ಹಿರಿಯ ನೌಕರರಿಗೆ ಸಿಹಿಸುದ್ದಿ ನೀಡಿದ ಕೆಎಸ್​​ಆರ್​ಟಿಸಿ; ಏನು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 02, 2023 | 2:44 PM

ಕೆಎಸ್ಆರ್​ಟಿಸಿಯಲ್ಲಿ  34000 ಸಾವಿರ ಸಿಬ್ಬಂದಿಗಳಿದ್ದು, 24686 ಡ್ರೈವರ್ ಹಾಗೂ ಕಂಡಕ್ಟರ್​ಗಳಿದ್ದಾರೆ. ಅದರಲ್ಲಿ  40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ನೌಕರರಿದ್ದು, ಈ ತಪಾಸಣೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಿದ್ದಾರೆ. ಈ ಕುರಿತು ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಸಹಿ ಹಾಕಲಾಗಿದೆ.

ಹಿರಿಯ ನೌಕರರಿಗೆ ಸಿಹಿಸುದ್ದಿ ನೀಡಿದ ಕೆಎಸ್​​ಆರ್​ಟಿಸಿ; ಏನು ಗೊತ್ತಾ?
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ನ.02: ಹಿರಿಯ ನೌಕರರಿಗೆ ಕೆಎಸ್​​ಆರ್​ಟಿಸಿ(KSRTC) ಸಿಹಿ ಸುದ್ದಿಯೊಂದನ್ನು ನೀಡಿದೆ. ಹೌದು, ನೌಕರರಿಗೆ ಹೃದಯ(Heart) ಸಂಬಂಧಿ ತಪಾಸಣೆ ಮಾಡಿಸಲು ಕೆಎಸ್​​ಆರ್​ಟಿಸಿ ಮುಂದಾಗಿದ್ದು, ಈಗಾಗಲೇ ಜಯದೇವ ಆಸ್ಪತ್ರೆಯೊಂದಿಗೆ ಐದು ವರ್ಷಗಳವರೆಗೆ ಒಡಂಬಡಿಕೆ ಮಾಡಿಕೊಂಡಿದೆ. ಈ ಮೂಲಕ ಸಾರಿಗೆ ನೌಕರರಿಗೆ  ಯಾವುದೇ ರೀತಿಯ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳ ಕುರಿತು ತಪಾಸಣೆಯನ್ನು ನಡೆಸಿ ಚಿಕಿತ್ಸೆ ಒದಗಿಸಲಿದೆ. ಇದರಿಂದ ಸಾವಿರಾರು ನೌಕರರಿಗೆ ಅನುಕೂಲವಾಗಲಿದೆ.

40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ನೌಕರರಿಗೆ ಈ ತಪಾಸಣೆಯ ಸೌಲಭ್ಯ

ಇನ್ನು ಕೆಎಸ್ಆರ್​ಟಿಸಿಯಲ್ಲಿ  34000 ಸಾವಿರ ಸಿಬ್ಬಂದಿಗಳಿದ್ದು, 24686 ಡ್ರೈವರ್ ಹಾಗೂ ಕಂಡಕ್ಟರ್​ಗಳಿದ್ದಾರೆ. ಅದರಲ್ಲಿ  40 ವರ್ಷ ಮೇಲ್ಪಟ್ಟ 21 ಸಾವಿರಕ್ಕೂ ಹೆಚ್ಚು ನೌಕರರಿದ್ದು, ಈ ತಪಾಸಣೆಯ ಸೌಲಭ್ಯವನ್ನು ಪಡೆದುಕೊಳ್ಳಲು ಅರ್ಹರಿದ್ದಾರೆ. ಈ ಕುರಿತು ಇದೀಗ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ನೇತೃತ್ವದಲ್ಲಿ ಒಡಂಬಡಿಕೆ ಪತ್ರಕ್ಕೆ ಜಯದೇವ ಹೃದ್ರೋಗ ಸಂಸ್ಥೆಯ ಮುಖ್ಯಸ್ಥ ಡಾ. ಮಂಜುನಾಥ್ ಹಾಗೂ ಕೆಎಸ್ಆರ್​ಟಿಸಿ ಎಂಡಿ ಅನ್ಬು ಕುಮಾರ್ ಸಹಿ ಮಾಡಿದ್ದಾರೆ. ಇನ್ನು ತಪಾಸಣೆ ಮಾಡಲು ಪ್ರತಿ ನೌಕರನಿಗೆ 1200 ರೂಪಾಯಿ ನಿಗದಿ ಮಾಡಲಾಗಿದ್ದು, ಎಲ್ಲಾ ನೌಕರರಿಗೆ ತಪಾಸಣೆ ಮಾಡಲು ವರ್ಷಕ್ಕೆ ಕೆಎಸ್ಆರ್​ಟಿಸಿ 2.55 ಕೋಟಿ ರೂಪಾಯಿ ವೆಚ್ಚವಾಗಲಿದೆ.

ಇದನ್ನೂ ಓದಿ:ಚಿಕ್ಕಬಳ್ಳಾಪುರ: ಹೊಸ ರೂಪದೊಂದಿಗೆ ಕಾರ್ಯಾಚರಣೆಗೆ ಇಳಿದ ಹಳೆ ಕೆಎಸ್​​ಆರ್​ಟಿಸಿ ಬಸ್​ಗಳು

ಇನ್ನು ನಿನ್ನೆ(ನ.01) ಕನ್ನಡ ರಾಜ್ಯೋತ್ಸವ ಹಿನ್ನಲೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೈಸೂರು ವಿಭಾಗದ ಅಧಿಕಾರಿಗಳು ವಿಶಿಷ್ಟವಾದ ರೀತಿಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಆಚರಿಸಿದ್ದರು. ಹೌದು, ಒಂದು ಬಸ್ಸನ್ನು ಕನ್ನಡಾಂಬೆಯ ಸಾರೋಟಿನಂತೆ ವಿನ್ಯಾಸಗೊಳಿಸಿ ಹಳದಿ ಮತ್ತು ಕೆಂಪು ಬಣ್ಣದ ಹೂಗಳಿಂದ ಅಲಂಕರಿಸಿದ್ದರು. ಜೊತೆಗೆ ಬಸ್ಸಿನ ಮುಂಭಾಗದಲ್ಲಿ ಒಬ್ಬ ಮಹಿಳೆಯನ್ನು ಕನ್ನಡಾಂಬೆಯಂತೆ ಸಿಂಗರಿಸಿ ಕುಳ್ಳರಿಸಿದ್ದರು. ಸಾಹಿತ್ಯ ಸಂಸ್ಕೃತಿ ಮತ್ತು ಪರಂಪರೆಯನ್ನ ವಿವರಿಸುವ ಫೋಟೋಗಳನ್ನು ಅಂಟಿಸಲಾಗಿತ್ತು.

ಮತ್ತಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:37 pm, Thu, 2 November 23