Canara Bank ATM ನಲ್ಲಿ ಲಕ್ಷಾಂತರ ಹಣ ಎಗರಿಸಿದ ಖರ್ತನಾಕ್ ಖದೀಮರು

Canara Bank ATM ನಲ್ಲಿ ಲಕ್ಷಾಂತರ ಹಣ ಎಗರಿಸಿದ ಖರ್ತನಾಕ್ ಖದೀಮರು

ರಾಜೇಂದ್ರ ಸಿಂಹ ಬಿ.ಎಲ್. ಕೋಲಾರ
| Updated By: ಸಾಧು ಶ್ರೀನಾಥ್​

Updated on:Jul 24, 2023 | 12:39 PM

Hanchala Gate in Bangarpet: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್ ಬಳಿ ಎಟಿಎಂ ನಲ್ಲಿ ಭಾರೀ ಹಣ ಕಳ್ಳತನವಾಗಿದೆ.

ಕೋಲಾರ (Kolar) ಜಿಲ್ಲೆ ಬಂಗಾರಪೇಟೆ ತಾಲ್ಲೂಕು ಹಂಚಾಳ ಗೇಟ್ (Hanchala Gate in Bangarpet) ಬಳಿ ಎಟಿಎಂ ನಲ್ಲಿ ಭಾರೀ ಹಣ ಕಳ್ಳತನವಾಗಿದೆ. ಗ್ಯಾಸ್ ಕಟ್ಟರ್ ಬಳಸಿಕೊಂಡು ಎಟಿಎಂನಲ್ಲಿದ್ದ ಹಣ ಕಳ್ಳತನ (dacoity) ಮಾಡಲಾಗಿದೆ.

ಇದನ್ನೂ ಓದಿ: Lady Snooker Champ  ದೇಶಕ್ಕೆ ಚಿನ್ನದ ಕೊಡುಗೆ ನೀಡಿರುವ ಕೆಜಿಎಫ್​​ಗೆ, ದೂರದ ರಿಯಾದ್​​ನಿಂದ ಮತ್ತಷ್ಟು ಚಿನ್ನದ ‘ಕೀರ್ತಿ‘ ತಂದುಕೊಟ್ಟ ಸ್ನೂಕರ್ ಯುವತಿ!

ಹಂಚಾಳಗೇಟ್ ಬಳಿಯಿದ್ದ ಕೆನರಾ ಬ್ಯಾಂಕ್ (Canara Bank) ಗೆ ಸೇರಿದ ATM ನಲ್ಲಿದ್ದ ಸುಮಾರು 15 ಲಕ್ಷ ರೂಪಾಯಿ ಕಳ್ಳತನವಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ರಮೇಶ್ ಹಾಗೂ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 24, 2023 12:35 PM