ಚಾಲಕನ ಜೊತೆ ಸ್ನೇಹ, ಗೆಳೆಯನ ಮೇಲೂ ಮೋಹ: ಅತ್ಯಾಚಾರ​ ಕತೆ ಹೇಳಿ ಸಿಕ್ಕಿಬಿದ್ದಳಾ ಯುವತಿ?

ಬೆಂಗಳೂರಿನಲ್ಲಿ ಕ್ಯಾಬ್ ಚಾಲಕ ಮತ್ತು ಆತನ ಸ್ನೇಹಿತರಿಂದ ಗ್ಯಾಂಗ್ ರೇಪ್ ಆರೋಪ ಮಾಡಿದ ಕೇರಳ ಯುವತಿಯ ದೂರು ಹಲವು ತಿರುವು ಪಡೆದಿದೆ. ಕ್ಯಾಬ್​​ ಚಾಲಕನ ವಿಚಾರಣೆ ವೇಳೆ ಕೆಲ ಸ್ಫೋಟಕ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಆತನೂ ಕೇರಳ ಮೂಲದವನಾಗಿದ್ದು, ಇವರಿಬ್ಬರಿಗೂ ಪರಿಚಯವಿತ್ತು. ಬಾಯ್​​ ಫ್ರೆಂಡ್​​ ಬಳಿ ಸತ್ಯ ಮುಚ್ಚಿಡಲು ಹೋಗಿ ಯುವತಿ ಅತ್ಯಾಚಾರ ಆರೋಪ ಮಾಡಿದಳಾ ಎನ್ನುವ ಅನುಮಾನವೀಗ ಮೂಡಿದ್ದು, ತನಿಖೆ ಮುಂದುವರಿದಿದೆ.

ಚಾಲಕನ ಜೊತೆ ಸ್ನೇಹ, ಗೆಳೆಯನ ಮೇಲೂ ಮೋಹ: ಅತ್ಯಾಚಾರ​ ಕತೆ ಹೇಳಿ ಸಿಕ್ಕಿಬಿದ್ದಳಾ ಯುವತಿ?
ಸಾಂದರ್ಭಿಕ ಚಿತ್ರ
Edited By:

Updated on: Dec 08, 2025 | 7:16 PM

ಬೆಂಗಳೂರು, ಡಿಸೆಂಬರ್​​ 08: ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಕೇರಳ ಮೂಲದ ಯುವತಿ ನೀಡಿದ್ದ ದೂರು ಆಧರಿಸಿ ತನಿಖೆ ವೇಳೆ ಪೊಲೀಸರೇ ಶಾಕ್​​ ಆಗಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ನಿಜಕ್ಕೂ ಆಕೆಯ ಮೇಲೆ ರೇಪ್​​ ಆಗಿದ್ಯಾ ಅಥವಾ ತನ್ನ ಬಾಯ್​​ಫ್ರೆಂಡ್​​ ಬಳಿ ಸತ್ಯ ಮುಚ್ಚಿಡಲು ಆಕೆ ಸುಳ್ಳು ಹೇಳಿದಳಾ ಎನ್ನುವ ಅನುಮಾನವೀಗ ಖಾಕಿ ತಲೆಕೆಡಿಸಿದೆ.

ಮಡಿವಾಳ ಪೊಲೀಸ್ ಠಾಣೆಗೆ ಬಂದ ಯುವತಿಯೊಬ್ಬಳು ತನ್ನ ಮೇಲೆ ಗ್ಯಾಂಗ್ ರೇಪ್ ಅಗಿದೆ ಎಂದು ಆರೋಪಿಸಿದ್ದರು. ತಕ್ಷಣ ಅಲರ್ಟ್ ಅದ ಪೊಲೀಸರು ಮೊದಲು ಎಫ್ ಐಆರ್ ದಾಖಲಿಸಿಕೊಂಡಿದ್ದರು. ಆದರೆ ಘಟನೆ ನಡೆದ ಸ್ಥಳ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಆಗಿರುವ ಕಾರಣ ಪ್ರಕರಣವನ್ನ ವರ್ಗಾಯಿಸಲಾಗಿತ್ತು. ಪ್ರಕರಣ ಸಂಬಂಧ ಕ್ಯಾಬ್ ಚಾಲಕ ಸರೇಶ ಎಂಬಾತನನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದು,ಈ ವೇಳೆ ಆತ ಬೇರೆಯದ್ದೇ ಕತೆ ಹೇಳಿದ್ದಾನೆ.

ಇದನ್ನೂ ಓದಿ: ಒಂದೇ ಕುಟುಂಬದ ಮೂವರು ಆತ್ಮಹತ್ಯೆಗೆ ಶರಣು

ತಾನು ಮತ್ತು ದೂರು ನೀಡಿರುವ ಯುವತಿ ಇಬ್ಬರೂ ಪರಿಚಯಸ್ಥರು. ನಾನು ಆಕೆಯ ಮೇಲೆ ಅತ್ಯಾಚಾರ ಮಾಡಿಲ್ಲ. ಈ ಹಿಂದೆ ಕ್ಯಾಬ್ ಬುಕ್ ಮಾಡಿದಾಗ ಇಬ್ಬರಿಗೂ ಪರಿಚಯವಾಗಿತ್ತು. ಆ ಪರಿಚಯ ಸ್ನೇಹಕ್ಕೆ ತಿರುಗಿತ್ತು ಎಂದು ತಿಳಿಸಿದ್ದಲ್ಲದೆ, ಇಬ್ಬರ ನಡುವಿನ ವಾಟ್ಸ್ಯಾಪ್​​ ಚಾಟ್​​ನ ಪೊಲೀಸರ ಎದುರು ಬಿಚ್ಚಿಟ್ಟಿದ್ದಾನೆ. ಜೊತೆಗೆ ನಾವಿಬ್ಬರು ಒಪ್ಪಿಯೇ ದೈಹಿಕ ಸಂಪರ್ಕ ನಡೆಸಿದ್ದೇವೆ. ಈ ವೇಳೆ ನನ್ನ ಜೊತೆ ಬೇರೆ ಯಾರೂ ಇರಲಿಲ್ಲ ಎಂದು ತಿಳಿಸಿದ್ದಾನೆ. ಹೀಗಾಗಿ ಯುವತಿಯನ್ನು ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದು, ಈ ವೇಳೆ ಆಕೆ ಸಾಕಷ್ಟು ಗೊಂದಲದ ಹೇಳಿಕೆಗಳನ್ನು ನೀಡಿದ್ದಾಳೆ ಎನ್ನಲಾಗಿದೆ.

ಕ್ಯಾಬ್ ಡ್ರೈವರ್ ಸಹ ಕೇರಳ ಮೂಲದವನಾಗಿದ್ದು, ಇಬ್ಬರಿಗೂ ಪರಿಯವಿದ್ದ ಕಾರಣ ಇತ್ತೀಚೆಗೆ ಒಟ್ಟಾಗಿ ಪಾರ್ಟಿ ಕೂಡ ಮಾಡಿದ್ದರು. ಈ ವೇಳೆ ಯುವತಿಯ ಕುತ್ತಿಗೆ ಭಾಗಕ್ಕೆ ಸಣ್ಣ ಗಾಯವಾಗಿತ್ತು. ಆ ಬಳಿಕ ಯುವತಿ ಕೇರಳಕ್ಕೆ ತೆರಳಿದ್ದು, ಅಲ್ಲಿ ಆಕೆಯ ಬಾಯ್​​ ಫ್ರೆಂಡ್ ಗಾಯದ ಬಗ್ಗೆ ಕೇಳಿದ್ದಾನೆ. ಈ ವೇಳೆ ತನ್ನ ಮೇಲೆ ಕ್ಯಾಬ್ ಚಾಲಕ ಮತ್ತು ಆತನ ಗೆಳೆಯರು ಗ್ಯಾಂಗ್ ರೇಪ್ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಳು. ಗೆಳತಿ ಹೇಳಿದ್ದು ಸತ್ಯ ಎಂದು ತಿಳಿದ ಆಕೆಯ ಬಾಯ್​​ ಫ್ರೆಂಡ್ ಸೀದಾ ಮಡಿವಾಳ ಪೊಲೀಸ್ ಠಾಣೆಗೆ ಆಕೆಯನ್ನು ಕರೆತಂದು ಪ್ರಕರಣ ದಾಖಲಿಸಿದ್ದ. ಆದ್ರೆ ವಿಚಾರಣೆ ವೇಳೆ ಬೇರೆಯದ್ದೇ ಸತ್ಯ ಹೊರಬರ್ತಿದೆ. ಆರೋಪಿ ಸರೇಶ್ ನನಗೆ ಬಲವಂತ ಮಾಡಿದ್ದಾಗಿ ಯುವತಿ ಹೇಳಿರುವ ಹಿನ್ನಲೆ ಪೊಲೀಸರು ಸದ್ಯ ಅತ್ಯಾಚಾರ ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವೇ ಪ್ರಕರಣದ ಅಸಲಿ ವಿಚಾರ ಹೊರಬರಬೇಕಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.