AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಡಾಳ್ ವಿರೂಪಾಕ್ಷಪ್ಪ ಮನೆ ಜಾಲಾಡಿದ ಲೋಕಾಯುಕ್ತ: ಮಹತ್ವದ ದಾಖಲೆಗಳು ವಶಕ್ಕೆ

ಮಾಡಾಳ್​ ವಿರೂಪಾಕ್ಷಪ್ಪ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಲೋಕಾಯುಕ್ತ ಪೊಲೀಸರಿಂದ ಕೆಎಸ್‌ಡಿಎಲ್ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದ್ದು, ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಾಡಾಳ್ ವಿರೂಪಾಕ್ಷಪ್ಪ ಮನೆ ಜಾಲಾಡಿದ ಲೋಕಾಯುಕ್ತ: ಮಹತ್ವದ ದಾಖಲೆಗಳು ವಶಕ್ಕೆ
ಮಾಡಾಳ್ ವಿರೂಪಾಕ್ಷಪ್ಪImage Credit source: vijaykarnataka.com
ಗಂಗಾಧರ​ ಬ. ಸಾಬೋಜಿ
|

Updated on: Mar 09, 2023 | 2:58 PM

Share

ಬೆಂಗಳೂರು: ಭ್ರಷ್ಟಾಚಾರದ ಆರೋಪಕ್ಕೆ ಸಿಕ್ಕಿರುವ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್​ ವಿರೂಪಾಕ್ಷಪ್ಪ( BJP MLA Madal Virupakshappa) ಪ್ರಕರಣಕ್ಕೆ ಹೊಸ ಟ್ವಿಸ್ಟ್​​​​ ಸಿಕ್ಕಿದೆ. ನಿನ್ನೆ (ಮಾ. 08) ಲೋಕಾಯುಕ್ತ ಪೊಲೀಸರಿಂದ ಕೆಎಸ್‌ಡಿಎಲ್ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದ್ದು, ಇಡಿ ಪ್ರಕರಣದಲ್ಲಿ ಮಹತ್ವದ ದಾಖಲೆಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಟೆಂಡರ್​ ವಿಚಾರಕ್ಕೆ ಸಂಬಂಧಿಸಿದಂತೆ ಗೋಲ್​ಮಾಲ್​​ ನಡೆದಿರುವುದಕ್ಕೆ ಮಹತ್ವದ ದಾಖಲೆಗಳು ಸಿಕ್ಕಿದ್ದು, ಅಧಿಕಾರಿಗಳಿಗೆ ಸಿಕ್ಕಿರುವ ದಾಖಲೆಯಲ್ಲಿ ಹಣದ ವ್ಯವಹಾರದ ಬಗ್ಗೆ ಮಾಹಿತಿ ಇದೆ ಎನ್ನಲಾಗುತ್ತಿದೆ. ಕೆಳದ 4 ದಿನಗಳಿಂದ ಅಧಿಕಾರಿಗಳು ಹುಡಕಾಟ ನಡೆಸಿದ್ದರು. ನಿನ್ನೆ ತಜ್ಞರ ಜೊತೆ ದಾಳಿ ಮಾಡಿದ್ದು, ಡಿವಿಆರ್‌ಗಳನ್ನ ಮತ್ತು ಸರ್ವರ್‌ ವಶಕ್ಕೆ ಪಡೆದಿದ್ದಾರೆ. ಇದೇ ದಾಖಲೆಗಳನ್ನ ಇಟ್ಟು ಎಂಡಿ ಮತ್ತು ಕೆಲ ಅಧಿಕಾರಿಗಳ ವಿಚಾರಣೆ ನಡೆಯಲಿದೆ.

ಮಾಡಾಳ್ ವಿರೂಪಾಕ್ಷಪ್ಪಗೆ ಜಾಮೀನು ಸಿಕ್ಕಿದ್ದೇಕೆ?

ಇನ್ನು ಮಾಡಾಳ್​ ವಿರೂಪಾಕ್ಷಪ್ಪ ಪುತ್ರನ ಮನೆಯಲ್ಲಿ ಕೂಡ ಕೋಟಿ ಕೋಟಿ ಹಣ ಸಿಕ್ಕಿದೆ. ಈ ಸಂಬಂಧಿಸಿದಂತೆ ಆರೋಪಿಯಾಗಿ ಕಳೆದ ಕೆಲ ದಿನಗಳಿಂದ ಮಾಡಾಳ್ ವಿರೂಪಾಕ್ಷಪ್ಪ ತಲೆಮರಿಸಿಕೊಂಡಿದ್ದಾರೆ. ಆದರೆ ಕರ್ನಾಟಕ ಹೈಕೋರ್ಟ್​ ಮಧ್ಯಂತರ ಜಾಮೀನು ನೀಡಿದೆ. ನ್ಯಾಯಮೂರ್ತಿ ಕೆ. ನಟರಾಜನ್​ ಏಕಸದಸ್ಯತ್ವದ ಪೀಠ, 5 ಲಕ್ಷ ರೂ. ಮೌಲ್ಯದ ಬಾಂಡ್​, ಇಬ್ಬರು ಶ್ಯೂರಿಟಿ ನೀಡುವಂತೆ ಆದೇಶಿಸಿದೆ.

ಇದನ್ನೂ ಓದಿ: ಶಾಸಕ ಮಾಡಾಳ್​ ವಿರೂಪಾಕ್ಷಪ್ಪ ಪ್ರಕರಣದ ಇಬ್ಬರು ತನಿಖಾಧಿಕಾರಿಗಳ ಬದಲಾವಣೆ, ಅನುಮಾನ ಹುಟ್ಟುಹಾಕಿದ ಬದಲಾವಣೆ

ಅಲ್ಲದೇ ಆದೇಶ ತಲುಪಿದ 48 ಗಂಟೆಯಲ್ಲಿ ತನಿಖೆಗೆ ಹಾಜರಾಗಬೇಕು ಎಂದು ಖಡಕ್ ಸೂಚನೆ ನೀಡಿ ಮುಂದಿನ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ. ಹಾಗಾದರೆ, ಗಂಭೀರ ಆರೋಪ ಇರುವ ಮಾಡಾಳ್ ವಿರೂಪಾಕ್ಷಪ್ಪ ಜಾಮೀನು ಸಿಕ್ಕಿರುವುದು ಅಚ್ಚರಿಗೆ ಕಾರಣವಾಗಿದೆ. ಬಂಧನದ ಭೀತಿಯಲ್ಲಿದ್ದ ಮಾಡಾಳ್​ಗೆ ಮಧ್ಯಂತರ ಜಾಮೀನು ಸಿಗಲು ಕಾರಣಗಳು ಏನು? ಎನ್ನುವುದು ಈ ಕೆಳಗಿನಂತಿವೆ ನೋಡಿ.

  • ದೂರಿನಲ್ಲಿ ಮಾಡಾಳ್ ಲಂಚಕ್ಕೆ ಡಿಮಾಂಡ್, ಲಂಚ ಪಡೆದ ಉಲ್ಲೇಖವಿಲ್ಲ.
  • ಮಾಡಾಳ್ ವಿರುದ್ಧದ ಎಫ್ಐಆರ್​​ನಲ್ಲಿ ಅಪರಾಧವೆನ್ನಿಸುವಂತಹ ಯಾವುದೇ ಆರೋಪಗಳಿಲ್ಲ.
  • ಟೆಂಡರ್ ನೀಡುವ ಮೊದಲು ಲಂಚ ಕೇಳಿರುವ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ.
  • ಕಾನೂನು ಪ್ರಕಾರವೇ ಟೆಂಡರ್ ಕರೆದು ಖರೀದಿ ಆದೇಶ ನೀಡಲಾಗಿದೆ.
  • ಟೆಂಡರ್ ಅಂತಿಮಗೊಳಿಸುವ ಅಧಿಕಾರ ವಿರೂಪಾಕ್ಷಪ್ಪನವರದ್ದಲ್ಲ.
  • ಟೆಂಡರ್ ಅಂತಿಮಗೊಳಿಸುವುದಕ್ಕೆ ಅಧಿಕಾರಿಗಳ ಪ್ರತ್ಯೇಕ ಸಮಿತಿ ಇದೆ.
  • ಶಾಸಕ ಮಾಡಾಳ್ ಲಂಚಕ್ಕೆ ಬೇಡಿಕೆ ಇಟ್ಟ ಬಗ್ಗೆ ದೂರಿನಲ್ಲಿ ಉಲ್ಲೇಖವಿಲ್ಲ.
  • ಕೇವಲ ಮಗನೊಂದಿಗೆ ಮಾತನಾಡುವಂತೆ ತಿಳಿಸಿರುವುದಾಗಿ ಉಲ್ಲೇಖ.
  • ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ.
  • ಬಂಧಿಸಿದ ಆರೋಪಿಗಳ ಕಸ್ಟಡಿ ಕೋರಿಯೂ ಲೋಕಾಯುಕ್ತ ಪೊಲೀಸರು ಯಾವುದೇ ಅರ್ಜಿ ಸಲ್ಲಿಸಿಲ್ಲ.
  • ರಿಮಾಂಡ್ ಅರ್ಜಿಯಲ್ಲಿ ಶಾಸಕರ ವಿರುದ್ಧ ದಾಖಲೆಗಳನ್ನು ನೀಡಿಲ್ಲ.
  • ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ರಾಜಕೀಯ ಪಿತೂರಿ ನಡೆಸಲಾಗಿದ್ದು, ಕೆಎಸ್‌ಡಿಎಲ್​​ನ ಅಧ್ಯಕ್ಷರಿಗೆ ಟೆಂಡರ್ ನೀಡುವ ಅಧಿಕಾರವಿಲ್ಲ.

ಇದನ್ನೂ ಓದಿ: ಉದ್ಯಮಿಯ ಸ್ಮಾರ್ಟ್​​ವಾಚ್​ನಲ್ಲಿ ಸರೆಯಾಯ್ತು ಮಾಡಾಳ್ ಪ್ರಶಾಂತ್​​ ಲಂಚ ಪ್ರಕರಣ; ಬಿಜೆಪಿ ಶಾಸಕನ ಮಗ ಬಲೆಗೆ ಬಿದ್ದದ್ದು ಹೀಗೆ

ಮಾಡಾಳ್ ವಿರೂಪಾಕ್ಷಪ್ಪ ಹೇಳುವುದೇನು?

ಲೋಕಾಯುಕ್ತ ದಾಳಿಯ ವೇಳೆ ಸಿಕ್ಕ ಹಣ ಅಕ್ರಮವಲ್ಲ, ತಾನೊಬ್ಬ ಅಡಕೆ ಬೆಳೆಗಾರ ಮತ್ತು ಉದ್ಯಮಿ. ಯಾವುದೇ ಅಡಕೆ ಬೆಳೆಗಾರನ ಮನೆಗೆ ಹೋದರೂ ಮನೆಯಲ್ಲಿ ಕನಿಷ್ಟವೆಂದರೂ 2-3 ಕೋಟಿ ರೂಪಾಯಿ ಸಿಗುತ್ತದೆ ಎಂದು ಜಾಮೀನು ಸಿಕ್ಕ ಬಳಿಕ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮಾಡಾಳ್ ವಿರೂಪಾಕ್ಷಪ್ಪ ಹೇಳಿದ್ದಾರೆ. ಪತ್ರಕರ್ತರೊಂದಿಗೆ ದಾವಣಗೆರೆಯಲ್ಲಿ ಮಾತಾಡಿದ ಅವರು, ತಾನು ಎಲ್ಲೂ ಹೋಗಿರಲಿಲ್ಲ, ಆರೋಪ ಮೈಮೇಲೆ ಬಂದಿದ್ದರಿಂದ ಜನರೆದುರು ಬರಲಿಲ್ಲ ಎಂದು ಅವರು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.  

ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
ಗಿಲ್ಲಿ ಅವತಾರವನ್ನೇ ಬದಲಿಸಿದ ಮನೆ ಮಂದಿ; ನೀವು ನಗೋದು ಗ್ಯಾರಂಟಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
2 ವರ್ಷ ಹೋಟೆಲ್ ರೂಮ್ ಕೊಟ್ಟಿದ್ದಕ್ಕೆ 3 ಅಡಿಯಷ್ಟು ಕಸ ತುಂಬಿ ಹೋದ ಅತಿಥಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಫ್ಯಾಮಿಲಿ ವೀಕ್: ರಾಶಿಕಾ ತಾಯಿ ಮಾತಿಗೆ ಸ್ಟನ್ ಆದ ಗಿಲ್ಲಿ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ಉಸಿರಾಟ ಸಮಸ್ಯೆ ಎಂದು ಆಸ್ಪತ್ರೆಗೆ ಬಂದ ರೋಗಿಯ ಮೇಲೆ ವೈದ್ಯನಿಂದ ಹಲ್ಲೆ
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಸ್ತೆ ಅಡ್ಡಗಟ್ಟಿ ಬರ್ತ್‌ಡೇ ಆಚರಣೆ, ಪುಂಡರ ಹಾವಳಿ ವಿಡಿಯೋ ವೈರಲ್
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರಜತ್ ಅವರ ಸಂಭಾವನೆ ಎಷ್ಟು? ಓಪನ್ ಆಗಿ ಮಾತನಾಡಿದ ಬುಜ್ಜಿ
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ರೈಲಿನ ಶೌಚಾಲಯದ ಪಕ್ಕ ಕುಳಿತು ಪ್ರಯಾಣಿಸಿದ ಕ್ರೀಡಾ ಪಟುಗಳು
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ಬೆಂಗಳೂರಲ್ಲಿ ನ್ಯೂ ಇಯರ್ ಸೆಲೆಬ್ರೇಟ್ ಮಾಡ್ತೀರಾ? ಈ ವಿಚಾರಗಳನ್ನು ತಿಳಿದಿರಿ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ತಿರುಮಲ ವೆಂಕಟೇಶ್ವರನ ದರ್ಶನಕ್ಕೂ ಮುನ್ನ ಭೂವರಾಹ ಸ್ವಾಮಿ ದರ್ಶನ ಕಡ್ಡಾಯ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ
ಇಂದು ಈ ರಾಶಿಯವರ ವ್ಯವಹಾರಗಳಲ್ಲಿ ಯಶಸ್ಸು ಲಭಿಸಲಿದೆ