Leopard: ಯಲಹಂಕ ವ್ಯಾಪ್ತಿಯ ದಾಸನಪುರದಲ್ಲಿ ಚಿರತೆ ದಾಳಿಗೆ ಕರು ಬಲಿ

| Updated By: ವಿವೇಕ ಬಿರಾದಾರ

Updated on: Feb 21, 2023 | 9:06 AM

ಯಲಹಂಕ ವಿಧಾನಸಭಾ ಕ್ಷೇತ್ರದ ದಾಸನಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಕರು ಒಂದನ್ನು ತಿಂದಿರುವ ಘಟನೆ ಭಾನುವಾರ (ಫೆ.19)ರ ರಾತ್ರಿ ನಡೆದಿದೆ.

Leopard: ಯಲಹಂಕ ವ್ಯಾಪ್ತಿಯ ದಾಸನಪುರದಲ್ಲಿ ಚಿರತೆ ದಾಳಿಗೆ ಕರು ಬಲಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ನಗರದಲ್ಲಿ ಕಳೆದು ನಾಲ್ಕೈದು ತಿಂಗಳಿಂದ ನಗರದ ಒಂದಲ್ಲ, ಒಂದು ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿದೆ. ಜ್ಞಾನಭಾರತಿ, ಯಶವಂತಪುರ, ಯಲಹಂಕ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಿರತೆ ಕಾಣಿಸಿಕೊಂಡು ಜನರಲ್ಲಿ ಆತಂಕ ಮೂಡಿಸಿದೆ. ಇದೀಗ, ಮತ್ತೆ ಯಲಹಂಕ ವಿಧಾನಸಭಾ ಕ್ಷೇತ್ರದ ದಾಸನಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ (Leopard), ಕರು ಒಂದನ್ನು ತಿಂದಿರುವ ಘಟನೆ ಭಾನುವಾರ (ಫೆ.19)ರ ರಾತ್ರಿ ನಡೆದಿದೆ. ಐದು ದಿನಗಳ ಹಿಂದಷ್ಟೇ ಇದೇ ಊರಿನ ಪಕ್ಕದ ರಾಮಾಂಜನೇಯ ಲೇಔಟ್​ನಲ್ಲಿ ಎರಡು ಚಿರತೆಗಳು ಕಾಣಿಸಿಕೊಂಡಿದ್ದವು. ಇದಾದ ನಂತರ ಈಗ ಚಿರತೆ ಕರು ಒಂದನ್ನು ಅರ್ಧ ತಿಂದಿದೆ. ಇದು ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ಹೊರಗಡೆ ಓಡಾಡಲು ಭಯ ಪಡುತ್ತಿದ್ದಾರೆ. ಸದ್ಯ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಇಟ್ಟಿದ್ದು, ಬೋನ್ ಒಳಗೆ ಮೇಕೆ ಮರಿ ಇಟ್ಟು ವ್ಯವಸ್ಥೆ ಮಾಡಿದೆ.

ನಾಯಿ ಕೊಂದ ಚಿರತೆ, ಆಚೆ ಹೆಜ್ಜೆ ಇಡಲೂ ಜನರಿಗೆ ಆತಂಕ

ಕಲೆ ದಿನಗಳ ಹಿಂದೆ ಚಿರತೆ ಹನುಮಂತಪ್ಪ ಅನ್ನೋರ ಜಮೀನಿನ ಬಳಿ ನಾಯಿ ತಿಂದು ಕೆಲ ದೇಹದ ಭಾಗವನ್ನು ಬಿಟ್ಟುಹೋಗಿರುವ ಘಟನೆ ಯಶವಂತಪುರ ಕ್ಷೇತ್ರ ವ್ಯಾಪ್ತಿಯ ಗೊಂಗಡಿಪುರದಲ್ಲಿ ನಡೆದಿದೆ. ನಾಯಿ ಸತ್ತಿರುವ ಜಾಗದಲ್ಲಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿತ್ತು. ಚಿರತೆ ಜೊತೆ ಎರಡು ಮರಿಗಳನ್ನೂ ಸ್ಥಳೀಯರು ನೋಡಿದ್ದು, ಆತಂಕಕ್ಕೆ ತುತ್ತಾಗಿದ್ದರು. ಇದರಿಂದ ಸಂಜೆ ಜನರು ಮನೆಯಿಂದ ಹೊರ ಬರಲು ಭಯ ಪಡುತ್ತಿದ್ದಾರೆ.

ನಂಜನಗೂಡು ತಾಲೂಕಿನ ಕಿರು ಅರಣ್ಯ ಪ್ರದೇಶಕ್ಕೆ ತಗುಲಿದ ಬೆಂಕಿ

ಮೈಸೂರು: ನಂಜನಗೂಡು ತಾಲೂಕಿನ ಕೋಣನೂರು ಗ್ರಾಮದ ಸಮೀಪದ ಕೋಣನೂರು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಕಿರು ಅರಣ್ಯ ಪ್ರದೇಶಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:57 am, Tue, 21 February 23