ಈ ವರ್ಷ ನನ್ನ ಹುಟ್ಟುಹಬ್ಬದ ಆಚರಣೆ ಬೇಡವೆಂದು ಅಭಿಮಾನಿಗಳಿಗೆ ವಿನಂತಿಸಿದ್ದೇನೆ: ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಈ ವರ್ಷ ನನ್ನ ಹುಟ್ಟುಹಬ್ಬದ ಆಚರಣೆ ಬೇಡವೆಂದು ಅಭಿಮಾನಿಗಳಿಗೆ ವಿನಂತಿಸಿದ್ದೇನೆ: ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2024 | 11:06 AM

ಈ ವರ್ಷ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡವೆಂದು ಬೆಂಬಲಿಗರಿಗೆ ವಿನಂತಿ ಮಾಡಿದ್ದೇನೆ, ಅವರು ತಮಗೆ ಹತ್ತಿರದ ದೇವಸ್ಥಾನಗಳಿಗೆ ಹೋಗಿ ನನಗಾಗಿ ಪೂಜೆ ಮಾಡಿಸಿದರೆ ಸಾಕು ಎಂದು ಹೇಳಿದರು. ಕಳೆದ ಒಂದು ತಿಂಗಳು ಕಾಲ ತಮ್ಮ ಮನೆಯ ಬಳಿ ಬಂದು ತನ್ನ ಪ್ರತಿಕ್ರಿಯೆ ಪಡೆಯಲು ಕಾಯುತ್ತಿಯಿದ್ದ ಮಾಧ್ಯಮದವರಿಗೆ ಹೇಳಿಕೆ ನೀಡಲು ಸಾಧ್ಯವಾಗದ ಕಾರಣ ವಿಷಾದ ವ್ಯಕ್ತಪಡಿಸಿದ ದೇವೇಗೌಡರು ಎಲ್ಲರಿಗೂ ಶುಭಾಷಯ ಹೇಳಿದರು.

ಬೆಂಗಳೂರು: ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನ ಮಂತ್ರಿ ಹಾಗೂ ದೇಶದ ಅತ್ಯಂತ ಹಿರಿಯ ರಾಜಕಾರಣಿ ಹೆಚ್ ಡಿ ದೇವೇಗೌಡ (HD Devegowda) ಇಂದು 92 ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಪ್ರಜ್ವಲ್ ಪ್ರಕರಣದ (Prajwal Revanna case) ನಂತರ ಹೊರಗೆಲ್ಲೂ ಕಾಣಿಸದ ದೇವೇಗೌಡರು, ತಮ್ಮ ಜನ್ಮದಿನದಂದು ಪ್ರತಿವರ್ಷ ಮಾಡುವಂತೆ ಅವರ ಮನೆಗೆ ಹತ್ತಿರವಿರುವ ವೆಂಕಟೇಶ್ವರ ದೇವಸ್ಥಾನಕ್ಕೆ (Venkateshwara temple) ಹೋಗಿ ಪೂಜೆ ಮಾಡಿಸಿಕೊಂಡಿದ್ದಾರೆ. ಕಳೆದ ಹತ್ತಾರು ವರ್ಷಗಳಿಂದ ಮಂಡಿನೋವು ಬಾಧಿಸುತ್ತಿದೆ ಎಂದು ಹೇಳಿದ ಅವರು ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ತಮಗೆ ಶುಭಾಷಯ ಕೋರಿರುವ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು. ಈ ವರ್ಷ ತಮ್ಮ ಹುಟ್ಟುಹಬ್ಬದ ಆಚರಣೆ ಬೇಡವೆಂದು ಬೆಂಬಲಿಗರಿಗೆ ವಿನಂತಿ ಮಾಡಿದ್ದೇನೆ, ಅವರು ತಮಗೆ ಹತ್ತಿರದ ದೇವಸ್ಥಾನಗಳಿಗೆ ಹೋಗಿ ನನಗಾಗಿ ಪೂಜೆ ಮಾಡಿಸಿದರೆ ಸಾಕು ಎಂದು ಹೇಳಿದರು. ಕಳೆದ ಒಂದು ತಿಂಗಳು ಕಾಲ ತಮ್ಮ ಮನೆಯ ಬಳಿ ಬಂದು ತನ್ನ ಪ್ರತಿಕ್ರಿಯೆ ಪಡೆಯಲು ಕಾಯುತ್ತಿಯಿದ್ದ ಮಾಧ್ಯಮದವರಿಗೆ ಹೇಳಿಕೆ ನೀಡಲು ಸಾಧ್ಯವಾಗದ ಕಾರಣ ವಿಷಾದ ವ್ಯಕ್ತಪಡಿಸಿದ ದೇವೇಗೌಡರು ಎಲ್ಲರಿಗೂ ಶುಭಾಷಯ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಮ್ಮ ಕುಟುಂಬದ ಪರವಾಗಿ ಕುಮಾರಸ್ವಾಮಿ ವಿವರವಾಗಿ ಹೇಳಿದ್ದಾರೆ: ಹೆಚ್ ಡಿ ದೇವೇಗೌಡ