Makar Sankranti 2023: ಮಕರ ಸಂಕ್ರಾಂತಿಗೆ ಜೋರಾದ ಖರೀದಿ ಭರಾಟೆ, ಮಾರುಕಟ್ಟೆಗಳಲ್ಲಿ ಜನವೋ ಜನ
ಕೆ.ಆರ್. ಮಾರ್ಕೆಟ್ ನಲ್ಲಿ ಖರೀದಿ ಶುರುವಾಗಿದ್ದು ಜನ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ. ಕಬ್ಬು, ಎಳ್ಳು-ಬೆಲ್ಲ, ಸಿಹಿ ಗೆಣಸು, ಕಡಲೇಕಾಯಿ, ಅವರೇಕಾಯಿ ಖರೀದಿ ಮಾಡುತ್ತಿದ್ದಾರೆ.
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವರ್ಷದ ಮೊದಲ ಸಂಕ್ರಾಂತಿ ಸುಗ್ಗಿ ಹಬ್ಬಕ್ಕೆ ಖರೀದಿ ಭರಾಟೆ ಜೋರಾಗಿದೆ. ಭಾನುವಾರ ಸಂಕ್ರಾಂತಿ ಹಬ್ಬ ಹಿನ್ನಲೆ ಇಂದಿನಿಂದಲೇ ಸಿಟಿ ಮಂದಿ ಖರೀದಿಗೆ ಮುಗಿಬಿದ್ದಿದ್ದಾರೆ. ಕೆ.ಆರ್. ಮಾರ್ಕೆಟ್ ನಲ್ಲಿ ಖರೀದಿ ಶುರುವಾಗಿದ್ದು ಜನ ಖರೀದಿಗೆ ಮುಗಿಬಿದ್ದ ದೃಶ್ಯಗಳು ಕಂಡು ಬಂದಿವೆ. ಕಬ್ಬು, ಎಳ್ಳು-ಬೆಲ್ಲ, ಸಿಹಿ ಗೆಣಸು, ಕಡಲೇಕಾಯಿ, ಅವರೇಕಾಯಿ ಖರೀದಿ ಮಾಡುತ್ತಿದ್ದಾರೆ.
ಸಂಕ್ರಾಂತಿ ಹಬ್ಬಕ್ಕೆ ಕೊಂಚ ಬೆಲೆ ಏರಿಕೆಯ ಶಾಕ್
ಇಂದಿನ ಹೂವುಗಳ ಬೆಲೆ
- ಮಲ್ಲಿಗೆ ಒಂದು KG- 2000-2200
- ಕನಕಾಂಬರ ಕೆಜಿ 1200-1500 KG
- ಸೇವಂತಿಗೆ 160 -200kg
- ಗುಲಾಬಿ – 250-300 kg
- ಸುಗಂಧರಾಜ 160-200 kg
- ಚೆಂಡು ಹೂವು 110-130kg
- ತಾವರೆ ಒಂದೂ ಹೂವು 20-25 ರೂಪಾಯಿ
ಇಂದಿನ ಹಣ್ಣುಗಳ ಬೆಲೆ
- ಸೇಬು 120 -140kg
- ದಾಳಿಂಬೆ 110 -150 kg
- ಮೂಸಂಬಿ 60 -80 kg
- ಆರೆಂಜ್ 90- 110kg
- ಸಪೋಟ 80 – 90kg
- ಸೀಬೆಹಣ್ಣು 80-100kg
- ಏಲಕ್ಕಿ ಬಾಳೆಹಣ್ಣು 70-80 kg
ಅಗತ್ಯ ವಸ್ತುಗಳ ಬೆಲೆ
- ಕಬ್ಬು ಜೋಡಿಗೆ 100-120
- ಸಿಹಿ ಗೆಣಸು ಕೆಜಿ – 60-70
- ಹಸಿ ಶೇಂಗಾ – 120 -140 kg
- ಅವರೇ ಕಾಯಿ – 80 -100 kg
- ಮಾವಿನ ಎಲೆ 20 – ಕಟ್ಟು
- ಬೇವಿನ ಸೊಪ್ಪು – 20 – ಕಟ್ಟು
- ತುಳಸಿ ತೋರಣ – 50 – ಮಾರು
- ಬೆಲ್ಲ (ಅಚ್ಚು / ಉಂಡೆ) – 70 – 80
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 2:41 pm, Fri, 13 January 23