Bengaluru News: ಗಂಡನ ಮನೆಯಲ್ಲಿ ಪ್ರಾಣಬಿಟ್ಟ ಮಹಿಳಾ ಟೆಕ್ಕಿ, ಕಾರಣ ನಿಗೂಢ

30 ವರ್ಷದ ಮಹಿಳಾ ಟೆಕ್ಕಿ ಗಂಡನ ಮನಿಯಲ್ಲಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಈ ಸಂಬಂಧ ಪೊಲೀಸರು ಆಕೆಯ ಪತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Bengaluru News: ಗಂಡನ ಮನೆಯಲ್ಲಿ ಪ್ರಾಣಬಿಟ್ಟ ಮಹಿಳಾ ಟೆಕ್ಕಿ, ಕಾರಣ ನಿಗೂಢ
(ಸಾಂದರ್ಭಿಕ ಚಿತ್ರ)
Image Credit source: express photo
Edited By:

Updated on: Jul 18, 2023 | 6:24 AM

ಬೆಂಗಳೂರು, (ಜುಲೈ.18): ಮಹಿಳಾ ಟೆಕ್ಕಿಯೊಬ್ಬರು(techie) ನೇಣು ಬಿಗುದುಕೊಂಡು ಆತ್ಮಹತ್ಯೆ(suicide) ಮಾಡಿಕೊಂಡಿರುವ ಘಟನೆ ಬೆಂಗಳೂರಿನ(Bengaluru) ಜೋಗುಪಾಳ್ಯದಲ್ಲಿ ನಡೆದಿದೆ. ದಿವ್ಯಾ(30) ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ. ಜೋಗುಪಾಳ್ಯದ ಪತಿಯ ಮನೆಯಲ್ಲಿ ದಿವ್ಯಾ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಪತಿ ಮತ್ತು ಆತನ ಕುಟುಂಬಸ್ಥರೇ ಮಗಳನ್ನು ಕೊಲೆ ಮಾಡಿದ್ದಾರೆ ದಿವ್ಯಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ: Bengaluru News: PES ಕಾಲೇಜಿನ 8ನೇ ಮಹಡಿಯಿಂದ ಹಾರಿ ವಿದ್ಯಾರ್ಥಿ ಆತ್ಮಹತ್ಯೆ ಶಂಕೆ

2014ರಲ್ಲಿ ಟೆಕ್ಕಿ ಅರವಿಂದ್ ಜೊತೆ ದಿವ್ಯಾ ಮದುವೆ ಆಗಿತ್ತು. ಮದುವೆ ಬಳಿಕ ಗಂಡನ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು ಎಂದು ಮೃತ ದಿವ್ಯಾ ಪೋಷಕರು ಆರೋಪಿಸಿದ್ದಾರೆ. ಆದ್ರೆ, ದಿವ್ಯಾಳ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಹಲಸೂರು ಠಾಣೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದಿವ್ಯಾಳ ಪತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ