ಬೆಂಗಳೂರು, ಸೆ.15: ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023 (TV9 Karnataka Summit 2023) ಕಾರ್ಯಕ್ರಮದಲ್ಲಿ ಇಂಧನ ಸಚಿವ ಕೆಜೆ ಜಾರ್ಜ್ ಅವರು ಗೃಹಜ್ಯೋತಿ ಯೋಜನೆ(Gruha Jyothi Scheme) ಯಶಸ್ಸಿನ ಬಗ್ಗೆ ಮನ ಬಿಚ್ಚಿ ಮಾತನಾಡಿದರು. ಮಾತು ಆರಂಭಿಸುತ್ತಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಅಭಿನಂದಿಸಿದ ಅವರು ರಾಹುಲ್ ಗಾಂಧಿ ಅವರ ಮಾತುಗಳನ್ನು ಮೆಲುಕು ಹಾಕಿದರು. ಭಾರತ್ ಜೋಡೋ ನನ್ನನ್ನು ಬ್ರಾಂಡ್ ಮಾಡಿಲಿಕ್ಕಾದರೆ ನಾನು ಬರುವುದಿಲ್ಲ. ಆದೇ ಭಾರತದಲ್ಲಿ ಐಕ್ಯತೆಯನ್ನು ಸ್ಥಾಪನೆ ಮಾಡಿಲಿಕ್ಕೆ ಎಲ್ಲಾರು ಜೊತೆ ಗೂಡಿ ಹೋಗುವುದಕ್ಕೆ ಕಾಂಗ್ರೆಸ್ ಪಕ್ಷ ಇದನ್ನು ಮಾಡುತ್ತಿದೆ. ಕನ್ಯಾಕುಮಾರಿಯಲ್ಲಿ ಭಾರತ್ ಜೋಡೋ ಮಾಡಿದಾಗ ನಾನು ಅವರೊಂದಿಗಿದ್ದೆ. ರಾಹುಲ್ ಗಾಂಧಿ ಕೇವಲ ಪಾದಯಾತ್ರೆ ಮಾಡಲಿಲ್ಲ. ಅವರು ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿದರು ಎಂದು ಕೆಜೆ ಜಾರ್ಜ್(KJ George) ಹೇಳಿದರು.
ಗೃಹಜ್ಯೋತಿ ಯೋಜನೆ ಕಾಂಗ್ರೆಸ್ ಪಕ್ಷದ ಕನಸಿನ ಕೂಸು. ರಾಹುಲ್ ಗಾಂಧಿ ಅವರು 3,600 ಕಿಮೀ ನಡೆಯುತ್ತಾರೆಂದು ಯಾರು ನಂಬಿರಲಿಲ್ಲ. ನಾನು ಕೂಡ ಹೇಳಿದೆ. ಎಲ್ಲಾ ಕಡೆ ನಡೆಯುವ ಅವಶ್ಯಕತೆ ಇಲ್ಲ. ಜನ ಇರುವ ಕಡೆ ನಡೆದರೆ ಸಾಕು ಅಂತ. ಆದ್ರೆ ಅವರು ಅದನ್ನು ಒಪ್ಪಲಿಲ್ಲ. ಪಾದಯಾತ್ರೆ ಅಂದ್ರೆ ನಡಿಯಲೇ ಬೇಕು ಅಂದ್ರು. ಅವರ ಈ ಸಂಕಲ್ಪ ನಿಜಕ್ಕೂ ಮೆಚ್ಚುವಂತದ್ದು. ನಮ್ಮ ಬಳಿ ಹಣ ಕಾಸಿನ ಪರಿಸ್ಥಿತಿ ಸರಿ ಇರಲಿಲ್ಲ ಆದರೂ ರಾಹುಲ್ ಗಾಂಧಿಯವರು ಕುಗ್ಗದೆ ಮುನ್ನುಗ್ಗಿದ್ದರು. ಬೆಳಗ್ಗೆ 4 ಗಂಟೆಗೆ ಎದ್ದು ಪ್ರತಿಯೊಂದು ಕಾರ್ಯಕ್ರಮವನ್ನೂ ತಾಚು ತಪ್ಪದೆ ಸರಿಯಾದ ಸಮಯಕ್ಕೆ ನಿಭಾಯಿಸುತ್ತಿದ್ದರು. ಪ್ರತಿ ನಿಮಿಷವೂ ಕೆಲಸ ಮಾಡುತ್ತಿದ್ದರು ಕಾಂಗ್ರೆಸ್ ಪಕ್ಷ ಜನರೊಂದಿಗೆ ಇರುವ ಪಕ್ಷ. ಜನರ ನೋವನ್ನು ತಿಳಿದುಕೊಂಡ ರಾಹುಲ್ ಗಾಂಧಿಯವರು ಜನರ ಸಮಸ್ಯೆಗೆ ಸ್ಪಂದಿಸಿದ್ದಾರೆ ಎಂದು ಕೆಜೆ ಜಾರ್ಜ್ ಅವರು ರಾಹುಲ್ ಗಾಂಧಿಯವರನ್ನು ಕೊಂಡಾಡಿದರು.
ಈ ಯೋಜನೆ ಅನುಷ್ಠಾನಕ್ಕೆ ತರುವ ಆರಂಭದಲ್ಲಿ ನಮಗೆ ಯಾವುದೇ ಸಾವಾಲುಗಳಿರಲಿಲ್ಲ. ಜನ ಬೆಂಬಲ ಇದ್ದ ಕಾರಣ ಈ ಯೋಜನೆ ಯಶಸ್ವಿಯಾಗಿದೆ. ಜನರ ಕಷ್ಟ ನೋಡಿದಾಗ ನಮಗೆ ತಿಳಿದದ್ದು ಜನ ಡಿಮೋನಿಟೈಸೇಶನ್, ಕೊರೊನಾ, ಜಿಎಸ್ಟಿಯಿಮದ ತತ್ತರಿಸಿ ಹೋಗಿದ್ದಾರೆ. ಅವರ ಆದಾಯ ಹೆಚ್ಚಲಿಲ್ಲ. ಅವರ ಖರ್ಚು ಮಾತ್ರ ಹೆಚ್ಚಾಯಿತು. ಇದೆಲ್ಲದರಿಂದ ಮನೆಯಲ್ಲಿರುವ ಮಹಿಳೆಯರು ಸಾಕಷ್ಟು ಕಷ್ಟು ಅನುಭವಿಸುತ್ತಿದ್ದಾರೆ ಎಂಬುವುದು ಅರ್ಥವಾಯಿತು. ಹೀಗಾಗಿಯೇ ಈ ಐದು ಗ್ಯಾರಂಟಿಗಳನ್ನು ನಮ್ಮ ಪಕ್ಷ ನೀಡಿತು. ನಾನು ಸಚಿವನಾಗುತ್ತೇನೆ ಎಂದು ಭಾವಿಸಿಯೇ ಇರಲಿಲ್ಲ. ಆದರೆ ಈಗ ಇಂಧನ ಸಚಿವನಾಗಿ ಗೃಹಜ್ಯೋತಿ ಯೋಜನೆ ಕಾರ್ಯಕ್ರಮ ನನ್ನ ಪಾಲಿಗೆ ಬಂದಿದೆ. ಈ ಯೋಜನೆಗಳನ್ನು ಜಾರಿ ಮಾಡುವುದು ದೊಡ್ಡ ಸವಾಲೆ ಆಗಿತ್ತು. ಆದರೆ ಸಿಎಂ ಸಿದ್ದರಾಮಯ್ಯನವರ ಕಮಿಟ್ಮೆಂಟ್ ಈ ಎಲ್ಲವನ್ನೂ ಯಶಸ್ವಿ ಮಾಡಿದೆ. ಈ ಹಿಂದೆಯೇ ಅನೇಕ ಭಾಗ್ಯಗಳನ್ನು ನೀಡಿ ಯಶಸ್ವಿಯಾದ ಸಿದ್ದರಾಮಯ್ಯನವರು ಬಡವರ ಪರವಾಗಿ, ಹಿಂದುಳಿದವರ ಪರವಾಗಿ ಕೆಲಸ ಮಾಡಲು ಯಾವಾಗಲೂ ಸಿದ್ಧರಿರುತ್ತಾರೆ. ಅದೇ ರೀತಿ ಡಿಕೆ ಶಿವಕುಮಾರ್ ಅವರು ಕೂಡ ಶ್ರಮಿಸಿದ್ದಾರೆ ಎಂದರು.
ಸಿಎಂ ಸಿದ್ದರಾಮಯ್ಯನವರ ಜೊತೆ ಕೂತು ಅಂಕಿ ಅಂಶಗಳನ್ನೆಲ್ಲ ತೆಗೆಸಿ ಚರ್ಚೆ ಮಾಡಿ ಯೋಜನೆಗಳನ್ನು ಜಾರಿ ಮಾಡಲಾಗಿದೆ. ನಮ್ಮ ಕರ್ನಾಟಕದಲ್ಲಿ ಆವರೇಜ್ ಕನ್ಸಿಪ್ಷನ್ ಇರೋದು 53 ಯುನಿಟ್. ನಾವು ಮೂರು ತಿಂಗಳ ಆವರೇಜ್ ತೆಗೆಯೋಣ ಎಂದು ಹೇಳಿದ್ವಿ. ಆಗ ಸಿಎಂ 12 ತಿಂಗಳ ಆವರೇಜ್ ತೆಗೆಯೋಣ ಅಂದ್ರು. ಹಬ್ಬ ಹರಿ ದಿನಗಳು ಬರುವುದರಿಂದ ತಿಂಗಳಲ್ಲಿ ವ್ಯತ್ಯಾಸವಾಗುತ್ತೆ. ಹೀಗಾಗಿ 12 ತಿಂಗಳ ಆವರೇಜ್ ತೆಗೆದುಕೊಳ್ಳೋಣ ಅಂದ್ರು. ಹಾಗೂ 10 ಪರ್ಸೆಂಟ್ ಕೊಡುವ ಪ್ಲಾನ್ ಸಿದ್ದರಾಮಯ್ಯನವರದು. ಅವರ ಅನುಭವದಿಂದಾಗಿ, ಹಾಗೂ ಕಷ್ಟದಲ್ಲಿರುವವರಿಗೆ ಸಹಅಯ ಮಾಡುವ ಮನಸ್ಸಿನಿಂದಲೇ ಈ ಯೋಜನೆ ಸರಿಯಾದ ರೀತಿಯಲ್ಲಿ ಬಡವರಿಗೆ ತಲುಪುತ್ತಿದೆ.
2ಕೋಟಿ 16 ಲಕ್ಷ ಜನರಲ್ಲಿ 200 ಯುನಿಟ್ ಮಾಡಿದ RR ಸಂಖ್ಯೆ 2ಕೋಟಿ 14 ಲಕ್ಷ ಇತ್ತು. ಕೇವಲ 2 ಲಕ್ಷ ಜನರಷ್ಟೇ ವ್ಯತ್ಯಾಸ ಇದ್ದದ್ದು. ಹಾಗಾಗಿ ಅಷ್ಟೂ ಜನರ ಆವರೇಂಜ್ ತೆಗೆದು ಅವರಿಗೆ 10 ಪರ್ಸೆಂಡ್ ಸೇರಿಸಿ ಅದನ್ನು ಅವರಿಗೆ ಉಚಿತವಾಗಿ ಕೊಡುವ ನಿರ್ಧಾರ ಮಾಡಿದೆವು. ಟೀಕೆಗಳು ಸಾಕಷ್ಟಿದ್ದವು, ಚಿಕ್ಕ ತಪ್ಪು ಕೂಡ ಭಾರೀ ಅನಾಹುತಕ್ಕೆ ಕಾರಣವಾಗುತ್ತೆ. ಬಹುಶಃ ದೇವರ ದಯೆಯಿಂದ ನಾವು ಪಾರಾಗಿದ್ದೇವೆ ಎಂದು ಕೆಜೆ ಜಾರ್ಜ್ ಅವರು ತಿಳಿಸಿದರು.
ಹಿಂದೆ ಅಧಿಕಾರದಲ್ಲಿದ್ದ ಪಕ್ಷದ ಸಮಯದಲ್ಲಿ ವಿದ್ಯುತ್ ಏರಿಕೆಯ ನಿರ್ಧಾರವಾಗಿತ್ತು. ಎಸ್ಕಾಮ್ ಕೊಟ್ಟ ಆದೇಶಗಳನ್ನು ಪಾಲಿಸಲೇಬೇಕು. ಆದ್ರೆ ಹಿಂದಿನ ಬಿಜೆಪಿ ಸರ್ಕಾರ ವಿದ್ಯುತ್ ದರ ಏರಿಕೆಯನ್ನು ಮುಂದೂಡುತ್ತಾ ಬಂತು. ಮೇ 13ನೇ ತಾರೀಖು ದರ ಏರಿಕೆ ಆದೇಶ ಬಂತು. ಆದರೆ ಆಗ ನಮ್ಮ ಸರ್ಕಾರ ಇರಲಿಲ್ಲ. ಹಳೇ ಸರ್ಕಾರ ಡಿಲೇ ಮಾಡಿದ ಕಾರಣ ಮೂರು ತಿಂಗಳು ಹೊರೆ ಜನರಿಗೆ ಬಿತ್ತು. ಆದರೆ ಬಿಜೆಪಿ ತಮ್ಮ ತಪ್ಪು ತಿಳಿದಿದ್ದರೂ ರಸ್ತೆಗೆ ಇಳಿದು ಪ್ರತಿಭಟನೆ ಮಾಡಿದರು. ಆಗ ನನಗೆ ಆಶ್ಚರ್ಯ ಆಯಿತು. ವಿದ್ಯುತ್ ದರ ಏರಿಕೆ ನಮ್ಮ ಹೊಣೆಯಲ್ಲ. ಅದು ಬಿಜೆಪಿ ಸರ್ಕಾರ ಮಾಡಿದ ಕೆಲಸ ಎಂದು ಕೆಜೆ ಚಾರ್ಜ್ ಹೇಳಿದರು. ವಿದ್ಯುತ್ ದರ ಏರಿಕೆ ಎಸ್ಕಾಮ್ ಕೊಟ್ಟ ಆದೇಶ. ಯಾವುದೇ ಸರ್ಕಾರ ಬಂದಿದ್ದರೂ ಅದನ್ನು ಜಾರಿ ಮಾಡಲೇಬೇಕು. ಎಲ್ಲವೂ ಗೊತ್ತಿದ್ದರೂ ಬಿಜೆಪಿ ನಮ್ಮ ಮೇಲೆ ಹೊಣೆ ಕೂರಿಸಿದೆ. ಜನರನ್ನು ತಪ್ಪು ದಾರಿ ಎಳೆಯುವ ಪ್ರಯತ್ನ ಮಾಡಿದೆ. ಯಾವ ಪಕ್ಷವೂ ಈ ರೀತಿ ಮಾಡಬಾರದು.
ಈ ವರ್ಷ ಮಳೆ ಕೈಕೊಟ್ಟಿದೆ. ನಮ್ಮ ಟರ್ಮೆಲ್ ಪ್ಲಾಂಟ್ಗಳನ್ನೆಲ್ಲ ಮಳೆಗಾಲದಲ್ಲಿ ಸರ್ವಿಸ್ಗೆ ಬಿಡುತ್ತೇವೆ. ಏಕೆಂದರೆ ಈ ವೇಲೆ ವಿದ್ಯುತ್ ಉತ್ಪಾದನೆಯ ಅವಶ್ಯಕತೆ ಇಲ್ಲ ಎಂದು. ಮಳೆ ಇಲ್ಲದ ವೇಳೆ ಗಾಳಿ ಕೂಡ ಕಡಿಮೆ ಆಯಿತು. ಮೋಡ ಬಂದ್ರೆ ಸೋಲಾರ್ ಕೂಡ ಕಡಿಮೆ ಆಗುತ್ತೆ. ಹೀಗೆ ಹಲವಾರು ಸಮಸ್ಯೆಗಳು ನಮಗೆ ಎದುರಾದರೂ ಇದೆಲ್ಲವನ್ನೂ ನಾವು ನಿಭಾಯಿಸಿದ್ಧೇವೆ. ನಾನು ದೇವರಲ್ಲಿ ನಂಬಿಕೆ ಇಟ್ಟವನು. ಮುಂದಿನ ದಿನಗಳಲ್ಲಿ ಮಳೆ ಬರಬಹುದು ಎಂಬ ನಂಬಿಕೆ ಇದೆ. ಮಳೆ ಬರದೆ ಇದ್ದರೆ ಅದನ್ನು ನಿಭಾಯಿಸಲೂ ನಾವು ಚಿಂತನೆ ಮಾಡಿದ್ಧೇವೆ. ಎಲ್ಲಾ ಪ್ಲಾನ್ಗಳು ರೆಡಿ ಇದಾವೆ. ಆದರೆ ಮಳೆ ಬಂದೇ ಬರುತ್ತೆ ಎಂಬ ನಂಬಿಕೆ ಇದೆ. ಒಂದು ವೇಳೆ ಮಳೆ ಬರದಿದ್ದರೆ ಪ್ಲ್ಯಾನ್ ಬಿ ಸಹ ಮಾಡಿಕೊಂಡಿದ್ದೇವೆ. ಗೃಹಜ್ಯೋತಿ ಯೋಜನೆಯಿಂದ ನಮ್ಮ ಇಲಾಖೆಗೆ ನಷ್ಟ ಆಗಿಲ್ಲ.
ಕೆಲವರು ತಪ್ಪು ತಿಳಿದಿದ್ದಾರೆ. ಗೃಹಜ್ಯೋತಿ ಯೋಜನೆಯ ಹೊರೆಯನ್ನು ವಿದ್ಯುತ್ ದರ ಏರಿಕೆಯಿಂದ ನಿಭಾಯಿಸುತ್ತಿದ್ದಾರೆ ಎಂದು ಆದರೆ ತಮ್ಮ ಸಿಎಂ ಈ ಯೋಜನೆಗೆ ಬೇಕಾದ ಖರ್ಚನ್ನು ವಿದ್ಯುತ್ ನಿಗಮಗಳಿಗೆ ಕೊಡ್ತಿದ್ದಾರೆ ಎಂದು ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023 ವಿವರಿಸಿದರು. ನಂತರ ಕಾರ್ಯಕ್ರಮಕ್ಕೆ ಬಂದಿದ್ದ ಜನರ ಪ್ರಶ್ನೆಗಳಿಗೆ ಉತ್ತರಿಸಿದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 3:07 pm, Fri, 15 September 23