ಲಾಲ್ ಬಾಗ್ ಸುತ್ತೋದು ಇನ್ನಷ್ಟು ಸುಲಭ! ಕಾಲ್ನಡಿಗೆ ಕಷ್ಟ ಆಗುವವರಿಗೆ ಸಿಗಲಿದೆ ಇ ಸ್ಕೂಟರ್ ಸೌಲಭ್ಯ

ವಾರಾಂತ್ಯ ಬಂತು ಅಂದರೆ ಬೆಂಗಳೂರು ಸುತ್ತಲು ಒಂದೊಳ್ಳೆ ಜಾಗ ಅಂದರೆ ಅದು ಲಾಲ್ ಬಾಗ್. ನಗರದ ಮಾಲಿನ್ಯ ಜಂಜಾಟದ ನಡುವೆ ಸ್ವಲ್ಪ ರಿಲಾಕ್ಸ್ ಮೂಡ್​ಗೆ ಜಾರುವುದಕ್ಕೆ ಇದೊಳ್ಳೆ ತಾಣ. ಲಾಲ್​ ಬಾಗ್​ನಲ್ಲಿ ನಡೆಯಲು ಕಷ್ಟ ಎನ್ನುವವರಿಗೆ ಅನುಕೂಲ ಮಾಡಿಕೊಡಲು ತೋಟಗಾರಿಕಾ ಇಲಾಖೆ ಇದೀಗ ಹೊಸದೊಂದು ಯೋಜನೆಗೆ ಮುಂದಾಗಿದೆ.

ಲಾಲ್ ಬಾಗ್ ಸುತ್ತೋದು ಇನ್ನಷ್ಟು ಸುಲಭ! ಕಾಲ್ನಡಿಗೆ ಕಷ್ಟ ಆಗುವವರಿಗೆ ಸಿಗಲಿದೆ ಇ ಸ್ಕೂಟರ್ ಸೌಲಭ್ಯ
ಲಾಲ್ ಬಾಗ್ ಸುತ್ತಲು ಸಿಗಲಿದೆ ಇ ಸ್ಕೂಟರ್ ಸೌಲಭ್ಯ
Edited By:

Updated on: Jun 16, 2025 | 6:52 AM

ಬೆಂಗಳೂರು, ಜೂನ್ 16: ಬೆಂಗಳೂರಿನ (Bengaluru) ಸಸ್ಯಕಾಶಿ ಲಾಲ್‌ ಬಾಗ್‌ನಲ್ಲಿ (Lal Bagh) ಪ್ರವಾಸಿಗರಿಗೆ, ಅದರಲ್ಲಿಯೂ ಹೆಚ್ಚು ನಡೆದಾಡಲು ಕಷ್ಟವಾಗುವವರಿಗೆ ವಿಸ್ತಾರವಾದ ಉದ್ಯಾನವನ್ನು ಸುತ್ತಲು ಪರಿಸರಸ್ನೇಹಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ವ್ಯವವಸ್ಥೆ (E-Scooter service) ಒದಗಿಸುವ ಹೊಸ ಯೋಜನೆ ಜಾರಿಗೊಳಿಸಲು ತೋಟಗಾರಿಕಾ ಇಲಾಖೆ ಮುಂದಾಗಿದೆ. ಸದ್ಯ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಾಗಿದೆ. ‘ಫೆಚ್ ಮೊಬಿಲಿಟಿ’ ಬ್ರಾಂಡ್ ಅಡಿಯಲ್ಲಿ ಸ್ಟಾರ್ಟ್ಅಪ್ ವೋಲ್ಟ್ರಾನ್ ಡೈನಾಮಿಕ್ಸ್ ಈ ಉಪಕ್ರಮವನ್ನು ಆರಂಭಿಸಿದೆ.

ಲಾಲ್ ಬಾಗ್ ಸುತ್ತಲು ಇ ಸ್ಕೂಟರ್: ಬಾಡಿಗೆ ಎಷ್ಟು?

ಲಾಲ್ ಬಾಗ್ ನೋಡಲು ಹಲವು ಗಂಟೆಗಳು ಸುತ್ತಿ ಸುಸ್ತಾಗುತ್ತಿದ್ದ ಮಂದಿ ಈಗ ಎಲೆಕ್ಟ್ರಿಕ್ ಸ್ಕೂಟರ್​ಗಳನ್ನು ಏರಿ ಜಾಲಿ ರೈಡ್ ಮಾಡುತ್ತಿದ್ದಾರೆ. ಸದ್ಯಕ್ಕೆ, 20 ನಿಮಿಷಗಳ ಸವಾರಿಗೆ 50 ರೂಪಾಯಿ ದರ ನಿಗದಿಪಡಿಸಲಾಗಿದೆ. ಈ ಸ್ಕೂಟರ್‌ಗಳು ಒಂದೇ ಚಾರ್ಜ್‌ನಲ್ಲಿ 25 ಕಿ.ಮೀ ದೂರ ಕ್ರಮಿಸಲಿವೆ. ಪ್ರಸ್ತುತ 10 ಇ ಸ್ಕೂಟರ್ ಗಳ ಕಾರ್ಯಾಚರಣೆ ಇದ್ದು, ಮುಂದಿನ ದಿನಗಳಲ್ಲಿ ಲಾಲ್ ಬಾಗ್​​ನ ಎಲ್ಲಾ ಗೇಟ್​​ಗಳ ಮೂಲಕ ಮೂವತ್ತಕ್ಕೂ ಹೆಚ್ಚು ಇ ಸ್ಕೂಟರ್​​ಗಳನ್ನು ಕಾರ್ಯಾಚರಣೆಗೆ ಇಳಿಸುವ ಸಾಧ್ಯತೆ ಇದೆ.

ಲಾಲ್ ಬಾಗ್​ನಲ್ಲಿ ನಾಯಿ ಕಾಟ

ಸಸ್ಯಕಾಶಿ ಲಾಲ್ ಬಾಗ್​ನಲ್ಲಿ ಪ್ರವಾಸಿಗರಿಗೆ ನಾಯಿ ಕಾಟದ ಸಂಕಷ್ಟ ಶುರುವಾಗಿದೆ. ಲಾಲ್ ಬಾಗ್​ನಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಸಸ್ಯಕಾಶಿಯ ಸೌಂದರ್ಯ ಸವಿಯಲು ಬರುವ ಪ್ರವಾಸಿಗರಿಗೆ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಎಲ್ಲೆಂದರಲ್ಲಿ ಬೀದಿನಾಯಿಗಳ ಕಾಟ ಹೆಚ್ಚಾಗುತ್ತಿರುವುದರಿಂದ ಮಕ್ಕಳು, ವಯೋವೃದ್ಧರು ಓಡಾಡಲು ಭಯ ಪಡುವಂತಾಗಿದೆ. ಇತ್ತ ಕಲ್ಲಿನ ಬಂಡೆ, ಗಾಜಿನ ಮನೆ ಎಲ್ಲಾ ಕಡೆ ಶ್ವಾನ ಪಡೆ ಬೀಡು ಬಿಟ್ಟಿದ್ದರೂ ಅವುಗಳನ್ನು ಸ್ಥಳಾಂತರ ಮಾಡದ ಪಾಲಿಕೆ ಹಾಗೂ ತೋಟಗಾರಿಕೆ ಇಲಾಖೆ ನಡೆಗೆ ಜನಸಾಮಾನ್ಯರು ಬೇಸರ ಹೊರಹಾಕಿದ್ದಾರೆ.

ಇದನ್ನೂ ಓದಿ
ಕರ್ನಾಟಕದಲ್ಲಿ ಭಾರಿ ಮಳೆ: ರಾಜ್ಯದ 4 ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ
ಸೊಲ್ಲಾಪುರ-ಮಂಗಳೂರು ಸಂಪರ್ಕಿಸುವ ರಾ.ಹೆ ಬಂದ್​: ಬದಲಿ ಮಾರ್ಗ ಇಲ್ಲಿದೆ
ಅಪಾರ್ಟಮೆಂಟ್, ಕಂಪನಿಗಳಿಗೆ ತಾನು ಬೆಳೆದ ಮಾವು ರುಚಿ ಹಚ್ಚಿಸಿದ ರೈತ
ಬೆಂಗಳೂರು: ಹಲ್ಲೆ ಮಾಡಲು ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್​ ಗುಂಡೇಟು

ಇದನ್ನೂ ಓದಿ: ಹಲ್ಲೆ ಮಾಡಲು ಮುಂದಾದ ಕೊಲೆ ಆರೋಪಿಗಳ ಕಾಲಿಗೆ ಪೊಲೀಸ್​ ಗುಂಡೇಟು, ಬಂಧನ

ಒಟ್ಟಿನಲ್ಲಿ ಬೆಂಗಳೂರಿಗೆ ಲಾಲ್ ಬಾಗ್ ಆಕ್ಸಿಜನ್ ಪ್ಲಾಂಟ್ ಎಂಬಂತೆ ಇದ್ದು, ಅಪಾರ ಸಸ್ಯ ಸಂಪತ್ತು ಹಾಗೂ ಪಕ್ಷಿ ಸಂಪತ್ತು ಹೊಂದಿದೆ. ಒಂದೆಡೆ ಇ ಸ್ಕೂಟರ್ ಮೂಲಕ ಬೃಹತ್ ಉದ್ಯಾನವನ ಸುತ್ತಲು ವ್ಯವಸ್ಥೆ ಮಾಡಿಕೊಡಲಾಗುತ್ತಿದ್ದರೆ, ಮತ್ತೊಂದೆಡೆ ಬೀದಿ ನಾಯಿಗಳ ಉಪಟಳ ಜನರಿಗೆ ತಲೆ ನೋವು ತಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ