Karnataka Breaking Kannada News highlights : ಕೊನೆಗೂ ದಸರಾ ಉಪಸಮಿತಿಗಳಿಗೆ ಅಧಿಕಾರೇತರ ಸದಸ್ಯರ ನೇಮಕ

ಆಯೇಷಾ ಬಾನು
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 14, 2023 | 10:52 PM

Breaking News Today highlights : ಕನ್ನಡ ರಾಜ್ಯೋತ್ಸವ ಸಮೀಪಿಸುತ್ತಿದ್ದಂತೆ ಮತ್ತೆ ಗಡಿ ಕ್ಯಾತೆ ತೆಗೆದ ಮಹಾರಾಷ್ಟ್ರ, ಎಂಇಎಸ್ ಸದಸ್ಯರ ಜೊತೆ ಸಭೆ ನಡೆಸಿ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಮಹಾಲಯ ಅಮವಾಸೆ ಹಿನ್ನಲೆ ಮಲೆಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ನಿಷೇಧ ಹೇರಲಾಗಿದೆ. ಇದರೆಲ್ಲದರ ಜೊತೆಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

Karnataka Breaking Kannada News highlights : ಕೊನೆಗೂ ದಸರಾ ಉಪಸಮಿತಿಗಳಿಗೆ ಅಧಿಕಾರೇತರ ಸದಸ್ಯರ ನೇಮಕ
ಹೆಚ್​ಸಿ ಮಹಾದೇವಪ್ಪ

ವಿಶ್ವವಿಖ್ಯಾತ ಮೈಸೂರು ದಸರಾ ದಿನಗಣನೆ ಶುರುವಾಗಿದೆ. ಹೀಗಾಗಿ ಇಂದಿನಿಂದ ಮೂರು ದಿನ ಮೈಸೂರು ಜಿಲ್ಲೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಇಂದು ರಾತ್ರಿ ಮೈಸೂರಿನಲ್ಲೇ ವಾಸ್ತವ್ಯ ಹೂಡಿ ನಾಳೆ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮಹಾಲಯ ಅಮವಾಸೆ ಹಿನ್ನಲೆ ಮಲೆಮಹದೇಶ್ವರ ಬೆಟ್ಟಕ್ಕೆ ದ್ವಿಚಕ್ರ ವಾಹನ ನಿಷೇಧ ಹೇರಲಾಗಿದೆ. ಸುರಕ್ಷತಾ ದೃಷ್ಠಿಯಿಂದ ದ್ವಿಚಕ್ರ ವಾಹನ ಪ್ರವೇಶಕ್ಕೆ ನಿರ್ಬಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಇವೆಲ್ಲದರ ಜೊತೆಗೆ ರಾಜ್ಯದಲ್ಲಿ ನಡೆಯುವ ಪ್ರಸಕ್ತ ವಿದ್ಯಮಾನಗಳ ಮಾಹಿತಿಗಾಗಿ ಟಿವಿ9 ಡಿಜಿಟಲ್ ಫಾಲೋ ಮಾಡಿ.

LIVE NEWS & UPDATES

The liveblog has ended.
  • 14 Oct 2023 10:43 PM (IST)

    Karnataka Breaking News Live: ದಸರಾ ಉಪಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ನೇಮಕ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉಪಸಮಿತಿಗಳಿಗೆ ಅಧಿಕಾರೇತರ ಸದಸ್ಯರ ನೇಮಕ ಮಾಡಲಾಗಿದೆ. 16 ಉಪ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಲಾಗಿದೆ.

  • 14 Oct 2023 09:24 PM (IST)

    Karnataka Breaking News Live: ಸರ್ವರಿಗೂ ದಸರಾಗೆ ಸ್ವಾಗತ ಕೋರಿದ ಸಿಎಂ ಸಿದ್ದರಾಮಯ್ಯ

    ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2023 ಗೆ ಸಿಎಂ ಸಿದ್ದರಾಮಯ್ಯ ಅವರು ಸರ್ವರಿಗೂ ಸ್ವಾಗತ ಕೋರಿದ್ದಾರೆ. ‘ನಮಸ್ಕಾರ, ನಾನು ನಿಮ್ಮ ಸಿದ್ದರಾಮಯ್ಯ, ಈ ರಾಜ್ಯದ ಮುಖ್ಯಮಂತ್ರಿಯಾಗಿ ನಾಡಿನ ಹೆಮ್ಮೆಯ ಮೈಸೂರು ದಸರಾ ಉತ್ಸವಕ್ಕೆ ತಮ್ಮೆಲ್ಲರನ್ನೂ ಆತ್ಮೀಯವಾಗಿ ಆಮಂತ್ರಿಸುತ್ತಿದ್ದೇನೆ. ಮೈಸೂರು ದಸರಾ ಎಂದರೆ ಬರೀ ಉತ್ಸವವಲ್ಲ, ಇದು ಕರ್ನಾಟಕದ ಶ್ರೀಮಂತ ಕಲೆ, ಸಂಸ್ಕೃತಿ ಮತ್ತು ಗತ ವೈಭವವನ್ನು ಪ್ರತಿಬಿಂಬಿಸುವ ನಾಡಹಬ್ಬ, ತಾಯಿ ಚಾಮುಂಡೇಶ್ವರಿಯ ಪೂಜೆಯೊಂದಿಗೆ ಆರಂಭವಾಗುವ ದಸರಾ ಆಚರಣೆಯು ಜಂಬೂಸವಾರಿಯ ವೈಭವದ ಮೆರವಣಿಗೆ, ಪಂಜಿನ ಕವಾಯತಿನ ರೋಮಾಂಚಕ ಸಾಹಸಗಳೊಂದಿಗೆ ಸಂಪನ್ನಗೊಳ್ಳುತ್ತದೆ. ಈ ನಡುವೆ ಮೈಸೂರು ಅರಮನೆಯ ಭವ್ಯ ದೀಪಾಲಂಕಾರ, ಕರಕುಶಲ ವಸ್ತುಗಳ ಪ್ರದರ್ಶನ, ಕೀಡಾಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ವಿವಿಧ ಧಾರ್ಮಿಕ ಆಚರಣೆಗಳ ಕಣ್ಮನ ಸೆಳೆಯುವ ಹೂರಣವಿರಲಿದೆ. ಪಾರಂಪರಿಕ ಆಚರಣೆ, ಸಮಕಾಲೀನ ಆಶಯಗಳ ಹದವರಿತ ಮಿಶ್ರಣವಾದ ಈ ಉತ್ಸವ ನಿಜ ಅರ್ಥದಲ್ಲಿ ಜನೋತ್ಸವವಾಗಿದೆ. ಕರ್ನಾಟಕದ ಹೆಮ್ಮೆಯ ದ್ಯೋತಕವಾದ ದಸರಾ ಉತ್ಸವಕ್ಕೆ ತಾವೆಲ್ಲರೂ ಆಗಮಿಸಿ, ಸಂಭ್ರಮದಲ್ಲಿ ಪಾಲುದಾರರಾಗಬೇಕೆಂದು ವಿನಂತಿಸುತ್ತೇನೆ ಎನ್ನುವ ಮೂಲಕ ಸರ್ವರಿಗೂ ಹೃತೂರ್ವಕ ಸ್ವಾಗತ ಕೋರಿದ್ದಾರೆ

  • 14 Oct 2023 09:08 PM (IST)

    Karnataka Breaking News Live: ವಿಶ್ವಕಪ್ ಕದನ; ಪಾಕ್ ವಿರುದ್ಧ ಭಾರತ ಜಯ ಗಳಿಸಿದ ಬೆನ್ನಲ್ಲೇ ರಾಯಚೂರಿನಲ್ಲಿ ವಿಜಯೋತ್ಸವ

    ರಾಯಚೂರು: ವಿಶ್ವಕಪ್ ಪಂದ್ಯಾವಳಿಯ ಇಂಡೋ ಪಾಕ್ ಕದನ ನಡೆದಿದ್ದು, ಭಾರತ ಜಯಗಳಿಸಿದ ಬೆನ್ನಲ್ಲೇ ರಾಯಚೂರಿನಲ್ಲಿ ಕ್ರೀಡಾಭಿಮಾನಿಗಳು ವಿಜಯೋತ್ಸವ ಆಚರಿಸಿದ್ದಾರೆ. ನಗರದಲ್ಲಿ ಬೃಹತ್ ಎಲ್​ಇಡಿ ಮೂಲಕ ಸಾವರ್ಕರ್ ಅಸೋಸಿಯೇಷನ್ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು.

  • 14 Oct 2023 08:47 PM (IST)

    Karnataka Breaking News Live: ಪಿತೃಪಕ್ಷ ಮುಗಿಸಿ ವಾಪಸ್ ಬರುವ ವೇಳೆ ಬೈಕ್ ಅಪಘಾತ; ಸವಾರ ಸ್ಥಳದಲ್ಲೇ ಸಾವು

    ನೆಲಮಂಗಲ: ಪಿತೃಪಕ್ಷ ಮುಗಿಸಿ ವಾಪಸ್ ಬರುವ ವೇಳೆ ಬೈಕ್ ಅಪಘಾತವಾಗಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ರಸ್ತೆಯಲ್ಲಿ ನಡೆದಿದೆ. ಬೈಕ್ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ  ಅನೇಕಲ್ ಮಂಜುನಾಥ್(40)ಸಾವನ್ನಪ್ಪಿದ್ದಾರೆ. ತಿರುಮಲಪುರದ ಸಂಬಂಧಿ ಮನೆಯಲ್ಲಿ ಪಿತೃಪಕ್ಷ ಮುಗಿಸಿ ತೆರಳುವಾಗ ಅಪಘಾತ ಈ ದುರ್ಘಟನೆ ನಡೆದಿದೆ. ಈ ಕುರಿತು ಜಾಲಹಳ್ಳಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

  • 14 Oct 2023 08:10 PM (IST)

    Karnataka Breaking News Live: ಮಂಡ್ಯ ಎಂಪಿ ಟಿಕೆಟ್; ಸಚಿವರ ಕುಟುಂಬದಲ್ಲೇ ಒಬ್ಬರಿಗೆ ಅವಕಾಶ ಎಂದ ಸಚಿವ ಎನ್.ಚಲುವರಾಯಸ್ವಾಮಿ

    ಉಡುಪಿ: ಸಚಿವ ಚಲುವರಾಯಸ್ವಾಮಿ ಪತ್ನಿಗೆ ಮಂಡ್ಯ ಎಂಪಿ ಟಿಕೆಟ್ ಬಗ್ಗೆ ಚರ್ಚೆ ವಿಚಾರ ‘ನಮ್ಮ ಕುಟುಂಬದ ಸದಸ್ಯರನ್ನು ಕಣಕ್ಕಿಳಿಸುವ ಬಗ್ಗೆ ಆಲೋಚನೆ ಮಾಡಿಲ್ಲ ಎಂದು ಉಡುಪಿಯಲ್ಲಿ ಕೃಷಿ ಇಲಾಖೆ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು ‘ಅಭ್ಯರ್ಥಿ ಯಾರಾಗಬೇಕೆಂದು ಕಾರ್ಯಕರ್ತರು, ಪಕ್ಷ ತೀರ್ಮಾನ ಮಾಡುತ್ತೆ. ಸ್ನೇಹಿತರು, ಪಕ್ಷದ ಮುಖಂಡರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವರ ಕುಟುಂಬದಲ್ಲೇ ಒಬ್ಬರಿಗೆ ಅವಕಾಶ ಕೊಡಬೇಕೆಂದು ಹೇಳಿದ್ದಾರೆ ಎಂದರು.

  • 14 Oct 2023 07:16 PM (IST)

    Karnataka Breaking News Live: ಹುಬ್ಬಳ್ಳಿಯಲ್ಲಿ ಅಕ್ರಮ ಪಟಾಕಿ ಗೋಡೌನ್ ಮೇಲೆ ದಾಳಿ

    ಹುಬ್ಬಳ್ಳಿ: ತಾಲೂಕಿನ ಶೆರೆವಾಡ ಗ್ರಾಮದಲ್ಲಿರುವ ಅಕ್ರಮ ಪಟಾಕಿ ಗೋದಾಮಿನ ಮೇಲೆ ಕಂದಾಯ, ಪೊಲೀಸ್‌ ಹಾಗೂ ವಾಯುಮಾಲಿನ್ಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗೋದಾಮಿನಲ್ಲಿದ್ದ ಹಸಿರು ಪಟಾಕಿಯನ್ನು ಅಧಿಕಾರಿಗಳು ಬೇರ್ಪಡಿಸುತ್ತಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

  • 14 Oct 2023 06:18 PM (IST)

    Karnataka Breaking News Live: ನಾಳೆ ವಿಶ್ವ ವಿಖ್ಯಾತ ನಾಡಹಬ್ಬ ದಸರಾಗೆ ಚಾಲನೆ

    ಮೈಸೂರು: ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆಗೆ ಕ್ಷಣಗಣನೆ ಶುರುವಾಗಿದೆ. ನಾಳೆ(ಅ.15) ಬೆಳಗ್ಗೆ 10.15 ರಿಂದ 10.36ರ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖರಿಂದ ದಸರೆಗೆ ಚಾಲನೆ ಸಿಗಲಿದೆ. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ , ಸಚಿವ ಡಾ ಎಚ್ ಸಿ‌ ಮಹದೇವಪ್ಪ ಸೇರಿ ಸಂಸದರು ಶಾಸಕರು ಭಾಗಿಯಾಗಲಿದ್ದಾರೆ. ನಾಳೆ ಬೆಳಗ್ಗೆ 5 ಗಂಟೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳು ನಡೆಯಲಿವೆ. ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣಧಾರಣೆ ಮಾಡಲಿದ್ದಾರೆ.

  • 14 Oct 2023 05:48 PM (IST)

    Karnataka Breaking News Live: ಹಮಾಸ್ ಉಗ್ರರಿಗೆ ಬೆಂಬಲ ; ಆರೋಪಿ ಜಾಕಿರ್ ವಿರುದ್ಧ ಸ್ವಯಂ ದೂರು ದಾಖಲಿಸಿಕೊಂಡ ಪೊಲೀಸರು

    ಮಂಗಳೂರು: ಇಸ್ರೇಲ್ ನಲ್ಲಿ‌ ನರಮೇಧ ನಡೆಸಿದ ಹಮಾಸ್ ಉಗ್ರರಿಗೆ ಬೆಂಬಲ ನೀಡಿದ ವಿಚಾರ ‘ಆರೋಪಿ ಜಾಕಿರ್ ವಿರುದ್ಧ ಪೊಲೀಸರೇ ಸ್ವಯಂ ದೂರು ದಾಖಲಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಹೌದು, ಸಮಾಜದಲ್ಲಿ ಕೋಮುಸೌಹಾರ್ದತೆಗೆ ಧಕ್ಕೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು,  ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

  • 14 Oct 2023 05:13 PM (IST)

    Karnataka Breaking News Live: ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆ; ಭಯಭೀತರಾದ ಕಾರ್ಮಿಕರು

    ಕೊಡಗು: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು ಗ್ರಾಮದ ಕಾಫಿ ತೋಟದಲ್ಲಿ ಹುಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಈ ಹಿನ್ನಲೆ ಕಾರ್ಮಿಕರು ಭಯಭೀತರಾಗಿದ್ದಾರೆ. ಇನ್ನು ವಿಷಯ ತಿಳಿದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಹುಲಿಯ ಚಲನವಲನ ಪತ್ತೆಗೆ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ.

  • 14 Oct 2023 04:57 PM (IST)

    Karnataka Breaking News Live: ಆಗಸ್ಟ್‌ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ; ಕೇಂದ್ರ ಸರ್ಕಾರದಿಂದ ಘೋಷಣೆ

    ಬೆಂಗಳೂರು: ಪ್ರತಿಷ್ಠಿತ ಇಸ್ರೋ ಸಂಸ್ಥೆಯ ಚಂದ್ರಯಾನ-3 ಯಶಸ್ವಿ ಹಿನ್ನೆಲೆ ಇದೀಗ ಆಗಸ್ಟ್‌ 23ರಂದು ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ದಿನವನ್ನಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿದೆ.

  • 14 Oct 2023 04:36 PM (IST)

    Karnataka Breaking News Live: ಲಂಚ ಸ್ವೀಕರಿಸುವಾಗ ಅಬಕಾರಿ ಡಿಸಿ, ಇನ್ಸ್‌ಪೆಕ್ಟರ್‌, ಸಿಬ್ಬಂದಿ ಲೋಕಾ ಬಲೆಗೆ

    ದಾವಣಗೆರೆ: ಲಂಚ ಸ್ವೀಕರಿಸುವಾಗ ಅಬಕಾರಿ ಡಿಸಿ, ಇನ್ಸ್‌ಪೆಕ್ಟರ್‌ ಹಾಗೂ ಸಿಬ್ಬಂದಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಅಬಕಾರಿ ಡಿಸಿ ಸ್ವಪ್ನ, ತಮ್ಮ ಕಚೇರಿ ಸಿಬ್ಬಂದಿ ಮೂಲಕ ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಿ ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದಿದ್ದಾರೆ. ಮದ್ಯದ ಅಂಗಡಿ ಆರಂಭಿಸಲು‌ ಪರವಾನಿಗೆ ನೀಡಿಲು ಹರಿಹರ ಮೂಲದ ಡಿ.ಜಿ.ರಂಗನಾಥ ಎಂಬುವರಿಂದ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ಇರುವ ಅಬಕಾರಿ ಇಲಾಖೆ ಕಚೇರಿಯಲ್ಲಿ, ಸಿಬ್ಬಂದಿ‌ ಎಚ್ ಎಂ ಅಶೋಕ ಎಂಬುವರ ಮೂಲಕ ಲಂಚ ಸ್ವೀಕರಿಸುತ್ತಿದ್ದ ವೇಳೆ ಬಲೆಗೆ ಬಿದ್ದಿದ್ದಾರೆ.

  • 14 Oct 2023 04:07 PM (IST)

    Karnataka Breaking News Live: ಚಿಂತಾಮಣಿ ನಗರಸಭೆ ಜೆಡಿಎಸ್​ ಸದಸ್ಯನ ಮೇಲೆ ಹಲ್ಲೆ; ಟ್ವೀಟ್​ ಮೂಲಕ ಕಿಡಿಕಾರಿದ ಹೆಚ್​ಡಿಕೆ

    ಚಿಕ್ಕಬಳ್ಳಾಪುರ: ಚಿಂತಾಮಣಿ ನಗರಸಭೆ ಜೆಡಿಎಸ್​ ಸದಸ್ಯನ ಮೇಲೆ ಹಲ್ಲೆ ವಿಚಾರ ‘ಘಟನೆ ಖಂಡಿಸಿ ಮಾಜಿ ಸಿಎಂ H.D.ಕುಮಾರಸ್ವಾಮಿ ಟ್ವೀಟ್ ಮೂಲಕ ಕಿಡಿಕರಿದ್ದಾರೆ. ‘ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಕಾನೂನು ಸುವ್ಯವಸ್ಥೆ ಕುಸಿದಿದೆ. ಮಚ್ಚು, ಲಾಂಗ್​ಗಳಿಂದ ದುಷ್ಕರ್ಮಿಗಳು ಪೈಶಾಚಿಕ ದಾಳಿ ಮಾಡಿದ್ದಾರೆ. ಈ ಕೃತ್ಯ ಎಸಗಿದ ದುರುಳರನ್ನು ಕೂಡಲೇ ಪತ್ತೆ ಹಚ್ಚಿ ಬಂಧಿಸಬೇಕು. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು HDK ಆಗ್ರಹಿಸಿದ್ದಾರೆ.

  • 14 Oct 2023 03:32 PM (IST)

    ಒಕ್ಕಲಿಗ ಸಮುದಾಯದ ವಿರುದ್ದ ಸಾಹಿತಿ‌ ಭಗವಾನ್ ಅವಹೇಳನಕಾರಿ ಹೇಳಿಕೆ; ಕಿಡಿಕಾರಿದ ಮಾಜಿ ಸಚಿವ ಆರಗ ಜ್ಞಾನೇಂದ್ರ

    ಶಿವಮೊಗ್ಗ: ಒಕ್ಕಲಿಗರ ಬಗ್ಗೆ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರ ‘ ಮೈಸೂರಿನಲ್ಲಿ ಮಹಿಷ ದಸರಾ ಆಚರಣೆ ವೇಳೆ ಭಗವಾನ್ ಎಂಬ ತಲೆಹರಟೆ, ಸ್ಬಯಂ‌ ಘೋಷಿತ ಬುದ್ದಿಜೀವಿ ಆಡಿದಂತಹ ಮಾತು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ ಎಂದು ತೀರ್ಥಹಳ್ಳಿಯಲ್ಲಿ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಒಕ್ಕಲಿಗರು ಸಂಸ್ಕೃತಿ ಹೀನರು‌ ಎಂದು ಹೇಳುವ ಮೂಲಕ ಜನಾಂಗೀಯ ನಿಂದನೆ ಮಾಡಿದ್ದಾರೆ. ಅನೇಕ ಸಾರಿ ಅರೆಸ್ಟ್ ಕೂಡ ಮಾಡಲಾಗಿದೆ. ಆದರೂ, ಇವನ ನಾಲಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಸರಕಾರದ ಸಹಕಾರದಿಂದ ಮಹಿಷಾ ದಸರಾ ಮೈಸೂರಿನಲ್ಲಿ ನಡೆದಿದೆ. ಇಂತಹ ತಲೆತಿರುಕರಿಗೆ ಸರಕಾರ ಮಾತನಾಡಲು ಅವಕಾಶ ಕೊಟ್ಟಿದೆ. ಇದರ ಹಿಂದೆ ಕಾಂಗ್ರೆಸ್ ಸರಕಾರ, ಪಕ್ಷ ಇದೆ. ಜನಾಂಗವನ್ನು ನಿಂದನೆ ಮಾಡಿ, ಜನಾಂಗ ಜನಾಂಗವನ್ನ ಹೊಡೆದಾಡುವ ಕೆಲಸವನ್ನು ಸಿದ್ದರಾಮಯ್ಯ ಸರಕಾರ ಮಾಡ್ತಿದೆ ಎಂದು ವಾಗ್ದಾಳಿ ನೆಸಿದರು.

  • 14 Oct 2023 03:27 PM (IST)

    Karnataka Breaking News Live: ಬೆಂಗಳೂರಿನಲ್ಲಿ ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡು ಅಗ್ನಿ ಅವಘಡ

    ಬೆಂಗಳೂರು: ನಗರದ ಲಗ್ಗೆರೆಯಲ್ಲಿ ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡು ಅಗ್ನಿ ಅವಘಡ ಸಂಭವಿಸಿದೆ. ಈ ವೇಳೆ ಗುಜರಿ ಅಂಗಡಿಗೆ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಅಂಗಡಿ ಅಕ್ಕಪಕ್ಕದ 3 ರಿಂದ 4 ಮನೆಗಳಿಗೂ ಬೆಂಕಿ ಹಬ್ಬಿದೆ. ಅದೃಷ್ಟವಶಾತ್​​ ಅಗ್ನಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯ ಆಗಿಲ್ಲ. ಕೂಡಲೇ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಅವರು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

  • 14 Oct 2023 02:46 PM (IST)

    Karnataka Breaking News Live: ಬಿಜೆಪಿ ಅವನತಿಯತ್ತ ಸಾಗಿದೆ ಎಂದು ಜನ ಮಾತಾಡಿಕೊಳ್ತಿದ್ದಾರೆ; ರೇಣುಕಾಚಾರ್ಯ

    ದಾವಣಗೆರೆ: ಬಿಜೆಪಿ ಅವನತಿಯತ್ತ ಸಾಗಿದೆ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ ಎಂದು ದಾವಣಗೆರೆಯಲ್ಲಿ ಮಾಜಿ ಸಚಿವ ರೇಣುಕಾಚಾರ್ಯ ಹೇಳಿದರು. ‘ವ್ಯಕ್ತಿಗಿಂತ ಪಕ್ಷ ಮುಖ್ಯ ಅಂತ ಕೆಲ ಮುಖಂಡರು ಹೇಳುತ್ತಾರೆ, ಹೀಗೆ ಹೇಳುವ ವ್ಯಕ್ತಿಯೇ ಈಗ ತಮ್ಮದೇ ಗುಂಪು ಕಟ್ಟಿಕೊಂಡಿದ್ದಾರೆ. ಗ್ರಾ.ಪಂ. ಚುನಾವಣೆ ಗೆಲ್ಲದವರು ಗುಂಪು ಕಟ್ಟಿಕೊಂಡಿದ್ದಾರೆ. BSYರನ್ನು ರಾಜಕೀಯವಾಗಿ ಮುಗಿಸಿದ್ರು, ಪಕ್ಷವನ್ನೂ ಮುಗಿಸಿದರು. ಬಿಜೆಪಿಯಲ್ಲಿ ನಾಯಕತ್ವ ಇಲ್ಲದ್ದಕ್ಕೆ ನಮ್ಮವರು ಬೇರೆ ಪಕ್ಷಕ್ಕೆ ಹೋಗುತ್ತಿದ್ದಾರೆ ಎಂದು ಬಿ.ಎಲ್​.ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ ನಡೆಸಿದರು.

  • 14 Oct 2023 02:42 PM (IST)

    Karnataka Breaking News Live: ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗವಾಗಿವೆ; ಬೊಮ್ಮಾಯಿ

    ಬೆಂಗಳೂರು: ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ವಿಚಾರ ‘ ರಾಜ್ಯದಲ್ಲಿ ನಡೆಯುತ್ತಿರುವ ಕಮಿಷನ್​​ ಲಾಬಿಗಳು ಬಹಿರಂಗವಾಗಿವೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದರು. ‘ಗುತ್ತಿಗೆದಾರರು ಬಿಲ್​ಗಾಗಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಆಗ ಬಿಲ್ ಹಣ ಕೊಡದೇ ಕಮಿಷನ್ ಕುದುರಿಸುವ ಕೆಲಸ ಆಗುತ್ತಿತ್ತು. ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಅಪಾರ ಹಣ ಸಿಕ್ಕಿದೆ. ಈವರೆಗೂ ಗುತ್ತಿಗೆದಾರರ ಮನೆಯಲ್ಲಿ ಇಷ್ಟು ದೊಡ್ಡ ಹಣ ಸಿಕ್ಕಿರಲಿಲ್ಲ ಎಂದರು.

  • 14 Oct 2023 01:31 PM (IST)

    Karnataka Breaking News Live: ಟೀಂ ಇಂಡಿಯಾ ಗೆಲುವಿಗಾಗಿ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಪೂಜೆ

    ವಿಶ್ವಕಪ್ ಕ್ರಿಕೆಟ್​ನಲ್ಲಿ ಭಾರತ-ಪಾಕಿಸ್ತಾನ ನಡುವೆ ಹಣಾಹಣಿ. ಟೀಂ ಇಂಡಿಯಾ ಗೆಲುವಿಗಾಗಿ ರಾಜ್ಯಾದ್ಯಂತ ದೇವಸ್ಥಾನಗಳಲ್ಲಿ ಪೂಜೆ ನಡೆಸಲಾಗುತ್ತಿದೆ. ಮೈಸೂರು, ತುಮಕೂರು, ಚಿತ್ರದುರ್ಗ, ವಿಜಯಪುರ, ದಾವಣಗೆರೆ, ಹಾಸನ, ರಾಮನಗರ, ಯಾದಗಿರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಗೆಲುವಿಗಾಗಿ ಅಭಿಮಾನಿಗಳು ಪೂಜೆ ಸಲ್ಲಿಸುತ್ತಿದ್ದಾರೆ.

  • 14 Oct 2023 12:54 PM (IST)

    Karnataka Breaking News Live: ಒತ್ತುವರಿ ತೆರವು ವೇಳೆ ಶಾಸಕಿ ಮೇಲೆ ಕಲ್ಲು ಎಸೆಯಲು ಮುಂದಾದ ವ್ಯಕ್ತಿ

    ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಬೇತಮಂಗಲದಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಹೈಡ್ರಾಮಾ ನಡೆದಿದೆ. ಶಾಸಕಿ ರೂಪಕಲಾ ಶಶಿಧರ್ ನೇತೃತ್ವದಲ್ಲಿ‌ ನಡೆಯುತ್ತಿದ್ದ ಒತ್ತುವರಿ ತೆರವು ವೇಳೆ ಶಾಸಕಿ ಹಾಘೂ ಜೆಸಿಬಿ ಮೇಲೆ ಕಲ್ಲು ಎಸೆಯಲು ವ್ಯಕ್ತಿ ಮುಂದಾಗಿದ್ದ. ಪೊಲೀಸರ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಕಲ್ಲು ತೂರಲು ಮುಂದಾಗಿದ್ದ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

  • 14 Oct 2023 12:10 PM (IST)

    Karnataka Breaking News Live: ಉಡುಪಿಯಲ್ಲಿ ಮಹಿಷ ದಸರಾ ನಡೆಸದಂತೆ ಜಿಲ್ಲಾಧಿಕಾರಿ ಆದೇಶ

    ಉಡುಪಿಯಲ್ಲಿ ಮಹಿಷ ದಸರಾ ನಡೆಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ದಲಿತ ಸಂಘಟನೆಗಳು ನಾಳೆ ಮಹಿಷ ದಸರಾ ಆಚರಣೆಗೆ ಕರೆನೀಡಿದ್ದವು. ಹಿಂದೂ ಸಂಘಟನೆಗಳು ಮಹಿಷ ದಸರಾಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಮಹಿಷ ದಸರಾ ಆಚರಣೆ ಪರ ಹಾಗೂ ವಿರೋಧ ಬ್ಯಾನರ್​ ನಿಷೇಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಪ್ರತಿಭಟನೆ ಹಾಗೂ ಮೆರವಣಿಗೆ ನಡೆಸುವುದಕ್ಕೂ ನಿಷೇಧ ಹೇರಲಾಗಿದೆ. ನಾಳೆ ಸಂಜೆ 6 ಗಂಟೆವರೆಗೂ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

  • 14 Oct 2023 12:05 PM (IST)

    Karnataka Breaking News Live: ಭಾರತದ ಗೆಲುವಿಗೆ ವಿನಾಯಕನಿಗೆ ವಿಶೇಷ ಪೂಜೆ

    ಮೈಸೂರಿನ ಅಗ್ರಹಾರದ 101 ಗಣಪತಿ ದೇಗುಲದಲ್ಲಿ ಭಾರತದ ಗೆಲುವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಮೈಸೂರು ಕ್ರಿಕೆಟ್ ಅಭಿಮಾನಿಗಳಿಂದ ಸಂಕಲ್ಪ ಪೂಜೆ ನೆರವೇರಿಸಿ ಭಾರತ್ ಪರ ಘೋಷಣೆ ಕೂಗಿ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸಿದ್ದಾರೆ. ತ್ರಿವರ್ಣ ಧ್ವಜ ಹಿಡಿದು ಸಂಕಲ್ಪ ಮಂಗಳಾರತಿ ಪೂಜೆ ಮಾಡಿದ್ದಾರೆ.

  • 14 Oct 2023 12:00 PM (IST)

    Karnataka Breaking News Live: ವಿಷ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ

    ಪ್ರಿಯಕರನಿಂದ ವಂಚನೆ ಹಾಗೂ ಕೊಲೆ ಬೆದರಿಕೆ ಆರೋಪ ಕೇಳೀ ಬಂದಿದ್ದು ವಿಷ ಸೇವಿಸಿ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಶಾ (20) ಸಾವನ್ನಪ್ಪಿದ ಯುವತಿ. ಹಾಸನ ಜಿಲ್ಲೆ ಬೇಲೂರು ತಾಲ್ಲೂಕಿನ ಬೆಳ್ಳೊಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ವೈಡಿಡಿ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ಓದುತ್ತಿದ್ದ ಆಶಾ ಅದೇ ಕಾಲೇಜಿನಲ್ಲಿ ದ್ವಿತೀಯ ಬಿಎ ಓದುತ್ತಿದ್ದ ಮಂಜುನಾಥ ಇಬ್ಬರೂ ಪ್ರೀತಿಸುತ್ತಿದ್ದರು. ಆಶಾಳನ್ನ ಪ್ರೀತಿಸೋದಾಗಿ ಸುತ್ತಾಡಿ ಮಂಜುನಾಥ್ ವಂಚನೆ ಮಾಡಿರುವ ಆರೋಪ ಕೇಳಿಬಂದಿದ್ದು ಮನನೊಂದು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • 14 Oct 2023 11:21 AM (IST)

    Karnataka Breaking News Live: ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಲೆ ಮಹದೇಶ್ವರ ದೇಗುಲಕ್ಕೆ ಜನ ಸಾಗರ

    ಮಹಾಲಯ ಅಮಾವಾಸ್ಯೆ ಹಿನ್ನೆಲೆ ಮಲೆ ಮಹದೇಶ್ವರ ದೇಗುಲಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ಹೊರ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಿದ್ದಾರೆ. ಶಕ್ತಿ ಯೋಜನೆ ಜಾರಿ ಹಿನ್ನೆಲೆ ಬಸ್​ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನಕ್ಕೆ ಆಗಮಿಸುತ್ತಿದ್ದಾರೆ.

  • 14 Oct 2023 09:58 AM (IST)

    Karnataka Breaking News Live: ಬಿಎಂಟಿಸಿ ಬಸ್​ ಡಿಕ್ಕಿ, ಬೈಕ್​ನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಸಾವು

    ಬಿಎಂಟಿಸಿ ಬಸ್​ ಡಿಕ್ಕಿ ಹೊಡೆದು ಬೈಕ್​ನಲ್ಲಿದ್ದ ವಿದ್ಯಾರ್ಥಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಂಜಿನಿಯರಿಂಗ್ ವಿದ್ಯಾರ್ಥಿ ಗಂಗಾಧರ್(21) ಮೃತ ದುರ್ದೈವಿ. ಇಂಟರ್ನ್‌ಶಿಪ್‌ ಸರ್ಟಿಫಿಕೇಟ್ ತರಲು ತೆರಳುತ್ತಿದ್ದ ವೇಳೆ ಯಶವಂತಪುರ ಹೂವಿನ ಮಾರ್ಕೆಟ್ ಸಮೀಪ ಅಪಘಾತ ಸಂಭವಿಸಿದೆ.

  • 14 Oct 2023 09:54 AM (IST)

    Karnataka Breaking News Live: ಭಾರತ-ಪಾಕ್ ಪಂದ್ಯ ನಕಲಿ ಟಿಕೆಟ್ ಮಾರುತ್ತಿದ್ದ ನಾಲ್ವರು ಅರೆಸ್ಟ್

    ವಿಶ್ವಕಪ್​ನಲ್ಲಿ ಇಂದು ಭಾರತ-ಪಾಕಿಸ್ತಾನ ನಡುವೆ ಹಣಾಹಣಿ. ಗುಜರಾತ್​ನ ಅಹಮದಾಬಾದ್​ನಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದ್ದು ಭಾರತ-ಪಾಕ್ ಪಂದ್ಯಕ್ಕೆ 200ಕ್ಕೂ ಹೆಚ್ಚು ನಕಲಿ ಟಿಕೆಟ್ ಮಾರಾಟ ಮಾಡಲಾಗಿದೆ. ನಕಲಿ ಟಿಕೆಟ್ ಮಾರುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

  • 14 Oct 2023 09:23 AM (IST)

    Karnataka Breaking News Live: ರಾಮನಗರ ಬಳಿ ಭೀಕರ ಅಪಘಾತ, ಇಬ್ಬರ ದುರ್ಮರಣ

    ರಾಮನಗರ ಬಳಿ ಲಾರಿಗೆ ಡಿಕ್ಕಿಯಾಗಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ರಾಜೇಶ್(42), ಉಮಾ(35) ಸ್ಥಳದಲ್ಲೇ ಸಾವು. ಓರ್ವ ಮಹಿಳೆಗೆ ಗಂಭೀರ ಗಾಯವಾಗಿದ್ದು ಮಕ್ಕಳು ಸೇರಿ ನಾಲ್ವರಿಗೆ ಗಾಯಗಳಾಗಿವೆ. ರಾಮನಗರ ತಾಲೂಕಿನ ಕೆಂಪೇಗೌಡನದೊಡ್ಡಿ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಲಾರಿ ಈ ವೇಳೆ ಓವರ್ ಟೇಕ್​ ಮಾಡಲು ಹೋಗಿ ಲಾರಿಗೆ ಕಾರು ಡಿಕ್ಕಿಯಾಗಿದೆ.

  • 14 Oct 2023 09:17 AM (IST)

    Karnataka Breaking News Live: ಆಟೋದಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿ ಸ್ನೇಹಿತನಿಂದಲೇ ಅತ್ಯಾಚಾರ

    ಬಳ್ಳಾರಿ ಮಹಿಳಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಟೋದಲ್ಲಿ ವಿದ್ಯಾರ್ಥಿನಿಯನ್ನು ಅಪಹರಿಸಿ ಸ್ನೇಹಿತನಿಂದಲೇ ಅತ್ಯಾಚಾರ ನಡೆದಿರುವ ಘಟನೆ ನಡೆದಿದೆ. ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿದ್ದಾಗಲೇ ನಾಲ್ವರು ದುರುಳರು, ನಿಮ್ಮ ಅಣ್ಣ ಬಂದಿರೋದಾಗಿ ಹೇಳಿ ಹೊರಗೆ ಕರೆಸಿಕೊಂಡಿದ್ದಾರೆ. ಬಳಿಕ ಕಿಡ್ನ್ಯಾಪ್​​ ಮಾಡಿ ಯುವತಿಗೆ ಬೀಯರ್ ಕುಡಿಸಿ ಸ್ನೇಹಿತನಿಂದಲೇ ಅತ್ಯಾಚಾರ ನಡೆದಿದೆ. ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.

  • 14 Oct 2023 08:41 AM (IST)

    Karnataka Breaking News Live: ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಪಟಾಕಿ ದಾಸ್ತಾನುಗಳ ಮೇಲೆ ದಾಳಿ

    ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಪಟಾಕಿ ದಾಸ್ತಾನುಗಳ ಮೇಲೆ ದಾಳಿ ನಡೆದಿದೆ. ಪರವಾನಗಿ ಇಲ್ಲದೆ ಅಕ್ರಮವಾಗಿ ಪಟಾಕಿ ದಾಸ್ತಾನು ಮಾಡಿದ್ದ ಆರೋಪದ ಮೇಲೆ ರಾಯಚೂರು ನಗರದ ಬೆಸ್ತವಾರಪೇಟೆಯ ರಮೇಶ್ ಮನೆ ಮೇಲೆ ಸದರ್ ಬಜಾರ್ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿ ವೇಳೆ 50 ಸಾವಿರ ಮೌಲ್ಯದ ಪಟಾಕಿ ಜಪ್ತಿ ಮಾಡಲಾಗಿದೆ. ಹಾಗೂ ಸಿಂಧನೂರು ತಾಲೂಕಿನ ಗುಂಜಳ್ಳಿ‌ ಗ್ರಾಮದಲ್ಲೂ ಪೊಲೀಸರು ದಾಳಿ ನಡೆಸಿ ನಾಗರಾಜ್ ಎಂಬುವರ ಮನೆಯಲ್ಲಿ ಸಂಗ್ರಹಿಸಿದ್ದ 24 ಲಕ್ಷ ಮೌಲ್ಯದ ವಿವಿಧ ಮಾದರಿಯ ಪಟಾಕಿ ಜಪ್ತಿ ಮಾಡಿ ತುರ್ವಿಹಾಳ ಪೊಲೀಸರು ನಾಗರಾಜ್ ವಶಕ್ಕೆ ಪಡೆದಿದ್ದಾರೆ.

  • 14 Oct 2023 08:07 AM (IST)

    Karnataka Breaking News Live: ಮೈಸೂರಿನಲ್ಲಿ ಪ್ರೊ.ಭಗವಾನ್ ಮನೆಗೆ ಮುತ್ತಿಗೆಗೆ ಕರೆ

    ಒಕ್ಕಲಿಗರ ಬಗ್ಗೆ ಪ್ರೊ.ಭಗವಾನ್ ಅವಹೇಳನಕಾರಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಇಂದು ಮೈಸೂರಿನಲ್ಲಿ ಪ್ರೊ.ಭಗವಾನ್ ಮನೆಗೆ ಮುತ್ತಿಗೆಗೆ ಕರೆ ನೀಡಿದ್ದಾರೆ. ಮೈಸೂರು ಚಾಮರಾಜ ಒಕ್ಕಲಿಗರ ಸಂಘದಿಂದ ಮೈಸೂರಿನ ಕುವೆಂಪು ನಗರದಲ್ಲಿರುವ ಪ್ರೊ.ಭಗವಾನ್ ಮನೆ ಮುತ್ತಿಗೆಗೆ ಕರೆ ನೀಡಲಾಗಿದೆ. ‘ಒಕ್ಕಲಿಗರು ಸಂಸ್ಕೃತಿ ಹೀನರು ಅಂತಾ ಕುವೆಂಪು ಹೇಳಿದ್ದರು’ ‘ಅದನ್ನು ನಾನು ಹೇಳಿದರೆ ಹೊಡೆಯುತ್ತಾರೆ’ ಎಂದು ನಿನ್ನೆ ಮಹಿಷ ಉತ್ಸವದಲ್ಲಿ ಪ್ರೊ.ಭಗವಾನ್ ಹೇಳಿಕೆ ನೀಡಿದ್ದರು.

  • 14 Oct 2023 08:04 AM (IST)

    Karnataka Breaking News Live: ಇಂದಿನಿಂದ ಮೂರು ದಿನ ಮೈಸೂರು ಜಿಲ್ಲೆಯಲ್ಲಿ ಸಿಎಂ ಪ್ರವಾಸ

    ಸಿಎಂ ಸಿದ್ದರಾಮಯ್ಯ ಇಂದಿನಿಂದ 3 ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ. ಸಂಜೆ 5.30ಕ್ಕೆ ಬೆಂಗಳೂರಿಂದ ರಸ್ತೆ ಮೂಲಕ ಮೈಸೂರಿಗೆ ತೆರಳಿಲಿದ್ದಾರೆ. ಬಳಿಕ ಸ್ಥಳೀಯ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇಂದು ರಾತ್ರಿ ಮೈಸೂರಿನಲ್ಲಿಯೇ ಸಿಎಂ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದಾರೆ.

  • 14 Oct 2023 08:01 AM (IST)

    Karnataka Breaking News Live: ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಮುಂದುವರಿದ ಐಟಿ ದಾಳಿ

    ಗುತ್ತಿಗೆದಾರ ಅಂಬಿಕಾಪತಿ ಮನೆ ಮೇಲೆ ಐಟಿ ದಾಳಿ ಮುಂದುವರಿದಿದೆ. ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್​ ಬಳಿಯ ಮನೆಯಲ್ಲಿ ಪರಿಶೀಲನೆ ನಡೆಯುತ್ತಿದೆ. ಐಟಿ ಅಧಿಕಾರಿಗಳು ರಾತ್ರಿ ಅಂಬಿಕಾಪತಿ ಮನೆಯಲ್ಲೇ ಉಳಿದುಕೊಂಡಿದ್ದು ಇಂದು ಬೆಳಗ್ಗೆಯಿಂದ ಮತ್ತೆ ಪರಿಶೀಲನೆ ಆರಂಭಿಸಿದ್ದಾರೆ. ಐಟಿ ದಾಳಿ ವೇಳೆ ಪತ್ತೆಯಾದ ಹಣದ ಬಗ್ಗೆ ಪರಿಶೀಲನೆ ಮುಂದುವರೆದಿದೆ. ನಿನ್ನೆ ಬ್ಯಾಂಕ್​ ಲಾಕರ್​​​ನ ಸೂಟ್​ಕೇಸ್​ಗಳಲ್ಲಿ ನಗದು, ಚಿನ್ನಾಭರಣ ಪತ್ತೆಯಾಗಿತ್ತು. ಸತತ 36 ಗಂಟೆಗಳಿಂದ ಅಂಬಿಕಾಪತಿ ಮನೆಯಲ್ಲೇ ಅಧಿಕಾರಿಗಳಿದ್ದಾರೆ.

  • 14 Oct 2023 07:58 AM (IST)

    Karnataka Breaking News Live: ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಸಿಎಂ ಸಭೆ

    ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಜೊತೆ ಇಂದು ಸಿಎಂ ಸಿದ್ದರಾಮಯ್ಯ ಸಭೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ಸಭೆ ನಿಗದಿಯಾಗಿದ್ದು, ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಸಿಎಂ ಜೊತೆ ಗುತ್ತಿಗೆದಾರರು ಚರ್ಚೆ ನಡೆಸಲಿದ್ದಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸೇರಿದಂತೆ ಹಲವು ಪದಾಧಿಕಾರಿಗಳು ಭಾಗಿಯಾಗಲಿದ್ದಾರೆ.

  • Published On - Oct 14,2023 7:57 AM

    Follow us