KPSC ಹಗರಣದಿಂದ 24 ಅಭ್ಯರ್ಥಿಗಳು ಬಲಿಪಶು: ಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಇಡಿ ವಿವರಣೆ
ಕೆಪಿಎಸ್‌ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮದಲ್ಲಿ 24 ಪ್ರಾಮಾಣಿಕ ಅಭ್ಯರ್ಥಿಗಳಿಗೆ ಅನ್ಯಾಯವಾಗಿರುವುದು ಇಡಿ ವರದಿಯಿಂದ ದೃಢಪಟ್ಟಿದೆ. ಕಷ್ಟಪಟ್ಟು ಓದಿದ್ದ ಈ ಅಭ್ಯರ್ಥಿಗಳನ್ನು ಬಿಟ್ಟು ಹಣ ಪಡೆದು ಅಕ್ರಮ ನೇಮಕಾತಿ ಮಾಡಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ, ನಿಗದಿತ ಪ್ರಶ್ನೆಗಳ ಉತ್ತರ ಸೋರಿಕೆ, 1:3 ಮೆರಿಟ್ ಲಿಸ್ಟ್ ವೇಳೆ ಅಕ್ರಮ ನಡೆದಿದೆ ಎಂದು ಇಡಿ ಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ವಿವರಣೆ ನೀಡಿದೆ.
ಬೆಂಗಳೂರು, ಅಕ್ಟೋಬರ್ 12: ಕೆಪಿಎಸ್ಸಿಪಶು ವೈದ್ಯರ ನೇಮಕಾತಿಯಲ್ಲಿ ಹಗರಣದಲ್ಲಿ ಬಲಿಪಶುವಾಗಿರುವ 24 ಪ್ರಾಮಾಣಿಕ ಅಭ್ಯರ್ಥಿಗಳ ಬಗ್ಗೆಯೂ ತನಿಳೆ ವೇಳೆ ಇಡಿ ಉಲ್ಲೇಖಿಸಿದೆ. ಕಷ್ಟಪಟ್ಟು ಓದಿದ ಅಭ್ಯರ್ಥಿಗಳಿಗೆ ಹುದ್ದೆ ಸಿಗದೆ ಅನ್ಯಾಯವಾಗಿದ್ದು, ಅವರಿಗೆ ನ್ಯಾಯ ಸಿಗಬೇಕಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತನಿಖಾ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಪರೀಕ್ಷಾ ಅಕ್ರಮದಲ್ಲಿ ಹಣ ನೀಡಿ 29 ಜನರು ನೇಮಕವಾಗಿದ್ದಾರೆ. ಇವರು 400ಕ್ಕೂ ಹೆಚ್ಚು ಅಂಕ ಗಳಿಸಿದ್ದರು. ನೇಮಕಾತಿಯಲ್ಲಿ 3 ಮಾದರಿಯಲ್ಲಿ ಅಕ್ರಮವಾಗಿತ್ತು. ಪ್ರಶ್ನೆ ಪತ್ರಿಕೆ ಸೋರಿಕೆ, ನಿಗದಿತ ಪ್ರಶ್ನೆಗಳ ಉತ್ತರ ಸೋರಿಕೆ, 1:3 ಮೆರಿಟ್ ಲಿಸ್ಟ್ ವೇಳೆ ಅಕ್ರಮ ನಡೆದಿತ್ತು ಎಂಬುದು ತನಿಖೆ ವೇಳೆ ಗೊತ್ತಾಗಿರೋದಾಗಿ ಕೋರ್ಟ್ಗೆ ಸಲ್ಲಿಸಿರುವ ವರದಿಯಲ್ಲಿ ಇಡಿ ವಿವರಣೆ ನೀಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
