AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಮ್ಮ ಕುಟುಂಬದ ಪರವಾಗಿ ಕುಮಾರಸ್ವಾಮಿ ವಿವರವಾಗಿ ಹೇಳಿದ್ದಾರೆ: ಹೆಚ್ ಡಿ ದೇವೇಗೌಡ

ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ನಮ್ಮ ಕುಟುಂಬದ ಪರವಾಗಿ ಕುಮಾರಸ್ವಾಮಿ ವಿವರವಾಗಿ ಹೇಳಿದ್ದಾರೆ: ಹೆಚ್ ಡಿ ದೇವೇಗೌಡ

ಅರುಣ್​ ಕುಮಾರ್​ ಬೆಳ್ಳಿ
|

Updated on: May 18, 2024 | 10:24 AM

Share

ರೇವಣ್ಣ ಅವರಿಗೆ ಒಂದು ಪ್ರಕರಣಲ್ಲಿ ಜಾಮೀನು ಸಿಕ್ಕಿದೆ ಮತ್ತೊಂದರ ವಿಚಾರಣೆ ನಡೆಯುತ್ತಿದ್ದು ಸೋಮವಾರದಂದು ಕೋರ್ಟ್ ತನ್ನ ತೀರ್ಪು ನೀಡಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಾವು ಅದರ ಬಗ್ಗೆ ಮಾತಾಡಲ್ಲ ಎಂದ ದೇವೇಗೌಡರು, ರೇವಣ್ಣರ ವಿರುದ್ಧ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ನೋವು ಮತ್ತು ವಿಷಾದದಿಂದ ಹೇಳಿದರು.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (former PM HD Devegowda) ಅವರು ಹೆಚ್ ಡಿ ರೇವಣ್ಣ (HD Revanna) ಮತ್ತು ಪ್ರಜ್ವಲ್ ರೇವಣ್ಣ (Prajwal Revanna) ಪ್ರಕರಣಗಳ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂದರ್ಭ ಕೂಡ ಯಾವುದನ್ನು ಅಂತ ನಾವು ಗಮನಿಸಬೇಕಿದೆ, ರಾಷ್ಟ್ರದ ಹಿರಿಯ ಮುತ್ಸದ್ದಿ ಇವತ್ತು ತಮ್ಮ 92ನೇ ಹುಟ್ಟುಹಬ್ಬವನ್ನು (92nd birthday) ಆಚರಿಸಿಕೊಳ್ಳುತ್ತಿದ್ದಾರೆ. ಹಿಂದಿನ 91 ಹುಟ್ಟುಹಬ್ಬಗಳನ್ನು ಅವರು ಯಾವತ್ತೂ ಇಂಥ ಅಹಿತಕರ ಸನ್ನಿವೇಶದಲ್ಲ್ಲಿ ಆಚರಿಸಿಕೊಂಡಿರಲಿಕ್ಕಿಲ್ಲ. ರೇವಣ್ಣ ಅವರಿಗೆ ಒಂದು ಪ್ರಕರಣಲ್ಲಿ ಜಾಮೀನು ಸಿಕ್ಕಿದೆ ಮತ್ತೊಂದರ ವಿಚಾರಣೆ ನಡೆಯುತ್ತಿದ್ದು ಸೋಮವಾರದಂದು ಕೋರ್ಟ್ ತನ್ನ ತೀರ್ಪು ನೀಡಲಿದೆ. ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತಾವು ಅದರ ಬಗ್ಗೆ ಮಾತಾಡಲ್ಲ ಎಂದ ದೇವೇಗೌಡರು, ರೇವಣ್ಣರ ವಿರುದ್ಧ ಸುಳ್ಳು ಪ್ರಕರಣಗಳನ್ನು ಸೃಷ್ಟಿಸಲಾಗುತ್ತಿದೆ ಎಂದು ನೋವು ಮತ್ತು ವಿಷಾದದಿಂದ ಹೇಳಿದರು.

ಪ್ರಜ್ವಲ್ ಬಗ್ಗೆ ಮಾತಾಡಿದ ಮಾಜಿ ಪ್ರಧಾನಿಯವರು, ಅವರೀಗ ಹೊರದೇಶದಲ್ಲಿದ್ದಾರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಬಗ್ಗೆ ತಮ್ಮ ಕುಟುಂಬದ ಪರವಾಗಿ ಹೆಚ್ ಡಿ ಕುಮಾರಸ್ವಾಮಿಯವರು ಸ್ಪಷ್ಟವಾದ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಕಾನೂನಿನ ಪ್ರಕಾರ ಶಿಕ್ಷೆಯಾಗಲಿ ಅಂದಿದ್ದಾರೆ. ಆದರೆ, ಇಡೀ ಪ್ರಕರಣದಲ್ಲಿ ಬೇರೆ ಜನ ಸಹ ಶಾಮೀಲಾಗಿದ್ದಾರೆ ಅವರಿಗೂ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತೆಯರಿಗೆ ಪರಿಹಾರ ಸಿಗಬೇಕು ಎಂದು ದೇವೇಗೌಡ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ಅಯೋಧ್ಯೆಗೆ ಹೋಗುತ್ತೇನೆಂದ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮುಕ್ತವಾಗಿ ಕೊಂಡಾಡಿದ ಹೆಚ್ ಡಿ ದೇವೇಗೌಡ