ಬೆಂಗಳೂರಿನ ಕಂದಾಯ ಭವನಗಳಿಗೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ತಂಡ

ಬೆಂಗಳೂರು ನಗರದ ಕೆ.ಆರ್.ಪುರಂ, ಯಲಹಂಕ, ಅನೇಕಲ್​ನ ಕಂದಾಯ ಭವನಗಳಿಗೆ ಉಪಲೋಕಾಯುಕ್ತರು ಹಾಗೂ ಪೊಲೀಸರು ಜಂಟಿಯಾಗಿ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ್ದಾರೆ.

ಬೆಂಗಳೂರಿನ ಕಂದಾಯ ಭವನಗಳಿಗೆ ದಿಢೀರ್ ಭೇಟಿ ನೀಡಿದ ಉಪಲೋಕಾಯುಕ್ತ ತಂಡ
ಕಂದಾಯ ಭವನಗಳಲ್ಲಿ ಉಪಲೋಕಾಯುಕ್ತ ಅಧಿಕಾರಿಗಳ ಭೇಟಿ
TV9kannada Web Team

| Edited By: Vivek Biradar

Sep 27, 2022 | 8:01 PM

ಬೆಂಗಳೂರು: ನಗರದ ಕೆ.ಆರ್.ಪುರಂ, ಯಲಹಂಕ, ಅನೇಕಲ್​ನ ಕಂದಾಯ ಭವನಗಳಿಗೆ ಉಪಲೋಕಾಯುಕ್ತರು ಹಾಗೂ ಪೊಲೀಸರು ಜಂಟಿಯಾಗಿ ದಿಢೀರ್ ಭೇಟಿ ನೀಡಿ ಕಡತಗಳನ್ನು ಪರಿಶೀಲಿಸಿದ್ದಾರೆ. ನಿಗದಿತ ಅವಧಿಯಲ್ಲಿ ಕಡತ ವಿಲೇವಾರಿ ಮಾಡದಿರುವುದು, ಖಾತಾ, ಭೂ ಪರಿವರ್ತನೆ ಮಾಡಲು ಹಣ ಬೇಡಿಕೆ, ಸಿಬ್ಬಂದಿ ಕೊರತೆ ಸೇರಿದಂತೆ ವಿವಿಧ ದೂರುಗಳ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆ ಇಬ್ರಾಹಿಂ, ಡೆಪ್ಯುಟಿ ರಿಜಿಸ್ಟರ್, ಸುದೇಶ್ ಪರದೇಶಿ, ಅಡಿಷನಲ್ ರಿಜಿಸ್ಟರ್ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದಾರೆ. ಕಂದಾಯ ಭವನದ ಯಾವ್ಯಾವ ಶಾಖೆಗಳಲ್ಲಿ ಎಷ್ಟು ಕಡತಗಳು ಎಷ್ಟು ತಿಂಗಳಿನಿಂದ ಬಾಕಿ ಇದೆ, ಕಾರಣವೇನು ಎಂಬ ಬಗ್ಗೆ ಮಾಹಿತಿ ಪಡೆದು ವಾಪಾಸಾಗಿದ್ದಾರೆ.

ಬೆಂಗಳೂರು ಡಿಸಿ ಕಚೇರಿ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು: ಬೆಂಗಳೂರು ಜಿಲ್ಲಾಧಿಕಾರಿಯ ಕಚೇರಿ ಮೇಲೆ ಲೋಕಾಯುಕ್ತ (Lokayukta) ಅಧಿಕಾರಿಗಳು ದಾಳಿ ಮಾಡಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್​ಗಳ ಕಚೇರಿ ಮೇಲೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಈ ಹಿಂದೆ ಜಿಲ್ಲಾಧಿಕಾರಿಗಳ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು.

ಎಸಿಬಿ ದಾಳಿ ಮಾಡಿದ ಪ್ರಕರಣ

ಮೇ 21ರಂದು ಎಸಿಬಿ ಬೆಂಗಳೂರು ಜಿಲ್ಲಾಧಿಕಾರಿ ಕಚೇರಿ ಮೇಲೆ ದಾಳಿ ಮಾಡಿತ್ತು. ಉಪ ತಹಶೀಲ್ದಾರ್ ಮಹೇಶ್, ಗುತ್ತಿಗೆ ನೌಕರ ಚೇತನ್ ಅವರನ್ನು ಬಂದಿಸಲಾಗಿತ್ತು. ದೂರುದಾರರಿಂದ 5 ಲಕ್ಷ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ದಾಳಿ ನಡೆದಿದ್ದು ಡಿಸಿ ಮಂಜುನಾಥ್ ಪಾತ್ರದ ಕುರಿತು ಆರೋಪ ಕೇಳಿ ಬಂದಿತ್ತು.

ಏನಿದು ಪ್ರಕರಣ?

ಅಜಂ ಪಾಷಾ ಎಂಬುವವರಿಂದ ಹಣಕ್ಕೆ ಬೇಡಿಕೆಯಿಟ್ಟ ಆರೋಪ ಮಂಜುನಾಥ್ ವಿರುದ್ಧ ಕೇಳಿ ಬಂದಿತ್ತು. ಆನೇಕಲ್ ತಾಲ್ಲೂಕಿನ ಕೂಡ್ಲು ಗ್ರಾಮದ 38 ಗುಂಟೆ ಜಮೀನಿಗಾಗಿ ಗಲಾಟೆಯಾಗಿತ್ತು. ಜಮೀನು ಒಡೆತನಕ್ಕೆ ಸಂಬಂಧಿಸಿದ ವ್ಯಾಜ್ಯ ಡಿಸಿ ಕೋರ್ಟಿಗೆ ಬಂದಿತ್ತು. ಪರವಾಗಿ ಆದೇಶ ನೀಡಲು ಲಂಚಕ್ಕೆ ಬೇಡಿಕೆಯಿಟ್ಟಿದ್ದಾಗಿ ದೂರುದಾರ ಆರೋಪಿಸಿದ್ದರು. ಜಿಲ್ಲಾಧಿಕಾರಿ ಮಂಜುನಾಥ್‌ 5 ಲಕ್ಷ ಲಂಚ ಪಡೆದಿದ್ದಾರೆ ಎಂದು ಆರೋಪ ಕೇಳಿ ಬಂದಿದ್ದು ತನ್ನ ಅಧೀನ ಅಧಿಕಾರಿಯ ಮೂಲಕ ಹಣ ಪಡೆದಿದ್ದ ಆರೋಪಿಸಲಾಗಿತ್ತು.

ಮೇ 21ರಂದು ಡಿ.ಸಿ ಕಚೇರಿ ಮೇಲೆ ದಾಳಿ ನಡೆಸಿದ್ದ ಎಸಿಬಿ5 ಲಕ್ಷ ಹಣದ ಸಮೇತ ಉಪ ತಹಶಿಲ್ದಾರ್ ಮಹೇಶ್ ಹಾಗೂ ಗುತ್ತಿಗೆ ನೌಕರ ಚೇತನ್ ಅವರನ್ನು ಬಂಧಿಸಿತ್ತು. ಬಳಿಕ ಎಫ್‌ಐಆರ್‌ ದಾಖಲಿಸಿ ಎಸಿಬಿ ತನಿಖೆ ಕೈಗೊಂಡಿತ್ತು. ತನ್ನ ವಿರುದ್ಧದ ಎಫ್‌ಐಆರ್‌ ಹಾಗೂ ಎಸಿಬಿ ತನಿಖೆ ರದ್ದುಪಡಿಸುವಂತೆ ಕೋರಿ ಅರ್ಜಿ ಮಂಜುನಾಥ್ ಅರ್ಜಿ ಸಲ್ಲಿಸಿದ್ದರು.

ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಂಜುನಾಥ್ ಅರೆಸ್ಟ್ ಆಗಿದ್ದು ಹೇಗೆ?

ಐಎಎಸ್ ಅಧಿಕಾರಿ ಬೆಂಗಳೂರು ನಿರ್ಗಮಿತ ಡಿಸಿ ಮಂಜುನಾಥ್.ಜೆ. ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ A3 ಆರೋಪ ಹೊಂದಿದ್ದರು. ಇಷ್ಟಕ್ಕೂ ಬೆಂಗಳೂರು ಡಿಸಿಯಾಗಿದ್ದ ಮಂಜುನಾಥ್ ಅರೆಸ್ಟ್ ಆಗಿದ್ದು ಹೇಗೆ ಎಂದು ಹೇಳುತ್ತೇವೆ ಮುಂದಕ್ಕೆ ಓದಿ. ಎಸಿಬಿ ಬಿ ರಿಪೋರ್ಟ್​ಗಳ ಮಾಹಿತಿ ಸಲ್ಲಿಸದ ಹಿನ್ನೆಲೆ ಹೈಕೋರ್ಟ್ ಡಿಪಿಎಆರ್ ಕಾರ್ಯದರ್ಶಿ ಖುದ್ದು ಹಾಜರಿಗೆ ಸೂಚನೆ ನೀಡಿತ್ತು.

ಅದರಂತೆ, ಎಸಿಬಿ ಎಡಿಜಿಪಿಯ ಸರ್ವಿಸ್ ರೆಕಾರ್ಡ್ ಹಾಜರುಪಡಿಸಲು ಖಡಕ್ ಸೂಚನೆ ನೀಡಿದ ಕೋರ್ಟ್, ಡಿಸಿ ಕಚೇರಿ ಲಂಚ ಪ್ರಕರಣ 2ನೇ ಆರೋಪಿಯ ನೇಮಕಾತಿ ವಿವರ ನೀಡುವಂತೆ ಸೂಚಿಸಿತ್ತು. ಅಲ್ಲದೆ ಗುತ್ತಿಗೆ ನೌಕರನಾಗಿ ನೇಮಿಸಿದ್ದು ಯಾರೆಂದು ತಿಳಿಸುವಂತೆ ಸೂಚಿಸಿ ಏನು ನಡೆಯುತ್ತಿದೆ ಅಡ್ವೊಕೆಟ್ ಜನರಲ್ ಅವರೇ ಎಂದು ಪ್ರಶ್ನಿಸಿದೆ. ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿ ನೇಮಿಸಿದ್ದಾರೆ. ಫೋನ್​ನಲ್ಲಿ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿಯ ಒಪ್ಪಿಗೆ ಇಲ್ಲದೇ ಈತ 5 ಲಕ್ಷ ಲಂಚ ಪಡೆಯಲು ಸಾಧ್ಯವೇ? ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾ.ಹೆಚ್.ಪಿ.ಸಂದೇಶ್ ಪ್ರಶ್ನೆಗಳ ಸುರಿಮಳೆ ಗೈದಿದ್ದರು.

ಮೂರ್ನಾಲ್ಕು ಬಾರಿ ಮಂಜುನಾಥ್​​ಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ ಕಳುಹಿಸುತ್ತಿದ್ದ ಎಸಿಬಿಯನ್ನು ತರಾಟೆಗೆ ತೆಗೆದುಕೊಂಡು ಕೋರ್ಟ್, ಎಸಿಬಿ ನಡೆ ಕುರಿತು ಅಸಮಾಧಾನ ಹೊರಹಾಕಿ ಎಸಿಬಿ‌‌ ಕಲೆಕ್ಷನ್ ಸೆಂಟರ್ ಎಂದು ನೇರವಾಗಿ ಚಾಟಿ ಬೀಸಿತ್ತು. ಹೈಕೋರ್ಟ್ ಅಸಮಧಾನದ ಬೆನ್ನಲ್ಲೆ ಅಲರ್ಟ್ ಆದ ಎಸಿಬಿ ಅಧಿಕಾರಿಗಳು ಯಶವಂತಪುರದಲ್ಲಿರುವ ಮಂಜುನಾಥ್.ಜೆ ಅವರ ಫ್ಲಾಟ್​ಗೆ ನೇರವಾಗಿ ತೆರಳಿ ಬಂಧನ ಮಾಡಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada