ಲೋಕಸಭೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಗೆ ಭರ್ಜರಿ ಸರ್ಜರಿ: ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಿ ಹೊಸ ಮುಖಗಳಿಗೆ ಮಣೆ ಹಾಕಲು ಎಐಸಿಸಿ ಪ್ಲಾನ್

ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾನಾ ಪ್ರಯೋಗಗಳಿಗೆ ಮುಂದಾಗಿದೆ. ಸದ್ಯ ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಚಂದ್ರಪ್ಪ, ಈಶ್ವರ್ ಖಂಡ್ರೆಗೆ ರಿಲೀವ್ ಸಿಗಲಿದೆ.

ಲೋಕಸಭೆ ಹಿನ್ನೆಲೆ ರಾಜ್ಯ ಕಾಂಗ್ರೆಸ್ ಗೆ ಭರ್ಜರಿ ಸರ್ಜರಿ: ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಿ ಹೊಸ ಮುಖಗಳಿಗೆ ಮಣೆ ಹಾಕಲು ಎಐಸಿಸಿ ಪ್ಲಾನ್
ಸಿದ್ದರಾಮಯ್ಯ-ಡಿಕೆ ಶಿವಕುಮಾರ್
Follow us
TV9 Web
| Updated By: ಆಯೇಷಾ ಬಾನು

Updated on:Oct 14, 2023 | 8:56 AM

ಬೆಂಗಳೂರು, ಅ.14: ಲೋಕಸಭಾ ಚುನಾವಣೆಗೆ (Lok Sabha Elections) ಕರ್ನಾಟಕದಲ್ಲಿ ಕಾಂಗ್ರೆಸ್​​ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಜೊತೆಗೆ ಆಪರೇಷನ್​ ಕಾಂಗ್ರೆಸ್​​ಗೂ ಕೈ ಹಾಕಿರುವ ರಾಜ್ಯ ನಾಯಕರು ಹಲವು ಜೆಡಿಎಸ್​​-ಬಿಜೆಪಿ ನಾಯಕರನ್ನು ಪಕ್ಷಕ್ಕೆ ಸೆಳೆಯುವ ಪ್ರಯತ್ನದಲ್ಲಿದ್ದಾರೆ (Karnataka Congress). ಇನ್ನು ಮತ್ತೊಂದೆಡೆ ರಾಜ್ಯ ಕಾಂಗ್ರೆಸ್​ಗೆ ಶೀಘ್ರದಲ್ಲೇ ಭರ್ಜರಿ ಸರ್ಜರಿ ಆಗಲಿದೆ. ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಲೊಕಸಭೆಗೂ ಮುನ್ನ ಹೊಸ ಮುಖಗಳಿಗೆ ಮಣೆ ಹಾಕಲು ಎಐಸಿಸಿ ಪ್ಲಾನ್ ಮಾಡಿದೆ. ಜಾತಿ ಸಮೀಕರಣಕ್ಕೆ ಮಣೆ ಹಾಕಲಾಗುತ್ತಿದೆ.

ಹೌದು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾನಾ ಪ್ರಯೋಗಗಳಿಗೆ ಮುಂದಾಗಿದೆ. ಸದ್ಯ ಐವರು ಕಾರ್ಯಾಧ್ಯಕ್ಷರನ್ನ ಬದಲಾಯಿಸಲು ಕಾಂಗ್ರೆಸ್ ಚಿಂತನೆ ನಡೆಸಿದ್ದು ಸತೀಶ್ ಜಾರಕಿಹೊಳಿ, ರಾಮಲಿಂಗಾ ರೆಡ್ಡಿ, ಚಂದ್ರಪ್ಪ, ಈಶ್ವರ್ ಖಂಡ್ರೆಗೆ ರಿಲೀವ್ ಸಿಗಲಿದೆ. ಇನ್ನು ಎಐಸಿಸಿ, ರಾಜ್ಯ ಘಟಕದಿಂದಲೂ ಪರ್ಯಾಯ ಹೆಸರು ಕೇಳಿದೆ. ರಾಜ್ಯ ಕಾಂಗ್ರೆಸ್ ಘಟಕ ಜಾತಿ ಸಮೀಕರಣಕ್ಕೆ ಮಣೆ ಹಾಕುತ್ತಿದೆ. ಕೆಪಿಸಿಸಿ ಹೊಸ ಕಾರ್ಯಧ್ಯಕ್ಷರ ಸ್ಥಾನಕ್ಕೆ ನಾಲ್ವರ ಹೆಸರು ಶಿಫಾರಸ್ಸು ಮಾಡಿದೆ. ಜಿ.ಸಿ.ಚಂದ್ರಶೇಖರ್, ಅಂಜಲಿ ನಿಂಬಾಳ್ಕರ್, ವಿನಯ್ ಕುಲಕರ್ಣಿ, ವಸಂತ ಕುಮಾರ್, ವಿನಯ್ ಕುಮಾರ್ ಸೊರಕೆ ಹೆಸರು ಕಳಿಸಿದೆ.

ಜಾತಿ ಸಮೀಕರಣಕ್ಕೆ ಮಣೆ

ಇನ್ನು ಒಕ್ಕಲಿಗ ಸಮುದಾಯದಿಂದ ಜಿ.ಸಿ.ಚಂದ್ರಶೇಖರ್, ಮಹಿಳಾ ಕೋಟದಡಿ ಅಂಜಲಿ ನಿಂಬಾಳ್ಕರ್, ಲಿಂಗಾಯಿತ ಕೋಟದಡಿ ವಿನಯ್ ಕುಲಕರ್ಣಿ, ಈಡಿಗ ಸಮುದಾಯದಿಂದ ವಿನಯ್ ಕುಮಾರ್ ಸೊರಕೆ, ದಲಿತ ಎಡಗೈ ಸಮುದಾಯದಿಂದ ವಸಂತ್ ಕುಮಾರ್ ಹೆಸರನ್ನು ಕೆಪಿಸಿಸಿ ಶಿಫಾರಸ್ಸು ಮಾಡಿದೆ. ಹಾಘೂ ಮುಸ್ಲಿಂ ಸಮುದಾಯದಿಂದ ಸಲಿಂ ಅಹಮದ್ ಕಾರ್ಯಧ್ಯಕ್ಷರಾಗಿ ಮುಂದುವರಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Breaking Kannada News Live: ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಮುಂದುವರಿದ ಐಟಿ ದಾಳಿ

ಕೆಲ ದಿನಗಳ ಹಿಂದೆ ಲೋಕ ಸಭಾ ಚುನಾವಣೆಗೆ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸಚಿವ ಚಲುವರಾಯಸ್ವಾಮಿ ಪತ್ನಿ ನಿಲ್ಲಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಮಂಡ್ಯ ಕಾಂಗ್ರೆಸ್ ರವಿಕುಮಾರ್ ಗೌಡ, ಮತ್ತೊಂದು ಮಹಿಳಾ ಅಭ್ಯರ್ಥಿಯ ಹೆಸರನ್ನು ಮುಂದಿಟ್ಟಿದ್ದಾರೆ. ಶಾಸಕ ರವಿಕುಮಾರ್ ಗೌಡ ಅವರು, ಮಾಜಿ ಸಿಎಂ ಎಸ್​​ಎಂ ಕೃಷ್ಣ ಪುತ್ರಿ ಶಾಂಭವಿ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ. ಎಸ್‌ಎಂ ಕೃಷ್ಣ ಪುತ್ರಿ ಶಾಂಭವಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕು ಎಂದು ರವಿಕುಮಾರ್ ಗೌಡ ಆಗ್ರಹಿಸಿದ್ದಾರೆ. ನಾವು ಎಂಪಿ ಚುನಾವಣೆ ಗೆಲ್ಲಬೇಕಿದೆ. ಎಸ್​ಎಂಕೆ ಪುತ್ರಿ ಶಾಂಭವಿ ಅಥವಾ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ ಅವರಿಗೆ ಟಿಕೆಟ್ ನೀಡಲಿ ಎಂದಿದ್ದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:37 am, Sat, 14 October 23

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್