ಬೆಂಗಳೂರಿನ ಹೊರವರ್ತುಲ ರಸ್ತೆ ಗುಂಡಿ ಮುಚ್ಚಿದ ಟ್ರಾಫಿಕ್ ಪೊಲೀಸ್; ಸಾಮಾಜಿಕ ಜಾಲತಾಣದಲ್ಲಿ ಬಿಬಿಎಂಪಿ ವಿರುದ್ಧ ಟೀಕೆ
ಹೊರವರ್ತುಲ ರಸ್ತೆಯ ಬೆಳ್ಳಂದೂರು ಜಂಕ್ಷನ್ ನಿಂದ ಇಬ್ಬಲೂರು ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಬಿಬಿಎಂಪಿ ಸಿಬ್ಬಂದಿ ಸಹಾಯದಿಂದ ಬೆಳ್ಳಂದೂರು ಟ್ರಾಫಿಕ್ ಪೊಲೀಸರು ಮುಚ್ಚಿದ್ದಾರೆ.
ಬೆಂಗಳೂರು, ಜುಲೈ 23: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಗೇನು(Pothole) ಕಡಿಮೆ ಇಲ್ಲ. ಸದ್ಯ ಸಂಚಾರಿ ಪೊಲೀಸ್(Traffic Police) ಸಿಬ್ಬಂದಿ ಬಿಬಿಎಂಪಿ(BBMP) ಸಿಬ್ಬಂದಿ ಜೊತೆಗೂಡಿ ಕೆಲ ಗುಂಡಿ ಮುಚ್ಚುವ ಕಾರ್ಯ ಮಾಡಿದ್ದು ಜನರ ಮೆಚ್ಚುಗೆಗೆ ಮಾತ್ರವಾಗಿದೆ. ಹೊರವರ್ತುಲ ರಸ್ತೆಯ ಬೆಳ್ಳಂದೂರು ಜಂಕ್ಷನ್‌ನಿಂದ ಇಬ್ಬಲೂರು ಜಂಕ್ಷನ್‌ವರೆಗಿನ ಸರ್ವಿಸ್ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಶನಿವಾರ(ಜು.22) ಬೆಳ್ಳಂದೂರು ಸಂಚಾರಿ ಪೊಲೀಸ್ ಸಿಬ್ಬಂದಿ ಬಿಬಿಎಂಪಿ ಸಿಬ್ಬಂದಿ ಸಹಾಯದೊಂದಿಗೆ ಮುಚ್ಚಿದ್ದಾರೆ.
ಈ ಮೂಲಕ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದರಿಂದ ಕೆಲ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು ಬಳಿಕ ಸುಗಮ ಸಂಚಾರಕ್ಕೆ ಕಾರಣವಾಯಿತು. ಟ್ರಾಫಿಕ್ ಪೊಲೀಸರ ಈ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು ಬಿಬಿಎಂಪಿಗೆ ಭಾರೀ ಟೀಕೆ ವ್ಯಕ್ತವಾಗಿದೆ. ಬಿಬಿಎಂಪಿ ಮಾಡಬೇಕಿದ್ದ ಕೆಲಸವನ್ನು ಪೊಲೀಸರು ಏಕೆ ಮಾಡುತ್ತಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಮ್ಮ ಪೊಲೀಸರಿಗೆ ಹ್ಯಾಟ್ಸ್ ಆಫ್, ಅವರು ಪ್ಲಂಬರ್‌ಗಳು, ಕ್ಲೀನರ್‌ಗಳು, ಕಾರ್ಪೆಂಟರ್ಗಳಾಗಿಯೂ ಸೇವೆಗೆ ಸಿದ್ಧ, ಯಾರದೋ ಬೇಜವಾಬ್ದಾರಿತನ, ಮತ್ಯಾರದ್ದೋ ಜವಾಬ್ದಾರಿಯಾಗಿದೆ. ಬಿಬಿಎಂಪಿ ಈ ಬಗ್ಗೆ ಗಮನಹರಿಸಬೇಕು ಎಂದು ಟ್ವಿಟರ್ ಬಳಕೆದಾರರಾದ ವಿಜಯ್ ಕುಮಾರ್ ಪೋಸ್ಟ್ ಮಾಡಿದ್ದಾರೆ.
ಈ ದಿನ ಹೊರವರ್ತುಲ ರಸ್ತೆಯ ಬೆಳ್ಳಂದೂರು ಜಂಕ್ಷನ್ ನಿಂದ ಇಬ್ಬಲೂರು ಜಂಕ್ಷನ್ ವರೆಗೆ ಸರ್ವಿಸ್ ರಸ್ತೆಯಲ್ಲಿ ಬಿದ್ದಿದ್ದ ಗುಂಡಿಗಳನ್ನು ಬಿ.ಬಿ.ಎಂ.ಪಿ ಸಿಬ್ಬಂದಿಗಳ ಸಹಾಯದಿಂದ ಮುಚ್ಚಿಸಿ ಸಾರ್ವಜನಿಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.@DCPSouthTrBCP @blrcitytraffic @blrcitytraffic @jntcptraffic @CPBlr @jntcptraffic pic.twitter.com/L8plkfNThk
— BELLANDURU TRAFFIC BTP (@bellandurutrfps) July 22, 2023
ಸಾಮಾಜಿಕ ಜಾಲತಾಣಗಳಲ್ಲಿನ ಪೋಸ್ಟ್‌ಗಳು ಬಿಬಿಎಂಪಿಯಲ್ಲಿ ಸದ್ದು ಮಾಡುತ್ತಿವೆ. ಬಿಬಿಎಂಪಿ ಮೇಲೆ ಯಾಕೆ ಈ ರೀತಿಯ ದ್ವೇಷ? ಟ್ರಾಫಿಕ್ ಪೊಲೀಸರು ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಬಿಬಿಎಂಪಿ ಕೆಲಸ ಮಾಡುತ್ತಿದೆ ಎಂದು ಬಿಬಿಎಂಪಿಯ ಇಂಜಿನಿಯರ್ ಇನ್ ಚೀಫ್ ಬಿ ಎಸ್ ಪ್ರಹ್ಲಾದ್ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ