AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದೇಶದಲ್ಲಿ ತಲೆಮರಿಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಗರ್ಲ್​ ಫ್ರೆಂಡ್ ಪತ್ತೆ ಹಚ್ಚಿ ಸಿಸಿಬಿ ಪೊಲೀಸರು

ವಿದೇಶದಲ್ಲಿ ತಲೆಮರಿಸಿಕೊಂಡಿರುವ ಶಂಕಿತ ಉಗ್ರ ಜುನೈದ್​ನ ಗರ್ಲ್​ ಫ್ರೆಂಡ್ ಇರುವುದನ್ನು ಸಿಸಿಬಿ ಅಧಿಕಾರಿಗಳು ಪತ್ತೆ ಮಾಡಿ ಮಾಹಿತಿ ಕಲೆಹಾಕಿದ್ದಾರೆ. ಅಲ್ಲದೇ ಜುನೈದ್​ ತಲೆಮರಿಸಿಕೊಂಡಿರುವ ಸ್ಥಳವನ್ನು ಸಹ ತನಿಖಾ ತಂಡ ಪತ್ತೆ ಹಚ್ಚಿದೆ.

ವಿದೇಶದಲ್ಲಿ ತಲೆಮರಿಸಿಕೊಂಡಿರುವ ಶಂಕಿತ ಉಗ್ರ ಜುನೈದ್ ಗರ್ಲ್​ ಫ್ರೆಂಡ್  ಪತ್ತೆ ಹಚ್ಚಿ ಸಿಸಿಬಿ ಪೊಲೀಸರು
ಸಿಸಿಬಿ ಕಚೇರಿ
ಪ್ರಜ್ವಲ್​ ಕುಮಾರ್ ಎನ್​ ವೈ
| Updated By: ರಮೇಶ್ ಬಿ. ಜವಳಗೇರಾ|

Updated on: Jul 24, 2023 | 3:09 PM

Share

ಬೆಂಗಳೂರು, (ಜುಲೈ 24): ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ (suspected terrorists) ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ(CCB) ಪೊಲೀಸರು ತೀವ್ರ ತನಿಖೆ ನಡೆಸಿದ್ದಾರೆ. ಅದರಲ್ಲೂ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜುನೈದ್​ ಪತ್ತೆಗೆ ತನಿಖಾ ತಂಡ ಮಾಹಿತಿ ಕಲೆಹಾಕುತ್ತಿದ್ದು, ಈ ವೇಳೆ ಬೆಂಗಳೂರಿನಲ್ಲಿ ಜುನೈದ್​ಗೆ ಗರ್ಲ್​ ಫ್ರೆಂಡ್ ಇರುವ ಅಂಶ ಬೆಳಕಿಗೆ ಬಂದಿದೆ. ಅಲ್ಲದೇ ಆಕೆಯನ್ನು ಪತ್ತೆ ಮಾಡಿ ಮಾಹಿತಿ ಕಲೆಹಾಕಿದ್ದು, ಜುನೈದ್​ ಇರುವ ಸ್ಥಳದ ಮಾಹಿತಿ ಸಹ ಸಿಸಿಬಿ ಪೊಲೀಸರಿಗೆ ಗೊತ್ತಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಐವರು ಶಂಕಿತ ಉಗ್ರರ ಬಂಧನ ಕೇಸ್: ಪ್ರಮುಖ ಆರೋಪಿ ಪತ್ತೆಗೆ ಲುಕ್​​ಔಟ್​ ನೋಟಿಸ್​​ ಜಾರಿಗೆ ಸಿದ್ಧತೆ 

ಜುನೈದ್ 2021ರಲ್ಲಿ ಬೆಂಗಳೂರು ಬಿಟ್ಟ ವಿದೇಶದಲ್ಲಿ ತಲೆಮರಿಸಿಕೊಂಡಿದ್ದಾನೆ. ಆದರೂ ಬೆಂಗಳೂರಿನಲ್ಲಿರುವ ತನ್ನ ಗರ್ಲ್​ ಫ್ರೆಂಡ್​ ಜೊತೆ ನಿರಂತರ ಸಂಪರ್ಕದಲ್ಲಿದ್ದ. ಆದ್ರೆ, ಶಂಕಿತ ಉಗ್ರರು ಸಿಕ್ಕ ಬಳಿಕ ಆಕೆಯೊಂದಿಗಿನ ಸಂಪರ್ಕ ಕಡತಗೊಳಿಸಿದ್ದಾನೆ ಎಂದು ತಿಳಿದುಬಂದಿದೆ. ಇನ್ನು ಸಿಸಿಬಿ ತನಿಖಾ ತಂಡ ಜುನೈದ್​ ಗರ್ಲ್​ ಫ್ರೆಂಡ್​ ಬಳಿ ಮಾಹಿತಿ ಕಲೆಹಾಕಿದ್ದು, ಯುವತಿಗೆ ಜುನೈದ್ ಟೆರರ್ ಆ್ಯಕ್ಟಿವಿಟಿ ಬಗ್ಗೆ ಮಾಹಿತಿ ಇಲ್ಲ. ಆದ್ರೆ, ಈ ಹಿಂದೆ ಅಕೆಯ ಜೊತೆಗೆ ಜುನೈದ್ ಹೇಗಿದ್ದ? ವರ್ತನೆಗಳು ಹೇಗಿದ್ದವು ಅಂತೆಲ್ಲ ಸಿಸಿಬಿ ಅಧಿಕಾರಿಗಳಿಗೆ ಯುವತಿ ಮಾಹಿತಿ ನೀಡಿದ್ದಾಳೆ.

ಜುನೈದ್ ಇರುವ ಸ್ಥಳ ಪತ್ತೆ

ಸಿಸಿಬಿ ತನಿಖೆ ವೇಳೆ ಜುನೈದ್ ತನ್ನ ಒರಿಜಿನಲ್ ಪಾಸ್ ಪೋರ್ಟ್ ಮೂಲಕ ಪ್ರಯಾಣ ಮಾಡಿರುವುದು ಬೆಳಕಿಗೆ ಬಂದಿದೆ. 2017ರ ಕೊಲೆ ಕೇಸ್ ದಾಖಲಾಗುವ ಮೊದಲೇ ಪಾಸ್ ಪೋರ್ಟ್ ಹೊಂದಿದ್ದ. ಆದ್ರೆ ಕೇಸ್ ನಲ್ಲಿ ಯಾವ ಅಂತಾರಾಷ್ಟ್ರೀಯ ಲಿಂಕ್ ಇಲ್ಲದ ಕಾರಣ ಪಾಸ್ ಪೋರ್ಟ್ ಸೀಜ್ ಮಾಡಿರಲಿಲ್ಲ. ನಂತರ ದುಬೈ ವೀಸಾ ಪಡೆದು ಹೋಗಿದ್ದ. ಬಳಿಕ ದುಬೈ ನಿಂದ ಮಿಡಲ್ ಈಸ್ಟ್ ನಲ್ಲಿಯೇ ಇರುವ ಅಝರ್​ಬೈಜಾನ್​ ದೇಶದ ಬಾಕು ಎಂಬ ನಗರದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದ್ದು, ಸದ್ಯ ಇಂಟರ್ ಪೋಲ್ ಮೂಲದ ಜುನೈದ್ ಪತ್ತೆಮಾಡಲು ಸಿಸಿಬಿ ಪ್ರಯತ್ನಿಸುತ್ತಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ