Lalbagh Flower Show 2023: ನಾಳೆಯಿಂದ ಸಸ್ಯಕಾಶಿ ಲಾಲ್ ಬಾಗ್​ನಲ್ಲಿ ಫ್ಲವರ್ ಶೋ, ಈ ಬಾರಿ ಏನೆಲ್ಲ ವಿಶೇಷ? ಇಲ್ಲಿದೆ ವಿವರ

ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ನಾಳೆ ಸಂಜೆ 6 ಗಂಟೆಗೆ ಸಿಎಂ‌ ಸಿದ್ದರಾಮಯ್ಯನವರು ಲಾಲ್ ಬಾಗ್ ಶೋ ಉದ್ಘಾಟಿಸಲಿದ್ದಾರೆ.

Lalbagh Flower Show 2023: ನಾಳೆಯಿಂದ ಸಸ್ಯಕಾಶಿ ಲಾಲ್ ಬಾಗ್​ನಲ್ಲಿ ಫ್ಲವರ್ ಶೋ, ಈ ಬಾರಿ ಏನೆಲ್ಲ ವಿಶೇಷ? ಇಲ್ಲಿದೆ ವಿವರ
ಫಲಪುಷ್ಪ ಪ್ರದರ್ಶನ (ಸಂಗ್ರಹ ಚಿತ್ರ)
Follow us
| Edited By: Ayesha Banu

Updated on: Aug 03, 2023 | 10:00 AM

ಬೆಂಗಳೂರು, ಆ.03: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತವಾಗಿ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಆಯೋಜಿಸಲಾಗಿರುವ 214ನೇ ಫ್ಲವರ್ ಶೋ ನಾಳೆಯಿಂದ ಆರಂಭವಾಗಲಿದೆ(Lalbagh Flower Show 2023). ನಾಳೆ ಸಂಜೆ 6 ಗಂಟೆಗೆ ಸಿಎಂ‌ ಸಿದ್ದರಾಮಯ್ಯನವರು(Siddaramaiah) ಲಾಲ್ ಬಾಗ್ ಶೋ ಉದ್ಘಾಟಿಸಲಿದ್ದಾರೆ. ಆ.4ರಿಂದ ಶುರುವಾಗಿ ಆಗಸ್ಟ್ 15ರ ವರೆಗೆ ಫ್ಲವರ್ ಶೋ ನಡೆಯಲಿದೆ. ಜನರಿಗೆ ಯಾವುದೇ ಸಮಸ್ಯೆಗಳಗಾದಂತೆ ಬಿಗಿ ಬಂದೋ ಬಸ್ತ್ ಮಾಡಲು ತೋಟಾಗಾರಿಕೆ ಇಲಾಖೆ ನಿರ್ಧರಿಸಿದೆ.

ಸಸ್ಯಕಾಶಿ ಲಾಲ್ ಬಾಗ್​ನಲ್ಲಿ 76 ನೇ ಸ್ವತಂತ್ರ ಮಹೋತ್ಸವದ ಹಿನ್ನೆಲೆಯಲ್ಲಿ 214 ನೇ ಫ್ಲವರ್ ಶೋ ಆಯೋಜನೆ ಮಾಡಲಾಗಿದೆ.‌ ವಿಧಾನಸೌಧ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರ ಪರಿಕಲ್ಪನೆಯಲ್ಲಿ ಈ ವರ್ಷದ ಫ್ಲವರ್ ಶೋ ಮೂಡಿ ಬರುತ್ತಿದೆ. ಇನ್ನು ಬರೋಬ್ಬರಿ 2 ಕೋಟಿ ಖರ್ಚುಮಾಡುತ್ತಿದ್ದು, 69 ಬಗೆಯ ಹೂಗಳು ಈ ಬಾರಿ ಫ್ಲವರ್ ಶೋ ಅಂದವನ್ನ ಹೆಚ್ಚಿಸಲಿವೆ. ಈ ವರ್ಷ 10 ರಿಂದ 12 ಲಕ್ಷದಷ್ಟು ಜನರು ಬರುವ ಸಾಧ್ಯತೆ ಇದೆ. ಫಲಪುಷ್ಪ ಪ್ರದರ್ಶನದಲ್ಲಿ ಹಲವು ಕಲೆಗಳ ಸಾರುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಒಟ್ಟು 10 ದಿನಗಳ ಕಾಲ ಫ್ಲವರ್ ಶೋ ಇರಲಿದೆ.

200 ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ

ಫ್ಲವರ್ ಶೋಗೆ ಶಾಲಾ ಮಕ್ಕಳಿಗೆ ಫ್ರೀ ಇರಲಿದ್ದು, ಶಾಲಾ ಮಕ್ಕಳಿಗೆ ಕಾಂಫಿಟೇಷನ್ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಟ್ರಾಫಿಕ್ ಸಮಸ್ಯೆಯಾಗದಂತೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ಆದಷ್ಟು ಜನರು ಮೆಟ್ರೋ ಹಾಗೂ ಬಿಎಂಟಿಸಿ ಬಸ್ಸುಗಳಿಂದಲೇ ಬಂದರೆ ಟ್ರಾಫಿಕ್ ಕಡಿಮೆಯಾಗಲಿದೆ ಎಂದು ತೋಟಗಾರಿಕೆ ಇಲಾಖೆ ಮನವಿ ಮಾಡಿದೆ. ಜನರಿಗೆ ಅನುಕೂಲವಾಗುವ ನಿಟ್ಟಿನಿಂದ ಒಟ್ಟು ನಾಲ್ಕೂ ಗೇಟ್ ಗಳಲ್ಲಿ ಜನರಿಗೆ ಎಂಟ್ರಿಗೆ ಅವಕಾಶ ನೀಡಲಾಗಿದೆ. ಫ್ಲವರ್ ಶೋ ಬರುವವರಿಗೆ ಎಂಟ್ರಿ ಫೀಜ್ ದೊಡ್ಡವರಿಗೆ 70 ರೂ ಹಾಗೂ ಮಕ್ಕಳಿಗೆ 30 ರುಪಾಯಿ ನಿಗದಿ ಮಾಡಿದ್ದು, 200 ಸಿಸಿ ಟಿವಿ ಕ್ಯಾಮರಾಗಳನ್ನ ಅಳವಡಿಕೆ ಮಾಡಲಾಗಿದೆ. ಇದನ್ನೂ ಓದಿ: Lalbagh Botanical Garden: ಲಾಲ್​ಬಾಗ್ ವಿಶ್ವ ಪ್ರಸಿದ್ದ ಉದ್ಯಾನವನವಾಗಿದ್ದು ಹೇಗೆ? ಲಾಲ್​ಬಾಗ್​ನಲ್ಲಿ ಪ್ಲವರ್​ ಶೋ ಆರಂಭವಾಗಿದ್ದು ಯಾವಾಗ?

ಅಲ್ಲದೇ ಲಾಲ್ ಬಾಗ್ ನಲ್ಲಿರುವ ನಾಯಿಗಳಿಂದ ಜನರಿಂದ ಸಮಸ್ಯೆಯಾಗಬರಾದು ಎನ್ನುವ ಕಾರಣಕ್ಕೆ ನಾಯಿಗಳಿಗೆ ವ್ಯಾಕ್ಸಿನ್ ಸಹ ಮಾಡಿಸಿದ್ದು, ಪ್ಲವರ್ ಶೋ ನಡೆಯುವ 10 ದಿನಗಳ‌ ಕಾಲ ಪ್ರತಿದಿನ 30 ಜನ ಪೋಲಿಸರು ಹಾಗೂ 200 ಜನ ತೋಟಗಾರಿಕಾ ಸಿಬ್ಬಂದಿಯನ್ನ ನೇಮಿಸಲಾಗಿದೆ. ಇನ್ನು ಯಾರಿಗೂ ಏನೂ ಸಮಸ್ಯೆಯಾಗದಂತೆ ಹೆಲ್ತ್ ಕೇರ್ ಸೆಂಟರ್, ಎರಡು ಅಂಬುಲೆನ್ಸ್, ಮಹಿಳೆಯರ ಶಿಬಿರಗಳನ್ನ ಸಹ ಮಾಡಲಾಗಿದೆ.

ಈ ಬಾರಿಯ ಪ್ರದರ್ಶನದಲ್ಲಿ ಸ್ವದೇಶಿ ಹೂಗಳಿಗೆ ಹೆಚ್ಚಿನ ಪ್ರಮುಖ್ಯತೆ ನೀಡಲಾಗುತ್ತಿದ್ದು, ಈಗಾಗಲೇ 7 ಲಕ್ಷದಷ್ಟು ಹೂಗಳನ್ನ ಲಾಲ್ ಬಾಗ್ ನಾ ನರ್ಸರಿಯಲ್ಲಿ ಬೆಳೆಸಲಾಗಿದೆ.‌ ಫ್ಲವರ್ ಶೋ ಗೆ ಅಂದಾಜು 13 ರಿಂದ 15 ಲಕ್ಷದಷ್ಟು ಹೂಗಳು ಬೇಕಾಗುವ ಸಾಧ್ಯತೆ ಇದ್ದು, ಇನ್ನು ಉಳಿದ 8 ಲಕ್ಷದಷ್ಟು ಹೂಗಳನ್ನ ನಮ್ಮ ರಾಜ್ಯ ಸೇರಿದಂತೆ ತಮಿಳುನಾಡು, ಆಂಧ್ರ ಪ್ರದೇಶ, ಊಟಿ, ನಂದಿಗಿರಿಧಾಮ, ಕೆಮ್ಮಣ್ಣುಗುಂಡಿ ಗಿರಿಧಾಮಗಳಿಂದ ಹೂಗಳನ್ನ ತರಿಸಿಕೊಳ್ಳಲಾಗಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಅಧಿಕಾರಿಯೊಬ್ಬರ ವಿರುದ್ಧ ರೌಡಿಯಂತೆ ವರ್ತಿಸೋದು ಶಾಸಕ  ಹರೀಶ್ ಗೆ ಶೋಭೆಯಲ್ಲ!
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಇಂದು ಸುಪ್ರೀಂ ಕೋರ್ಟ್ ತೀರ್ಪು ನೇರ ಪ್ರಸಾರ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಡೇಂಜರಸ್ ಪಿಚ್: ಅರ್ಧಕ್ಕೆ ನಿಂತ ಬಿಗ್ ಬ್ಯಾಷ್ 2023ರ ಹೈವೋಲ್ಟೇಜ್ ಪಂದ್ಯ
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಅಧಿಕಾರಿಗೆ ಅವಾಚ್ಯ ಶಬ್ದಗಳಿಂದ ಬೈಯ್ಯುವ ಬಿಜೆಪಿ ಶಾಸಕ ಹರೀಶ್ ವಿಡಿಯೋ ವೈರಲ್
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ಪ್ರತಾಪ್ ಪರಿಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಕಾಡಿದ್ದು ವರ್ತೂರಿಗೆ ಮಾತ್ರ​
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ತುಕಾಲಿಯ ಡ್ಯಾನ್ಸ್​ ನೋಡಿ ಬೆಚ್ಚಿ ಬಿದ್ದ ಮನೆ ಮಂದಿ
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಕಾಮಸಮುದ್ರ ಅರಣ್ಯದತ್ತ ಆಗಮಿಸಿದ 50ಕ್ಕೂ ಹೆಚ್ಚು ಕಾಡಾನೆಗಳು
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಬಸವಣ್ಣನ ವಚನ ಹೇಳಿ ನೆರೆದವರಿಗೆ ಶಾಕ್ ನೀಡಿದ ಪೂಜಾ ಗಾಂಧಿ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರುಳಿ‌ನ ಕುಡಿ ರಕ್ಷಣೆಗೆ ತಾಯಿ ಆಕಳು ಹೋರಾಟ; ಇಲ್ಲಿದೆ ಮನಕಲುಕುವ ದೃಶ್ಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ
ಕರಿಬಸವೇಶ್ವರ ಜಾತ್ರೆಯಲ್ಲಿದೆ ವಿಶೇಷ; ಮಹಿಳೆಯರೇ ರಥ ಎಳೆಯುವ ಸಂಪ್ರದಾಯ