AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!

ವಿ. ಮುನಿಯಪ್ಪ ದೋಷಿ, ಕರ್ನಾಟಕ ಲೋಕಾಯುಕ್ತ ತೀರ್ಪು: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ಎಂಡಿ ವಿ. ಮುನಿಯಪ್ಪ ಅವರಿಗೆ 3 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 4.5 ಕೋಟಿ ರೂ. ದಂಡ ವಿಧಿಸಲಾಗಿದೆ. 12 ವರ್ಷಗಳ ಕಾನೂನು ಹೋರಾಟದ ನಂತರ ಭ್ರಷ್ಟಾಚಾರದ ಆರೋಪ ಸಾಬೀತಾಗಿದೆ. ಬೆಂಗಳೂರಿನ ಬಸವ ಭವನದ ಮಾಜಿ ಎಂಡಿ ಆಗಿದ್ದ ಮುನಿಯಪ್ಪ ವಿರುದ್ಧ 2014ರಲ್ಲಿ ದೂರು ದಾಖಲಾಗಿತ್ತು.

ಅಕ್ರಮ ಆಸ್ತಿ ಗಳಿಸಿದ ಮಾಜಿ ಎಂ.ಡಿಗೆ ಶಾಕ್: ವಿ. ಮುನಿಯಪ್ಪಗೆ 3 ವರ್ಷ ಜೈಲು, 4.5 ಕೋಟಿ ರೂ. ದಂಡ ವಿಧಿಸಿದ ಲೋಕಾಯುಕ್ತ ಕೋರ್ಟ್!
ಸಾಂದರ್ಭಿಕ ಚಿತ್ರ
ಪ್ರದೀಪ್​ ಚಿಕ್ಕಾಟಿ
| Edited By: |

Updated on: Mar 31, 2026 | 7:34 PM

Share

ಬೆಂಗಳೂರು, ಮಾ.31: ಆದಾಯಕ್ಕೂ ಮೀರಿದ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಕೌನ್ಸಿಲ್ ಫಾರ್ ಟೆಕ್ನಿಕಲ್ ವ್ಯವಸ್ಥಾಪಕ ನಿರ್ದೇಶಕ (MD) ವಿ. ಮುನಿಯಪ್ಪ ದೋಷಿ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಯಾಲಯ ಮಹತ್ವದ ತೀರ್ಪು ಪ್ರಕಟಿಸಿದೆ. ಬರೋಬ್ಬರಿ 12 ವರ್ಷಗಳ ಸುದೀರ್ಘ ಕಾನೂನು ಹೋರಾಟದ ಬಳಿಕ ಈ ತೀರ್ಪು ಹೊರಬಿದ್ದಿದೆ.

ಬೆಂಗಳೂರಿನ ಬಸವ ಭವನದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವಿ. ಮುನಿಯಪ್ಪ ವಿರುದ್ಧ 2014ರಲ್ಲಿ ಭ್ರಷ್ಟಾಚಾರ ಮತ್ತು ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿತ್ತು. ಲೋಕಾಯುಕ್ತ ಪೊಲೀಸರು ನಡೆಸಿದ ತನಿಖೆಯಲ್ಲಿ ಮುನಿಯಪ್ಪ ಅವರು ತಮ್ಮ ಅಧಿಕೃತ ಆದಾಯದ ಮೂಲಗಳಿಗಿಂತ ಅಕ್ರಮವಾಗಿ ಕೋಟ್ಯಾಂತರ ರೂಪಾಯಿ ಸಂಪಾದಿಸಿರುವುದು ಸಾಬೀತಾಗಿತ್ತು.

ಇದನ್ನೂ ಓದಿ: ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಮುನಿಯಪ್ಪ ಅವರಿಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 4.5 ಕೋಟಿ ರೂಪಾಯಿ ದಂಡ ವಿಧಿಸಿದೆ. ಒಂದು ವೇಳೆ ವಿಧಿಸಲಾದ ದಂಡದ ಮೊತ್ತವನ್ನು ಪಾವತಿಸಲು ವಿಫಲವಾದರೆ, ಆರೋಪಿಯು ಹೆಚ್ಚುವರಿಯಾಗಿ 6 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ. 2014ರಲ್ಲಿ ದಾಖಲಾಗಿದ್ದ ಈ ಭ್ರಷ್ಟಾಚಾರದ ಕಲೆಗೆ 2026ರಲ್ಲಿ ಅಂತಿಮವಾಗಿ ಶಿಕ್ಷೆಯ ಮುದ್ರೆ ಬಿದ್ದಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಭಾರೀ ಕುತೂಹಲ ಮೂಡಿಸಿದ ತಮಿಳುನಾಡು ಸಿಎಂ ವಿಜಯ್- ಸ್ಟಾಲಿನ್ ಭೇಟಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
ಪ್ರಧಾನಿ ಮೋದಿ ಸಲಹೆ ಪಾಲಿಸದಿದ್ರೆ ದೇಶಕ್ಕೆ ಸಂಕಷ್ಟ ಎಂದ ರುದ್ರಮೂರ್ತಿ
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
PM ಮೋದಿ 8 ಸಂದೇಶ ಯಾಕೆ? ಆರ್ಥಿಕ ತಜ್ಞ ರುದ್ರಮೂರ್ತಿ ಹೇಳಿದ್ದಿಷ್ಟು
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಮೋದಿ ಸಾಗೋ ದಾರಿಯಲ್ಲಿ ಜಿಲೆಟಿನ್ ಕಡ್ಡಿ ಪತ್ತೆ ಕೇಸ್​: ತಮಿಳುನಾಡು ಲಿಂಕ್​?
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಅಡುಗೆ ಎಣ್ಣೆ ಬೆಲೆ 3 ರೂ. ಏರಿಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಕಾನೂನು ಉಲಂಘಿಸಿ ರಸ್ತೆಯಲ್ಲಿ ಸಂಚಾರ ಮಾಡ್ತಿದ್ದ ಶಾಲಾ ವಾಹನಗಳು RTO ವಶಕ್ಕೆ
ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು 'ಎಡವಟ್ಟು'
ಮುಂಬೈ ಇಂಡಿಯನ್ಸ್​ ಸೋಲಿಗೆ ಕಾರಣವಾಯ್ತು ಈ ಒಂದು 'ಎಡವಟ್ಟು'
ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿನಂದನೆ!
ಇತಿಹಾಸ ನಿರ್ಮಿಸಿದ ದಳಪತಿಗೆ ಸಿಎಂ ಸಿದ್ದರಾಮಯ್ಯ ವಿಶೇಷ ಅಭಿನಂದನೆ!
ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!
ತಿಂಗಳಾನುಗಟ್ಟಲೆ ಪೇಮೆಂಟ್ ಇಲ್ಲದೆ ಇಂದಿರಾ ಕ್ಯಾಂಟಿನ್ ಸಿಬ್ಬಂದಿ ಪರದಾಟ!
ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!
ಚಿಕ್ಕಬಳ್ಳಾಪುರದಲ್ಲಿ ಕಾಶ್ಮೀರಿ ಆ್ಯಪಲ್ ಬೆಳೆದು ಸೈ ಎನಿಸಿಕೊಂಡ ರೈತ!