KSAT: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ ಜಾರಿ!

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರಬಹುದಾದ ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ (CCMS) ಜಾರಿಗೆ ಬಂದಿದೆ.

KSAT: ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ ಜಾರಿ!
ಐಎಎಸ್ ಅಧಿಕಾರಿ ಮುನೀಶ್ ಮೌದ್ಗಿಲ್
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Nov 12, 2022 | 6:33 PM

ಬೆಂಗಳೂರು: ಸರ್ಕಾರಿ ಇಲಾಖೆಗಳು ಮತ್ತು ನ್ಯಾಯಾಲಯದ ನಡವೆ ಸಂಪರ್ಕ ಸಾಧಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿಯಲ್ಲಿ ಮಹತ್ವದ ಮತ್ತು ದೂರಗಾಮಿ ಪರಿಣಾಮ ಬೀರಬಹುದಾದ ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ (CCMS) ಜಾರಿಗೆ ಬಂದಿದೆ. ಈ ವ್ಯವಸ್ಥೆಯನ್ನು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (KSAT) ಅಧ್ಯಕ್ಷರು ಇತರೆ ನ್ಯಾಯಾಧೀಶರ ಸಮ್ಮುಖದಲ್ಲಿ ಬುಧವಾರ (ನ. 09) ಉದ್ಘಾಟಿಸಲಾಯಿತು. CCMS ವ್ಯವಸ್ಥೆಯನ್ನು IAS ಅಧಿಕಾರಿ ಮನಿಶ್ ಮೌದ್ಗಿಲ್ (Munish Moudgil IAS) ಮತ್ತು NIC ಅಧಿಕಾರಿಗಳ ತಂಡವು ಹಿರಿಯ ತಂತ್ರಜ್ಞಾನ ನಿರ್ದೇಶಕ ಶ್ರೀ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಅಭಿವೃದ್ಧಿಪಡಿಸಿದೆ.

ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಬಗ್ಗೆ

ಕೇಂದ್ರ ಮತ್ತು ರಾಜ್ಯ ಸೇವೆಗಳು ಹಾಗೂ ಇನ್ನಿತರ ಸಂಬಂಧಿತ ಪ್ರಾಧಿಕಾರಗಳಡಿಯ ಹುದ್ದೆಗಳ ನೇಮಕಾತಿ ಮತ್ತು ಸೇವಾ ಷರತ್ತುಗಳಿಗೆ ಸಂಬಂಧಿಸಿದ ಪ್ರಕರಣಗಳ ದೂರು ಮತ್ತು ವಿವಾದಗಳಿಗೆ ಸಂಬಂಧಿಸಿದ ವಿಚಾರಣೆ ಅಥವಾ ನ್ಯಾಯ ನಿರ್ಣಯಗಳನ್ನು ನೀಡುವ ಸಲುವಾಗಿ ಆಡಳಿತ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಈ ಮುಂಚೆ ಯಾವುದೇ ಅಧಿಕಾರಿ ಬೇರೆ ಇನ್ನೊಬ್ಬ ಅಧಿಕಾರಿಯ ವಿರುದ್ಧ ಕೇಸ್​ ಹಾಕಿದರೆ, ಭರ್ತಿ ತಡೆಹಿಡಿದಿದ್ದರೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಯುತ್ತಿರಲಿಲ್ಲ. ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಮೂಲಕ ನ್ಯಾಯ ಕೇಳಬೇಕಾಗಿತ್ತು. KSAT ಸೇವಾ ನಿಯಮದಂತೆ ಕೆಲಸ ಮಾಡುತ್ತದೆ.

ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಮ್ ಹೇಗೆ ಕಾರ್ಯನಿರ್ವಹಿಸುತ್ತದೆ:

(1) ಕೋರ್ಟ್ ಕೇಸ್ ಮಾನಿಟರಿಂಗ್ ವ್ಯವಸ್ಥೆಯು KSAT ಅನ್ನು ಸರ್ಕಾರದ ಎಲ್ಲಾ ಇಲಾಖೆಗಳೊಂದಿಗೆ ವಿದ್ಯುನ್ಮಾನವಾಗಿ ಸಂಪರ್ಕಿಸುತ್ತದೆ. ಎಲ್ಲಾ ಡೆಪ್ಯುಟಿ ಕಮಿಷನರ್‌ಗಳು, ಸಿಇಒಗಳು ಮತ್ತು ಇತರ ಇಲಾಖೆಗಳ ಮುಖ್ಯಸ್ಥರು ಇದರಲ್ಲಿ ಭಾಗಿಯಾಗುತ್ತಾರೆ.

(2) KSAT ನಲ್ಲಿ ದಾಖಲಿಸಲಾದ ಯಾವುದೇ ಪ್ರಕರಣವು ವಿದ್ಯುನ್ಮಾನವಾಗಿ ಸಂಬಂಧಪಟ್ಟ ಇಲಾಖೆ/DC/CEO/HOD ಅವರ ಗಮನಕ್ಕೆ ಹರಿದುಬರುತ್ತದೆ. ಅರ್ಜಿ ಸಹ ಪೂರ್ಣ ಸ್ಕ್ಯಾನ್ ಆಗಿ ಅವರ ಕೈಸೇರುತ್ತದೆ. KSATನ ಎಲ್ಲಾ ಆದೇಶಗಳು ಸಹ ಸರ್ಕ್ಯುಲೇಟ್ ಆಗುತ್ತದೆ.

(3) ಸರ್ಕಾರಿ ಇಲಾಖೆ/ಡಿಸಿ/ಸಿಇಒ/ಎಚ್‌ಒಡಿ ತೆಗೆದುಕೊಂಡ ಕ್ರಮಗಳು ಪ್ಯಾರಾಗೆ ಅನುಗುಣವಾದ ಟೀಕೆಗಳು, ಆಕ್ಷೇಪಣಾ ಹೇಳಿಕೆಗಳು ಮತ್ತು ಕೆ.ಎಸ್.ಎ.ಟಿ ಆದೇಶಗಳ ಅನುಸರಣೆ ಅಫಿಡವಿಟ್‌ಗಳು ಕೆ.ಎಸ್.ಎ.ಟಿ AG ಅವರ ಕಚೇರಿಗೆ ಮತ್ತು ಸರ್ಕಾರಿ ವಕೀಲರಿಗೆ ವಿದ್ಯುನ್ಮಾನವಾಗಿ ಕೈಸೇರುತ್ತದೆ.

(4) ದೈನಂದಿನ ಆದೇಶಗಳು, ಸೂಚಿತ ಪಟ್ಟಿ, ಎಲ್ಲಾ ಹಂತದ ಮಾಹಿತಿಯೂ ಸಹ ಲಭಿಸುತ್ತದೆ. ಇದು ಇಡೀ ವ್ಯವಸ್ಥೆಯನ್ನು ಪಾರದರ್ಶಕ ಮತ್ತು ಪ್ರತಿ ಸ್ಪಂದನೆಯಾಗಿಸುತ್ತದೆ ಎಂದು ಮನೀಶ್ ಮೌದ್ಗಿಲ್, ಐಎಎಸ್, ನೋಡಲ್ ಸಿಸಿಎಂಎಸ್ ಅವರು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ