ಲಾಲ್‌ಬಾಗ್‌ನಲ್ಲಿ ಟನಲ್ ರಸ್ತೆ ನಿರ್ಮಿಸಲ್ಲ, ಕೊಟ್ಟ ಮಾತಿಗೆ ಬದ್ಧ: ಟೋಲ್ ದರ ಹೆಚ್ಚಿಸಲ್ಲ; ಸಚಿವ ಕೃಷ್ಣ ಬೈರೇಗೌಡ ಮಹತ್ವದ ಘೋಷಣೆ

ಬೆಂಗಳೂರಿನ ಲಾಲ್‌ಬಾಗ್ ಸುರಂಗ ರಸ್ತೆ ನಿರ್ಮಾಣ ಕುರಿತ ಆತಂಕಗಳಿಗೆ ತೆರೆ ಬಿದ್ದಿದೆ. ಉದ್ಯಾನವನದ ಮೂಲಕ ರಸ್ತೆ ನಿರ್ಮಿಸುವುದಿಲ್ಲ ಎಂದು ಸಚಿವ ಕೃಷ್ಣ ಬೈರೇಗೌಡ ಘೋಷಿಸಿದ್ದಾರೆ. ಪರಿಸರ ಪ್ರೇಮಿಗಳ ಹೋರಾಟದ ಫಲವಾಗಿ, ಸುರಂಗ ರಸ್ತೆ ಮಾರ್ಗವನ್ನು ಲಾಲ್‌ಬಾಗ್ ಹೊರಭಾಗಕ್ಕೆ ಬದಲಾಯಿಸಲು ನಿರ್ಧರಿಸಲಾಗಿದೆ. ಯೋಜನೆ ವೆಚ್ಚ ಹೆಚ್ಚಾದರೂ, ಟೋಲ್ ದರ ಏರುವುದಿಲ್ಲ ಎಂದು ಸರ್ಕಾರ ಭರವಸೆ ನೀಡಿದೆ. ಪರ್ಯಾಯ ಮಾರ್ಗಗಳಿಗಾಗಿ ಸಮೀಕ್ಷೆ ನಡೆಯುತ್ತಿದೆ.

ಲಾಲ್‌ಬಾಗ್‌ನಲ್ಲಿ ಟನಲ್ ರಸ್ತೆ ನಿರ್ಮಿಸಲ್ಲ, ಕೊಟ್ಟ ಮಾತಿಗೆ ಬದ್ಧ: ಟೋಲ್ ದರ ಹೆಚ್ಚಿಸಲ್ಲ; ಸಚಿವ ಕೃಷ್ಣ ಬೈರೇಗೌಡ ಮಹತ್ವದ ಘೋಷಣೆ
ಸಾಂದರ್ಭಿಕ ಚಿತ್ರ
Edited By:

Updated on: Nov 25, 2026 | 2:56 PM

ಬೆಂಗಳೂರು, ನ.25: ನಗರದ ಲಾಲ್‌ಬಾಗ್‌ನಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡುವ ಬಗ್ಗೆ ಭಾರೀ ಚರ್ಚೆಗಳು ಹಾಗೂ ಹೋರಾಟಗಳು ನಡೆದಿತ್ತು. ಸಂಸದ ತೇಜಸ್ವಿ ಸೂರ್ಯ ಅವರು ಕೂಡ ಈ ಬಗ್ಗೆ ಒಂದು ಅಭಿಯಾನವನ್ನು ಕೂಡ ಮಾಡಿದರು. ಪರಿಸರ ಪ್ರೇಮಿಗಳು ಕೂಡ ಈ ಬಗ್ಗೆ ವಿರೋದ ವ್ಯಕ್ತಪಡಿಸಿದರು. ಆದರೆ ಇದೀಗ ಸಚಿವ ಕೃಷ್ಣ ಬೈರೇಗೌಡ ಮಹತ್ವದ ಘೋಷಣೆಯನ್ನು ಮಾಡಿದ್ದಾರೆ. ಇದೀಗ ಬೆಂಗಳೂರಿನ ಐತಿಹಾಸಿಕ ಲಾಲ್‌ಬಾಗ್ ಉದ್ಯಾನವನದಲ್ಲಿ ಟನಲ್ ರಸ್ತೆ ನಿರ್ಮಾಣ ಮಾಡಲಾಗುತ್ತದೆ ಎಂಬ ಆತಂಕಗಳಿಗೆ ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತೆರೆ ಎಳೆದಿದ್ದಾರೆ.

ಅಲೈನ್‌ಮೆಂಟ್ ಬದಲಾವಣೆಗೆ ಸರ್ವೆ; ಪರ್ಯಾಯ 2 ರಸ್ತೆಗಳ ಹುಡುಕಾಟ

ಲಾಲ್‌ಬಾಗ್ ಹೊರಭಾಗದಲ್ಲಿ ಟನಲ್ ರಸ್ತೆ ನಿರ್ಮಿಸಲು ಅಲೈನ್‌ಮೆಂಟ್ (ಮಾರ್ಗ ವಿನ್ಯಾಸ) ಬದಲಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಸ್ತುತ ಸಮೀಕ್ಷೆ (ಸರ್ವೆ) ನಡೆಯುತ್ತಿದ್ದು, ಪರ್ಯಾಯ ಎರಡು ರಸ್ತೆಗಳ ಹುಡುಕಾಟದಲ್ಲಿ ಸರ್ಕಾರ ತೊಡಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಲಾಲ್‌ಬಾಗ್ ಹೊರಭಾಗದಲ್ಲಿ ಟನಲ್ ರಸ್ತೆ ನಿರ್ಮಿಸಲು ಅಲೈನ್‌ಮೆಂಟ್ (ಮಾರ್ಗ ವಿನ್ಯಾಸ) ಬದಲಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರಸ್ತುತ ಸಮೀಕ್ಷೆ (ಸರ್ವೆ) ನಡೆಯುತ್ತಿದ್ದು, ಪರ್ಯಾಯ ಎರಡು ರಸ್ತೆಗಳ ಹುಡುಕಾಟದಲ್ಲಿ ಸರ್ಕಾರ ತೊಡಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Loading...

ಇದನ್ನೂ ಓದಿ: ವಿನಯ್ ಕುಲಕರ್ಣಿ ಜಾಮೀನು ರದ್ದು: ಸುಪ್ರೀಂ ಕೋರ್ಟ್ ತೀರ್ಪಿಗೆ ಯೋಗೀಶ್ ಗೌಡ ಸಹೋದರ ಗುರುನಾಥ್‌ ಗೌಡ ಹರ್ಷ

ವೆಚ್ಚ, ಅವಧಿ ಹೆಚ್ಚಾದರೂ ಟೋಲ್ ದರ ಏರಿಕೆ ಇಲ್ಲ

ಅಲೈನ್‌ಮೆಂಟ್ ಬದಲಾವಣೆಯಾಗುವುದರಿಂದ ಯೋಜನೆಯ ವೆಚ್ಚ (ದರ) ಹೆಚ್ಚಾಗಬಹುದು ಮತ್ತು ನಿರ್ಮಾಣದ ಅವಧಿಯೂ ಸ್ವಲ್ಪ ಹೆಚ್ಚಾಗಬಹುದು. ಆದರೆ ಹೆಚ್ಚುವರಿ ವೆಚ್ಚವನ್ನು ಸರ್ಕಾರವೇ ಭರಿಸಲಿದ್ದು, ಯಾವುದೇ ಕಾರಣಕ್ಕೂ ಸಾರ್ವಜನಿಕರ ಮೇಲೆ ಟೋಲ್ ದರ ಹೆಚ್ಚಿಸುವುದಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಯೋಜನೆಯ ವೆಚ್ಚವನ್ನು ಸಾಧ್ಯವಾದಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ ಗುತ್ತಿಗೆದಾರರ (ಕಂಟ್ರಾಕ್ಟರ್) ಜೊತೆ ಮಾತುಕತೆ (ನೆಗೋಶಿಯೇಟ್) ನಡೆಸುವಂತೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ (CS) ಸೂಚಿಸಲಾಗಿದೆ. ಅಲ್ಲದೆ, ಈ ಟನಲ್ ರಸ್ತೆ ಯೋಜನೆಗಾಗಿ ಸರ್ಕಾರದಿಂದ ₹7 ಸಾವಿರ ಕೋಟಿ ಅನುದಾನ ನೀಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅರುಣ್ ಕುಮಾರ್​ ಆರ್​.

ಅರುಣ್ ಕುಮಾರ್ ಆರ್. ಬೆಂಗಳೂರಿನ ಜ್ಞಾನಭಾರತಿ ವಿವಿಯಲ್ಲಿ ಸಮೂಹ ಸಂವಹನ ಹಾಗೂ ತಂತ್ರಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಟಿವಿ9 ಕನ್ನಡದಲ್ಲಿ ಮೆಟ್ರೋ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಜಿಬಿಎ ಹಾಗೂ ನಗರದ ಅಭಿವೃದ್ಧಿ ಕ್ಷೇತ್ರದಲ್ಲಿ ಒಂದು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವ ಇವರು, ಒಟ್ಟು 2 ವರ್ಷಗಳ ವರದಿಗಾರಿಕೆ ಅನುಭವದೊಂದಿಗೆ ಜನೋಪಯೋಗಿ ವಿಷಯಗಳ ಕುರಿತು ವರದಿ ಮಾಡುತ್ತಿದ್ದಾರೆ.

Read More
Loading...
Unable to load recommendations.
Follow Us