‘ಅರ್ಕಾವತಿ ಅಧಿಪತಿ’ ಸಿದ್ದರಾಮಯ್ಯನವರೇ ಕೆಪಿಟಿಸಿಎಲ್ ಎಂಜಿನಿಯರ್ ನೇಮಕಾತಿಯಲ್ಲಿ ನಾನು ಅಕ್ರಮ ನಡೆಸಿಲ್ಲ -ಸಚಿವ ಸುನೀಲ್ ಕುಮಾರ್

ಇತಿಹಾಸ ಕೆದಕಿದರೆ ನೀವು ಮುಖ್ಯಮಂತ್ರಿಯಾಗಿದ್ದಾಗಲೇ ನೇಮಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಅಕ್ರಮವಾಗಿದೆ. ಸೋರಿಕೆ ಇಲ್ಲದೇ ಎಸ್ ಎಸ್ ಎಲ್ ಸಿ ಪರೀಕ್ಷೆ‌ ನಡೆಸುವುದಕ್ಕೆ ನಿಮ್ಮಿಂದ ಸಾಧ್ಯವಾಗಿರಲಿಲ್ಲ. ದುರ್ದೈವವೆಂದರೆ ಸದನದ ಒಳಗೆ - ಹೊರಗೆ ನೀವು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದಿರಿ ಎಂಬುದನ್ನು ನೆನಪಿಸಬೇಕೆ?

‘ಅರ್ಕಾವತಿ ಅಧಿಪತಿ’ ಸಿದ್ದರಾಮಯ್ಯನವರೇ ಕೆಪಿಟಿಸಿಎಲ್ ಎಂಜಿನಿಯರ್ ನೇಮಕಾತಿಯಲ್ಲಿ ನಾನು ಅಕ್ರಮ ನಡೆಸಿಲ್ಲ -ಸಚಿವ ಸುನೀಲ್ ಕುಮಾರ್
KPTCL Junior Engineer recruitment scam Energy minister V Sunil Kumar releases press statement against Siddaramaiah
TV9kannada Web Team

| Edited By: sadhu srinath

Aug 27, 2022 | 6:55 PM

ಬೆಂಗಳೂರು: ಕೆಪಿಟಿಸಿಎಲ್ (KPTCL) ಕಿರಿಯ ಎಂಜಿನಿಯರ್ ನೇಮಕಾತಿ ಅಕ್ರಮ (KPTCL Junior Engineer recruitment scam) ಪ್ರಕರಣದ ಕುರಿತು ಇಂಧನ ಸಚಿವ ಸುನಿಲ್ ಕುಮಾರ್ (Energy minister V Sunil Kumar) ಮಾಧ್ಯಮ ಪ್ರಕಟಣೆ (press statement) ಹೊರಡಿಸಿದ್ದು ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಸುಳ್ಳು ನಿಮ್ಮ ಮನೆಯ ದೇವರೋ? ಕೌಟುಂಬಿಕ ಆಸ್ತಿಯೋ? ಎಂದು ಪ್ರಶ್ನಿಸಿರುವ ಸಚಿವ ಸುನಿಲ್, ಸಿದ್ದರಾಮಯ್ಯಗೆ (Siddaramaiah) ನೇರ ಸವಾಲು ಹಾಕಲು ಬಯಸುತ್ತೇನೆ. ನಿಮ್ಮ ಅಪಾದನೆಯ ಮೂಲಕ ಸುಳ್ಳನ್ನೇ ಸತ್ಯವನ್ನಾಗಿಸುವ ವಿಫಲ ಯತ್ನ ನಡೆಸಿದ್ದೀರಿ ಎಂದಿದ್ದಾರೆ.

ಕೆಪಿಟಿಸಿಎಲ್ ಕಿರಿಯ ಎಂಜಿನಿಯರ್ ನೇಮಕಾತಿ ಅಕ್ರಮ ಆರೋಪ ವಿಚಾರವಾಗಿ ಟೀಕಿಸಕಿ ಸಚಿವ ಸುನೀಲ್ ಕುಮಾರ್ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ಸಿದ್ದರಾಮಯ್ಯನವರೇ ಸುಳ್ಳು ನಿಮ್ಮ ಮನೆ ದೇವರೋ? ಕೌಟುಂಬಿಕ ಆಸ್ತಿಯೋ? ಸಿದ್ದರಾಮಯ್ಯ ಅವರಿಗೆ ನಾನು ನೇರ ಸವಾಲು ಹಾಕಲು ಬಯಸುತ್ತೇನೆ. ನೀವು ಮಾಡುತ್ತಿರುವ ಅಪಾದನೆ ಸುಳ್ಳನ್ನೇ ಸತ್ಯವನ್ನಾಗಿಸುವ ವಿಫಲ ಯತ್ನವಾಗಿದೆ. ಕತ್ತಲೆಯಲ್ಲಿ ಕಪ್ಪು ಬೆಕ್ಕು ಹುಡುಕುವ ವ್ಯರ್ಥ ಸಾಹಸಕ್ಕೆ ಕೈ ಹಾಕಿ ಸುಸ್ತಾಗಬೇಡಿ. ಸಿದ್ದರಾಮಯ್ಯನವರೇ ನೀವು ಆರೋಪಿಸಿದ ರೀತಿ ನೇಮಕಾತಿಯಲ್ಲಿ ಯಾವುದೇ ರೀತಿಯ ಹಗರಣ ನಡೆದಿಲ್ಲ. ನಾನಾಗಲಿ ಅಥವಾ ನನ್ನ ಕಚೇರಿಯ ಸಿಬ್ಬಂದಿ ಹಣಕಾಸು ಅವ್ಯವಹಾರ ನಡೆಸಿಲ್ಲ ಎಂದು ಘಂಟಾಘೋಷವಾಗಿ ಹೇಳುತ್ತೇನೆ. ನನ್ನ ಮೇಲೆ ನೀವು ಹೊರಿಸಿರುವ ಆರೋಪಕ್ಕೆ ದಾಖಲೆ ಒದಗಿಸಿದರೆ ಯಾವುದೇ ತನಿಖೆ ಎದುರಿಸಲು ಸಿದ್ದ. ದಾಖಲೆ ನೀಡುವಲ್ಲಿ ಸಫಲರಾಗದೇ ಇದ್ದರೆ ನಿಮ್ಮ ಪಣವೇನು?

ನಾನು ಇಂಧನ ಸಚಿವನಾದ ಬಳಿಕ ಕೆಪಿಟಿಸಿಎಲ್ ನಡೆಸಿದ ನೇಮಕಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾದ 1800 ಪವರ್ ಮ್ಯಾನ್ ಹಾಗೂ ಕಿರಿಯ ಸ್ಟೇಷನ್ ಪರಿಚಾರಕರಿಗೆ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ನೇಮಕಾತಿ ಆದೇಶ ಪ್ರಕ್ರಿಯೆ ಪೂರ್ಣಗೊಳಿಸಿದ್ದು ನಿಮ್ಮ ಗಮನಕ್ಕೆ ಬಂದಿಲ್ಲವೇ? ಅಥವಾ ಸುಳ್ಳು ಆರೋಪ ಮಾಡುವುದಕ್ಕೆ ಆಗ ಏನೂ ಸಿಕ್ಕಿರಲಿಲ್ಲವೇ? ನನ್ನ ಮೇಲೆ ಅಕ್ರಮದ ಹೊಣೆ ಹೊರಿಸುವ ಷಡ್ಯಂತ್ರ ರೂಪಿಸಿರುವ ನಿಮಗೆ ಈ ನೇಮಕ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎಂಬ ಸಾಮಾನ್ಯ ಜ್ಞಾನವೇ ಇಲ್ಲದಿರುವ ಬಗ್ಗೆ ವಿಷಾದವಿದೆ.

ಈ ಪ್ರಕ್ರಿಯೆಯನ್ನು ಪರೀಕ್ಷಾ ಪ್ರಾಧಿಕಾರ ನಡೆಸುತ್ತಿದೆ. ಇದರಲ್ಲಿ ನಾನಾಗಲಿ, ನನ್ನ ಇಲಾಖೆಯಾಗಲಿ ಹಸ್ತಕ್ಷೇಪ ನಡೆಸಲು ಸಾಧ್ಯವೇ ಇಲ್ಲ. ಕೆಪಿಟಿಸಿಎಲ್ ನೇಮಕದಲ್ಲಿ ಅಕ್ರಮ ಯತ್ನಿಸಿದವರನ್ನು ಪೊಲೀಸ್ ಇಲಾಖೆ ಈಗಾಗಲೇ ಬಂಧಿಸಿದೆ. ನನ್ನ ಮೇಲೆ ವಿನಾಕಾರಣ ಆರೋಪ‌ ಮಾಡುತ್ತಿದ್ದೀರಿ. ಇತಿಹಾಸ ಕೆದಕಿದರೆ ನೀವು ಮುಖ್ಯಮಂತ್ರಿಯಾಗಿದ್ದಾಗಲೇ ನೇಮಕ ಪ್ರಕ್ರಿಯೆಯಲ್ಲಿ ಅತಿ ಹೆಚ್ಚು ಅಕ್ರಮವಾಗಿದೆ. ಸೋರಿಕೆ ಇಲ್ಲದೇ ಎಸ್ ಎಸ್ ಎಲ್ ಸಿ ಪರೀಕ್ಷೆ‌ ನಡೆಸುವುದಕ್ಕೆ ನಿಮ್ಮಿಂದ ಸಾಧ್ಯವಾಗಿರಲಿಲ್ಲ. ದುರ್ದೈವವೆಂದರೆ ಸದನದ ಒಳಗೆ – ಹೊರಗೆ ನೀವು ಈ ಪ್ರಕರಣವನ್ನು ಸಮರ್ಥಿಸಿಕೊಂಡಿದ್ದಿರಿ ಎಂಬುದನ್ನು ನೆನಪಿಸಬೇಕೆ? ಸಿದ್ದರಾಮಯ್ಯನವರೇ ಹೊಣೆ ಹೊರಲೇಬೇಕಾದ ವಿಚಾರಗಳನ್ನು ಅನಾವರಣಗೊಳಿಸುತ್ತಾ ಹೋದರೆ ನಿಮ್ಮ ಮೇಲೆ ಭಾರ ಬೀಳಬಹುದು. ಅದನ್ನು ತಾಳುವುದಕ್ಕೆ ಕಷ್ಟವಾಗಬಹುದು, ನಿಮ್ಮ ನೆಮ್ಮದಿ ಕೆಡಬಹುದು. ಎಷ್ಟೆಂದರೂ ನೀವು ಅರ್ಕಾವತಿ ಅಧಿಪತಿ ಗಳಲ್ಲವೇ? ಎಂದು ಸಚಿವ ಸುನೀಲ್ ವ್ಯಮಗ್ಯವಾಡಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada