Bengaluru News: ಪೊಲೀಸ್ ಮಾಹಿತಿದಾರರಿಂದಲೇ ವಿದ್ಯಾರ್ಥಿಯಿಂದ ಒಂದೂವರೆ ಲಕ್ಷ ರೂ. ಹಣ ಸುಲಿಗೆ; ಮೂವರು ಅರೆಸ್ಟ್
ಪೊಲೀಸರು ಎಂದು ಹೇಳಿಕೊಂಡು ವಿದ್ಯಾರ್ಥಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಹಣ ಡ್ರಾ ಮಾಡಿಸಿಕೊಂಡು ವಂಚಿಸಿದ್ದಾರೆ. ಅಲ್ಲದೆ ಈ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡೋದಾಗಿ ವಿದ್ಯಾರ್ಥಿಗೆ ಬೆದರಿಸಿದ್ದಾರೆ.
ಬೆಂಗಳೂರು, ಜುಲೈ 24: ನಗರದಲ್ಲಿ ಪೊಲೀಸ್ ಮಾಹಿತಿದಾರರಿಂದಲೇ( Police Informers) ಹಣ ಸುಲಿಗೆ ಮಾಡಲಾಗುತ್ತಿದೆ. ಸಾಕಷ್ಟು ಪ್ರಕರಣಗಳಲ್ಲಿ ಪೊಲೀಸರಿಗೆ ಮಾಹಿತಿ ನೀಡ್ತಿದ್ದ ಆರೋಪಿಗಳೇ ಪೊಲೀಸರ ರೀತಿಯಲ್ಲಿ ವಿದ್ಯಾರ್ಥಿಯನ್ನು ಬೆದರಿಸಿ 1 ಲಕ್ಷ 70 ಸಾವಿರ ರೂಪಾಯಿ ಸುಲಿಗೆ ಮಾಡಿದ್ದಾರೆ. ಪೊಲೀಸರು ಎಂದು ಹೇಳಿಕೊಂಡು ವಿದ್ಯಾರ್ಥಿಯನ್ನು ಕಾರಿನಲ್ಲಿ ಹತ್ತಿಸಿಕೊಂಡು ಹಣ ಡ್ರಾ ಮಾಡಿಸಿಕೊಂಡು ವಂಚಿಸಿದ್ದಾರೆ. ಅಲ್ಲದೆ ಈ ವಿಚಾರ ಬಾಯ್ಬಿಟ್ಟರೆ ಕೊಲೆ ಮಾಡೋದಾಗಿ ವಿದ್ಯಾರ್ಥಿಗೆ ಬೆದರಿಸಿದ್ದಾರೆ.
ಸದ್ಯ ಬೆಂಗಳೂರಿನ ಸದಾಶಿವನಗರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು ತನಿಖೆ ವೇಳೆ 15ಕ್ಕೂ ಹೆಚ್ಚು ಸುಲಿಗೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಈ ಬಗ್ಗೆ ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಮಾಹಿತಿ ನೀಡಿದ್ದು, ಮೂರು ಜನ ವ್ಯಕ್ತಿಗಳು ವಿದ್ಯಾರ್ಥಿಯೊಬ್ಬನ ಟಾರ್ಗೆಟ್ ಮಾಡಿದ್ದಾರೆ. ಆತನ ಹಾಸ್ಟಲ್ನಿಂದ ಹೊರಗೆ ಕರೆಸಿ ಆತನನ್ನು ಕರೆದೊಯ್ದಿದ್ದಾರೆ. ಗಾಂಜಾ ಕೇಸ್ ನಲ್ಲಿ ನಿನ್ನ ಹೆಸರು ಸಹ ಬಂದಿದೆ ಎಂದು ಬೆದರಿಸಿದ್ದಾರೆ. ಮೆಡಿಕಲ್ ಟೆಸ್ಟ್ ಮಾಡಿಸುವುದಾಗಿ ಹೇಳಿ ಬೆದರಿಸಿ ಒಂದೂವರೆ ಲಕ್ಷ ಹಣ ಪಡೆದಿದ್ದಾರೆ. ಆತ ದುಬೈನಲ್ಲೂ ಓದಿ ಈಗ ಬೆಂಗಳೂರಿನಲ್ಲಿ ಓದುತಿದ್ದ ವಿದ್ಯಾರ್ಥಿ. ಸತತ ಮೂರು ಗಂಟೆಗಳ ಕಾಲ ಸುತ್ತಾಡಿಸಿ ಹಣ ಪಡೆದು ಬಿಟ್ಟು ಕಳುಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಿ ಎಲ್ಲಾ ಆರೋಪಿಗಳ ಬಂಧನ ಮಾಡಲಾಗಿದೆ. ತನಿಖೆ ವೇಳೆ ಯಶವಂತಪುರದಲ್ಲಿ ದಾಖಲಾದ ಮತ್ತೊಂದು ಪ್ರಕರಣ ಪತ್ತೆಯಾಗಿದೆ.
ಇದನ್ನೂ ಓದಿ: Canara Bank ATM ನಲ್ಲಿ ಲಕ್ಷಾಂತರ ಹಣ ಎಗರಿಸಿದ ಖರ್ತನಾಕ್ ಖದೀಮರು
ಅದರಲ್ಲೂ ಸಹ ವ್ಯಕ್ತಿಯೋರ್ವನಿಗೆ ಇದೇ ಮಾದರಿ ವಂಚನೆ ಮಾಡಿರುವುದು ಪತ್ತೆಯಾಗಿದೆ. ಅಲ್ಲೂ ಸಹ ಪೊಲೀಸರೆಂದು ಹೇಳಿಕೊಂಡು ಸುಲಿಗೆ ಮಾಡಿದ್ದಾರೆ. ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿರುವ ಆರೋಪಿಗಳು. ಪೊಲೀಸ್ ಮಾಹಿತಿದಾರರು ಎಂದು ಹೇಳಿಕೊಂಡು ಸಾರ್ವಜನಿಕರಿಗೆ ಇದೇ ಸುಳ್ಳು ಮಾಹಿತಿ ನೀಡಿ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ. ರಾಕೇಶ್, ಅರುಣ್, ಲೋಕೇಶ್ ಬಂಧಿತ ಆರೋಪಿಗಳು. ಹಲವು ತಿಂಗಳಿಂದ ಕೃತ್ಯ ನಡೆಸಿರುವ ಶಂಕೆ ಇದ್ದು ಮೇಲ್ನೋಟಕ್ಕೆ ಎರಡು ಕೃತ್ಯಗಳ ಬಗ್ಗೆ ಮಾಹಿತಿ ಸಿಕ್ಕಿದೆ. ಗಾಂಜಾ ಪ್ರಕರಣಗಳ ಬಗ್ಗೆ ಮಾಹಿತಿ ಹೊಂದಿರುತಿದ್ದ ಆರೋಪಿಗಳು, ಇದೇ ಮಾಹಿತಿ ಪೊಲೀಸರಿಗೆ ನೀಡಿ ಇನ್ಫಾರ್ಮರ್ಗಳಾಗಿದ್ದರು. ಬಳಿಕ ಹಣ ಮಾಡಲು ಪೊಲೀಸರ ರೀತಿ ಎಂಟ್ರಿ ಕೊಟ್ಟು ಸುಲಿಗೆಗೆ ಇಳಿದಿದ್ದಾರೆ. ನಾವೇ ಪೊಲೀಸರು ಎಂದು ಹೇಳಿಕೊಂಡು ವಂಚನೆ ಮಾಡಿದ್ದಾರೆ. ತನಿಖೆ ವೇಳೆ 25ಕ್ಕೂ ಅಧಿಕ ಕೃತ್ಯ ಎಸಗಿರೊದಾಗಿ ಮಾಹಿತಿ ಸಿಕ್ಕಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ತಿಳಿಸಿದರು.
ತನಿಖೆ ವೇಳೆ ಮತ್ತಷ್ಟು ಮಂದಿ ಆರೋಪಿಗಳ ಬಗ್ಗೆ ದೂರು ನೀಡುವ ಸಾಧ್ಯತೆ ಇದ್ದು ಪೊಲೀಸರೆಂದು ಹೆದರಿ ಹಲವು ಮಂದಿ ಠಾಣೆಗೆ ಬಂದಿಲ್ಲ. ಹಣ ಕಳೆದುಕೊಂಡವರ ವಿಕ್ನೇಸ್ ಹಿಡಿದುಕೊಂಡು ಕೃತ್ಯ ಮಾಡಿದ್ದಾರೆ. ತನಿಖೆ ವೇಳೆ ಎರಡು ತಿಂಗಳಲ್ಲಿ 10 ಲಕ್ಷಕ್ಕೂ ಅಧಿಕ ಹಣ ಮಾಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸದ್ಯ ಆರೋಪಿಗಳ ಬಂಧನದಿಂದ ಠಾಣೆಗೆ ಮತ್ತಷ್ಟು ದೂರು ದಾಖಲಾಗೊ ಸಾಧ್ಯತೆ ಇದೆ ಎಂದರು.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:04 pm, Mon, 24 July 23