ಬೆಂಗಳೂರು, (ಸೆಪ್ಟೆಂಬರ್ 13): ಮಧ್ಯಪ್ರದೇಶದ(madhya pradesh) ಅತ್ಯಂತ ಹೈ ಪ್ರೊಫೈಲ್ ಹನಿಟ್ರಾಪ್ ಕೇಸ್ನ(high profile honey trap) ಮಾಸ್ಟರ್ ಮೈಡ್ ಬೆಂಗಳೂರಿನಲ್ಲಿ (Bengaluru) ಸಿಕ್ಕಿಬಿದ್ದಿದ್ದಾಳೆ. ಮಧ್ಯಪ್ರದೇಶದ ಅತಿದೊಡ್ಡ ಹನಿಟ್ರ್ಯಾಪ್ ಹಗರಣದ ಮಾಸ್ಟರ್ ಮೈಡ್ ಆರತಿ ದಯಾಳ್(Aarti Dayal) ಅವಳನ್ನ ಬೆಂಗಳೂರಿನ ಮಹದೇವಪುರ ಪೊಲೀಸರು ಬಂಧಿಸಿ ಮಧ್ಯಪ್ರದೇಶದ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. 2019 ರಲ್ಲಿ ಮಧ್ಯಪ್ರದೇಶದಲ್ಲಿ ನಡೆದಿದ್ದ ಬಹುದೊಡ್ಡ ಹೈಪ್ರೋಫೈಲ್ ಹನಿಟ್ರಾಪ್ ಪ್ರಕರಣದಲ್ಲಿ ಆರತಿ ಜೈಲು ಸೇರಿ 2020 ರಲ್ಲಿ ಹೊರ ಬಂದವಳು ಯಾರಿಗೂ ಸಿಕ್ಕಿರಲಿಲ್ಲ. ಸೋನು, ಸಮಂತಾ, ಆರತಿ ಅಗರ್ವಾಲ್ ಹೀಗೆ ಬೇರೆ ಬೇರೆ ಹೆಸರಿನಲ್ಲಿ ತಲೆಮರಿಸಿಕೊಂಡಿದ್ದಳು. ಅಲ್ಲದೇ ಈ ಹಿಂದೆ ಹೈ ಪ್ರೊಫೈಲ್ ಹನಿಟ್ರಾಪ್ ಮಾಡುತ್ತಿದ್ದವಳು ಈಗ ಕಳ್ಳತನ ದಾರಿ ಹಿಡಿದಿದ್ದಳು.
ಬೆಂಗಳೂರು ಚೆನ್ನೈ ಸೇರಿ ವಿವಿಧ ಕಡೆ ದರೋಡೆ ಮಾಡುತ್ತಿದ್ದಳು. ಮೊದಲು ಸ್ಪಾಗಳಲ್ಲಿ ಕೆಲಸಕ್ಕೆ ಸೇರುತಿದ್ದ ಆರತಿ, ಹತ್ತು ದಿನ ಕೆಲಸ ಮಾಡಿ ಅಲ್ಲಿಯೇ ಕೆಲಸ ಮಾಡುವ ಯುವತಿಯರ ರೂಮ್ ,ಪಿಜಿ ಯಲ್ಲಿ ಉಳಿದುಕೊಂಡು ಬಳಿಕ ಅವರ ಹಣ ಬಂಗಾರ ಕದ್ದು ಎಸ್ಕೇಪ್ ಆಗುತ್ತಿದ್ದಳು.
ಇದನ್ನೂ ಓದಿ: ಹನಿಟ್ರ್ಯಾಪ್ ಜಾಲದಲ್ಲಿ ಸಿಲುಕಿ ಲಕ್ಷ ಲಕ್ಷ ಹಣ ಕಳೆದುಕೊಂಡ ಕರ್ನಾಟಕದ ಮಾಜಿ ಸಿಎಂ ವಿಶೇಷ ಅಧಿಕಾರಿ
ಬಡ ಕುಟುಂಬದಿಂದ ಬಂದ ಕಾಲೇಜು ಯುವತಿಯರಿಗೆ ಐಷಾರಾಮಿ ಜೀವನವನ್ನು ಪರಿಚಯಿಸಿ ಅವರು ಅದರತ್ತ ಆಕರ್ಷಿತರಾಗುವಂತೆ ಮಾಡುತ್ತಿದ್ದ ಶ್ವೇತಾ ಹಾಗೂ ಆರತಿ ದಯಾಳ್ ನಂತರ ಹನಿಟ್ರ್ಯಾಪ್ಗೆ ಬಳಸಿಕೊಳ್ಳುತ್ತಿದ್ದರು. ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಈ ಕಾಲೇಜು ಯುವತಿಯರನ್ನು ಒದಗಿಸುತ್ತಿದ್ದರು. ರಾಜಕಾರಣಿಗಳು ಕಾಲೇಜು ಯುವತಿಯರಿಗೇ ಹೆಚ್ಚು ಡಿಮ್ಯಾಂಡ್ ಇಡುತ್ತಿದ್ದುದರಿಂದ ಶ್ವೇತಾ ಇಂಥದ್ದೊಂದು ಜಾಲ ಹೆಣೆದಿದ್ದಳು. ಜೊತೆಗೆ 40 ವೇಶ್ಯೆಯರನ್ನೂ ಬಾಡಿಗೆ ಆಧಾರದಲ್ಲಿ ಇಟ್ಟುಕೊಂಡಿದ್ದಳು. ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಕಾಂಟಾಕ್ಟ್ ಹೊಂದಿದ್ದ ಶ್ವೇತಾ ಆರತಿ ದಯಾಳ್ ಜೊತೆ ಸೇರಿಕೊಂಡು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿಗೂ ಯುವತಿ ಮತ್ತು ಮಹಿಳೆಯರನ್ನು ಕಳುಹಿಸುತ್ತಿದ್ದಳು ಎಂಬ ವಿಷಯ ವಿಚಾರಣೆ ವೇಳೆ ತಿಳಿದುಬಂದಿತ್ತು.
ಇಂತಹದ್ದೇ ಹನಿಟ್ರ್ಯಾಪ್ ಪ್ರಕರಣವೊಂದರಲ್ಲಿಇಂದೋರ್ ಪುರಸಭೆಯ ಎಂಜಿನಿಯರ್ ಹರ್ಬಜನ್ ಸಿಂಗ್ ಅವರಿಗೆ ಆರತಿ ದಯಾಳ್ ಮತ್ತು ಮೋನಿಯಾ ಯಾದವ್ ಸೇರಿ 3 ಕೋಟಿ ರೂ. ಹಫ್ತಾ ಬೇಡಿಕೆ ಇಟ್ಟಾಗ ಅವರ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ತನಿಖೆ ನಡೆಸಿದಾಗ ಈ ಜಾಲದ ಕೃತ್ಯ ಬಯಲಾಗಿತ್ತು.
ಇನ್ನು ಎಸ್ಐಟಿ ತನಿಖೆ ವೇಳೆ ಆರೋಪಿಗಳ ಬಳಿ 1000ಕ್ಕೂ ಅಧಿಕ ವಿಡಿಯೋ ಕ್ಲಿಪ್ಪಿಂಗ್ಗಳು, ಸೆಕ್ಸ್ ಚಾಟ್ಗಳು, ಬ್ಲಾಕ್ಮೇಲ್ ಮಾಡಲು ಇಟ್ಟುಕೊಂಡಿದ್ದ ವಿಡಿಯೋಗಳು ಸಿಕ್ಕಿದ್ದವು. ಇವುಗಳಲ್ಲಿ ಸಿನಿಮಾ ನಟರು, ರಾಜಕಾರಣಿಗಳು, ಉದ್ಯಮಿಗಳು, ಪೊಲೀಸ್ ಅಧಿಕಾರಿಗಳು, ಪತ್ರಕರ್ತರು, ಅಧಿಕಾರಿಗಳ ಜೊತೆಗಿನ ಸೆಕ್ಸ್ ವಿಡಿಯೋಗಳೂ ಇದ್ದವು.
ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
Published On - 8:30 am, Wed, 13 September 23