ಮದುವೆಯಾಗಿದ್ದರೂ ಕಾಲೇಜು ಹುಡುಗಿ ಮೇಲೆ ಲವ್; ವಿವಾಹಕ್ಕೆ ನಿರಾಕರಿಸಿದಳೆಂದು ಚಾಕು ಇರಿದ ದುರುಳ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jan 20, 2023 | 6:43 PM

ಮದುವೆಯಾದರೂ ಕಾಲೇಜು ಓದುತ್ತಿದ್ದ ಯುವತಿಯನ್ನ ಪ್ರೀತಿಸುತ್ತಿದ್ದ ಪಾಗಲ್​ ಪ್ರೇಮಿ, ಮದುವೆಯಾಗುವಂತೆ ಪೀಡಿಸಿದ್ದು, ವಿವಾಹಕ್ಕೆ ಒಪ್ಪದ ಯುವತಿಯನ್ನ ಬರ್ಬರವಾಗಿ ಕೊಲೆ ಮಾಡಿದ್ದಾನೆ.

ಮದುವೆಯಾಗಿದ್ದರೂ ಕಾಲೇಜು ಹುಡುಗಿ ಮೇಲೆ ಲವ್; ವಿವಾಹಕ್ಕೆ ನಿರಾಕರಿಸಿದಳೆಂದು ಚಾಕು ಇರಿದ ದುರುಳ
ಆರೋಪಿ ಮಧುಚಂದ್ರ
Follow us on

ಬೆಂಗಳೂರು: ಜಿಲ್ಲೆಯ ಯಲಹಂಕ ತಾಲೂಕಿನ ಶ್ಯಾನಭೋಗನಹಳ್ಳಿ ನಿವಾಸಿಯಾದ ರಾಶಿ ಎಂಬ ಯುವತಿ ಜೊತೆ ಚಾಲಕ ಮಧುಚಂದ್ರ ತನಗೆ ಮದುವೆಯಾಗಿದ್ದರೂ ಈ ಯುವತಿಯನ್ನ ಪ್ರೀತಿ ಮಾಡುತ್ತಿದ್ದ. ನಂತರ ಮದುವೆಯಾಗುವ ಸಮಯದಲ್ಲಿ ಇತನಿಗೆ ಮೊದಲೇ ಮದುವೆಯಾಗಿದೆ ಎಂದು ರಾಶಿಗೆ ಗೊತ್ತಾಗಿದ್ದು ಮದುವೆಯಾದವನ ಜೊತೆ ಎರಡನೇ ಮದುವೆಯಾಗಲು ರಾಶಿ ನಿರಾಕರಿಸಿದ್ದಾಳೆ. ಈ ಕಾರಣಕ್ಕೆ ನಿನ್ನೆ(ಜ.17) ಸಂಜೆ ಗ್ರಾಮದ ಬಳಿಗೆ ಬಂದವನೆ ಕಾಲೇಜು ಮುಗಿಸಿಕೊಂಡು ಬರ್ತಿದ್ದ ಯುವತಿಯನ್ನ ಬೆನ್ನತ್ತಿ ಬಂದು ಚಾಕುವಿನಿಂದ ಬರ್ಬರವಾಗಿ ಕೊಲೆ ಮಾಡಿ ನಂತರ ಎಸ್ಕೇಪ್ ಆಗಿದ್ದಾನೆ.

ಇನ್ನು ರಾಶಿ ಯಲಹಂಕದ ಪದವಿ ಪೂರ್ವ ಕಾಲೇಜಿನಲ್ಲಿ ಬಿಎ ವ್ಯಾಸಾಂಗ ಮಾಡುತ್ತಿದ್ದಳು. ಜೊತೆಗೆ ಕಾಲೇಜು ಇಲ್ಲದ ದಿನಗಳಲ್ಲಿ ಮನೆ ಮತ್ತು ವಿಧ್ಯಾಭ್ಯಾಸಕ್ಕೆ ನೆರವಾಗಲಿ ಎಂದು ಗ್ರಾಮದಲ್ಲಿದ್ದ ಸೀಬೆ ತೋಟಕ್ಕೆ ಕೆಲಸಕ್ಕೆ ಹೋಗುತ್ತಿದ್ದಳು. ಇದೇ ವೇಳೆ ಸೀಬೆಹಣ್ಣು ಸಾಗಿಸಲು ಬರುತ್ತಿದ್ದ ಮಧುಚಂದ್ರ ಎನ್ನುವ ಟೆಂಪೋ ಚಾಲಕನ ಜೊತೆ ಆಕೆಗೆ ಸ್ನೇಹವಾಗಿದ್ದು ಮುಂದೆ ಸ್ನೇಹ ಪ್ರೀತಿಗೆ ತಿರುಗಿದೆ. ನಂತರ ಮದುವೆ ಮಾಡಿಕೊಳ್ಳೋಣ ಎನ್ನುವ ವಿಷಯ ಬಂದಾಗ ಮಧುಚಂದ್ರಗೆ ಈ ಹಿಂದೆಯೇ ಮದುವೆಯಾಗಿದೆ ಎಂಬ ವಿಚಾರ ಯುವತಿಗೆ ಗೊತ್ತಾಗಿದೆ. ಹೀಗಾಗಿ ಮದುವೆಯಾದವನ ಜೊತೆ ಎರಡನೆ ಮದುವೆಯಾಗಲು ರಾಶಿ ನಿರಾಕರಿಸಿದ್ದು ಪ್ರೀತಿಯು ಬೇಡ ಎಂದು ದೂರವಿಟ್ಟಿದ್ದಳಂತೆ. ಹೀಗಾಗಿ ಹಲವು ಭಾರಿ ರಾಶಿ ಮನವೊಲಿಸಲು ಯತ್ನಿಸಿದ ಪಾಗಲ್ ಮಧುಚಂದ್ರ ಆಕೆಯ ಹಿಂದೆ ದುಂಬಾಲು ಬಿದ್ದಿದ್ದಾನೆ. ಎಷ್ಟೆ ಹೇಳಿದರು ಕೇಳದ ಹಿನ್ನೆಲೆಯಲ್ಲಿ ಕೊಲೆ ಮಾಡುವ ನಿರ್ಧಾರ ಮಾಡಿದ್ದಾನೆ.

ಗ್ರಾಮದ ಹೊರ ವಲಯದ ಖಾಸಗಿ ಬಡಾವಣೆ ಬಳಿ ಚಾಕುವಿನಿಂದು ಇರಿದು ಆರೋಪಿ ಎಸ್ಕೇಪ್ ಆಗ್ತಿದ್ದಂತೆ ಮೃತ ಯುವತಿ ರಾಶಿ ಅಲ್ಲಿಂದ ಗ್ರಾಮಕ್ಕೆ ಬಂದು ಜೀವ ಉಳಿಸಿಕೊಳ್ಳುವ ಯತ್ನ ಮಾಡಿದ್ದಾಳೆ. ಆದರೆ ತೀವ್ರ ರಕ್ತ ಸ್ರಾವ ಆಗುತ್ತಿದ್ದರಿಂದ ನರಳಾಡಿ ಸಾವನ್ನಪಿದ್ದಾಳೆ. ಇನ್ನು ಕೊಲೆ ಮಾಡಿದ ಆರೋಪಿ ಮಧುಚಂದ್ರ ಕಳೆದ ತಿಂಗಳು ರಾಶಿ ಮನೆ ಬಳಿಗೆ ಬಂದವನೆ ಆಕೆ ಕಾಲ್ ಮಾಡುತ್ತಿಲ್ಲ, ಮಾತನಾಡ್ತಿಲ್ಲ ಎಂದು ಗಲಾಟೆ ಮಾಡಿದ್ದನಂತೆ. ಜೊತೆಗೆ ತನ್ನನ್ನು ಮದುವೆಯಾಗಲೇ ಬೇಕು ಎಂದು ರಾಶಿಗೆ ಪದೇ ಪದೇ ಕಿರುಕುಳ ನೀಡುತ್ತಿದ್ದ ಕಾರಣ ರಾಶಿ ಕುಟುಂಬಸ್ಥರು ಗಟ್ಟಿಯಾಗೆ ಬುದ್ದಿವಾದ ಹೇಳಿದ್ರಂತೆ. ಹೀಗಾಗಿ ಅದನ್ನೆ ಮನಸ್ಸಿನಲ್ಲಿಟ್ಟುಕೊಂಡ ಮಧುಚಂದ್ರ ಮದುವೆಯಾಗದಿದ್ರೆ ಕೊಲೆ ಮಾಡೋದಾಗಿ ಬೆದರಿಕೆ ಹಾಕಿ ಬಂದಿದ್ದು ಬೆದರಿಕೆ ಹಾಕಿದಂತೆ ಕೊಲೆ ಮಾಡಿ ಎಸ್ಕೇಪ್ ಆಗಿದ್ದ.

ಇದನ್ನೂ ಓದಿ:Murder: ದೃಶ್ಯ ಸಿನಿಮಾ ರೀತಿಯಲ್ಲೇ ಕೊಲೆ; ಗಂಡನನ್ನು ಕೊಂದು, ಶವದ ಮೇಲೆ ಟ್ಯಾಂಕ್ ಕಟ್ಟಿದ ಹೆಂಡತಿ!

ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ರಾಜಾನುಕುಂಟೆ ಪೊಲೀಸರು ತನಿಖೆ ನಡೆಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಆರೋಪಿ ಮಧುಚಂದ್ರನನ್ನ ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಪ್ರೀತಿ ಮಾಡಿದ ತಪ್ಪಿಗೆ ಪ್ರಿಯಕರನಿಂದಲೆ ಯುವತಿ ಬರ್ಬರವಾಗಿ ಕೊಲೆಯಾಗಿ ಇಹಲೋಕ ತ್ಯಜಿಸಿದರೆ, ಇತ್ತ ಮಾಡಿದ ತಪ್ಪಿಗೆ ಕಂಬಿ ಎಣಿಸಲು ಪ್ರಿಯಕರ ಶ್ರೀಕೃಷ್ಣನ ಜನ್ಮಸ್ಥಾನ ಸೇರಿದ್ದಾನೆ.

ವರದಿ: ನವೀನ್ ಟಿವಿ9 ದೇವನಹಳ್ಳಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ