ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ, ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಎಇ

| Updated By: ವಿವೇಕ ಬಿರಾದಾರ

Updated on: Dec 16, 2022 | 7:50 PM

ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಬೆಸ್ಕಾಂ ಅಧಿಕಾರಿಯನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ.

ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ, ರೆಡ್​ಹ್ಯಾಂಡ್​ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಎಇ
ಲೋಕಾಯುಕ್ತ ಕಚೇರಿ
Follow us on

ಬೆಂಗಳೂರು: ಲೋಕಾಯುಕ್ತ (Lokayukta) ಬಲೆಗೆ ಬೆಸ್ಕಾಂ (BESCOM) ಉತ್ತರ ವಿಭಾಗ ಎಇ ಆನಂದ್  ಬಿದಿದ್ದಾರೆ. ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 40 ಸಾವಿರ ರೂ. ಲಂಚ ಪಡೆಯುವ ವೇಳೆ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದಿದ್ದಾರೆ. ಎಇ ಆನಂದ್ ಎಲೆಕ್ಟ್ರಿಕ್ ಮೀಟರ್ ಸಂಪರ್ಕ ನೀಡಲು 50 ಸಾವಿರ ಲಂಚ ಕೇಳಿದ್ದರು. ಈ ಹಿನ್ನೆಲೆ 40 ಸಾವಿರ ರೂ ಲಂಚವನ್ನು ಬೆಂಗಳೂರಿನ ರಾಜಾಜಿನಗರದ ಮುಖ್ಯ ರಸ್ತೆಯಲ್ಲಿ ಪಡೆಯುವ ವೇಳೆ ಲೋಕಾಯುಕ್ತ ಎಸ್​ಪಿ ಅಶೋಕ್ ನೇತೃತ್ವದ ತಂಡ ದಾಳಿ ಮಾಡಿ ಆನಂದ್​ನನ್ನು ಬಂಧಿಸಿದ್ದಾರೆ.

ಆನಂದ್​ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಕೇಸ್ ದಾಖಲಿಸಿ ವಶಕ್ಕೆ ಪಡೆದಿದ್ದಾರೆ. ಆರೋಪಿ ಆನಂದ್​​ನ್ನು ಸದ್ಯ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ಪರವಾನಗೆ ಪಡೆಯದ, ರಿನಿವಲ್ ಆಗದ ಕ್ಲಿನಿಕ್​ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳ ದಾಳಿ

ನೆಲಮಂಗಲ: ನೆಲಮಂಗಲ ಪಟ್ಟಣದಲ್ಲಿ ಪರವಾನಗೆ ಪಡೆಯದ, ರಿನಿವಲ್ ಆಗದ ಕ್ಲಿನಿಕ್​, ಲ್ಯಾಬ್‌ಗಳ ಮೇಲೆ ಆರೋಗ್ಯ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತಾಲೂಕು ವೈದ್ಯಾಧಿಕಾರಿ ಹೇಮಲತಾ ಹಾಗೂ ತಂಡ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. KPME ಆ್ಯಕ್ಟ್ ಅಡಿ ನೋಂದಣಿ ಮಾಡಿಕೊಳ್ಳದ ಕ್ಲಿನಿಕ್​ಗೆ ನೋಟಿಸ್ ನೀಡಿದ್ದಾರೆ. ಹಾಗೇ ಸೂಕ್ತ ದಾಖಲೆಗಳಿಲ್ಲದ ಕ್ಲಿನಿಕ್‌ಗಳನ್ನು ಕೂಡಲೇ ಮುಚ್ಚುವಂತೆ ಸೂಚನೆ ನೀಡಿದ್ದಾರೆ.
ವೈದ್ಯಾಧಿಕಾರಿ ಹೇಮಲತಾ, ಮಲ್ಲಿಗೆ ಪಾಲಿ ಕ್ಲಿನಿಕ್, ಕಾಮಧೇನು ಡಯಾಗ್ನೋಸ್ಟಿಕ್ ಲ್ಯಾಬ್ ಹಾಗೂ ಶ್ರೀಗಣೇಶ ಕ್ಲಿನಿಕ್​ನ್ನು ಸೀಜ್ ​ಮಾಡಿದ್ದಾರೆ. ಆರ್​​ಐ, ವಿಎ, ನೆಲಮಂಗಲ ಪೊಲೀಸರ ನೇತೃತ್ವದಲ್ಲಿ ದಾಳಿ ನಡೆದಿದೆ.

ಗಾಂಜಾ ಬೆಳೆದಿದ್ದವನ ಮನೆ ಮೇಲೆ ಸೈಬರ್ ಕ್ರೈಂ ಪೊಲೀಸರ ದಾಳಿ

ಚಾಮರಾಜನಗರ: ಗಾಂಜಾ ಬೆಳೆದಿದ್ದವನ ಮನೆ ಮೇಲೆ ಸೈಬರ್ ಕ್ರೈಂ ಪೊಲೀಸರು ದಾಳಿ ಮಾಡಿ ಓರ್ವನನ್ನು ಬಂಧಿಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿಯ ಶಿವನಾಗಶೆಟ್ಟಿ ಬಂಧಿತ ಆರೋಪಿ. ಪೊಲೀಸರ ದಾಳಿ ವೇಳೆ 6 ಗಾಂಜಾ ಗಿಡ, 5 ಕೆಜಿ ಜಿಂಕೆ ಮಾಂಸ, 5 ಕರಡಿ ಉಗುರು ಹಾಗೂ 21 ಕಾಡುಬೆಕ್ಕಿನ ಉಗುರು ಪತ್ತೆಯಾಗಿವೆ. ಪೊಲೀಸರು 1 ನಾಡಬಂದೂಕು, 30 ಸಿಡಿಮದ್ದು ಜಪ್ತಿ ಮಾಡಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ಪೊಲೀಸರಿಂದ ತೀವ್ರ ಹುಡುಕಾಟ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ