AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru News: ಕೆಆರ್ ಸರ್ಕಲ್ ಅಂಡರ್‌ಪಾಸ್‌ ಪರಿಶೀಲನೆ ನಡೆಸಿದ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್

ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದಾಗ ಅಂಡರ್‌ಪಾಸ್‌ನಲ್ಲಿ ಏನು ಸಮಸ್ಯೆಯಾಗಿತ್ತು ಎಂಬುದನ್ನು ನಾವು ತಿಳಿದುಕೊಳ್ಳಲಿದ್ದೇವೆ. ಬಿಬಿಎಂಪಿ ಅಧಿಕಾರಿಗಳಿಂದ ಯಾವುದೇ ಲೋಪ ಆಗಿದೆಯೇ ಮತ್ತು ಘಟನೆಗೆ ಕಾರಣವೇನು ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಎಂದು ರಾವ್ ಹೇಳಿದರು.

Bengaluru News: ಕೆಆರ್ ಸರ್ಕಲ್ ಅಂಡರ್‌ಪಾಸ್‌ ಪರಿಶೀಲನೆ ನಡೆಸಿದ ಲೋಕಾಯುಕ್ತ ಐಜಿಪಿ ಸುಬ್ರಹ್ಮಣ್ಯೇಶ್ವರ ರಾವ್
ಕೆಆರ್ ಸರ್ಕಲ್ ಅಂಡರ್‌ಪಾಸ್​​ನಲ್ಲಿ ಮುಳುಗಿದ್ದ ಕಾರು (ಸಮಗ್ರಹ ಚಿತ್ರ)
Ganapathi Sharma
|

Updated on: Jun 07, 2023 | 6:30 PM

Share

ಬೆಂಗಳೂರು: ಮೇ ತಿಂಗಳಲ್ಲಿ ಸುರಿದ ಭಾರಿ ಮಳೆಗೆ ಕಾರು ಮುಳುಗಿ ಯುವತಿಯೊಬ್ಬರು ಸಾವನ್ನಪ್ಪಿದ್ದ ಬೆಂಗಳೂರಿನ ಕೆಆರ್ ಸರ್ಕಲ್ ಅಂಡರ್‌ಪಾಸ್‌ಗೆ ಕರ್ನಾಟಕ ಲೋಕಾಯುಕ್ತ ಪೊಲೀಸ್ ಮಹಾನಿರೀಕ್ಷಕ (Lokayukta IGP) ಡಾ ಸುಬ್ರಹ್ಮಣ್ಯೇಶ್ವರ ರಾವ್ ಬುಧವಾರ ಭೇಟಿ ನೀಡಿದರು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಅಧಿಕಾರಿಗಳನ್ನು ಭೇಟಿ ಮಾಡಿದ ಸುಬ್ರಹ್ಮಣ್ಯೇಶ್ವರ ರಾವ್, ಅಂಡರ್​ಪಾಸ್​ ಪರಿಶೀಲನೆ ನಡೆಸಿದರು.

ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಸಂಭವಿಸಿದಾಗ ಅಂಡರ್‌ಪಾಸ್‌ನಲ್ಲಿ ಏನು ಸಮಸ್ಯೆಯಾಗಿತ್ತು ಎಂಬುದನ್ನು ನಾವು ತಿಳಿದುಕೊಳ್ಳಲಿದ್ದೇವೆ ಎಂದು ಎಂದು ರಾವ್ ಹೇಳಿದರು. ಬಿಬಿಎಂಪಿ ಅಧಿಕಾರಿಗಳಿಂದ ಯಾವುದೇ ಲೋಪ ಆಗಿದೆಯೇ ಮತ್ತು ಘಟನೆಗೆ ಕಾರಣವೇನು ಎಂಬುದರ ಕುರಿತು ನಾವು ತನಿಖೆ ನಡೆಸುತ್ತಿದ್ದೇವೆ. ಈ ಕುರಿತ ವರದಿ ಲೋಕಾಯುಕ್ತಕ್ಕೂ ಸಲ್ಲಿಕೆಯಾಗಲಿದೆ. ಬಿಬಿಎಂಪಿ ಅಧಿಕಾರಿಗಳೊಂದಿಗೂ ಚರ್ಚೆ ನಡೆಸುತ್ತಿದ್ದೇವೆ ಎಂದು ಅವರು ಮಾಹಿತಿ ನೀಡಿದರು.

ಮೇ 21 ರಂದು ಜಲಾವೃತಗೊಂಡ ಕೆಆರ್ ಸರ್ಕಲ್ ಅಂಡರ್‌ಪಾಸ್‌ನಲ್ಲಿ ಕಾರು ಸಿಲುಕಿ ಯುವತಿ ಭಾನುರೇಖಾ (22) ಮೃತಪಟ್ಟಿದ್ದರು. ನಗರದಲ್ಲಿ ಭಾರೀ ಮಳೆಯ ನಂತರ ಈ ಘಟನೆ ಸಂಭವಿಸಿತ್ತು. ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಭಾನುರೇಖಾ ಅವರ ಕುಟುಂಬದ ಕೆಲವು ಸದಸ್ಯರು ಮತ್ತು ಕಾರು ಚಾಲಕನನ್ನು ರಕ್ಷಿಸಲಾಗಿತ್ತು.

ಇದನ್ನೂ ಓದಿ: ಕೆಆರ್​ ಸರ್ಕಲ್​ ಅಂಡರ್​ಪಾಸ್​ ನಲ್ಲಿ ಯುವತಿ ಸಾವು: ಸುಮೋಟೋ ಕೇಸ್ ತನಿಖೆ ಚುರುಕುಗೊಳಿಸಿದ ಲೋಕಾಯುಕ್ತ

ನಂತರ ಲೋಕಾಯುಕ್ತರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಎಂಟು ಮಂದಿ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದರು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.

ಈ ಮಧ್ಯೆ, ಆರ್​ ಸರ್ಕಲ್​ ಅಂಡರ್​ಪಾಸ್​ ನಲ್ಲಿ ಯುವತಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಲೋಕಾಯುಕ್ತ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿ: ವಿನಯ್ ಗೌಡ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಹಠವಾದಿ, ಛಲಗಾರ್ತಿ, ಕಿಚ್ಚು ಇತ್ಯಾದಿ; ಅಶ್ವಿನಿ ಗೌಡಗೆ ಸಿಕ್ಕ ಬಿರುದು ನೋಡಿ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?