ಸಿಲಿಕಾನ್ ಸಿಟಿ ದೇವಸ್ಥಾನಗಳಿಗೂ ತಟ್ಟಿದ ಚಂದ್ರ ಗ್ರಹಣ ಎಫೆಕ್ಟ್: ನಾಳೆ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 27, 2023 | 4:07 PM

Lunar Eclipse 2023: ನಾಳೆ ರಾತ್ರಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ ಸಂಭವಿಸಲಿದೆ. ಹಾಗಾಗಿ ಸಿಲಿಕಾನ್ ಸಿಟಿ ದೇವಸ್ಥಾನಗಳಿಗೂ ಗ್ರಹಣದ ಎಫೆಕ್ಟ್ ತಟ್ಟಿದ್ದು, ನಾಳೆ ಬೆಂಗಳೂರಿನ ದೇವಸ್ಥಾನಗಳ ದರ್ಶನದ ಸಮಯದಲ್ಲಿ ವ್ಯತ್ಯಯವಾಗಿದೆ. ನಾಳೆ ಸಂಜೆ 6ಕ್ಕೆ ಕಾಡು ಮಲ್ಲೇಶ್ವರಂ ದೇವರ​​ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

ಸಿಲಿಕಾನ್ ಸಿಟಿ ದೇವಸ್ಥಾನಗಳಿಗೂ ತಟ್ಟಿದ ಚಂದ್ರ ಗ್ರಹಣ ಎಫೆಕ್ಟ್: ನಾಳೆ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು, ಅಕ್ಟೋಬರ್​​​ 27: ನಾಳೆ ರಾತ್ರಿ ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣ (Chandra Grahana) ಸಂಭವಿಸಲಿದೆ. ಹಾಗಾಗಿ ಸಿಲಿಕಾನ್ ಸಿಟಿ ದೇವಸ್ಥಾನಗಳಿಗೂ ಗ್ರಹಣದ ಎಫೆಕ್ಟ್ ತಟ್ಟಿದ್ದು, ನಾಳೆ ಬೆಂಗಳೂರಿನ ದೇವಸ್ಥಾನಗಳ ದರ್ಶನದ ಸಮಯದಲ್ಲಿ ವ್ಯತ್ಯಯವಾಗಿದೆ. ನಾಳೆ ಸಂಜೆ 6ಕ್ಕೆ ಕಾಡು ಮಲ್ಲೇಶ್ವರಂ ದೇವರ​​ ದರ್ಶನಕ್ಕೆ ನಿರ್ಬಂಧ ಹೇರಲಾಗಿದೆ. ಭಾನುವಾರ ಸಂಜೆ ಕಾಡು ಮಲ್ಲೇಶ್ವರಂ ದೇವರ ದರ್ಶನಕ್ಕೆ ಅವಕಾಶ​​ ಕಲ್ಪಿಸಲಾಗಿದೆ.

ಅದೇ ರೀತಿಯಾಗಿ ನಾಳೆ ಮಧ್ಯಾಹ್ನ 2ಗಂಟೆಗೆ ಬನಶಂಕರಿ ದೇವರ ದರ್ಶನಕ್ಕೆ ನಿರ್ಬಂಧಿಸಿದ್ದು, ಭಾನುವಾರ ಬೆಳಗ್ಗೆ 5 ಗಂಟೆಗೆ ಮತ್ತು ಸಂಜೆ 4ಗಂಟೆಗೆ ಮತ್ತೆ ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗಿದೆ ಎಂದು ದೇವಸ್ಥಾನ ಆಡಳಿತ ಮಂಡಳಿಯಿಂದ ಮಾಹಿತಿ ನೀಡಲಾಗಿದೆ.

ವರ್ಷದ ಕೊನೆಯ ಚಂದ್ರಗ್ರಹಣ ಅಕ್ಟೋಬರ್ 28-29 ರ ಮಧ್ಯರಾತ್ರಿ ಸಂಭವಿಸಲಿದೆ. ಭಾರತದ ಎಲ್ಲಾ ಸ್ಥಳಗಳಲ್ಲಿ ಗ್ರಹಣ ಗೋಚರಿಸುತ್ತಿದೆ. ಇದು ಭಾಗಶಃ ಚಂದ್ರಗ್ರಹಣವಾಗಿದೆ. ನಾಳೆ ರಾತ್ರಿ 11:30 ರಿಂದ ರಾತ್ರಿ ಮಧ್ಯರಾತ್ರಿ 3.36 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಬರಿಗಣ್ಣಿನಿಂದ ಚಂದ್ರಗ್ರಹಣ ವೀಕ್ಷಣೆ ಮಾಡಬಹುದು. ಅದರಿಂದ ಯಾವುದೇ ಹಾನಿಯಿಲ್ಲ.

ಇದನ್ನೂ ಓದಿ: Lunar eclipse 2023: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಶನಿವಾರ ದೇವರ ದರ್ಶನ ಸಮಯ ಬದಲು, ಚಂದ್ರ ಗ್ರಹಣ ಪ್ರಯುಕ್ತ ಅನ್ನದಾನ ಸೇವೆಯೂ ಬಂದ್

ಈ ಹಿನ್ನಲೆ ಗ್ರಹಣ ವೀಕ್ಷಣೆಗೆ ನೆಹರು ತಾರಾಲಯದ ಯೂಟ್ಯೂಬ್​ನಲ್ಲಿ ಲೈವ್ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದೆ. ಮಧ್ಯರಾತ್ರಿ ಚಂದ್ರ ಗ್ರಹಣ ವೀಕ್ಷಣೆಗೂ ನೆಹರು ತಾರಾಲಯದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಉಡುಪಿಯ ಕೃಷ್ಣಮಠದಲ್ಲಿ ದೈನಂದಿನ ಪೂಜೆಯಲ್ಲಿ ವ್ಯತ್ಯಾಸ

ಶನಿವಾರ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಉಡುಪಿಯ ಕೃಷ್ಣಮಠದಲ್ಲಿ ಶ್ರೀ ಕೃಷ್ಣನ ದರ್ಶನಕ್ಕೆ ಸಮಯ ಬದಲಾವಣೆ ಮಾಡಲಾಗಿದೆ. ಅ. 28 (ಶನಿವಾರ) ಸಂಜೆ 4 ಗಂಟೆಯ ನಂತರ ಊಟದ ವ್ಯವಸ್ಥೆ ಸ್ಥಗಿತಗೊಳಿಸಲಾಗಿದೆ. ರಾತ್ರಿ ಮಠಕ್ಕೆ ಬಂದ ಭಕ್ತರಿಗೆ ನೀಡುತ್ತಿದ್ದ ಅನ್ನ ಪ್ರಸಾದ ರದ್ದಿಗೆ ಸಹ ಆದೇಶ ನೀಡಲಾಗಿದೆ.

ಇದನ್ನೂ ಓದಿ: Lunar Eclipse 2023: ಚಂದ್ರ ಗ್ರಹಣದ ಸಮಯದಲ್ಲಿ ಈ ರಾಶಿಯವರು ಲಾಭ ಪಡೆಯುತ್ತಾರೆ

ಮಠಾಧೀಶರು ಉಪವಾಸ ಕೈಗೊಳ್ಳುವ ಮೂಲಕ ವ್ರತ ಆಚರಿಸಲಿದ್ದಾರೆ. ಮಠದ ಒಳಗಿರುವ ಮುಖ್ಯಪ್ರಾಣ ದೇವರಿಗೆ ರಂಗ ಪೂಜೆ ಇರುವುದಿಲ್ಲ. ಆದರೆ ಭೋಜನಾಲಯದ ಮುಖ್ಯಪ್ರಾಣ ದೇವರಿಗೆ ಶನಿವಾರ ಸಂಜೆ ರಂಗ ಪೂಜೆ ಇರುತ್ತದೆ. ಭಾನುವಾರ ಬೆಳಗ್ಗೆ ಒಂದು ಗಂಟೆ ಮುಂಚಿತವಾಗಿ ಪರ್ಯಾಯ ಕೃಷ್ಣಾಪುರ ಮಠಾಧೀಶರಿಂದ ದೈನಂದಿನ ಮಹಾಪೂಜೆ ಆರಂಭವಾಗುತ್ತದೆ.

ಅದೇ ರೀತಿಯಾಗಿ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಪ್ರಸಿದ್ಧ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದೇವರ ದರ್ಶನ ಸಮಯದಲ್ಲಿ ವ್ಯತ್ಯಾಸ ಮಾಡಲಾಗಿದೆ. ಶನಿವಾರದಂದು ಸುಬ್ರಮಣ್ಯ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಲಾಗಿದ್ದು, ರಾತ್ರಿಯ ಮಹಾಪೂಜೆ ಸಂಜೆ 6.30 ಕ್ಕೇ ಮುಕ್ತಾಯವಾಗಲಿದೆ. ಅಕ್ಟೋಬರ್​ 28ರ ಸಂಜೆ ಶನಿವಾರ ಸಂಜೆ 6.30ರ ಬಳಿಕ ದೇವರ ದರ್ಶನ ನಿರ್ಬಂಧಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 4:07 pm, Fri, 27 October 23