ನೀವು ಇಲ್ಲಿ ಭಿಕ್ಷೆ ಬೇಡಲು ಬಂದಿದ್ದೀರಿ: ಅನ್ಯಭಾಷಿಕರ ಕುರಿತು ಆಟೋ ಹಿಂದೆ ಬರೆದ ಸಾಲು ವೈರಲ್​

|

Updated on: Jul 24, 2023 | 2:07 PM

ಕರ್ನಾಟಕದಲ್ಲಿ ನೆಲೆಸಿ ಕನ್ನಡ ಕಲಿಯದ ಅನ್ಯಭಾಷಿಕರಿಗೆ ಆಟೋದ ಹಿಂದೆ ಬರೆದಂತ ಸಾಲುಗಳು ಎದೆಗೆ ನಾಟುವಂತಿದೆ. ಸದ್ಯ ಈ ಸಾಲುಗಳು ಸಾಮಾಜಿ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ.

ನೀವು ಇಲ್ಲಿ ಭಿಕ್ಷೆ ಬೇಡಲು ಬಂದಿದ್ದೀರಿ: ಅನ್ಯಭಾಷಿಕರ ಕುರಿತು ಆಟೋ ಹಿಂದೆ ಬರೆದ ಸಾಲು ವೈರಲ್​
ವೈರಲ್​ ಆದ ಫೋಟೋ
Follow us on

ಬೆಂಗಳೂರು: ಅಂತರಾಜ್ಯದಿಂದ ಬಂದು ಕರ್ನಾಟಕದಲ್ಲಿ (Karnataka) ನೆಲೆಸಿ ಬಹಳ ದಿವಸಗಳೇ ಕಳೆದರೂ ಕೆಲವರು ಇನ್ನೂ ಕನ್ನಡ (Kannada) ಕಲಿತಿರುವುದಿಲ್ಲ. ಕನ್ನಡದಲ್ಲಿ ಮಾತನಾಡಿಸಲು ಹೋದರೇ ನನಗೆ ಕನ್ನಡ ಬರಲ್ಲ ಎಂಬ ಮೂರು ಶಬ್ಧಗಳನ್ನು ಮಾತ್ರ ಕಲಿತಿರುತ್ತಾರೆ. ಹೀಗೆ ಕನ್ನಡ ಕಲಿಯದವರಿಗೆ ಆಟೋದ ಹಿಂದೆ ಬರೆದಂತ ಸಾಲುಗಳು ಎದೆಗೆ ನಾಟುವಂತಿದೆ. ಸದ್ಯ ಈ ಸಾಲುಗಳು ಸಾಮಾಜಿ ಜಾಲತಾಣದಲ್ಲಿ (Social Media) ವೈರಲ್​ ಆಗುತ್ತಿದೆ.

ಬೆಂಗಳೂರಿನ ಆಟೋ ಒಂದರ ಹಿಂದುಗಡೆ “You are in Karnataka, learn Kannada. Don’t show your attitude, you f*******. You have come to beg here.” ನೀನು ಕರ್ನಾಟಕದಲ್ಲಿರುವೆ. ಕನ್ನಡ ಕಲಿ. ಅಹಂಕಾರ ತೋರಿಸಬೇಕಡ. ನೀನು ಇಲ್ಲಿಗೆ ಭಿಕ್ಷೆ ಬೇಡಲು ಬಂದಿದ್ದೀಯಾ ಎಂದು ಆಟೋದ ಹಿಂದೆ ಕಂಡು ಬಂದ ಸಾಲುಗಳನ್ನು.

ಆಟೋದ ಹಿಂದೆ ಬರೆದ ಸಾಲುಗಳನ್ನು ರೋಷನ್​ ರೈ ಎಂಬುವರು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಹೊರಗಿನಿಂದ ಬಂದವರನ್ನು ಇಷ್ಟೊಂದು ತುಚ್ಚವಾಗಿ ಕಾಣುವುದು ಸರಿಯಲ್ಲ. ಈ ರೀತಿಯಾದ ಅತಿ ಕೆಟ್ಟ ಭಾಷೆಯನ್ನು ಬಳಸುವುದು ಸರಿಯಲ್ಲ. ನಮ್ಮನ್ನು ಕೀಳಾಗಿ ನೋಡುವುದು ಸರಿಯಲ್ಲ ಎಂದು ರೋಷನ್​ ರೈ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಚಿಕ್ಕಬಾಣಾವರ ರೈಲ್ವೆ ಕೆಳಸೇತುವೆ ದುರಸ್ತಿ: ಹೆಸರಘಟ್ಟ-ಬಾಗಲಗುಂಟೆ, ಜಾಲಹಳ್ಳಿ ಕ್ರಾಸ್​​ ಮಾರ್ಗದಲ್ಲಿ ​ಸಂಚಾರ ನಿರ್ಬಂಧ

ಸಾಮಾಜಿಕ ಜಾಲತಾಣದಲ್ಲಿ ಈ ಫೋಟೋ ವೈರಲ್​ ಆಗುತ್ತಿದ್ದಂತೆ, ಅನೇಕರು ಕಾಮೆಂಟ್​ ಮಾಡಿದ್ದಾರೆ. ಓರ್ವರು ಇದು ಸ್ವೀಕಾರಾರ್ಹವಲ್ಲ. ಇನ್ನೊಬ್ಬರು ನೋಂದಣಿ ಸಂಖ್ಯೆ ಸಮೇತ ಭಾವಚಿತ್ರ ತೆಗೆಯಬೇಕಿತ್ತು ಎಂದು ಕಾಮೆಂಟ್​ ಮಾಡಿದ್ದಾರೆ.

“ಇದು ಖಂಡಿತವಾಗಿಯೂ ಫೋಟೋಶಾಪ್ ಚಿತ್ರ” ಎಂದು ಮೂರನೇದವರು ಹೇಳಿದ್ದಾರೆ. ‘ಒಬ್ಬ ವ್ಯಕ್ತಿಯ ಆಲೋಚನೆ ಇಡೀ ಕರ್ನಾಟಕದ ಜನರ ಆಲೋಚನೆ ಎಂದು ತುಳಿಯಬಾರದು’ ಮತ್ತೊಬ್ಬರು ಕಾಮೆಂಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 2:07 pm, Mon, 24 July 23