
ಬೆಂಗಳೂರು, ಜನವರಿ 03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಈ ವರ್ಷ ಚಳಿಗಾಲ (Cold Wave) ಜೊತೆ ಕೆಲ ದಿನಗಳಿಂದ ಶೀತಗಾಳಿ ಹೆಚ್ಚಳವಾಗಿದ್ದು, ತೇವಾಂಶದ ವಾತಾವರಣದಿಂದಾಗಿ ಚಿಕ್ಕ ಮಕ್ಕಳಿಂದ ಹಿಡಿದು ಅನೇಕರಿಗೆ ಮದ್ರಾಸ್ ಐ (Madras Eye) ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಚಳಿಯಿಂದ ಹಾಗೂ ತೇವಾಂಶದ ವಾತಾವರಣದಿಂದಾಗಿ ಮದ್ರಾಸ್ ಐ ಕಣ್ಣಿನ ಸೋಂಕು ಹೆಚ್ಚಳವಾಗಿದೆ. ಶಾಲಾ ಮಕ್ಕಳಲ್ಲಿಯೇ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಬದಲಾದ ಹವಮಾನ, ಚಳಿ ಹೆಚ್ಚಾಗಿರುವ ಕಾರಣ ಮಕ್ಕಳಿಗೆ ಮದ್ರಾಸ್ ಐ ಶುರುವಾಗಿದೆ. ಹೆಚ್ಚಾಗಿ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ. ಹೀಗಾಗಿ ವೈದ್ಯರು ಪೋಷಕರಿಗೆ ಎಚ್ಚರಿಕೆ ನೀಡಿದ್ದಾರೆ. ಮಕ್ಕಳ ಕಣ್ಣಿನ ಸೋಂಕಿನ ಬಗ್ಗೆ ನಿರ್ಲಕ್ಷ್ಯ ವಹಿಸದಂತೆ ಸಲಹೆ ನೀಡಿದ್ದಾರೆ. ಆರೊಗ್ಯ ಇಲಾಖೆ ಕೂಡ ಮದ್ರಾಸ್ ಐ ಬಗ್ಗೆ ಕೆಲವು ಸಲಹೆಗಳನ್ನ ನೀಡಿದೆ.
ಶೀತಗಾಳಿಯಿಂದ ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿದ್ದು, ಚಳಿ ವಾತಾವರಣದಿಂದ ಈ ವೈರಾಣು ನೇರವಾಗಿ ಕಣ್ಣಿನ ಮೇಲೆ ಪರಿಣಾಮ ಉಂಟು ಮಾಡುತ್ತಿದೆ. ಹೀಗಾಗಿ ಮದ್ರಾಸ್ ಐ ಏರಿಕೆಯಾಗಿದೆ. ನಿರ್ಲಕ್ಷ್ಯ ವಹಿಸದಂತೆ ಪೋಷಕರು ಎಚ್ಚರ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಶಾಲೆಗೆ ಕಳಿಸದ್ದಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್ ಶಾಕ್: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ
ಕಳೆದ ಎರಡು ವಾರದಿಂದ ನಿರಂತರವಾಗಿ ವಾತವರಣದ ತೇವಾಂಶ ಹಾಗೂ ಚಳಿಯಿಂದ ಕಣ್ಣಿನ ಸೋಂಕು ಹೆಚ್ಚಾಗಿದೆ, ಅದರಲ್ಲೂ ಮದ್ರಾಸ್ ಐಗೆ ಮಕ್ಕಳು ಟಾರ್ಗೆಟ್ ಆಗಿದ್ದು, ಮಳೆಗಾಲ ಮುಗಿಯುವರೆಗೂ ಪೋಷಕರು ಮಕ್ಕಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.