂಟಿಸಿ ರಾಜ್ಯ ರಾಜಾಧಾನಿಯ ಸಂಪರ್ಕಕೊಂಡಿ (BMTC). ಆದ್ರೆ ಈ ಬಿಎಂಟಿಸಿ ಬಸ್ ಕಿಲ್ಲರ್ ಬಿಎಂಟಿಸಿಯಾಗಿ ಅಮಾಯ ಬೆಂಗಳೂರಿಗರ ಬಲಿ ಪಡೀತಿದೆ, ಒಂದಾದ ಮೇಲೆ ಒಂದು ಆಕ್ಸಿಡೆಂಟ್​ಗಳು ಆಗ್ತಾನೆ ಇವೆ (BMTC Accident). ಅದ್ರಲ್ಲೂ ಆಕ್ಸಿಡೆಂಟ್ ಆದಾಗೆಲ್ಲ ಸಾವು ನೋವು ಕೂಡ ಆಗ್ತಿದೆ. ವಾರದ ಹಿಂದಷ್ಟೇ ಬಿಎಂಟಿಸಿ ಬಸ್ಸಿನ ಚಕ್ರ ತಲೆ ಮೇಲೆ ಹರಿದು ವಿದ್ಯಾರ್ಥಿ ಗಂಗಾಧರ (21) ಮೃತಪಟ್ಟಿದ್ದ. ಬಿಎಂಟಿಸಿ ಚಾಲಕ ಲೋಕೇಶ್​ನನ್ನು ಯಶವಂತಪುರ ಸಂಚಾರ ಪೊಲೀಸರು ಬಂಧಿಸಿದ್ದರು. ಈಗ ಇದೇ ರೀತಿಯ ಮತ್ತೊಂದು ಘಟನೆ ಸಂಭವಿಸಿದೆ. ಬಿಎಂಟಿಸಿ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನೆಲಮಂಗಲ ಟೌನ್ ಬಿನ್ನಮಂಗಲದಲ್ಲಿ ನಿನ್ನೆ ರಾತ್ರಿ ನಡೆದಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಟೌನ್ ಬಿನ್ನಮಂಗಲದಲ್ಲಿ ಅಪಘಾತ ಸಂಭವಿಸಿದ್ದು ಘಟನೆಯಲ್ಲಿ ಬೈಕ್ ಸವಾರ ಸುಭಾಷ್ ನಗರದ ಮಧು(32) ಮೃತಪಟ್ಟಿದ್ದಾರೆ. ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಎಂಟಿಸಿ ಬಸ್ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ 2 ಕೋಟಿ ಮೌಲ್ಯದ ಡ್ರಗ್ಸ್​ ಜಪ್ತಿ, ನೈಜೀರಿಯಾ ಪ್ರಜೆ ಸಿಸಿಬಿ ವಶಕ್ಕೆ

ಬಿಎಂಟಿಸಿಗೆ ಇಂಜನಿಯರಿಂಗ್ ವಿದ್ಯಾರ್ಥಿ ಬಲಿ

ಅ.14ರಂದು ಬಿಎಂಟಿಸಿ ಬಸ್ ಗೆ 21 ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿ ಗಂಗಾಧರ್ ಬಲಿಯಾಗಿದ್ದ.‌ ಮಾರಪ್ಪನ ಪಾಳ್ಯದ ಕಡೆಯಿಂದ ಬೆಳಿಗ್ಗೆ ತನ್ನ ಸ್ನೇಹಿತನ ಜೊತೆ ಬೈಕ್ ನಲ್ಲಿ ಬಂದ ಗಂಗಾಧರ್ ಯಶವಂತಪುರ ಹೂವಿನ ಮಾರ್ಕೆಟ್ ಬಳಿ ಬರೋ ಅಷ್ಟೋತ್ತಿಗೆ ಹಂಪ್ ಒಂದು ಕಂಡಿತ್ತು. ಹೀಗಾಗಿ ವೇಗವಾಗಿದ್ದ ಬೈಕ್ ಸಡನ್ ಆಗಿ ಬ್ರೇಕ್ ಹಾಕಿದ್ದೇ ತಡ ಹಿಂದೆ ಬರ್ತಾ ಇದ್ದ ಬಿಎಂಟಿಸಿ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಆಗ ಗಂಗಾಧರ್ ಒಂದ್ ಕಡೆ ಬಿದ್ರೆ ಸ್ನೇಹಿತ ಮತ್ತೊಂದು ಕಡೆ‌ ಬಿದ್ದಿದ್ದ. ಆಗ ಬಸ್ ಗಂಗಾಧರ್ ಮೇಲೆ ಹರಿದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದ.

ಕುಣಿಗಲ್ ಮೂಲದ ಗಂಗಾಧರ್ ಕಮಲನಗರ ಬಳಿ ವಾಸವಾಗಿದ್ದ. ತಂದೆ ಎಳೆನೀರು ವ್ಯಾಪಾರ ಮಾಡ್ತಾ ಇದ್ದು ಗಂಗಾಧರ್ ಈಸ್ಟ್ ವೆಸ್ಟ್ ಕಾಲೇಜಿನಲ್ಲಿ ಇಂಜನಿಯರಿಂಗ್ ಓದುತ್ತಿದ್ದ.‌ ಕಾಲೇಜಿನ ಸ್ನೇಹಿತರ ಜೊತೆ ಕಳೆದ ಒಂದು ತಿಂಗಳಿಂದ ಹೆಚ್ ಎ ಎಲ್ ನಲ್ಲಿ ಇಂಟರ್ನ್ ಶೀಪ್ ಮಾಡ್ತಾ ಇದ್ದು, ಅದರ ಸರ್ಟಿಫಿಕೇಟ್ ತೆಗೆದುಕೊಳ್ಳಲೆಂದು ಸ್ನೇಹಿತರ ಜೊತೆಗೂಡಿ ಹೋಗುವಾಗ ಘಟನೆ ನಡೆದಿತ್ತು. ಇನ್ನು ಈ‌ ಕಿಲ್ಲರ್ ಬಿಎಂಟಿಸಿಗೆ ಕಳೆದ 10 ದಿನಗಳಲ್ಲಿ ಮೂವರು ಬಲಿಯಾಗಿದ್ದಾರೆ. ಯಲಹಂಕದಲ್ಲಿ ಸಿವಿಲ್‌ ಇಂಜನಿಯರ್ ಯುವಕ ಕಳೆದ ಅಕ್ಟೋಬರ್ 5 ರಂದು ಭರತ್ ರೆಡ್ಡಿ ಬಲಿಯಾದ್ರೆ, ಗಾರೆಭಾವಿಪಾಳ್ಯದಲ್ಲಿ ಮೂರು ವರ್ಷದ ಪುಟ್ಟ ಮಗು ಅಯಾನ್ ಪಾಷ ಸಾವನ್ಮಪ್ಪಿತ್ತು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ