ಜೀವನದ ಸುದೀರ್ಘ ಅನುಭವವನ್ನ ಪ್ರಧಾನಿ ಮೋದಿ ಮುಂದೆ ಹಂಚಿಕೊಂಡಿದ್ದೇನೆ: ಹೆಚ್ಡಿ ದೇವೇಗೌಡ
ತುಮಕೂರು ಜಿಲ್ಲೆಯ ಕೊರಟಗೆರೆ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ, ನನ್ನ ಸುದೀರ್ಘ ರಾಜಕೀಯದಲ್ಲಿ 15 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. ನನ್ನ ಜೀವನದ ಸುದೀರ್ಘ ಅನುಭವವನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹಂಚಿಕೊಂಡಿದ್ದೇನೆ. ಮೋದಿ ಅವರ ಭಾಷಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾರೆ.
ತುಮಕೂರು, ಏಪ್ರಿಲ್ 15: ನನ್ನ ಜೀವನದ ಸುದೀರ್ಘ ಅನುಭವವನ್ನು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅವರ ಮುಂದೆ ಹಂಚಿಕೊಂಡಿದ್ದೇನೆ. ಮೋದಿ ಅವರ ಭಾಷಣದಿಂದ ನಾನು ತುಂಬಾ ಪ್ರಭಾವಿತನಾಗಿದ್ದೇನೆ ಎಂದು ಜೆಡಿಎಸ್ ವರಿಷ್ಠ ಹೆಚ್ಡಿ ದೇವೇಗೌಡ (HD Deve Gowda) ಹೇಳಿದ್ದಾರೆ. ಜಿಲ್ಲೆಯ ಕೊರಟಗೆರೆ ಸಮಾವೇಶದಲ್ಲಿ ಮಾತನಾಡಿದ ಅವರು, ನನ್ನ ಸುದೀರ್ಘ ರಾಜಕೀಯದಲ್ಲಿ 15 ಬಾರಿ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದೇನೆ. 3 ಸಾರಿ ಸೋತಿದ್ದೇನೆ. ರಾಜಕೀಯ ಚದುರಂಗದಾಟದಲ್ಲಿ ಯಾವಾಗ ಏನು ಆಗುತ್ತೆ ಊಹೆ ಮಾಡುವುದಕ್ಕೆ ಆಗಲ್ಲ ಎಂದಿದ್ದಾರೆ.
ಯಾವ ಟ್ರಿಬ್ಯೂನಲ್ ಬೆಂಗಳೂರಿಗೆ ನೀರಿಲ್ಲ ಅಂತಾ ಬರೆದಿದ್ದಾರೋ ಆ ವಿಷಯವನ್ನ ಈ ರಾಷ್ಟ್ರದ ಪ್ರಧಾನಿಗಳು ಎಲ್ಲರಿಗೂ ಮನದಟ್ಟು ಆಗುವಂತೆ ನಿನ್ನೆ ಪ್ರಸ್ತಾಪ ಮಾಡಿದ್ದಾರೆ. ಇದು ಬಹಳ ಮುಖ್ಯ. ನಾನೇನು ತುಮಕೂರಿನಲ್ಲಿ ನಿಲ್ಲಬೇಕು ಅಂತಾ ಇರಿಲಿಲ್ಲ. 2019 ಮೇ 13 ರಂದು ಘೋಷಣೆ ಮಾಡಿದ್ದೆ. ಆದರೇ ಸನ್ನಿವೇಶ ನಿಂತುಕೊಂಡೆ. ನಾನು ತುಮಕೂರಿಗೆ ನೀರು ಕೋಡುವುದಿಲ್ಲ ಅಂತೇಳಿ ನನ್ನ ಸೋಲಿಸಿದರು ಎಂದರು.
ಇದನ್ನೂ ಓದಿ: ಡಿಕೆ ಸಹೋದರರ ದೌರ್ಜನ್ಯ ಕೊನೆಗಾಣಿಸಲು ಮಂಜುನಾಥ್ ಕಣಕ್ಕಿಳಿಸಿದ್ರು ಮೋದಿ: ಹೆಚ್ಡಿ ದೇವೇಗೌಡ
ಬೆಂಗಳೂರಿನಲ್ಲಿ ಕುಡಿಯೋ ನೀರಿಗೆ ಎಷ್ಟು ದಂಧೆ ನಡೆಯುತ್ತಿದೆ. ಇದು ಮೋದಿ ಅವರ ಗಮನಕ್ಕೆ ಹೋಗಿದೆ. ತುಮಕೂರಿನ ಮಹಾಜನರು ಕುಡಿಯಲು ನೀರು ಹರಿಸಿದವನು. ನಿಮ್ಮಮುಂದೆ ಕೂತಿದ್ದೇನೆ. ಟನಲ್ನಲ್ಲಿ ಎರಡು ಕಡೆ ಚಿಮಣಿ ಬಿದ್ದೋಯ್ತು. ಈ ರಾಷ್ಟ್ರದ ಅನೇಕ ತಜ್ಞರು ಅದನ್ನ ಹೇಗೆ ಮುಚ್ಚಬೇಕು ಅಂತಾ ಪರೀಕ್ಷೆ ಮಾಡಿದರು. ವೀರೆಂದ್ರ ಪಾಟೀಲ್ ಅನಾರೋಗ್ಯದಿಂದ ಅಧಿಕಾರ ಬಿದ್ದೋಯ್ತು ಹೀಗಾಗಿ ಬಂಗಾರಪ್ಪ ಬಂದ್ದರು. ಸುಪ್ರೀಂ ಕೋರ್ಟ್ನಲ್ಲಿ ಕಪಾಳಕ್ಕೆ ಹೊಡೆದರು. ಅವರ ಸರ್ಕಾರ ಹೋಯಿತು. ವೀರಪ್ಪ ಮೊಯ್ಲಿ ಬಂದ್ದರು.
ಗಾಂಧಿ ಸಾಹಿತ್ಯ ಸಮಿತಿ ಟ್ರಿಬ್ಯೂನಲ್ ಹೊಡೆದೋಗಿದೆ ಅಂತಾ ವರದಿ ಕೊಟ್ಟರು. ಇವತ್ತು ಕಾಂಗ್ರೆಸ್ ಮಹಾನುಭಾವರು ರಾಜ್ಯ ಆಳುತ್ತಿದ್ದಾರೆ. ಸದನದಲ್ಲಿ ಒಬ್ಬ ದೇವೇಗೌಡ, 17 ಜನ ಬಿಜೆಪಿ 12 ಜನ ಕಾಂಗ್ರೆಸ್ ನವರು. ಒಬ್ಬ ಏಕಾಂಗಿ ದೇವೇಗೌಡ ಹೋರಾಟ ನಡೆಯುತ್ತೆ. ಮನಮೋಹನ್ ಸಿಂಗ್ ಪ್ರಧಾನಿ, ನಾನೇನು ಮಾಡಲಿ ದೇವೆಗೌಡರೇ 40 ಜನ ತಮಿಳುನಾಡಿನ ಎಂಪಿಗಳಿದ್ದಾರೆ. ನನ್ನ ಸರ್ಕಾರ ಹೋಗುತ್ತೆ ಅಂದ್ರು ಎಂದರು.
ನಾನು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿರವರನ್ನು ನಂಬಿದ್ದೇನೆ
ವಿ.ಸೋಮಣ್ಣ ಏನಾದ್ರೂ ಸೋತ್ರೆ ಯಾವ ಮೋದಿ ನನ್ನ ನಂಬಿದ್ದಾರೋ ಅವರ ಮುಂದೆ ನಿಂತು ಕಾವೇರಿ ನೀರಿನ ಸಮಸ್ಯೆ ಬಗ್ಗೆ ಪ್ರಸ್ತಾಪಿಸಲು ಆಗಲ್ಲ. ಕಾವೇರಿ ನೀರಿನ ಸಮಸ್ಯೆ ಸರಿಪಡಿಸಿ ಅಂತಾ ಕೇಳುವ ಯೋಗ್ಯತೆ ಇರಲ್ಲ. ಯಾರು ಏನು ಮಾಡ್ತಿದ್ದಾರೆ, ಕಾಂಗ್ರೆಸ್ ಏನು ಮಾಡ್ತಿದೆ ಎಂದು ಗೊತ್ತಿದೆ. ನಾನು ಕಾವೇರಿ ವಿಚಾರದಲ್ಲಿ ಪ್ರಧಾನಿ ಮೋದಿರವರನ್ನು ನಂಬಿದ್ದೇನೆ. 1962ರಿಂದಲೂ ಕಾವೇರಿ ಹೋರಾಟ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್ಡಿ ದೇವೇಗೌಡ
ಕಾವೇರಿ ವಿಚಾರದಲ್ಲಿ ಏನಾದ್ರೂ ಪರಿಹಾರ ಸಿಗುತ್ತೆ ಅನೋ ನಂಬಿಕೆ ಇದೆ ತುಮಕೂರು ಕ್ಷೇತ್ರದಲ್ಲಿ ಸೋಮಣ್ಣ ಗೆದ್ದರೆ ತಲೆ ಎತ್ತಿ ನೀರು ಕೇಳಬಹುದು. ಮೇಕೆದಾಟು ಡ್ಯಾಂ ನಿರ್ಮಿಸಲು ಬಿಡಲ್ಲ ಅಂತಾ ತಮಿಳರು ಹೇಳಿದ್ದಾರೆ. ನಮ್ಮ ಮೇಲಿನ ದ್ವೇಷದಿಂದಲೇ ಸಿಎಂ ಸ್ಟಾಲಿನ್ ಸಮಸ್ಯೆ ಮಾಡುತ್ತಿದ್ದಾರೆ. ಇದು ಪ್ರಧಾನಿಗೂ ಅರ್ಥ ಆಗಿದೆ, ಕಾವೇರಿ ಕಣಿವೆಯ 10 ಅಭ್ಯರ್ಥಿಗಳೂ ಗೆಲ್ಲಬೇಕು. ಈ ಸಲ ನಾನು ಕೈ ಮುಗಿಯುತ್ತೇನೆ, ಕಳೆದ ಸಲ ನಾನು ಸೋತಿದ್ದಕ್ಕೆ ವ್ಯಥೆ ಇಲ್ಲ. ಇಂಡಿಯಾ ಒಕ್ಕೂಟದಲ್ಲಿ ಪ್ರಧಾನಿ ಆಗುವ ಅರ್ಹತೆ ಇರುವವರು ಇದ್ದಾರಾ? ಅನಗತ್ಯವಾಗಿ ಯಾರನ್ನೂ ಟೀಕಿಸಲ್ಲ, ಸೋಮಣ್ಣ ಗೆಲುವು ದೇವೇಗೌಡರ ಗೆಲುವು ಎಂದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:26 pm, Mon, 15 April 24