ಬೆಂಗಳೂರು, ಆ.08: ಅಕ್ರಮ ಖಾತೆ ಸೇರಿದಂತೆ ಪದೇ ಪದೇ ಗ್ರಾಮ ಪಂಚಾಯತಿಗಳ ಮೇಲೆ ದೂರುಗಳು ಬಂದ ಹಿನ್ನೆಲೆ ಇಂದು (ಗುರುವಾರ) ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತಿಗಳ ಮೇಲೆ ಉಪ ಲೋಕಾಯುಕ್ತ (Lokayukta)ನ್ಯಾ.ಬಿ.ವೀರಪ್ಪ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂ.ಗ್ರಾಮಾಂತರ ಜಿಲ್ಲೆಯ ಅಣ್ಣೇಶ್ವರ, ಜಾಲಿಗೆ, ದೊಡ್ಡತುಮಕೂರು, ಮಜರಾ ಹೊಸಹಳ್ಳಿ, ಬೂದಿಹಾಳ, ಸೋಂಪುರ, ನಂದಗುಡಿ, ಸೂಲಿಬೆಲೆ ಪಂಚಾಯತಿಗಳ ಮೇಲೆ ಲೋಕಾ ದಾಳಿ ನಡೆಸಿ, ಇ-ಖಾತಾ. ಟ್ಯಾಕ್ಸ್ ಕಲೆಕ್ಷನ್ ಲೆಡ್ಜರ್ ಸೇರಿದಂತೆ ಹಲವು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇನ್ನು ಬೆಂಗಳೂರು ನಗರ ಜಿಲ್ಲೆಯ ಕಸಘಟ್ಟಪುರ, ರಾಜಾನುಕುಂಟೆ, ಬನ್ನೇರುಘಟ್ಟ, ಕಲ್ಲುಬಾಳು, ಕಣ್ಣೂರು, ಮಂಡೂರು, ಕುಂಬಳಗೋಡು, ಆಗರ, ದಾಸನಪುರ ಮತ್ತು ಅಡಕಮಾರನಹಳ್ಳಿ ಗ್ರಾ.ಪಂ. ಕಚೇರಿ ಮೇಲೆ ದಾಳಿ ನಡೆಸಿ ಅಧಿಕಾರಿಗಳಿಂದ ಪಂಚಾಯತಿಗಳಲ್ಲಿನ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ:ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅವ್ಯವಸ್ಥೆ ಅನಾವರಣ
ಇತ್ತ ದೂರು ಆಧಾರಿಸಿ ಬೆಂಗಳೂರು ಉತ್ತರ ತಾಲೂಕಿನ ಪಂಚಾಯತಿ ಕಾರ್ಯಾಲಯಗಳ ಮೇಲೆ ಬೆಂಗಳೂರು ಲೋಕಾಯುಕ್ತ ಜಡ್ಜ್ ಶುಭವೀರ್ ಜೈನ್, ಡಿವೈಎಸ್ಪಿ ಸತೀಶ್ ಸೇರಿದಂತೆ 20ಕ್ಕೂ ಹೆಚ್ಚು ಲೋಕಾಯುಕ್ತ ಅಧೀಕಾರಿಗಳು ದಾಳಿ ನಡೆಸಿದ್ದು, ಅಡಕಮಾರನಹಳ್ಳಿ ಹಾಗೂ ದಾಸನಪುರ ಪಂಚಾಯತಿ ಸಿಬ್ಬಂದಿ ಹಾಗೂ ಕಡತ ಪರಿಶೀಲನೆ ಮಾಡುತ್ತಿದ್ದಾರೆ. ಪ್ರತಿಯೊಬ್ಬ ಸಿಬ್ಬಂದಿಯನ್ನೂ ಬಿಡದೆ ವಿಚಾರಣೆ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ