ಮಹಿಳೆ ಯಾರಿಗೂ ಕಡಿಮೆ ಇಲ್ಲ. ಪುರುಷರಂತೆ ಎಲ್ಲ ಕ್ಷೇತ್ರಗಳಲ್ಲಿಯೂ ತನ್ನದೇ ಕಾರ್ಯವೈಖರಿಯಿಂದ ಬೆಟ್ಟದಷ್ಟನ್ನು ಸಾಧಿಸುತ್ತಿದ್ದಾಳೆ. ಇಷ್ಟು ದಿನ ಆಟೋ ಸರ್ಕಲ್ ಗಳಲ್ಲಿ ಪುರುಷ ಡ್ರೈವರ್ ಗಳು ಮಾತ್ರ ಕಾಣುಸ್ತಾ ಇದ್ರು. ಆದ್ರೀಗಾ ಲೇಡಿ ಡ್ರೈವರ್ ಗಳು (women auto passengers) ಕಾಣಿಸ್ತಾ ಇದ್ದಾರೆ. ಏನಿದು ಇವರ (Lady auto drivers) ವೃತ್ತಾಂತ? ಅಂತಿದಿರಾ? ಆ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ (Silicon City, Bangalore).
ಸಾಲಾಗಿ ನಿಂತಿರುವ ಲೇಡಿ ಡ್ರೈವರ್ಸ್, ತಮ್ಮದೇ ಆಟೋಗಳಿಗೆ ಓನರ್ ಆಗಿರುವ ಲೇಡಿಸ್, ಯಾವುದೇ ಭಯ ಇಲ್ಲದೇ ಆಟೋ ಓಡಿಸುತ್ತಾ ರೈಟ್ ರೈಟ್ ಅಂತಿರೋ ಲೇಡಿಸ್ ಇವೆಲ್ಲವೂ ಕಂಡು ಬಂದಿದ್ದು, ನಮ್ಮ ಸಿಲಿಕಾನ್ ಸಿಟಿಯಲ್ಲಿ.. ಹೌದು, ಮಹಿಳೆಯರು ಅಂದ್ರೆ ಸ್ವಾವಲಂಬಿ, ಅಡುಗೆ ಮಾಡುವುದಕ್ಕೆ ಮಾತ್ರ ಸೀಮಿತ, ಪೂಜೆಗಳಿಗೆ ಅಷ್ಟೇ ಸೀಮಿತ ಎನ್ನುವ ಟ್ರೆಂಡ್ ಸಧ್ಯ ಬದಲಾಗಿದೆ.
ಮಹಿಳೆಯರು ತಾವು ಯಾವುದಕ್ಕೂ ಕಡಿಮೆ ಇಲ್ಲ ಎಂಬಂತೆ ಎಲ್ಲಾ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಷ್ಟು ದಿನ ನಗರದ ಆಟೋ ಸ್ಟಾಂಡ್ ಗಳನ್ನ ನೋಡಿದ್ರೆ ಸಾಲು ಸಾಲು ಜೆಂಟ್ಸ್ ಆಟೋ ಡ್ರೈವರ್ ಗಳೇ ಕಾಣಿಸ್ತಾ ಇದ್ರು. ಇದೀಗಾ ಲೇಡಿ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ. ಮಹಿಳಾ ಆಟೋ ಪ್ರಯಾಣಿಕರಿಗೂ ಧೈರ್ಯ ಬಂದಿದ್ದು, ಹೆಣ್ಣು ಮಕ್ಕಳು ಇನ್ಮುಂದೆ ನಿರ್ಭಿತಿಯಿಂದ ಓಡಾಡಬಹುದಾಗಿದೆ!
ಹೌದು, ಬೆಂಗಳೂರಿನಲ್ಲಿ ಲೇಡಿ ಆಟೋ ಡ್ರೈವರ್ ಗಳ ಸಂಖ್ಯೆ ಹೆಚ್ಚಾಗಿದೆ. ಮನೆಯಲ್ಲಿನ ಬಡತನ, ಆರ್ಥಿಕ ಪರಿಸ್ಥಿತಿ, ದೃಢವಾಗಿ ಸಾಮಾಜದಲ್ಲಿ ಎದ್ದು ನಿಲ್ಲಬೇಕು ಎನ್ನುವ ಆತ್ಮವಿಶ್ವಾಸದಿಂದ ಎಲ್ಲ ಸವಾಲುಗಳನ್ನ ಪಕ್ಕಕ್ಕಿಟ್ಟು, ಸ್ವಂತ ಬಿಸಿನೆಸ್ ಮಾಡಬೇಕು ಎನ್ನುವ ಆಸಕ್ತಿಯಿಂದ ಆಟೋ ಡ್ರೈವಿಂಗ್ ನತ್ತ ಹೆಚ್ಚು ಮುಖ ಮಾಡುತ್ತಿದ್ದು, ಹಗಲು- ರಾತ್ರಿ ಎನ್ನದೇ ಲೇಡಿ ಆಟೋ ಡ್ರೈವರ್ ಗಳು ಕೆಲಸ ಮಾಡ್ತಿದ್ದಾರೆ.
Also Read: ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ 2024: ಹುದ್ದೆ, ಸಂಬಳ, ಆಯ್ಕೆಯ ವಿಧಾನ ಮಾಹಿತಿ ಇಲ್ಲಿದೆ
ಸಧ್ಯ ಬೆಂಗಳೂರಿನಲ್ಲಿ ಒಂದು ಲಕ್ಷದಷ್ಟು ಪುರುಷ ಡ್ರೈವರ್ ಗಳಿದ್ದಾರೆ. ಇನ್ನು 200 ಮಹಿಳಾ ಆಟೋ ಡ್ರೈವರ್ ಗಳಿದ್ದು, ಮನೆಯಲ್ಲಿ ಅಡುಗೆ ಮಾಡೋಕು ಸೈ, ಜೀವನ ನಡೆಸೋಕೆ ಆಟೋ ಡ್ರೈವಿಂಗ್ ಮಾಡೋಕು ಸೈ ಅಂತ ಲೇಡಿ ಡ್ರೈವರ್ಸ್ ಹೇಳ್ತಿದ್ದಾರೆ.
ಲೇಡಿ ಆಟೋ ಡ್ರೈವರ್ ಗಳಿಗೆಂದೆ ಪೀಸ್ ಆಟೋ ಅಸೋಸಿಯೇಷನ್ ಮಾಡಿಕೊಂಡಿದ್ದು, ಈ ಅಸೋಸಿಯೇಷನ್ ನಲ್ಲಿ ಮಹಿಳೆಯರಿಗೆ ಫ್ರೀಯಾಗಿ ಆಟೋ ಡ್ರೈವಿಂಗ್ ತರಬೇತಿ ಕೊಟ್ಟು,ಲೋನ್ ಹಣದಲ್ಲಿ ಆಟೋಗಳನ್ನ ಖರೀದಿಸಿ ಪುರುಷರಿಗೆ ಸಮನಾಗಿ ದುಡಿಯೋಕೆ ಶುರುವಾಗಿದೆ.
ಇಷ್ಟು ದಿನ ರಾತ್ರಿ ಸಮಯದಲ್ಲಿ ಹೆಣ್ಣು ಮಕ್ಕಳು ಆಟೋಗಳನ್ನ ಹತ್ತೋದಕ್ಕೆ ಹಿಂದೆಮುಂದೆ ನೋಡ್ತಿದ್ರು. ಇನ್ಮುಂದೆ ಹಾಗೆಲ್ಲಾ ಯೋಚನೆ ಮಾಡುವ ಅಗತ್ಯತೆ ಇಲ್ಲ. ಯಾಕಂದ್ರೆ ಲೇಡಿ ಆಟೋಡ್ರೈವರ್ ಗಳು ಕೂಡ ರಾತ್ರಿ ಅವಧಿಯಲ್ಲಿ ಆಟೋಗಳನ್ನ ಓಡಿಸ್ತಾ ಇದ್ದಾರೆ. ಸಾಕಷ್ಡು ಸವಾಲುಗಳು ಬರುತ್ತೆ. ಆದ್ರೆ ಆ ಸವಾಲುಗಳನ್ನ ಎದುರಿಸಿ ನಿಂತಾಗಲೇ ಜೀವನಕ್ಕೆ ಒಂದು ಅರ್ಥ ಅಂತ ಲೇಡಿ ಆಟೋ ಡ್ರೈವರ್ ಗಳು ಮುಂದೆ ಬಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Sat, 18 May 24