ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅವ್ಯವಸ್ಥೆ ಅನಾವರಣ

ರೋಗಿಯೊಬ್ಬರು ಬಿದ್ದು ನರಳುತ್ತಿದ್ದರೂ ಯಾರು ಚಿಕಿತ್ಸೆ ನೀಡುತ್ತಿರಲಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರು ಸ್ಪಂದಿಸದ ಬಗ್ಗೆ ದೂರು ಬಂದಿದ್ದವು. ಈ ಬಗ್ಗೆ ಸಾಕಷ್ಟು ದೂರು ಬಂದಿದ್ದ ಹಿನ್ನೆಲೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್​ ಭೇಟಿ ನೀಡಿದ್ದೇವೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್​ ಪಾಟೀಲ್‌ ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ: ಅವ್ಯವಸ್ಥೆ ಅನಾವರಣ
ವಿಕ್ಟೋರಿಯಾ ಆಸ್ಪತ್ರೆಗೆ ಲೋಕಾಯುಕ್ತ ನ್ಯಾಯಮೂರ್ತಿ ದಿಢೀರ್ ಭೇಟಿ, ಅವ್ಯವಸ್ಥೆ ಅನಾವರಣ
Follow us
Shivaprasad
| Updated By: ಗಂಗಾಧರ​ ಬ. ಸಾಬೋಜಿ

Updated on: Jul 29, 2024 | 5:11 PM

ಬೆಂಗಳೂರು, ಜುಲೈ 29: ಸಾಕಷ್ಟು ದೂರುಗಳು ಬಂದಿದ್ದ ಹಿನ್ನೆಲೆ ನಗರದ ವಿಕ್ಟೋರಿಯಾ ಆಸ್ಪತ್ರೆಗೆ (Victoria Hospital) ಇಂದು ಲೋಕಾಯುಕ್ತ ನ್ಯಾಯಮೂರ್ತಿಗಳಾದ (Lokayukta Justice) ಬಿ.ಎಸ್.ಪಾಟೀಲ್‌ ಹಾಗೂ ಉಪ ಲೋಕಾಯುಕ್ತ ನ್ಯಾ.ಫಣೀಂದ್ರ ಮತ್ತು ನ್ಯಾ.ವೀರಪ್ಪ ಭೇಟಿ ನೀಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಪ್ರತಿಯೊಂದು ಕಟ್ಟಡಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಅವ್ಯವಸ್ಥೆ ಅನಾವರಣವಾಗಿದೆ. ಜೊತೆಗೆ ರೋಗಿಗಳ ಸಮಸ್ಯೆಯನ್ನು ಆಲಿಸಿದ್ದಾರೆ.

ಸಾಕಷ್ಟು ದೂರು ಬಂದಿದ್ದ ಹಿನ್ನೆಲೆ ದಿಢೀರ್​ ಭೇಟಿ ಎಂದ ಬಿಎಸ್​ ಪಾಟೀಲ್‌

ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲೋಕಾಯುಕ್ತ ನ್ಯಾಯಮೂರ್ತಿ ಬಿಎಸ್​ ಪಾಟೀಲ್‌, ರೋಗಿಯೊಬ್ಬರು ಬಿದ್ದು ನರಳುತ್ತಿದ್ದರೂ ಯಾರು ಚಿಕಿತ್ಸೆ ನೀಡುತ್ತಿರಲಿಲ್ಲ. ರೋಗಿಗಳಿಗೆ ಚಿಕಿತ್ಸೆ ನೀಡದೆ ವೈದ್ಯರು ಸ್ಪಂದಿಸದ ಬಗ್ಗೆ ದೂರು ಬಂದಿದ್ದವು. ಈ ಬಗ್ಗೆ ಸಾಕಷ್ಟು ದೂರು ಬಂದಿದ್ದ ಹಿನ್ನೆಲೆ ದಿಢೀರ್​ ಭೇಟಿ ನೀಡಿದ್ದೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಕ್ಟೋರಿಯಾ ಆಸ್ಪತ್ರೆ ನೆಫ್ರೋಯುರಾಲಜಿ ಅವ್ಯವಸ್ಥೆ: ಆಸ್ಪತ್ರೆಗೆ ದಾಖಲಾದವರು ಬದುಕಿಬರುವುದೇ ಅನುಮಾನ!

ಮೆಡಿಸನ್ ಕೊಟ್ಟಿರುವ ಬಗ್ಗೆ ರಿಜಿಸ್ಟರ್​​ನಲ್ಲಿ ಎಂಟ್ರಿ ಮಾಡುತ್ತಿರಲಿಲ್ಲ. ಮೂವರನ್ನು ಡಾಟಾ ಎಂಟ್ರಿ ಆಪರೇಟರ್​ ನೇಮಕ ಮಾಡಿಕೊಂಡಿದ್ದಾರೆ. ನಾವು ಭೇಟಿ ನೀಡಿದ ವೇಳೆ ಎಮರ್ಜೆನ್ಸಿ ಮೆಡಿಷನ್ ಇಲ್ಲಾ ಅಂತಿದ್ದಾರೆ. ಕಾಂಟ್ರ್ಯಾಕ್ಟರ್ ಬಿಲ್ ಪೆಡಿಂಗ್ ಇರೋದ್ರಿಂದ ಸಪ್ಲೈ ಮಾಡಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮೆಡಿಕಲ್‌ ಕಾಲೇಜಿನ 47 ವಿದ್ಯಾರ್ಥಿನಿಯರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

ಓಪಿಡಿಯಲ್ಲಿ ಎಲ್ಲಾ ಡಾಕ್ಟರ್ ಇರಲಿಲ್ಲ, ಪಿಜಿ ಡಾಕ್ಟರ್ ಮಾತ್ರ ಇದ್ದಾರೆ. ಸೂಪರಿಂಡೆಂಟ್ ಕರೆಸಿದ್ವಿ, ಆಸ್ಪತ್ರೆಯ ಕೆಲ ವೈದ್ಯಾಧಿಕಾರಿಗಳು ಬಂದ್ದರು. ಇನ್ನೂ ಕೆಲವರು ರಜೆಯಲ್ಲಿದ್ದಾರೆ ಅಂತಾ ಸೂಪರಿಂಡೆಂಟ್ ಹೇಳಿದರು. ರೋಗಿಗಳಿಗೆ ಆಸ್ಪತ್ರೆಯಲ್ಲಿ ಸರಿಯಾದ ಮಾರ್ಗದರ್ಶನ ಸಿಗಬೇಕು ಎಂದು ಹೇಳಿದ್ದಾರೆ.

ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮನೆ, ಪಾರ್ಮ್ ಹೌಸ್ ಮೇಲೆ ಲೋಕಾ ದಾಳಿ

ಬೆಳಗಾವಿ: ನಗರದ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಶೇಖರಗೌಡ ಮನೆ ಮತ್ತು ಪಾರ್ಮ್ ಹೌಸ್ ಮೇಲೆ ಇತ್ತೀಚೆಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದರು. ಶೇಖರಗೌಡ, ಮೂಲಕ ಕೊಪ್ಪಳ ಜಿಲ್ಲೆಯ ಹಿರೆಸಿಂದೋಗಿ ಗ್ರಾಮದ ನಿವಾಸಿ. ಗ್ರಾಮದಲ್ಲಿ ಮನೆ ಸೇರಿದಂತೆ ಪಾರ್ಮ್ ಹೌಸ್ ಇದ್ದು, ಲೋಕಾಯುಕ್ತ ಅಧಿಕಾರಿಗಳ ಎರಡು ತಂಡ ಎರಡು ಕಡೆ ಪರಿಶೀಲನೆ ನಡೆಸಿದ್ದರು. ಹದಿನೆಂಟು ಎಕರೆ ಪಾರ್ಮ್ ಹೌಸ್ ಇದ್ದು ಅಲ್ಲಿ ಕೂಡ ಪರಿಶೀಲನೆ ನಡೆಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ಸಂಜು; ವಿಡಿಯೋ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಅತಿ ಎತ್ತರದ ಮಾನವ ಪಿರಮಿಡ್ ನಿರ್ಮಿಸಿ ಭಾರತೀಯ ಸೇನೆಯಿಂದ ವಿಶ್ವ ದಾಖಲೆ
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ಯಾರು ಬಿಗ್ ಬಾಸ್ ಗೆಲ್ತಾರೆ ಅಂತ ನಾನು ಹೇಳಲ್ಲ: ಪ್ರಥಮ್ ಖಡಕ್ ಮಾತು
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ನಿಯೋಗ ಹೊತ್ತು ತಂದಿದ್ದ ಕಬ್ಬನ್ನು ಕಚೇರಿಯಲ್ಲೇ ಮುರಿದು ತಿಂದ ಸಿದ್ದರಾಮಯ್ಯ
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಕೆಡಿಪಿ ಸಭೆಗಳನ್ನು ಹಗುರವಾಗಿ ಪರಿಗಣಿಸುವ ಪ್ರವೃತ್ತಿ ನಿಲ್ಲಬೇಕು
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಸುದೀಪ್ ಬಿಗ್​ಬಾಸ್ ಬಿಡಲು ಅಸಲಿ ಕಾರಣ ಬಿಚ್ಚಿಟ್ಟ ಪ್ರಥಮ್
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಬೆಂಗಳೂರಿನ ಈ ಮಾರ್ಗದಲ್ಲಿ ಫುಲ್ ಟ್ರಾಫಿಕ್ ಜಾಮ್..!
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಮಂತ್ರಾಲಯ ಸಂಸ್ಕೃತ ಶಾಲೆ ವಿದ್ಯಾರ್ಥಿಗಳು ಸಾವು: ಅಪಘಾತಕ್ಕೆ ಕಾರಣವೇನು?
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಒಬ್ಬನಿಗೆ ಮದುವೆಯಾಗಿ ಕೇವಲ 4 ತಿಂಗಳಾಗಿತ್ತು, ಮತ್ತೊಬ್ಬನ ಪತ್ನಿ ಗರ್ಭಿಣಿ!
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ
ಜಿಟಿಡಿ ಹೇಳಿದ ಧಮ್ ಮಾತಿಗೆ ಬಿಜೆಪಿ ನಾಯಕ ರವಿ ಪ್ರತಿಕ್ರಿಯೆ ನೀಡಲಿಲ್ಲ