ಭಾರತದಾದ್ಯಂತ ಎಲೆಕ್ಟ್ರಿಕ್ ಸ್ಕೂಟರುಗಳ ಖರೀದಿಸಿದ ಗ್ರಾಹಕರು ಅಷ್ಟೇ ವೇಗವಾಗಿ ರಿವರ್ಸ್ ಗೇರ್ನಲ್ಲಿ ಈ ಷೋರೂಮ್ಗಳಿಗೆ ವಾಪಸಾಗುತ್ತಿದ್ದಾರೆ. ನಮ್ಮ ಈ ಸ್ಕೂಟರಿನಲ್ಲಿ ಏನೋ ಪ್ರಾಬ್ಲಂ ಇದೆ ನೋಡಿ ಎಂದು ಅಲವತ್ತುಕೊಳ್ಳುತ್ತಿದ್ದಾರೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ತಾಂತ್ರಿಕ ಸಮಸ್ಯೆಗಳು ದೊಡ್ಡದಾಗಿಯೇ ಇವೆ, ಅವುಗಳ ಕಿರು ಪರಿಚಯ ಇಲ್ಲಿದೆ ನೋಡಿ.
* ಬ್ಯಾಟರಿ ಬಿಸಿಯಾಗುವಿಕೆ ಸಮಸ್ಯೆ. ವೇಗವಾಗಿ ಬ್ಯಾಟರಿ ಶಕ್ತಿ ಬರಿದಾಗುತ್ತದೆ. * ಬ್ಯಾಟರಿ ಚಾರ್ಜ್ ಮಾಡುವ ಸಮಯ ದೀರ್ಘವಾಗಿದೆ. * ವಾರಂಟಿ ನಂತರ ಬ್ಯಾಟರಿ ಬದಲಾಯಿಸಲು ಹೆಚ್ಚು ಬೆಲೆ ತೆರಬೇಕಾಗುತ್ತದೆ. * ಬ್ಯಾಟರಿ ತೂಕ ಜಾಸ್ತಿಯಿದೆ.
* ಮೋಟಾರ್ ಬಿಸಿಯಾಗುವಿಕೆ ಸಮಸ್ಯೆಗಳು ತೀವ್ರವಾಗಿವೆ. (ಸ್ವಯಂಚಾಲಿತವಾಗಿ ಪರಿಸರ ಮೋಡ್‌ಗೆ ಬದಲಾಗುತ್ತದೆ). * ವಾಹನದ ಕಾರ್ಯಕ್ಷಮತೆ ಮತ್ತು ರೇಂಜ್, ಬೈಕ್‌ನ ತೂಕವನ್ನು ಅವಲಂಬಿಸಿ ಭಿನ್ನವಾಗಿರುತ್ತದೆ. * ಬ್ಯಾಟರಿ ಚಾರ್ಜ್‌ಗೆ ಹೊಂದಿಕೊಂಡಂತೆ ಮೋಟಾರ್‌ನ ಕಾರ್ಯಕ್ಷಮತೆ ಕುಸಿಯುತ್ತದೆ. (ಮಾಹಿತಿ ಮೂಲ: ಹೈಪರ್ಒನ್ಎನರ್ಜಿ hyperoneenergy)
* ವೇಗವರ್ಧಕ ಸಮಸ್ಯೆ -ಕಡಿಮೆ ಸ್ಪೀಡ್ ಮೋಡ್‌ಗೆ ಬದಲಾಗಿಬಿಡುತ್ತದೆ. * ಅಗತ್ಯವೇ ಇಲ್ಲದಿದ್ದರೂ ರಿವರ್ಸ್ ಮೋಡ್ ಸಕ್ರಿಯಗೊಳ್ಳುತ್ತದೆ.
* ವಾಹನಕ್ಕೆ ಅಳವಡಿಸಿರುವ ಪ್ಯಾನೆಲ್ಗಳಲ್ಲಿ ಕಂಪನಗಳು. * ಕೆಲವು ವಾಹನಗಳಲ್ಲಿ ಪ್ಯಾನಲ್ಗಳ ನಡುವಣ ಅಂತರಗಳು ದೊಡ್ಡದಾಗಿವೆ. * ಚಾಸಿಸ್ ಮತ್ತು ಸಸ್ಪೆನ್ಷನ್ಗಳಲ್ಲಿ ಕಳಪೆ ಸಾಮರ್ಥ್ಯ. * ಸಣ್ಣ ಭಾಗಗಳನ್ನು ನಿರ್ಲಕ್ಷಿಸುವುದು (ಬ್ರೇಕ್ ಲಿವರ್, ಚಾರ್ಜಿಂಗ್ ಪೋರ್ಟ್‌ಗಳು ಜಾಮ್ ಆಗಿರುವುದು, ಡಿಸ್ಕ್ ಬ್ರೇಕ್‌ಗಳು, ಇಂಡಿಕೇಟರ್ ಸ್ವಿಚ್‌ಗಳು ಮುಂತಾದ ಘಟಕಗಳು).
* ಡಿಸ್ಪ್ಲೆ ತನ್ನಷ್ಟಕ್ಕೆ ತಾನೇ ಸ್ಟಾಪ್ ಅಗಿಬಿಡುತ್ತದೆ. * ಟಚ್ ಸೆನ್ಸಿಟಿವಿಟಿ ತುಂಬಾ ಕಡಿಮೆಯಾಗಿದೆ ಮತ್ತು ಕೆಲವೊಮ್ಮೆ ಕೆಲಸ ಮಾಡುವುದಿಲ್ಲ.
* ಅನಪೇಕ್ಷಿತ ರಿವರ್ಸ್ ಮೋಡ್ ಸಕ್ರಿಯಗೊಳಿಸುವಿಕೆ. * ಇದ್ದಕ್ಕಿದ್ದಂತೆ ನಿಗದಿತ ವೇಗದ ಮಿತಿಗಿಂತ ಹೆಚ್ಚಿನ ವೇಗ ಬಂದುಬಿಡುತ್ತದೆ. * ಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಸವಾರಿ ಜಾಗ ಕಳಪೆಯಾಗಿದೆ (Electric Scooter Poor riding position)
* ಬಿಡಿ ಭಾಗಗಳು ಲಭ್ಯವಿರುವುದಿಲ್ಲ. * ಸಮಯಕ್ಕೆ ಸರಿಯಾಗಿ ಯಾವುದೇ ಸಮಸ್ಯೆಗಳನ್ನು ಪರಿಹರಿಸುವುದಿಲ್ಲ. * ಗ್ರಾಹಕರ ಸಮಸ್ಯೆಯನ್ನು ಸರಿಪಡಿಸುವಲ್ಲಿ ವಿಳಂಬವಾಗುವುದು (ವಿದ್ಯುತ್ ಸಮಸ್ಯೆಗಳು, ಸ್ವಿಚ್‌ಗಳು, ಇನ್ನಿತರೆ ಸೇವೆಗಳನ್ನು ತಕ್ಷಣವೇ ಸರಿಪಡಿಸುವುದಿಲ್ಲ). * ಸಮಸ್ಯೆಯನ್ನೇ ಪರಿಹರಿಸದೆ ಸರ್ವಿಸ್ ಆಯ್ತು ಅಂತಾ ಗ್ರಾಹಕರಿಗೆ ಬೈಕನ್ನು ಹಿಂತಿರುಗಿಸುವುದು.
* ಬೈಕ್ಗಳು ಹೆಚ್ಚು ಬಿಸಿಯಾಗುವುದರಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತದೆ. * ಥರ್ಮಲ್ ಸ್ಥಿರತೆ ಕಡಿಮೆಯಾಗಿರುವುದು. * ತೀವ್ರತರ ಹವಾಮಾನ ಪರಿಸ್ಥಿತಿಗಳಲ್ಲಿ ಕಾರ್ಯಕ್ಷಮತೆ ಅಸ್ಥಿರವಾಗಿಬಿಡುತ್ತದೆ.
* ಎಲೆಕ್ಟ್ರಿಕ್ ಬೈಕ್-ಸ್ಕೂಟರ್ಗಳಿಗಾಗಿ ಚಾರ್ಜಿಂಗ್ ಸೌಕರ್ಯ ಲಭ್ಯವಿಲ್ಲದೆ ಇರುವುದು (Electric Scooter Lack of charging infrastructure) (ಮಾಹಿತಿ ಮೂಲ: ಹೈಪರ್ಒನ್ಎನರ್ಜಿ hyperoneenergy)
Published On - 1:05 pm, Wed, 13 September 23