ಬೆಂಗಳೂರು, ಅ.30: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಚಿರತೆ (Leopard) ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕ ಮನೆ ಮಾಡಿದೆ. ಬೊಮ್ಮನಹಳ್ಳಿಯ ಕೂಡ್ಲು, ಸಿಂಗಸಂದ್ರ ಬಳಿ ನಿನ್ನೆ ಚಿರತೆ ಪ್ರತ್ಯಕ್ಷವಾಗಿದ್ದು ಬೊಮ್ಮನಹಳ್ಳಿ HSR ಲೇಔಟ್ BTM ಲೇಔಟ್ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ. ಜನರು ಒಬ್ಬೊಬ್ಬರೇ ಓಡಾಡದಂತೆ ಅರಣ್ಯ ಇಲಾಖೆ ಸೂಚನೆ ನೀಡಿದೆ. ರಾತ್ರಿ ವೇಳೆ ಒಬ್ಬೊಬ್ಬರೇ ಓಡಾಡಬೇಡಿ ಅನಿವಾರ್ಯವಿದ್ದಲ್ಲಿ ಕಾರಿನಲ್ಲಿ ಓಡಾಡಿ ಎಂದು ಅಧಿಕಾರಿಗಳು ಸೂಚನೆ ನೀಡಿದ್ದಾರೆ. K.R.ಪುರಂ ಅರಣ್ಯಾಧಿಕಾರಿಗಳು ಚಿರತೆಗಾಗಿ ಸಿಂಗಸಂದ್ರ ಲೇಔಟ್ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
LEOPARD SPOTTED IN BENGALURU
A Leopard has been spotted roaming on the roads at AECS Layout – A Block, Kudlu Gate. Kindly do the needful at the earliest @aranya_kfd before it attacks anyone@BlrCityPolice @MTF_Mobility @osd_cmkarnataka pls help this info reach the concerned… pic.twitter.com/vwyY5s2gv3
— Karnataka Weather (@Bnglrweatherman) October 30, 2023
ದಾಮೊದರ್ ರೆಡ್ಡಿ ಎಂಬುವವರ ಮನೆಯ ಬಳಿ ಚಿರತೆ ಕಾಣಿಸಿಕೊಂಡಿದ್ದು, ಬೀದಿ ನಾಯಿಗಳು ಚಿರತೆಯನ್ನು ನೋಡಿ ಅದನ್ನು ಓಡಿಸಿಕೊಂಡು ಹೋಗುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಚಿರತೆ ನೋಡಿದ ನಿವಾಸಿಗಳು ಆತಂಕದಲ್ಲೇ ಮನೆಯಲ್ಲಿ ಅಡಗಿ ಕೂರುವಂತಾಗಿದೆ. ಇದೀಗ ನಿದ್ದೆಗೆಡಿಸಿದ ಚಿರತೆ ಸೆರೆಗಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರು: ಶಾಖಾದ್ರಿ ಮನೆಯಲ್ಲಿ ಚಿರತೆ, ಜಿಂಕೆ ಚರ್ಮ ಪತ್ತೆ; ಅರಣ್ಯ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲು
ಗಾಬರಿಪಡುವ ಅಗತ್ಯವಿಲ್ಲ, ನಾವು ಶನಿವಾರ ರಾತ್ರಿ ತಂಡವನ್ನು ಕಳುಹಿಸಿದ್ದೇವೆ ಮತ್ತು ಇಂದು ಕೆಲವು ಸಿಬ್ಬಂದಿಯನ್ನು ಕಳುಹಿಸಿ ಚಿರತೆ ಹುಡುಕಿಸಲಾಗುತ್ತಿದೆ. ಚಿರತೆಯ ಸುಳಿವು ಸಿಕ್ಕಿಲ್ಲ. ನಾವು ಚಿರತೆ ತಲಾಶ್ ಮುಂದುವರೆಸುತ್ತಿದ್ದೇವೆ ಮತ್ತು ಅಲ್ಲಿನ ಜನರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಿದ್ದೇವೆ ಎಂದು ಬೆಂಗಳೂರು ನಗರ ಅರಣ್ಯ ಉಪ ಸಂರಕ್ಷಣಾಧಿಕಾರಿ ಎನ್ ರವೀಂದ್ರ ಕುಮಾರ್ ತಿಳಿಸಿದರು.
ಪರಪ್ಪನ ಅಗ್ರಹಾರ ಪೊಲೀಸರು ಕೂಡ ಚಿರತೆ ಕಾಣಿಸಿಕೊಂಡಿರುವುದನ್ನು ಖಚಿತಪಡಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ಚಿರತೆ ಕಾಣಿಸಿಕೊಂಡಿರುವುದು ಇದೇ ಮೊದಲಲ್ಲ. ಕಳೆದ ವರ್ಷವೂ ಹೊರವಲಯದಲ್ಲಿ ಚಿರತೆ ಓಡಾಡಿದ ಅನೇಕ ದೃಶ್ಯಗಳು ಕಂಡುಬಂದಿದ್ದವು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 12:55 pm, Mon, 30 October 23