Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್​ಡಿ ದೇವೇಗೌಡ

ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಮತ್ತೆ ಸಿದ್ದರಾಮಯ್ಯ ವಿರುದ್ಧ ಗುಡುಗಿದ್ದಾರೆ. ಜೆಡಿಎಸ್ ಎಲ್ಲಿದೆ ಅಂತ ಕೇಳುತ್ತಾರೆ ಎಷ್ಟು ಅಹಂ ನೋಡಿ ಇವರಿಗೆ. ಆ ಅಧಿಕಾರದ ಅಹಂನ್ನು ಇಳಿಸುತ್ತೇನೆ ಎಂದು ವಾಗ್ದಾಳಿ ಮಾಡಿದ್ದಾರೆ.

ಅಧಿಕಾರದ ಅಹಂನ್ನು ಇಳಿಸುತ್ತೇನೆ: ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಹೆಚ್​ಡಿ ದೇವೇಗೌಡ
ಹೆಚ್​​.ಡಿ.ದೇವೇಗೌಡ, ಸಿದ್ದರಾಮಯ್ಯ
Follow us
ಮಂಜುನಾಥ ಕೆಬಿ
| Updated By: ಗಂಗಾಧರ​ ಬ. ಸಾಬೋಜಿ

Updated on: Mar 31, 2024 | 5:46 PM

ಹಾಸನ, ಮಾರ್ಚ್​ 31: ಸಿಎಂ ಸಿದ್ದರಾಮಯ್ಯ ಇವತ್ತು ಬಹಳ ಟ್ವೀಟ್ ಮಾಡಿದ್ದಾರೆ. ಎಲ್ಲಿದೆ ಜೆಡಿಎಸ್ ಅಂತ ಹೇಳುತ್ತಾರೆ. ಈ ಸಂತೆ ಮೈದಾನದಲ್ಲಿ ಸೇರಿರುವ ಪುಣ್ಯಾತ್ಮರು ನೀವು ಯಾವ ಪಕ್ಷ ಹಾಗಾದ್ರೆ. ಎಷ್ಟು ಅಹಂ ನೋಡಿ ಅವರಿಗೆ. ಅಧಿಕಾರದ ಅಹಂನ್ನು ಇಳಿಸುತ್ತೇನೆ ಎಂದು ಸಿದ್ದರಾಮಯ್ಯ ವಿರುದ್ಧ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ (hd devegowda) ಮತ್ತೆ ಗುಡುಗಿದ್ದಾರೆ. ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಜೆಡಿಎಸ್ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನಾನು ಕುಳಿತಿದ್ದೇನೆ ಆದರೆ ಬುದ್ದಿ ಕೆಲಸ ಮಾಡುತ್ತೆ. ಯಾರಿಗೂ ಜಗ್ಗಲ್ಲ. ಇವರು ಏನೇನು ಮಾಡಿದ್ದಾರೆ ಒಂದೊಂದು ಎಳೆಎಳೆಯಾಗಿ ಬಿಚ್ಚಿಡುತ್ತೇನೆ ಎಂದು ಹೇಳಿದ್ದಾರೆ.

ಏ.4 ಹಾಸನದಲ್ಲಿ ಅರವತ್ತು, ಎಪ್ಪತ್ತು ಸಾವಿರ ಜನ ಸೇರುತ್ತಾರೆ. ಅಲ್ಲಿ ಹೇಳುತ್ತೇನೆ. ಅವರು ಏ.5 ಕ್ಕೆ ಹಾಸನಕ್ಕೆ ಬರುತ್ತಾರಂತೆ ಬರಲಿ. ಲೋಕಸಭಾ ಚುನಾವಣೆ ಆದಮೇಲೆ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಅನ್ನೋದನ್ನ ಕಾದುನೋಡೋಣ. ಈ ಭಾರಿ ಜನ ತೀರ್ಮಾನ ಮಾಡುತ್ತಾರೆ ಎಂದರು.

ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ

2019 ಮಾರ್ಚ್ 13 ರಂದು ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದೆ. ಆದರೆ ನನ್ನನ್ನು ಸೋಲಿಸಿ ಅವಮಾನ ಮಾಡಬೇಕು ಅಂತ ಮಾಡಿದ್ದರು. ನಾನು ಮತ್ತೆ ಚುನಾವಣೆಗೆ ನಿಲ್ಲಲ್ಲ. ಆದರೆ ನೀವು ಆ ಕಪ್ಪುಚುಕ್ಕೆ ಇಟ್ಟಿದ್ದೀರಲ್ಲ ಸಿದ್ದರಾಮಯ್ಯ ಅವರೇ. ನನಗೆ 91 ವಯಸ್ಸು ಸಿದ್ದರಾಮಯ್ಯ ಅವರೇ ನೆನಪಿನಲ್ಲಿ ಇಟ್ಕೊಳಿ. ನಾನು ಮೋದಿ ಸೇರಿರುವುದು ನಿಜ. ಪ್ರಧಾನಮಂತ್ರಿ ಸ್ಥಾನದಿಂದ ಏಕೆ ನನ್ನನ್ನು ತೆಗೆದಿರಿ.

ಇದನ್ನೂ ಓದಿ: ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆ: ಕಾಂಗ್ರೆಸ್​ ವಿರುದ್ಧ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌ ರೇವಣ್ಣ ವಾಗ್ದಾಳಿ

ಪಿ.ಚಿದಂಬರಂ ಹೇಳ್ತಾರೆ ನಮ್ಮ ಅಕೌಂಟ್ ಸೀಜ್ ಮಾಡಿದ್ದಾರೆ ನಮ್ಮ ಹತ್ರ ದುಡ್ಡಿಲ್ಲ ಅಂತ. ನನ್ನ ಅರವತ್ತು ವರ್ಷದಲ್ಲಿ ರಾಜಕೀಯ ಜೀವನ ನೋಡಿದ್ದೇನೆ. ಇಡೀ ಬೆಂಗಳೂರು ಒಬ್ಬನ ಕೈಯಲ್ಲಿದೆ. ಬಿಡಿಎ, ಕಾರ್ಪೊರೇಷನ್, ಪ್ಲಾನಿಂಗ್ ಕಮಿಷನ್, ಒಬ್ಬನ ಕೈಯಲ್ಲಿದೆ. ಅಷ್ಟೇ ಅಲ್ಲಾ ಇಡೀ ನೀರಾವರಿ ಅವರ ಕೈಯಲ್ಲಿ ಇದೆ. ಎಲ್ಲಿದೆ ಕಾಂಗ್ರೆಸ್, ರಾಜಸ್ತಾನ, ಮಧ್ಯಪ್ರದೇಶ, ಛತ್ತೀಸ್‌ಗಡ್, ಕೇರಳ, ಆಂಧ್ರಪ್ರದೇಶದಲ್ಲಿ ಇದೆಯಾ? ಕರ್ನಾಟಕ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್‌ ಇದೆ ಎಂದರು.

ಗರ್ವದ ಮಾತು ಆಡಬೇಡಿ ಎಂದ ದೇವೇಗೌಡ 

ಬೆಂಗಳೂರನಲ್ಲಿರುವ ಸಂಪತ್ತು, ನೀರಾವರಿ ಇಲಾಖೆಯ ಹಣವನ್ನು ಎಲ್ಲಾ ಕಡೆ ಚುನಾವಣೆಗೆ ಖರ್ಚು ಮಾಡುತ್ತಿದ್ದಾರೆ. ರಾಜಸ್ತಾನದಲ್ಲಿ ಎಲೆಕ್ಷನ್ ಕಮಿಷನ್​​ನವರು ಹಣ ಹಿಡಿದರು ಎಂದು ಲೇವಡಿ ಮಾಡಿದ್ದಾರೆ. ಕುಮಾರಸ್ವಾಮಿ ಹಾರ್ಟ್ ಆಪರೇಷನ್ ಆಗಿ ಮೂರೇ ದಿನಕ್ಕೆ ಬಂದರು ಅಂತಾರೆ. ಕುಮಾರಸ್ವಾಮಿನಾ ಈ‌ ಸಾರಿ ಮುಗಿಸುತ್ತಿವಿ ಅಂತೀರಾ. ಜೆಡಿಎಸ್ ತೆಗಿತೀನಿ ಅಂತಾರೆ. ನಾನು ಬದುಕಿದ್ದೇನೆ, ಈ ಕ್ಷೇತ್ರ ಮಾತ್ರವಲ್ಲ ನಿನ್ನೆ ತುಮಕೂರಿನಲ್ಲಿ ಇದನ್ನೇ ಹೇಳಿದ್ದೇನೆ. ಈ ಗರ್ವದ ಮಾತನ್ನು ಆಡಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್​: 2 ತಿಂಗಳ ಹಣ ಒಂದೇ ಸಲಕ್ಕೆ ಜಮಾ...!
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
ಗಂಡನನ್ನು ರೂಂನಲ್ಲಿ ಕೂಡಿ ಕತ್ತು ಹಿಸುಕಿ ಥಳಿಸಿದ ಹೆಂಡತಿ; ವಿಡಿಯೋ ವೈರಲ್
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
4ನೇ ಅತಿವೇಗದ ಅರ್ಧಶತಕ ಸಿಡಿಸಿದ ಮಾರ್ಷ್​
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಲಾಂಗ್ ಹಿಡಿದ ಪ್ರಕರಣ: ಪೊಲೀಸ್ ಠಾಣೆಯಲ್ಲಿ ರಜತ್, ವಿನಯ್ ವಿಚಾರಣೆ
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಕರ್ನಾಟಕದ ಐದು ಮಹಾ ನಗರ ಪಾಲಿಕೆ ಚುನಾವಣೆಗೆ ಮುಹೂರ್ತ ಫಿಕ್ಸ್..!
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಬುರ್ಖಾ ಧಾರಣೆ ಕುರಿತು ವಿದ್ಯಾರ್ಥಿನಿಯ ವಿಡಿಯೋ ಬಗ್ಗೆ ಬಿಇಒ ಸ್ಪಷ್ಟನೆ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
ಸಿಟಿ ರವಿ ಮತ್ತು ತಮ್ಮಯ್ಯ ನಡುವೆ ಮುಂದುವರಿದ ರಾಜಕೀಯ ಕಿತ್ತಾಟ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
700 ಸಂಚಿಕೆ ಪೂರೈಸಿದ ಶ್ರೀರಸ್ತು ಶುಭಮಸ್ತು ಸೀರಿಯಲ್: ಸುಧಾರಾಣಿ ಸಡಗರ ನೋಡಿ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಕಮ್ರಾ ವಿವಾದಾತ್ಮಕ ಶೋ ಬಳಿಕ ಮುಂಬೈ ಕಾಮಿಡಿ ಕ್ಲಬ್‌ ಧ್ವಂಸ ಕಾರ್ಯಾಚರಣೆ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ
ಸ್ಪೀಕರ್ ಖಾದರ್ ನಿರ್ಣಯ ಪುನರ್ ಪರಿಶೀಲಿಸಿ ವಾಪಸ್ಸು ಪಡೆಯಬೇಕು: ಕಾಗೇರಿ